ಚಿತ್ರದುರ್ಗ: ಮಧ್ಯ ಕರ್ನಾಟಕದ ಮಿನಿ ಊಟಿ ಜೋಗಿಮಟ್ಟಿ

By Suvarna News  |  First Published Jul 14, 2022, 6:57 PM IST

ಕರ್ನಾಟಕದ ನಾನಾ ಭಾಗಗಳಲ್ಲಿ ವರುಣನ ಆರ್ಭಟ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಅದರ ಪರಿಣಾಮವಾಗಿ ಮಧ್ಯ ಕರ್ನಾಟಕದ‌ಲ್ಲಿಯೇ ಪ್ರಸಿದ್ದಿ ಪಡೆದಿರೋ ಮಿನಿ ಊಟಿ ಜೋಗಿಮಟ್ಟಿ ವೀಕ್ಷಣೆಗೆ ಪ್ರವಾಸಿಗರ ದಂಡೇ ಹರಿದು ಬರ್ತಿದೆ. ಆ ಸುಂದರ ಮನಮೋಹಕ ದೃಶ್ಯಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಿದೆ. ಈ ಕುರಿತು ಒಂದು ವರದಿ ಇಲ್ಲಿದೆ....


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ, (ಜುಲೈ.14):
ಕೈಗೆ ಸಿಗುವ ರೀತಿಯಲ್ಲಿ ಕಾಣ್ತಿರೋ ಮಂಜಿನ ಹನಿಗಳು, ಜೊತೆಗೆ ಧರೆಗೆ ಇಳಿದು ಬರ್ತಿರೋ ಬಿಳಿ ಮೋಡಗಳು. ಎತ್ತ ನೋಡಿದ್ರೂ ಸುಂದರ ಪರಿಸರ ಇದರ ಮಧ್ಯೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗ್ತಿರುವ ಪ್ರವಾಸಿಗರು. ಇದು ಯಾವುದೋ ಊಟಿ ಅಥವಾ ನಂದಿಬೆಟ್ಟವಲ್ಲ. ಮೇಲಾಗಿ ಮಧ್ಯ ಕರ್ನಾಟಕದ ಜನರ ಪ್ರಸಿದ್ದ ಪ್ರವಾಸಿತಾಣ ಮಿನಿ ಊಟಿ ಎಂದೇ ಪ್ರಖ್ಯಾತಿ ಪಡೆದಿರೋ ಜೋಗಿಮಟ್ಟಿ. 

ಕಳೆದ ಹತ್ತಾರು ದಿನಗಳಿಂದ ಉತ್ತರಕರ್ನಾಟಕದ ಭಾಗಗಳಲ್ಲಿ ಹೆಚ್ಚಿನ ಮಳೆ ಆಗ್ತಿರೋ ಕಾರಣ, ಕೋಟೆನಾಡಿನಲ್ಲಿ ಸದ್ಯ ಜಿಟಿ ಜಿಟಿ ಮಳೆ ಶುರುವಾಗಿದೆ. ಇಂತಹ ತುಂತುರು ಮಳೆಯ ವೇಳೆಯಲ್ಲಿ, ಜೋಗಿಮಟ್ಟಿ ಪ್ರವಾಸಿ ತಾಣ ನೋಡೋದಕ್ಕಂತು ಸ್ವರ್ಗ ಸುಖ. ಕಳೆದ ಒಂದು ವಾರದಿಂದದಲೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ದಂಡೇ ಹರಿದು ಬರ್ತಿದೆ. ಇಂತಹ ಸುಂದರ ಪ್ರವಾಸಿ ತಾಣಗಳನ್ನು ನೋಡೋದಕ್ಕೆ ನಾನಾ ಜಿಲ್ಲೆಗಳಿಂದಲೂ ಪ್ರವಾಸಿಗರು ಬರ್ತಿದ್ದಾರೆ. ಎಲ್ಲರೂ ಕುಟುಂಬ ಸಮೇತ ಆಗಮಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಇಂತಹ ಅದ್ಬುತ ಪ್ರವಾಸಿತಾಣ ಇರೋದಕ್ಕೆ ನಮಗೆ ಹೆಮ್ಮೆ ಆಗ್ತಿದೆ ಅಂತಾರೆ ಪ್ರವಾಸಿಗರು.

Tap to resize

Latest Videos

ಮೃಗಾಲಯ ಅಂತ ದೊಡ್ಡ ಬೋರ್ಡ್, ಒಳಗೆ ಹೋಗಿ ನೋಡಿದ್ರೆ ಖಾಲಿ ಬೋನ್

ಇನ್ನೂ ಜೋಗಿಮಟ್ಟಿ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸ್ತಿರೋ ಹಿನ್ನೆಲೆ ಅರಣ್ಯ ಇಲಾಖೆಗೆ ಎಷ್ಟರಮಟ್ಟಿಗೆ ಲಾಭ ಆಗ್ತಿದೆ ಎಂಬುದರ ಬಗ್ಗೆ ಅಧಿಕಾರಿಗಳನ್ನೇ ವಿಚಾರಿಸಿದ್ರೆ, ಈ ಮೊದಲು ಈ ರೀತಿಯ ಕಲೆಕ್ಷನ್ ಆಗಿರಲಿಲ್ಲ. ಒಂದೇ ದಿನಕ್ಕೆ ೩೦ ಸಾವಿರ ಕಲೆಕ್ಷನ್ ಆಗಿರೋದು ನಮ್ಮ ಇಲಾಖೆಗೆ ಪುಷ್ಟಿ ನೀಡಿದೆ. ಅದ್ರಲ್ಲೂ ನಮ್ಮ ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆ ಆಗ್ತಿರೋದ್ರಿಂದ ಜೋಗಿಮಟ್ಟಿ ವೀಕ್ಷಣೆ ಮಾಡುವುದೇ ಒಂದು ಸುಂದರ ಅನುಭವ. ಅದಕ್ಕಾಗಿಯೇ ಅನೇಕ ಭಾಗಗಳಿಂದಲೂ ಪ್ರವಾಸಿಗರು ಜೋಗಿಮಟ್ಟಿ ವೀಕ್ಷಣೆಗೆ ಬರ್ತಿದ್ದಾರೆ. ಇನ್ನೂ ಹೆಚ್ಚೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಇಂತಹ ಸುಂದರ ತಾಣವನ್ನು ನೋಡಿ ಕಣ್ತುಂಬಿಕೊಳ್ಳಿ ಅಂತಾರೆ ಅಧಿಕಾರಿ. 

ಒಟ್ಟಾರೆ ಮಧ್ಯ ಕರ್ನಾಟಕದ ಜನರ ಪ್ರಸಿದ್ದ ಪ್ರವಾಸಿ ತಾಣವಾಗಿರೋ ಜೋಗಿಮಟ್ಟಿಯಲ್ಲಂತೂ ಪ್ರವಾಸಿಗರು ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದಾರೆ. ಇಂತಹ ಸುಂದರ ತಾಣಗಳನ್ನು ನೋಡೊದಕ್ಕೆ ಮಲೆನಾಡಿನ ಪ್ರದೇಶಕ್ಕೆ ಹೋಗಬೇಕು ಎನ್ನವವರು ಒಮ್ಮೆ ಜೋಗಿಮಟ್ಟಿಗೆ ಬೇಡಿ ನೀಡಬೇಕಿದೆ......

click me!