
ವಿಶ್ವ (world)ದ ಅತ್ಯಂತ ಸುರಕ್ಷಿತ ದೇಶ (Safest Country) ಯಾವುದು? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ನಂಬಿಯೊ ಸುರಕ್ಷತಾ ಸೂಚ್ಯಂಕ ವಿಶ್ವದ ಸುರಕ್ಷಿತ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಂಬಿಯೊ ಸುರಕ್ಷತಾ ಸೂಚ್ಯಂಕದಲ್ಲಿ ಯುರೋಪಿಯನ್ ದೇಶವಾದ ಅಂಡೋರಾವನ್ನು ವಿಶ್ವದ ಅತ್ಯಂತ ಸುರಕ್ಷಿತ ದೇಶವೆಂದು ಪರಿಗಣಿಸಲಾಗಿದೆ. ಫ್ರಾನ್ಸ್ ಮತ್ತು ಸ್ಪೇನ್ ನಡುವಿನ ಪೈರಿನೀಸ್ ಪರ್ವತ ಶ್ರೇಣಿಯಲ್ಲಿರುವ ಅಂಡೋರಾ ಸಣ್ಣ ದೇಶ. ಇನ್ನು ಈ ಪಟ್ಟಿಯಲ್ಲಿ ಭಾರತ ಎಲ್ಲಿದೆ, ಅಮೆರಿಕಾ ಎಲ್ಲಿದೆ ಎಂಬ ವಿವರ ಇಲ್ಲಿದೆ.
2025ರ ಸುರಕ್ಷಿತ ದೇಶಗಳ ಪಟ್ಟಿ : ಈ ಪಟ್ಟಿಯಲ್ಲಿ ಒಟ್ಟು 147 ದೇಶಗಳನ್ನು ಸೇರಿಸಲಾಗಿದೆ. ಮೊದಲ ಸ್ಥಾನ ಅಂಡೋರಾ. ಉಳಿದಂತೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಕತಾರ್ ಮತ್ತು ಗಲ್ಫ್ನ ಓಮನ್, ತೈವಾನ್, ಕಡಿಮೆ ಪ್ರಮಾಣದ ಅಪರಾಧವನ್ನು ಹೊಂದಿರುವ ವಿಶ್ವದ ಅಗ್ರ ಐದು ದೇಶಗಳಲ್ಲಿ ಒಂದಾಗಿವೆ. ಈ ಪಟ್ಟಿಯಲ್ಲಿ ಭಾರತ 66ನೇ ನೇ ಸ್ಥಾನದಲ್ಲಿದೆ. ಭಾರತದ ಅಂಕ 55.7. ಖುಷಿ ವಿಷ್ಯ ಏನೆಂದ್ರೆ ಅಮೆರಿಕ ಮತ್ತು ಬ್ರಿಟನ್ನಂತಹ ದೇಶಗಳಿಗಿಂತ ಭಾರತವನ್ನು ಸುರಕ್ಷಿತವೆಂದು ಪರಿಗಣಿಸಲಾಗಿದೆ. 51.7 ಅಂಕದೊಂದಿಗೆ ಬ್ರಿಟನ್ 87 ನೇ ಸ್ಥಾನದಲ್ಲಿದೆ. ಅಮೆರಿಕ 89 ನೇ ಸ್ಥಾನದಲ್ಲಿದೆ. ಅದಕ್ಕೆ ಸಿಕ್ಕ ಅಂಕ 50. 8
ಭಾರತ ನೆರೆ ರಾಷ್ಟ್ರಗಳು ಯಾವ ಸ್ಥಾನದಲ್ಲಿವೆ? : ಭಾರತಕ್ಕಿಂತ ಭಾರತದ ನೆರೆ ರಾಷ್ಟ್ರಗಳು ಸುರಕ್ಷಿತೆ ವಿಷ್ಯದಲ್ಲಿ ಮುಂದಿವೆ. ಚೀನಾ ಅತ್ಯುತ್ತಮ ಸ್ಥಾನದಲ್ಲಿದೆ. ಚೀನಾ ಪಟ್ಟಿಯಲ್ಲಿ 15 ನೇ ಸ್ಥಾನವನ್ನು ಪಡೆದಿದೆ. ಅದ್ರ ಅಂಕ 76.0. ಇನ್ನು ಶ್ರೀಲಂಕಾ 57.9 ಅಂಕದೊಂದಿಗೆ 59 ನೇ ಸ್ಥಾನದಲ್ಲಿದೆ. ಪಾಕಿಸ್ತಾನ 56.3 ಅಂಕದೊಂದಿಗೆ 65 ನೇ ಸ್ಥಾನದಲ್ಲಿದೆ. ರಾಜಕೀಯ ಸಮಸ್ಯೆಗಳನ್ನು ಎದುರಿಸುತ್ತಿರುವ ಬಾಂಗ್ಲಾದೇಶ 38.4 ಅಂಕದೊಂದಿಗೆ 126 ನೇ ಸ್ಥಾನದಲ್ಲಿದೆ.
ಯಾವುದು ಅತ್ಯಂತ ಅಸುರಕ್ಷಿತ ದೇಶ? : ಅಂಕಿಅಂಶಗಳ ಪ್ರಕಾರ, ದಕ್ಷಿಣ ಅಮೆರಿಕಾದ ವೆನೆಜುವೆಲಾ 2025 ರಲ್ಲಿ ಅತ್ಯಂತ ಅಸುರಕ್ಷಿತ ದೇಶವಾಗಿ ಹೊರಹೊಮ್ಮಿದೆ. ವೆನೆಜುವೆಲಾ ವಿಶ್ವದ ಅತ್ಯಂತ ಕಡಿಮೆ ಸುರಕ್ಷಿತ ದೇಶವಾಗಿದೆ. ಅಫ್ಘಾನಿಸ್ತಾನದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನ 144 ನೇ ಸ್ಥಾನದಲ್ಲಿದೆ. ನಿರಂತರವಾಗಿ ಅಂತರ್ಯುದ್ಧ ಮತ್ತು ಹಿಂಸಾಚಾರವನ್ನು ಎದುರಿಸುತ್ತಿರುವ ಸಿರಿಯಾ 140 ನೇ ಸ್ಥಾನದಲ್ಲಿದೆ. ಬಳಕೆದಾರರ ಡೇಟಾ ಆಧಾರದ ಮೇಲೆ ಇದನ್ನು ಸಿದ್ಧಪಡಿಸಲಾಗಿದೆ.
10 ಸುರಕ್ಷಿತ ದೇಶಗಳು
1. ಅಂಡೋರಾ - ಅಂಕ 84.7
2. ಯುನೈಟೆಡ್ ಅರಬ್ ಎಮಿರೇಟ್ಸ್ - ಅಂಕ 84.5
3. ಕತಾರ್ - ಅಂಕ 84.2
4. ತೈವಾನ್ - ಅಂಕ 82.9
5.ಓಮನ್ - ಅಂಕ 81.7
6. ಐಲ್ ಆಫ್ ಮ್ಯಾನ್ - ಅಂಕ 79
7. ಹಾಂಗ್ ಕಾಂಗ್ - ಅಂಕ 78.5
8. ಅರ್ಮೇನಿಯಾ ಅಂಕ - 77.9
9. ಸಿಂಗಾಪುರ ಅಂಕ -77.4
10.ಜಪಾನ್ ಅಂಕ 77.1
ವಿಶ್ವದ 147 ದೇಶಗಳ ಪಟ್ಟಿಯಲ್ಲಿರುವ ಅತ್ಯಂತ ಅಸುರಕ್ಷಿತ ದೇಶ :
* ವೆನೆಜುವೆಲಾ ಸ್ಥಾನ 147, ಅಂಕ 19.3
* ಪಪುವಾ ನ್ಯೂಗಿನಿಯಾ ಸ್ಥಾನ 146, ಅಂಕ 19.7
* ಹೈಟಿ ಸ್ಥಾನ 145, ಅಂಕ 21.1
* ಅಫ್ಘಾನಿಸ್ತಾನ ಸ್ಥಾನ 144, ಅಂಕ 24.9
* ದಕ್ಷಿಣ ಆಫ್ರಿಕಾ ಸ್ಥಾನ 143, ಅಂಕ 25.3
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.