ವಿಶ್ವದ ಅತ್ಯಂತ ಚಿಕ್ಕ ಪಾರ್ಕ್ ನಲ್ಲಿ ಎಷ್ಟು ಗಿಡವಿದೆ ಗೊತ್ತಾ?

By Roopa HegdeFirst Published Dec 30, 2023, 1:06 PM IST
Highlights

ನಮ್ಮ ಸುತ್ತಮುತ್ತ ಸಾಕಷ್ಟು ಪಾರ್ಕ್ ಗಳಿವೆ. ನಗರ ಪ್ರದೇಶದಲ್ಲಿ ಈ ಪಾರ್ಕ್ ಎಲ್ಲರನ್ನು ಆಕರ್ಷಿಸುತ್ತದೆ. ಪಾರ್ಕ್ ನಲ್ಲಿ ನಾವು ಒಂದಿಷ್ಟು ಗಿಡ – ಮರಗಳನ್ನು ನೋಡ್ಬಹುದು. ಆದ್ರೆ ವಿಶ್ವದ ಅತ್ಯಂತ ಚಿಕ್ಕ ಪಾರ್ಕ್ ವಿಶೇಷತೆ ಏನು ಎಂಬ ಮಾಹಿತಿ ಇಲ್ಲಿದೆ.
 

ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಪಾರ್ಕ್ ಅಚ್ಚುಮೆಚ್ಚು. ಬೆಳಿಗ್ಗೆ ಹಾಗೂ ಸಂಜೆ ವಾಕಿಂಗ್ ಗೆ ಹೋಗ್ತಾರೆ. ಉದ್ಯಾನವನದ ಪರಿಸರ ತುಂಬಾ ಶಾಂತವಾಗಿರುವ ಕಾರಣ ಹಾಗೂ ಶುದ್ಧ ಗಾಳಿ ಸಿಗುವ ಕಾರಣ ಜನರು ಪಾರ್ಕ್ ಸುತ್ತಾಡಲು ಇಷ್ಟಪಡುತ್ತಾರೆ. ಮಕ್ಕಳು ಆಟವಾಡಲು ಪಾರ್ಕ್ ಗೆ ಹೋದ್ರೆ ದೊಡ್ಡವರು ವಾಕಿಂಗ್ ಅಥವಾ ಒಂದಿಷ್ಟು ಸ್ನೇಹಿತರ ಭೇಟಿಗೆ ಹೋಗ್ತಾರೆ. ಮನೆ, ಕೆಲಸದ ಒತ್ತಡದಲ್ಲಿರುವ ಜನರು ನೆಮ್ಮದಿಗಾಗಿ, ಸ್ವಲ್ಪ ಸಮಯ ಶಾಂತವಾಗಿ ಕುಳಿತುಕೊಳ್ಳಲು ಪಾರ್ಕ್ ಗೆ ಬರ್ತಾರೆ. 

ಕೆಲವೊಂದು ಉದ್ಯಾನವನ (Park) ದೊಡ್ಡದಾಗಿದ್ರೆ ಮತ್ತೆ ಕೆಲವೊಂದು ಚಿಕ್ಕದಾಗಿರುತ್ತದೆ. ಚಿಕ್ಕದು ಅಂದ್ರೂ ಒಂದಿಷ್ಟು ಗಿಡ – ಮರದ ಜೊತೆ ವಾಕಿಂಗ್ (Walking ) ಗೆ, ಓಡಾಟಕ್ಕೆ ಜಾಗವಿರುತ್ತದೆ. ಆದ್ರೆ ವಿಶ್ವದಲ್ಲಿ ಅತ್ಯಂತ ಚಿಕ್ಕ ಉದ್ಯಾನವನವೊಂದಿದೆ. ಆ ಉದ್ಯಾನವನ ಎಷ್ಟು ಚಿಕ್ಕದಾಗಿದೆ ಅಂದ್ರೆ ಅಲ್ಲಿ ಒಬ್ಬರು ಕುಳಿತುಕೊಳ್ಳೋದು ಇರಲಿ ಒಬ್ಬರು ಓಡಾಡಲೂ ಸಾಧ್ಯವಿಲ್ಲ. ನಾವಿಂದು ವಿಶ್ವ (World) ದ ಅತ್ಯಂತ ಚಿಕ್ಕ ಪಾರ್ಕ್ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.

ಗಮನಿಸಿ, ಬನ್ನೇರುಘಟ್ಟ ಝೋ ವೆಬ್ಸೈಟ್‌ ಬದಲಾವಣೆ, ಇಮೇಲ್ ವಿಳಾಸ ಕೂಡ ಬದಲು

ವಿಶ್ವದ ಅತ್ಯಂತ ಚಿಕ್ಕ ಉದ್ಯಾನವನ ಇದು : ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವರದಿಯ ಪ್ರಕಾರ, ವಿಶ್ವದ ಅತ್ಯಂತ ಚಿಕ್ಕ ಉದ್ಯಾನವನದಲ್ಲಿ ಇರೋದು ಒಂದೇ ಒಂದು ಗಿಡ. ಈ ಉದ್ಯಾನವನದ ಹೆಸರು ಮಿಲ್ ಎಂಡ್ಸ್ ಪಾರ್ಕ್. ಮಿಲ್ ಎಂಡ್ಸ್ ಪಾರ್ಕ್, ಯುಎಸ್ಎ ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ನಲ್ಲಿದೆ.  ಗಿನ್ನಿಸ್ ದಾಖಲೆ ಸೇರಿದ ಉದ್ಯಾನವನ : 1948 ರಲ್ಲಿ ಇದನ್ನು ಮೊದಲ ಬಾರಿ ಉದ್ಯಾನವನವನ್ನಾಗಿ ಘೋಷಿಸಲಾಯಿತು. 1976 ರಲ್ಲಿ ಈ ಉದ್ಯಾನವನ ವಿಶ್ವದ ಚಿಕ್ಕ ಉದ್ಯಾನವನವಾಗಿ ಗಿನ್ನೆಸ್ ದಾಖಲೆ ಸೇರಿತು.

ಚಳಿಗಾಲದಲ್ಲಿ ಕಡಿಮೆ ಬಜೆಟ್‌ನಲ್ಲಿ ಹನಿಮೂನ್‌ ಹೋಗೋಕೆ ಬೆಸ್ಟ್‌ ಜಾಗಗಳಿವು

ಈ ಉದ್ಯಾನವನ ಸ್ಥಾಪಿಸಿದ್ದು ಯಾರು? : ಮಿಲ್ ಎಂಡ್ಸ್ ಪಾರ್ಕ್ ಹೆಸರಿನ ಈ ಚಿಕ್ಕ ಉದ್ಯಾನವನವನ್ನು 1946 ರಲ್ಲಿ, ಡಿಕ್ ಫಾಗನ್ ಎಂಬ ವ್ಯಕ್ತಿ ಸ್ಥಾಪಿಸಿದ. ಡಿಕ್ ಫಾಗನ್ ಸೈನ್ಯದಲ್ಲಿದ್ದ. ಎರಡನೇ ವಿಶ್ವಯುದ್ಧವನ್ನು ಮುಗಿಸಿದ ಮೇಲೆ ಆತ ಒರೆಗಾನ್ ಗೆ ವಾಪಸ್ ಆದ. ಈತ ಅಲ್ಲಿಯೂ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಒರೆಗಾನ್ ಜರ್ನಲ್ ನಲ್ಲಿ ಪತ್ರಕರ್ತನಾಗಿ ಕೆಲಸ ಶುರು ಮಾಡಿದ.  ಕಚೇರಿ ಮುಂದೆ ಒಂದು ಜನನಿಬಿಡ ಪ್ರದೇಶವಿತ್ತು. ಲೈಟ್ ಕಂಬ ನೆಡುವ ಹಿನ್ನೆಲೆಯಲ್ಲಿ ಅಲ್ಲಿ ಒಂದು ಹೊಂಡ ತೋಡಲಾಗಿತ್ತು. ಆದ್ರೆ ಲೈಟ್ ಕಂಬ ಹಾಕಿರಲಿಲ್ಲ. ಈ ಸಂದರ್ಭದಲ್ಲಿ ಡಿಕ್ ಫಾಗನ್, ಲೈಟ್ ಕಂಬ ಹಾಕಬೇಕಿದ್ದ ಜಾಗದಲ್ಲಿ ಮರ ನೆಡುವ ನಿರ್ಧಾರಕ್ಕೆ ಬಂದ. 

ಡಿಕ್ ಫಾಗನ್, ಈ ಸಮಯದಲ್ಲಿ ಪತ್ರಿಕೆಯಲ್ಲಿ ಅಂಕಣ ಬರೆಯುತ್ತಿದ್ದರು. ನಗರದ ವಿವಿಧ ಉದ್ಯಾನವನಗಳ ಬಗ್ಗೆ ಬರೆಯುತ್ತಿದ್ದರು. ಉದ್ಯಾನವನದಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ವಿವರ ನೀಡುತ್ತಿದ್ದರು. ಈ ವೇಳೆ ಒಂದೇ ಒಂದು ಗಿಡವಿರುವ ಈ ಪಾರ್ಕ್ ಬಗ್ಗೆಯೂ ವರದಿ ನೀಡಲು ಶುರು ಮಾಡಿದೆ. ಈ ಪಾರ್ಕ್ ಗೆ ಮಿಲ್ ಎಂಡ್ಸ್ ಎಂದು ಹೆಸರು ಕೂಡ ಇಟ್ಟ. 1969 ರಲ್ಲಿ ಫಾಗನ್ ನಿಧನರಾದರು. ಆದರೆ ಅಲ್ಲಿಯವರೆಗೂ ಅವರು ಈ ಉದ್ಯಾನವನದ ಬಗ್ಗೆ ನಿಯಮಿತವಾಗಿ ಬರೆಯುತ್ತಿದ್ದರು. ಐರಿಶ್ ಕಾಲ್ಪನಿಕ ಕಥೆಗಳ ಪಾತ್ರಗಳಿಗೆ ಇದನ್ನು ಸಮರ್ಪಿಸಲಾಗಿತ್ತು. ಇಲ್ಲಿ ಚಿಟ್ಟೆಗಳ ರೇಸ್ ನಡೆಯುತ್ತೆ ಎಂದು ನಂಬಲಾಗಿತ್ತು. 2006ರಲ್ಲಿ ನಿರ್ಮಾಣ ಕೆಲಸದ ಕಾರಣಕ್ಕೆ ಈ ಉದ್ಯಾನವನವನ್ನು ಸ್ವಲ್ಪ ದಿನ ಸ್ಥಳಾಂತರಿಸಲಾಗಿತ್ತು. 

ಎಷ್ಟು ದೊಡ್ಡದಿದೆ ಈ ಚಿಕ್ಕ ಉದ್ಯಾನವನ : ಇದು ಕೇವಲ 2 ಅಡಿ ಅಗಲವಿದೆ.  ಅತ್ಯಂತ ಚಿಕ್ಕ ಈ ಉದ್ಯಾನವನ ಸಂಪೂರ್ಣ ವಿಸ್ತೀರ್ಣ 452 ಚದರ ಇಂಚಿದೆ.

click me!