ಡಾ.ಬ್ರೋ ಖ್ಯಾತಿಯ ಗಗನ್ ಅವರು ಕಾಶ್ಮೀರದ ಸೌಂದರ್ಯವನ್ನು ಕನ್ನಡರಿಗೆ ಉಣಬಡಿಸಿದ್ದಾರೆ. ಈ ವೇಳೆ ಅವರಿಗೆ ಕ್ಯಾಮೆರಾ ಬಂದ್ ಮಾಡುವಂತೆಯೂ ಎಚ್ಚರಿಸಲಾಗಿತ್ತು. ಆಗಿದ್ದೇನು?
ಡಾ.ಬ್ರೋ ಕಾಶ್ಮೀರಕ್ಕೆ ಹೋಗಿ ಅಲ್ಲಿಯ ಮಂಜಿನಲ್ಲಿ ಸಿಕ್ಕಾಕಿಕೊಂಡಿರೋ ವಿಡಿಯೋ ಒಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈಗ ಶೇರ್ ಮಾಡಿಕೊಂಡಿದ್ದಾರೆ. ಮಂಜಿನಲ್ಲಿ ಮಂಗಾಟ ಎನ್ನುವ ಶೀರ್ಷಿಕೆ ಕೊಟ್ಟಿರುವ ಡಾ.ಬ್ರೋ ಮಂಜಿನಲ್ಲಿ ಹೋಗುವಾಗ ಅಲ್ಲಿಯ ವ್ಯಕ್ತಿಯೊಬ್ಬ ಕ್ಯಾಮೆರಾ ಬಂದ್ ಮಾಡುವಂತೆ ಆವಾಜ್ ಕೂಡ ಹಾಕಿದ್ದಾನೆ. ಆದರೆ ಕರ್ನಾಟಕದವರಿಗೆ ಕಾಶ್ಮೀರ ತೋರಿಸಿಯೇ ತೋರಿಸುವೆ ಎಂದ ಡಾ.ಬ್ರೋ ಮಂಜಿನಲ್ಲಿಯೇ ಓಡಿ ಹೋಗಿದ್ದಾರೆ. ಆಗ ಕಾಲು ಸಿಕ್ಕಿಕೊಂಡು ಬಿದ್ದಿದ್ದಾರೆ. ಹಾಗೂ ಹೀಗೂ ಎದ್ದು ಮತ್ತೆ ಓಡಿದ್ದಾರೆ. ಸ್ವಲ್ಪ ಹೆಚ್ಚೂ ಕಡಿಮೆಯಾದರೂ ಇಲ್ಲೇ ಹೂತು ಹೋಗುತ್ತಿದ್ದೆ ಎಂದಿದ್ದಾರೆ. ನಂತರ ಬದಾಮ್, ಕಾಜು, ಪಿಸ್ತಾ ಎಲ್ಲಾ ಮಿಕ್ಸ್ ಇರುವ ಕಾಶ್ಮೀರದ ಕಾವಾ ಹೀರಿ ಮತ್ತೆ ಮುಂದೆ ಹೋಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇದೇ ವೇಳೆ, ಕಾಶ್ಮೀರದ ಐಸ್ ಗೋಪುರದಲ್ಲಿರುವ ರೆಸ್ಟೋರೆಂಟ್ಗೆ ಭೇಟಿ ಕೊಟ್ಟ ಗಗನ್ ಅಲ್ಲಿನ ಸೌಂದರ್ಯವನ್ನು ತೋರಿಸಿದ್ದಾರೆ. ಅಷ್ಟಕ್ಕೂ ವಿಶೇಷ ಸ್ಥಾನಮಾನದ ಹೆಸರಿನಲ್ಲಿ ಕಾಶ್ಮಿರದ ಜನತೆಯ ಮೇಲೆ ಆರ್ಟಿಕಲ್ 370 ಹೇರಿ ಅಲ್ಲಿಯ ಜನಜೀವನ ದುಸ್ತರವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಆರ್ಟಿಕಲ್ ತೆಗೆದು ಹಾಕಿದ ಮೇಲೆ ಕಾಶ್ಮೀರದ ಸೌಂದರ್ಯವನ್ನು ಯಾರು ಬೇಕಾದರೂ ಸವಿಯುವ ಅವಕಾಶ ಸಿಕ್ಕಿದೆ. ಅಲ್ಲಿಯ ಚಿತ್ರಣವೇ ಬದಲಾಗಿದೆ. ಭಯೋತ್ಪಾದನೆ ಸಾಕಷ್ಟು ಪ್ರಮಾಣದಲ್ಲಿ ನಿಂತಿದೆ. ಕಾಶ್ಮೀರ ಎಂಬ ಹೆಸರು ಕೇಳಿದರೆ ಭಯ ಪಡುತ್ತಿದ್ದ ಪ್ರವಾಸಿಗರು ಇದೇಗ ಯಾವುದೇ ಹೆದರಿಕೆ ಇಲ್ಲದೇ ಬರುತ್ತಿದ್ದಾರೆ. ಇದೇ ಕಾರಣಕ್ಕೆ ಪ್ರವಾಸಿಗಳ ಸಂಖ್ಯೆಯಲ್ಲಿ ವಿಪರೀತ ಏರಿಕೆಯಾಗಿದ್ದು, ಸರ್ಕಾರದ ಬೊಕ್ಕಸ ಕೂಡ ತುಂಬುತ್ತಿದೆ. ಭಯದಿಂದಲೇ ಬದುಕುತ್ತಿದ್ದ ಕಾಶ್ಮೀರಿಗರು ಈಗ ನಿಜ ಜೀವನ ನಡೆಸುತ್ತಿದ್ದಾರೆ. ಇಂಥ ಸ್ಥಳಕ್ಕೆ ಭೇಟಿ ಕೊಟ್ಟಿರುವ ಡಾ.ಬ್ರೋ ಅಲ್ಲಿಯ ಸೌಂದರ್ಯವನ್ನು ವರ್ಣಿಸಿದ್ದಾರೆ.
ಚೀನಾ ಹೊಗಳಿ ಪೇಚಿಗೆ ಸಿಲುಕಿದ್ರಾ ಡಾ.ಬ್ರೋ ಸುದ್ದಿ ಬೆನ್ನಲ್ಲೇ ಅಪಾಯಕಾರಿ ವಿಡಿಯೋ ಶೇರ್: ಫ್ಯಾನ್ಸ್ ಡವಡವ...
ಪ್ರತಿಯೊಬ್ಬ ಕನ್ನಡಿಗರ ಹೃದಯ ಗೆದ್ದಿರುವ ಡಾ.ಬ್ರೋ ಕಾಣೆಯಾಗಿದ್ದಾರೆ ಎನ್ನುವ ಚರ್ಚೆ ಕಳೆದ ಒಂದು ತಿಂಗಳಿನಿಂದ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಲೇ ಇದೆ. ವಿದೇಶ ಸುತ್ತಲೂ ಇಂಗ್ಲಿಷ್ ಬೇಕೇ ಬೇಕು ಎನ್ನುವ ಈ ಕಾಲಘಟ್ಟದಲ್ಲಿ ಅತ್ತ ಇಂಗ್ಲಿಷ್ ಕೂಡ ಸರಿಯಾಗಿ ಬರದೇ, ಇತ್ತ ಹಿಂದಿಯೂ ಬರದೇ ಇದ್ದರೂ ವಿದೇಶಿಗರಿಗೇ ಕನ್ನಡ ಕಲಿಸಿ ಬರುತ್ತಿರುವ ಸ್ಮಾರ್ಟ್, ಧೀಮಂತ ಹಾಗೂ ಅಪ್ರತಿಮ ಪ್ರತಿಭೇ ಡಾ. ಬ್ರೋ ಅಲಿಯಾಸ್ ಗಗನ್. ಯಾವೊಬ್ಬ ಯೂಟ್ಯೂಬರ್ ಒಂದಿಷ್ಟು ದಿನ ಕಾಣಿಸಿಕೊಳ್ಳದೇ ಇದ್ದರೆ ಅವರ ಫ್ಯಾನ್ಸ್ ಅಷ್ಟೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲವೇನೋ. ಆದರೆ ಗಗನ್ ಕಳೆದೊಂದು ತಿಂಗಳಿನಿಂದ ಯಾವುದೇ ವಿಡಿಯೋ ಅಪ್ಲೋಡ್ ಮಾಡದೇ ಇರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯೇ ನಡೆದುಬಿಟ್ಟಿದೆ. ಹಲವು ರೀತಿಯ ಊಹಾಪೋಹ, ಗಾಳಿಸುದ್ದಿಗಳೂ ಹರಿದಾಡಿವೆ. ಚೀನಾವನ್ನು ಹೊಗಳಿದ ಬಳಿಕ ಗಗನ್ ನಾಪತ್ತೆಯಾಗಿರುವುದಕ್ಕೆ ಕೆಲವರು ತಮ್ಮದೇ ಅತಿಬುದ್ಧಿವಂತಿಕೆ ಉಪಯೋಗಿಸಿ ಮನಸ್ಸಿಗೆ ಬಂದದ್ದನ್ನೂ ಬರೆದುಕೊಂಡೂ ಆಗಿದೆ.
ಆದರೆ ಸ್ಟಾರ್ ಸ್ಪೋರ್ಟ್ಸ್ ಕನ್ನಡಕ್ಕೆ ಅಸೈನ್‌ಮೆಂಟ್‌ಗಳಲ್ಲಿ ಡಾ. ಬ್ರೋ ಬಿಜಿಯಾಗಿದ್ದಾರೆ. ಕ್ರಿಕೆಟ್ ವಿಶ್ವಕಪ್‌ನಲ್ಲಿ ಬಿಜಿಯಾಗಿದ್ದರು. ಇದಾದ ಬಳಿಕ ವಿದೇಶಗಳಿಗೆ ಹೋಗುವಾಗ ಹಲವಾರು ರೀತಿಯ ತಯಾರಿ ಮಾಡಿಕೊಳ್ಳಬೇಕಾಗಿದ್ದು, ಅವುಗಳಲ್ಲಿ ಡಾ.ಬ್ರೋ ಬಿಜಿಯಾಗಿದ್ದಾರೆ ಎಂದು ಯೂಟ್ಯೂಬ್ಗಳಿಗೆ ಡಾ.ಬ್ರೋ ತಿಳಿಸುವ ಮೂಲಕ ಅಭಿಮಾನಿಗಳ ಮನಸ್ಸಿಗೆ ಸಮಾಧಾನ ತಂದಿದ್ದಾರೆ. ಆದರೆ ಇದರ ಮಧ್ಯೆಯೇ ತಮ್ಮ ಅಭಿಮಾನಿಗಳು ಗಾಬರಿ ಬೀಳಬಾರದು ಎನ್ನುವ ಕಾರಣಕ್ಕೆ ಹಳೆಯ ವಿಡಿಯೋಗಳ ತುಣುಕುಗಳನ್ನೇ ಗಗನ್ ಮತ್ತೆ ಮತ್ತೆ ಶೇರ್ ಮಾಡುತ್ತಿದ್ದಾರೆ. ಅದೇ ರೀತಿ ಗಗನ್ ಅವರು ಹಳೆಯ ವಿಡಿಯೋವನ್ನು ಪುನಃ ಶೇರ್ ಮಾಡಿದ್ದಾರೆ. ಇದು ಮಾರ್ಚ್ ತಿಂಗಳು ಎಂದು ಅವರುಕೊನೆಯಲ್ಲಿ ಹೇಳಿದ್ದು, ಇದು ಹಳೆಯ ವಿಡಿಯೋ ಎಂದು ತಿಳಿದುಬರುತ್ತದೆ. ಇದರ ಹೊರತಾಗಿಯೂ ಡಾ.ಬ್ರೋ ವಿಡಿಯೋ ನೋಡಿ ಫ್ಯಾನ್ಸ್ ಸಂತಸದಿಂದ ಕುಣಿದಾಡುತ್ತಿದ್ದಾರೆ. ಎಲ್ಲಿದ್ರಿ ಇಷ್ಟು ದಿನ ಎಂದು ಪ್ರಶ್ನೆಗಳ ಸುರಿಮಳೆಯನ್ನೇಗೈದಿದ್ದಾರೆ.
ENTERTAINMENT 2023: ಈ ನಟರಿಗೆ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುವಂತೆ ಹೊಸಜೀವ ಕೊಟ್ಟ ವರ್ಷವಿದು!