ಮೆಟ್ರೋದಲ್ಲಿ ಮಹಿಳಾ ಮಣಿಯರ ಫೈಟ್‌; ಬಿಗ್‌ಬಾಸ್‌ ಅಡಿಷನ್ನಾ ಎಂದ ನೆಟ್ಟಿಗರು

By Vinutha Perla  |  First Published Aug 3, 2023, 2:54 PM IST

ಮಹಿಳೆಯರು ಒಂದೆಡೆ ಸೇರಿದ್ರೆ ಅಲ್ಲಿ ಜಗಳ ಆಗೋದು ಗ್ಯಾರಂಟಿ ಅನ್ನೋದು ಸಾಮಾನ್ಯ ಲೋಕರೂಢಿ ಮಾತು. ಅದು ಅಕ್ಷರಶಃ ನಿಜ ಅನ್ನೋದು ಹಲವು ಬಾರಿ ಸಾಬೀತಾಗಿದೆ. ಸದ್ಯ ದೆಹಲಿ ಮೆಟ್ರೋದಲ್ಲಿ ನಡೆದ ಮಹಿಳೆಯರ ಜಟಾಪಟಿಯ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ. 


ನವದೆಹಲಿ: ದೆಹಲಿ ಮೆಟ್ರೋ ಇತ್ತೀಚಿಗೆ ಹಲವು ನೆಗೆಟಿವ್ ವಿಚಾರಗಳಿಂದಲೇ ಸುದ್ದಿಯಾಗುತ್ತಿದೆ. ಮೆಟ್ರೋಗೆ ಅರೆಬರೆ ಹಾಕ್ಕೊಂಡು ಬರುವವರು, ಮೆಟ್ರೋ ರೋಮ್ಯಾನ್ಸ್, ಮಹಿಳೆಯರ ಫೈಟ್ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಮಹಿಳೆಯರು ಒಂದೆಡೆ ಸೇರಿದ್ರೆ ಅಲ್ಲಿ ಜಗಳ ಆಗೋದು ಗ್ಯಾರಂಟಿ ಅನ್ನೋದು ಸಾಮಾನ್ಯ ಲೋಕರೂಢಿ ಮಾತು. ಅದು ಅಕ್ಷರಶಃ ನಿಜ ಅನ್ನೋದು ಹಲವು ಬಾರಿ ಸಾಬೀತಾಗಿದೆ. ಸದ್ಯ ದೆಹಲಿ ಮೆಟ್ರೋದಲ್ಲಿ ನಡೆದ ಮಹಿಳೆಯರ ಜಟಾಪಟಿಯ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ. 

ಬಸ್‌ನಲ್ಲಿ, ಟ್ರೈನ್‌ನಲ್ಲಿ, ಮೆಟ್ರೋದಲ್ಲಿ ಮಹಿಳೆಯರು ಜಗಳ ಆಡೋದು ಮೊದಲ ಬಾರಿಯೇನಲ್ಲ. ಮಹಿಳೆಯರ ಫೈಟಿಂಗ್ ವಿಡಿಯೋಗಳು ಆಗಾಗ ವೈರಲ್ ಆಗ್ತಾನೆ ಇರ್ತವೆ. ಸೀಟು ಹಿಡಿಯುವ ವಿಚಾರಕ್ಕೆ, ಮೈ ಟಚ್ ಆದ ವಿಚಾರಕ್ಕೆ ಮಹಿಳೆಯರು ಸುಮ್ ಸುಮ್ನೆ ಕಿರಿಕ್ ಮಾಡ್ಕೊಳ್ತಾರೆ. ಸದ್ಯ ಅಂಥಹದ್ದೇ ದೆಹಲಿ ಮೆಟ್ರೋ ಮಾತಿನ ಚಕಮಕಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಜನರು ನಾನಾ ರೀತಿ ಕಾಮೆಂಟ್ ಮಾಡುತ್ತಿದ್ದಾರೆ.

Tap to resize

Latest Videos

ಡೆಲ್ಲಿ ಮೆಟ್ರೋ ಹಾಗೂ ಪ್ಲಾಟ್‌ಫಾರ್ಮ್‌ ಮೇಲೆ ಬಾಲಿವುಡ್‌ ಹಾಡಿಗೆ ಕುಣಿದ ಯುವತಿ: ದಯವಿಟ್ಟು ನಿಲ್ಲಿಸಿ ಎಂದ ನೆಟ್ಟಿಗರು!

ಮಹಿಳಾ ಮಣಿಗಳ ಫೈಟ್‌ ನೋಡಿ ದಂಗಾದ ನೆಟ್ಟಿಗರು
ವೈರಲ್ ಆದ ವಿಡಿಯೋದಲ್ಲಿ ಮೆಟ್ರೋದಲ್ಲಿ ಮಹಿಳೆಯೊಬ್ಬರು (Woman) ಕುಳಿತಿರುತ್ತಾರೆ. ಇನ್ನೊಂದು ಸ್ಟಾಪ್‌ನಿಂದ ಹತ್ತಿದ ಮಹಿಳೆ ಕುಳಿತಿರುವ ಮಹಿಳೆಗೆ ಸ್ಪಲ್ಪ ಬದಿಗೆ ಸರಿಯಿರಿ ಎಂದು ಹೇಳುತ್ತಾಳೆ ಅಷ್ಟೆ. ಅಷ್ಟರಲ್ಲೇ ಆ ಮಹಿಳೆ ಸಿಟ್ಟಿನಿಂದ (Angry) ಕಿರುಚಾಡುತ್ತಾಳೆ. ಮಾತ್ರವಲ್ಲ ಸೀಟಿನಿಂದ ಎದ್ದು ಹೋಗಿ ಕೆಟ್ಟ ಪದಗಳಿಂದ ಬೈದಾಡುತ್ತಾಳೆ. ಮಹಿಳೆಯ ಅನಗತ್ಯ ಜಗಳ ಅಲ್ಲಿದ್ದ ಉಳಿದವರು ಸಹ ಅಚ್ಚರಿಗೊಳ್ಳುವಂತೆ ಮಾಡುತ್ತದೆ. 

ವೈರಲ್ ಆಗಿರುವ ಇನ್ನೊಂದು ವಿಡಿಯೋದಲ್ಲಿ ಅದೇ ಘಟನೆಯೇ ಮುಂದುವರಿಯುತ್ತದೆ. ಮಹಿಳೆ ತನ್ನ ಕುರಿತಾಗಿ ವಿಡಿಯೋ ಮಾಡುತ್ತಿರುವ ಯುವತಿಯನ್ನು ನಿಂದಿಸುತ್ತಾಳೆ. ಅಸಭ್ಯ ಮಾತುಗಳನ್ನು ಬಳಸುತ್ತಾಳೆ.  'ದೆಹಲಿ ಮೆಟ್ರೋ ಮೇ ಆಪ್ಕಾ ಸ್ವಾಗತ್ ಹೈ' (ದೆಹಲಿ ಮೆಟ್ರೋಗೆ ಸ್ವಾಗತ) ಎಂಬ ಶೀರ್ಷಿಕೆಯೊಂದಿಗೆ ಸುಯಶ್ ಚೌಧರಿ ಎಂಬ ಬಳಕೆದಾರರು (User) ಈ ವೀಡಿಯೊವನ್ನುಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. 

ಇದೊಂದ್‌ ಬಾಕಿ ಇತ್ತು... ಮೆಟ್ರೋದಲ್ಲಿ 2 ಬಾಟ್ಲಿ ಎಣ್ಣೆ ತೆಗೆದುಕೊಂಡು ಹೋಗಲು ಸಿಕ್ತು ಪರ್ಮೀಷನ್‌!

ಒಬ್ಬ ಬಳಕೆದಾರರು, 'ಮೆಟ್ರೋದಲ್ಲಿ ಇಂಥಾ ಘಟನೆ ತುಂಬಾ ಸಾಮಾನ್ಯವಾಗಿದೆ' ಎಂದಿದ್ದಾರೆ. ಮತ್ತೊಬ್ಬರು, 'ನಾನು ಇಷ್ಟು ವರ್ಷಗಳಿಂದ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದರೂ ಇಂಥಾ ಘಟನೆಯನ್ನು ನೋಡೇ ಇಲ್ಲ' ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಈ ಪರಿಸ್ಥಿತಿ ಬಾರ್ಬಿ ವರ್ಸಸ್ ಓಪನ್‌ಹೈಮರ್ ಅಭಿಮಾನಿಗಳು ಎಂಬಂತಿದೆ' ಎಂದು ಕಾಮೆಂಟಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಮಹಿಳೆ ಬಿಗ್ ಬಾಸ್‌ಗಾಗಿ ಆಡಿಷನ್ ಮಾಡುತ್ತಿದ್ದಾರೆ' ಎಂದು ತಮಾಷೆಯಾಗಿ ಹೇಳಿದ್ದಾರೆ. ಒಟ್ನಲ್ಲಿ ಪದೇ ಪದೇ ನಡಿತೀರೋ ಇಂಥಾ ಘಟನೆಗಳಿಂದ ಮೆಟ್ರೋ ಕೆಟ್ಟ ಹೆಸರು ಪಡೀತಿರೋದಂತೂ ನಿಜ. 

ಈ ಹಿಂದೆ ಮೆಟ್ರೋ ರೈಲಿನಲ್ಲಿ ಇಬ್ಬರು ಪುರುಷರು ಪರಸ್ಪರ ಹೊಡೆದಾಡಿಕೊಂಡ ವೀಡಿಯೋ ವೈರಲ್ ಆಗಿತ್ತು. ಬ್ಯಾಗ್ ಧರಿಸಿರುವ ಇಬ್ಬರು ವ್ಯಕ್ತಿಗಳು ತುಂಬಿ ತುಳುಕಿರುವ ಮೆಟ್ರೋದಲ್ಲಿ ಹೊಡೆದಾಡುತ್ತಿದ್ದು, ಈ ವೇಳೆ ಕೆಲವರು ಸಹ ಪ್ರಯಾಣಿಕರು ಅವರಿಬ್ಬರ ನಡುವಿನ ಜಗಳ ಬಿಡಿಸಲು ಮುಂದಾಗಿದ್ದರು. ಇಬ್ಬರು ಒಬ್ಬರಿಗೊಬ್ಬರು ಮುಷ್ಠಿ ಹಿಡಿದು ಗುದ್ದುವುದನ್ನು ಈ ವೀಡಿಯೋದಲ್ಲಿ ಕಾಣಬಹುದಾಗಿದೆ. ಈ ವೀಡಿಯೋವನ್ನು  ಸಚಿನ್ ಭಾರದ್ವಾಜ್ ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಡಿಎಂಆರ್‌ಸಿಗೆ ಟ್ಯಾಗ್ ಮಾಡಿದ್ದರು.

click me!