ಚಾಮರಾಜನಗರ: ಮಲೆಮಹದೇಶ್ವರ ವನ್ಯಧಾಮದಲ್ಲಿ ಸಫಾರಿ ಆರಂಭ, ಪ್ರಾಣಿಗಳ ದರ್ಶನಕ್ಕೆ ಅವಕಾಶ

Published : Dec 25, 2023, 12:00 AM IST
ಚಾಮರಾಜನಗರ: ಮಲೆಮಹದೇಶ್ವರ ವನ್ಯಧಾಮದಲ್ಲಿ ಸಫಾರಿ ಆರಂಭ, ಪ್ರಾಣಿಗಳ ದರ್ಶನಕ್ಕೆ ಅವಕಾಶ

ಸಾರಾಂಶ

ರಾಜ್ಯದಲ್ಲೇ ನಾಲ್ಕು ಸಫಾರಿ ಕೇಂದ್ರಗಳನ್ನು ಒಳಗೊಂಡ ಏಕೈಕ ಜಿಲ್ಲೆ ಎಂಬ ಖ್ಯಾತಿಗೆ ಚಾಮರಾಜನಗರ ಜಿಲ್ಲೆ ಭಾಜನವಾಗಿದೆ. ಅಪಾರ ವನ್ಯ ಸಂಪತ್ತಿನಿಂದ ಕೂಡಿರುವ ಮಲೆ ಮಹದೇಶ್ವರ ವನ್ಯಧಾಮ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. 

ವರದಿ - ಪುಟ್ಟರಾಜು. ಆರ್. ಸಿ, ಏಷಿಯಾನೆಟ್  ಸುವರ್ಣ  ನ್ಯೂಸ್,  ಚಾಮರಾಜನಗರ

ಚಾಮರಾಜನಗರ(ಡಿ.25):  ಮಲೆ ಮಹದೇಶ್ವರ ವನ್ಯಧಾಮದಲ್ಲಿ ನೂತನವಾಗಿ  ಸಫಾರಿ ಕೇಂದ್ರ ಆರಂಭಿಸಲಾಗಿದೆ. ಇದರೊಂದಿಗೆ ರಾಜ್ಯದಲ್ಲೇ ನಾಲ್ಕು ಸಫಾರಿ ಕೇಂದ್ರಗಳನ್ನು ಒಳಗೊಂಡ ಏಕೈಕ ಜಿಲ್ಲೆ ಎಂಬ ಖ್ಯಾತಿಗೆ ಚಾಮರಾಜನಗರ ಜಿಲ್ಲೆ ಭಾಜನವಾಗಿದೆ. ಅಪಾರ ವನ್ಯ ಸಂಪತ್ತಿನಿಂದ ಕೂಡಿರುವ ಮಲೆ ಮಹದೇಶ್ವರ ವನ್ಯಧಾಮ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ನಾವೂ ಒಂದ್ ರೌಂಡ್ ಸಫಾರಿ ಮಾಡ್ಕೊಂಡು ಬರೋಣ ಬನ್ನಿ..

ಮಲೆ ಮಹದೇಶ್ವರ ವನ್ಯಧಾಮ ಸಾಕಷ್ಟು ಪ್ರಾಣಿ ಪಕ್ಷಿಗಳ ಆವಾಸ ಸ್ಥಾನವಾಗಿದೆ. ಇಲ್ಲಿನ ವನ ಸಂಪತ್ತನ್ನು ನೋಡಿ ಆನಂದಿಸಲು  ಅರಣ್ಯ ಇಲಾಖೆ ಈ ವನ್ಯಧಾಮದಲ್ಲೀಗಾ ಪ್ರವಾಸಿಗರಿಗೆ  ಸಫಾರಿ ಆರಂಭಿಸಿದೆ.  ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿಜಿ ಪಾಳ್ಯ ಅರಣ್ಯ ವಲಯದಲ್ಲಿ ಸಫಾರಿ ಆರಂಭಿಸಲಾಗಿದ್ದು,ಲೊಕ್ಕನಹಳ್ಳಿಯಲ್ಲಿ ಸಫಾರಿ ಕೇಂದ್ರ ತೆರೆಯಲಾಗಿದೆ. ಮಲೆ ಮಹದೇಶ್ವರ ವನ್ಯಧಾಮವು 2013 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಕೊಳ್ಳೇಗಾಲ ಮತ್ತು ಹನೂರು ತಾಲ್ಲೂಕುಗಳಲ್ಲಿ 949 ಚದರ ಕಿಲೋಮೀಟರ್ ಗಿಂತಲಯಲು ಹೆಚ್ಚು  ಅರಣ್ಯ ಪ್ರದೇಶವನ್ನು ಹೊಂದಿದೆ. ಈ ವಿಭಾಗದ ಭೌಗೋಳಿಕ ಪ್ರದೇಶವು ಬೆಟ್ಟ ಗುಡ್ಡ ಪ್ರದೇಶದಿಂದ ಕೂಡಿದ್ದು, ಅರೆ ಹರಿದ್ವರ್ಣ, ಶುಷ್ಕ ಅರಣ್ಯ, ಒಣಶುಷ್ಕ ಅರಣ್ಯ,  ಕುರುಚಲು ಕಾಡುಗಳನ್ನು ಒಳಗೊಂಡಿದೆ.  ಈ ವಿಭಾಗದ ಅರಣ್ಯ ಪ್ರದೇಶದಲ್ಲಿ ತೇಗ, ಬೀಟೆ, ಹೊನ್ನೆ, ಕರಾಚಿ, ಶ್ರೀಗಂಧ, ಕಾಡು ಬೇವು, ಆಲಪ್ಪಿ, ಎತ್ತಿಗ, ದಿಂಡಿಗ ಮೊದಲಾದ ಅಮೂಲ್ಯವಾದ ಮರ ಮುಟ್ಟುಗಳುನ್ನು ಹೊಂದಿದೆ. ಇಲ್ಲಿ ಬಿದಿರು ಹೇರಳವಾಗಿ ಬೆಳೆದಿದೆ. ಈ ಕಾಡಿನೊಳಗೆ ಹುಲಿ, ಆನೆ, ಕಾಡೆಮ್ಮೆ, ಜಿಂಕೆ, ಸೀಳುನಾಯಿ ಮೊದಲಾದ ಪ್ರಾಣಿಗಳು ಕಾಣಸಿಗುತ್ತವೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ ಪ್ರವಾಸಿಗರಿಗೆ ಮುದನೀಡುತ್ತಿದೆ.

ದಂಗೆ ಆಗಲಿ, ಗಲಭೆ ಆಗಲಿ ಎಂದು ಬಯಸುವುದೇ ಬಿಜೆಪಿ: ಸಚಿವ ದಿನೇಶ್ ಗುಂಡೂರಾವ್

ಇನ್ನೂ ಸಫಾರಿ ಕೇಂದ್ರ ಇರುವ  ಲೊಕ್ಕನಹಳ್ಳಿಗೆ  ಸಫಾರಿ ಹೋಗಬೇಕಂದ್ರೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಿಂದ 24 ಕಿಲೋ ಮೀಟರ್.ಮೈಸೂರಿನಿಂದ 90 ಕಿಲೋ ಮೀಟರ್  ಅಂತರವಿದೆ.  ಬೆಳಿಗ್ಗೆ 6 ಗಂಟೆಯಿಂದ  9 ಗಂಟೆ , ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆಯವರೆಗೆ ಸಫಾರಿ ಇರಲಿದೆ. ಇಲ್ಲಿ ಸಫಾರಿ ಆರಂಭವಾಗಿರುವುದರಿಂದ ಪರಿಸರ ಪ್ರವಾಸೋದ್ಯಮ ಅಭಿವೃದ್ದಿಗೆ ಹೆಚ್ಚಿನ ಅವಕಾಶವಾಗಲಿದೆ. ಸ್ಥಳೀಯರಿಗೆ ಉದ್ಯೋಗಾವಕಾಶಗಳು ಲಭಿಸಲಿವೆ. ಇಲ್ಲಿಗೆ ಬರುವ ಪ್ರವಾಸಿಗರು, ಮಲೆಮಹದೇಶ್ವರ ಬೆಟ್ಟ,  ಗುಂಡಾಲ್ ಜಲಾಶಯ, ಭರಚುಕ್ಕಿ ಜಲಪಾತ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳನ್ನು  ವೀಕ್ಷಿಸಿ ಹೋಗಬಹುದಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಈಗಾಗಲೇ ಬಂಡೀಪುರ, ಬಿ.ಆರ್. ಟಿ. ಹುಲಿ ಸಂರಕ್ಷಿತ ಪ್ರದೇಶದ  ಕೆ.ಗುಡಿಯಲ್ಲಿ,  ಹನೂರು ತಾಲ್ಲೂಕಿನ ಕಾವೇರಿ ವನ್ಯಧಾಮದ ಗೋಪಿನಾಥಂ ನಲ್ಲಿ ಸಫಾರಿ ವ್ಯವಸ್ಥೆ ಇದೆ. ಇದೀಗ ಮಹದೇಶ್ವರ ವನ್ಯಧಾಮದಲ್ಲೂ ಸಫಾರಿ ಆರಂಬಿಸಿರುವುದರಿಂದ ರಾಜ್ಯದಲ್ಲಿ ನಾಲ್ಕು ಸಫಾರಿ ಕೇಂದ್ರಗಳನ್ನು ಒಳಗೊಂಡ ಏಕೈಕ ಜಿಲ್ಲೆ ಎಂಬ  ಖ್ಯಾತಿಗೂ ಚಾಮರಾಜನಗರ ಜಿಲ್ಲೆ ಭಾಜನವಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಿರಿಯ ನಾಗರಿಕರು, 45+ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೆ; ಇಲ್ಲಿದೆ ಸೂಪರ್ ಅಪ್‌ಡೇಟ್
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?