ಅಪರಿಚಿತರ ಜೊತೆ ಸೆಕ್ಸ್ ತೀರ್ಥಯಾತ್ರೆ! ಇದು ಇಂಡೋನೇಷ್ಯಾ ಸ್ಪೆಶಲ್!

By Suvarna News  |  First Published May 9, 2021, 5:09 PM IST

ಇಂಡೋನೇಷ್ಯಾದ ಈ ಬೆಟ್ಟದಲ್ಲಿ ಇರುವ ದೇವಸ್ಥಾನದ ಸುತ್ತಮುತ್ತ ಗಿಡಮರ ಪೊದೆಗಳ ಮರೆಯಲ್ಲಿ ಅಪರಿಚಿತರು ಸೆಕ್ಸ್ ನಡೆಸುತ್ತಾರೆ. ಇದು ಜಾತ್ರೆಯ ಪದ್ಧತಿ


ತೀರ್ಥಯಾತ್ರೆಗೂ ಸೆಕ್ಸ್‌ಗೂ ಆಗಿಬರೋಲ್ಲ. ಭಾರತದಂಥ ಕಡೆಯಲ್ಲಂತೂ ತೀರ್ಥಯಾತ್ರೆ ಟೈಮ್‌ನಲ್ಲಿ ಸೆಕ್ಸ್ ಆಲ್‌ಮೋಸ್ಟ್ ಅಪರಾಧವೇ. ಆದರೆ ಇಂಡೋನೇಷ್ಯಾದ ಒಂದು ಕಡೆ ಉಲ್ಟಾ ಸನ್ನಿವೇಶ.

ಅಲ್ಲಿ ತೀರ್ಥಯಾತ್ರೆಯ ಪ್ರಧಾನ ಅಂಗವೇ ಸೆಕ್ಸ್. ಅದೂ ಅಪರಿಚಿತರ ಜೊತೆಗೇ ಲೈಂಗಿಕ ಸಂಪರ್ಕ. ಇದೇನು ಅಂತ ಚಕಿತರಾಗ್ತಿದೀರಾ? ಆ ಕುರಿತ ಕತೆ ಇಲ್ಲಿದೆ. ಆ ಪರ್ವತದ ಹೆಸರು ಮೌಂಟ್ ಕೆಮುಕುಸ್.

Tap to resize

Latest Videos

undefined

ಸೆಕ್ಸ್ ಮೌಂಟೇನ್ ಅಂತನೂ ಕರೆಯುತ್ತಾರೆ. ಇಂಡೋನೇಷ್ಯಾದ ಶ್ರಗೇನ್ ಪ್ರಾಂತ್ಯದಲ್ಲಿರುವ ಒಂದು ಜಾವಾನೀಸ್‌ ಸಮುದಾಯದ ದೇವಾಲಯ. ವಿಚಿತ್ರ ಪದ್ಧತಿಗಳು ಇಲ್ಲಿ ಮೊದಲಿನಿಂದ ರೂಢಿಯಾಗಿವೆ.

ಇದರ ಬಗ್ಗೆ ಒಂದು ದಂತಕತೆಯಿದೆ. 16ನೇ ಶತಮಾನದಲ್ಲಿ ಪಂಗೇರನ್ ಸಮ್ದೊರೊ ಎಂನ ಒಬ್ಬ ರಾಜಕುಮಾರನಿದ್ದ. ಅವನಿಗೂ ಅವನ ಸುಂದರಿ ಮಲತಾಯಿ ನ್ಯಾಯಿ ಒಂಟ್ರೊವುಲಾನ್‌ಗೂ ಅನೈತಿಕ ಸಂಬಂಧ ಇತ್ತು. ಆದರೆ ಅರಮನೆಯಲ್ಲಿ ಈ ಸಂಬಂಧ ಮುಂದುವರಿಸಲು ಸಾಧ್ಯವಾಗದೆ ಅವರಿಬ್ಬರೂ ಈ ಕೆಮುಕುಸ್‌ಗೆ ಓಡಿಬಂದರು. ಅಲ್ಲಿ ತಮ್ಮ ದೇಹಸಂಬಂಧ ಮುಂದುವರಿಸಿದರು. ಆದರೆ ಅವರನ್ನು ಸೈನಿಕರೂ ಊರಜನರೂ ಹಿಡಿದುಹಾಕಿದರು. ಅಲ್ಲೇ ಅವರನ್ನು ಕೊಂದುಹಾಕಿ, ಅಲ್ಲೇ ಹೂತುಹಾಕಿದರು.



ಆದರೆ ನಂತರ ಜನರಿಗೆ ತೊಂದರೆಗಳು ಕಂಡುಬಂದುದರಿಂದ, ಇಲ್ಲಿ ಹೂಳಲಾಗಿದ್ದ ರಾಜಕುಮಾರನಿಗೆ ಪುಟ್ಟ ಗುಡಿಯೊಂದನ್ನು ಕಟ್ಟಲಾಯಿತು. ಆತನ ಗೌರವಾರ್ಥ ವರ್ಷಕ್ಕೊಮ್ಮೆ ಪೂಜೆ, ಜಾತ್ರೆ ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿಯೇ ಹುಟ್ಟಿಕೊಂಡ ವಿಚಿತ್ರ ಪದ್ಧತಿ ಎಂದರೆ, ಅಪರಿಚಿತರು ಇಲ್ಲಿ ಸಂಧಿಸಿ ಸೆಕ್ಸ್‌ನಲ್ಲಿ ತೊಡಗುವುದು. ಇದರಿಂದ ರಾಜಕುಮಾರ ಹಾಗೂ ನ್ಯಾಯಿ ಸಂಪ್ರೀತರಾಗುತ್ತಾರೆ ಎಂಬ ನಂಬಿಕೆ. ತಾವು ಮಾಡಲಾಗದುದನ್ನು ಮಾಡುತ್ತಿರುವ ಅವರ ಮೇಲೆ ಪ್ರೀತಿಯಿಂದ ಆಶೀರ್ವದಿಸಿ ಕಳಿಸುತ್ತಾರಂತೆ. ಲೈಫಿನಲ್ಲಿ ಅದೃಷ್ಟವನ್ನು ನೀಡುತ್ತಾರಂತೆ. ಹಾಗೆಂದು ನಂಬಿಕೆ ಬೆಳೆಯಿತು. ಆಚರಣೆ ಹೆಚ್ಚಿತು. ಜೀವನದಲ್ಲಿ ಭಾಗ್ಯ ಮತ್ತು ಆ ಕ್ಷಣದ ಮಜಾ ಪಡೆಯಲು ಜನ ಆಗಮಿಸತೊಡಗಿದರು. ಈ ಜಾತ್ರೆಯನ್ನು ಪೋನ್ ಫೆಸ್ಟಿವಲ್ ಎಂದು ಕರೆಯಲಾಗುತ್ತೆ.

ಜಾತ್ರೆಯಂದು ದೇವಾಲಯದಲ್ಲಿ ಜನ ಸೇರಿ ಪೂಜೆ ಸಲ್ಲಿಸುತ್ತಾರೆ. ನಂತರ ಅಲ್ಲಿರುವ ಕೆರೆಗಳಲ್ಲಿ ಮಿಂದು ಶುಚಿಯಾಗುತ್ತಾರೆ. ನಂತರ ತಮಗೆ ಬೇಕಾದ ಅಪರಿಚಿತರನ್ನು ಹುಡುಕಿಕೊಂಡು ಅಲ್ಲೇ ಪೊದೆ ಕಲ್ಲುಬಂಡೆ ಮರೆಗಳ ಮರೆಯಲ್ಲಿ ಸೆಕ್ಸ್ ನಡೆಸುತ್ತಾರೆ. ನಂತರ ಪ್ರತಿ 35 ದಿನಕ್ಕೊಮ್ಮೆಯಂತೆ ಅವರು 7 ಬಾರಿ ಭೇಟಿಯಾಗಿ ಸಂಭೋಗಿಸಬೇಕು. ಇದು ಪದ್ಧತಿ.



ಇಲ್ಲಿನ ಪ್ರಸಿದ್ಧಿ ಹೆಚ್ಚಿ ಜನರು ಬರುವುದು ಹೆಚ್ಚಾಗತೊಡಗಿದಂತೆ ಇಲ್ಲಿ ಲಾಡ್ಜ್‌ಗಳು, ಹೋಟೆಲ್‌ಗಳು ಹೆಚ್ಚಿದವು. ಇದೊಂದು ಉದ್ಯಮವೇ ಆಗಿ ಬದಲಾಯಿತು. ಸ್ಥಳೀಯರಿಗೂ ಇದೊಂದು ಗಳಿಕೆಯ ತಾಣವಾಯಿತು. ಸರಕಾರಕ್ಕೂ ಆದಾಯ ಬರತೊಡಗಿತು. ಆದರೆ ತೀರ್ಥಯಾತ್ರೆ ಮಾತ್ರ ಅಸಹ್ಯವಾಗಿ ಬೆಳೆಯಿತು. ಮೈ ಮಾರಾಟ ದಂಧೆ ಎಗ್ಗಿಲ್ಲದೆ ಬೆಳೆಯಿತು. ಸ್ಥಳೀಯರು ಮತ್ತು ಸಾಂಪ್ರದಾಯಿಕ ಮುಸ್ಲಿಮರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು.

ಎಚ್‌ಐವಿ ಏಡ್ಸ್ ಹಾಗೂ ಲೈಂಗಿಕ ಕಾಯಿಲೆಗಳೂ ಈ ಪರಿಸರದಲ್ಲಿ ಹರಡತೊಡಗಿದವು. ಇದರಿಂದಾಗಿ ಸರಕಾರ ಮಧ್ಯ ಪ್ರವೇಶಿಸಿ ಇಲ್ಲಿದ್ದ ಹೋಟೆಲ್ ಲಾಡ್ಜ್ ಇತ್ಯಾದಿಗಳನ್ನು ಮುಚ್ಚಿಸಿಬಿಟ್ಟಿತು. ಸೆಕ್ಸ್ ದಂಧೆಯಲ್ಲಿ ಇಲ್ಲದ ಕುಟುಂಬಗಳೆಲ್ಲ ಇಲ್ಲಿಂದ ವಲಸೆ ಹೋದವು.

ಆದರೂ ಇಂದಿಗೂ ಇಲ್ಲಿನ ದಂತಕತೆ ಹಾಗೂ ಪಾವಿತ್ರ್ಯದಲ್ಲಿ ನಂಬಿಕೆ ಇಟ್ಟವರು ಇಲ್ಲಿನ ಪದ್ಧತಿಯನ್ನು ಆಚರಿಸುತ್ತಾರೆ. ಈಗಲೂ ದೇವಾಲಯಕ್ಕೆ ಬಂದು ಅಪರಿಚಿತರನ್ನು ಸೆಕ್ಸ್‌ಗಾಗಿ ಹುಡುಕುವವರು ಇದ್ದಾರೆ. ಅಂಥವರು ತಮ್ಮ ಜೀವನದಲ್ಲಿ ಇದರಿಂದಾಗಿ ಸಮಸ್ಯೆಗಳು ಕಡಿಮೆಯಾಗಿರುವುದನ್ನು, ಸುಖ ನೆಮ್ಮದಿ ಹೆಚ್ಚಾಗಿರುವುದನ್ನು ಕಂಡುಕೊಂಡಿದ್ದಾರಂತೆ. ಆದರೆ ಇಲ್ಲಿಗೆ ಬರುವವರಲ್ಲಿ ಪುರುಷರನ್ನು ಹೆಚ್ಚಾಗಿ ಕಾಣಬಹುದು. ಸೆಕ್ಸ್ ದಂಧೆ ಕೂಡ ಒಳಗಿಂದೊಳಗೇ ಸಾಕಷ್ಟು ನಡೆಯುತ್ತದೆ ಅನ್ನುವವರು ಇದ್ದಾರೆ. ಇಂಥ ಪದ್ಧತಿಗಳು ಮನುಷ್ಯನ ಲೈಂಗಿಕಾಂಕ್ಷೆಗಳನ್ನು ಪ್ರಚೋದಿಸುವಂತೆ ಇರುವುದರಿಂದ, ಆ ದಂಧೆಯೂ ಹೆಚ್ಚಾಗಿ ಇದ್ದರೆ ಆಶ್ಚರ್ಯವೇನೂ ಅಲ್ಲ. ಇಂಡೋನೇಷ್ಯಾದ ಈ ಭಾಗದಲ್ಲಿ ಮಾತ್ರ ಹೀಗಿದೆ. ಬೇರೆಲ್ಲೂ ಇಂಥ ವಿಚಿತ್ರ ರೂಢಿ ಇದ್ದ ಹಾಗಿಲ್ಲ.

click me!