ಕಡಿಮೆ ಬಜೆಟ್ ನಲ್ಲಿ ವಿದೇಶ ಸುತ್ತೋ ಆಸೇನಾ? ಹೀಗ್ ಪ್ಲ್ಯಾನ್ ಮಾಡಿ

Published : Jul 14, 2022, 05:19 PM IST
ಕಡಿಮೆ ಬಜೆಟ್ ನಲ್ಲಿ ವಿದೇಶ ಸುತ್ತೋ ಆಸೇನಾ? ಹೀಗ್ ಪ್ಲ್ಯಾನ್ ಮಾಡಿ

ಸಾರಾಂಶ

ದೇಶ ಸುತ್ತು ಕೋಶ ಓದು ಎನ್ನುವ ಮಾತಿದೆ. ಆದ್ರೆ ಎಲ್ಲ ದೇಶ ಸುತ್ತೋಕೆ ಕೈನಲ್ಲಿ ಕಾಸು ಇರ್ಬೇಕು. ಕೈನಲ್ಲಿ ಅಲ್ಪಸ್ವಲ್ಪ ಹಣ ಇಟ್ಕೊಂಡು ಊರು ಸುತ್ತುತ್ತೇನೆ ಅಂದ್ರೆ ಅದಕ್ಕೂ ಒಂದಿಷ್ಟು ಒಳ್ಳೆ ಪ್ಲೇಸ್ ಇದೆ.   

ಅನೇಕರಿಗೆ ಪ್ರವಾಸ  ತುಂಬಾ ಇಷ್ಟ. ವಾರಾಂತ್ಯದಲ್ಲಿ ಪ್ರವಾಸಕ್ಕೆ ಪ್ಲಾನ್ ಮಾಡ್ತಾರೆ. ಮತ್ತೆ ಕೆಲವರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಪ್ರವಾಸಕ್ಕೆ ಹೋಗಿ ಬರ್ತಾರೆ. ಅಂಥವರು ಪ್ರತಿ ಬಾರಿ ಹೊಸ ಪ್ರವಾಸಿ ತಾಣದ ಸೌಂದರ್ಯ ಸವಿಯಲು ಬಯಸ್ತಾರೆ. ದೇಶದಲ್ಲರುವ ಸುಂದರ ಸ್ಥಳಗಳನ್ನು ಮಾತ್ರವಲ್ಲ ವಿದೇಶದಲ್ಲಿರುವ ಪ್ರವಾಸಿ ತಾಣಗಳ ವೀಕ್ಷಣೆಗೆ ಆಸಕ್ತಿ ಹೊಂದಿರುತ್ತಾರೆ. ಆದ್ರೆ ಎಲ್ಲ ಬಾರಿ ವಿದೇಶ ಸುತ್ತೋದು ಸುಲಭವಲ್ಲ. ಸಾಕಷ್ಟು ಹಣ ಕೈನಲ್ಲಿ ಇರಬೇಕು. ಕುಟುಂಬಸ್ಥರ ಜೊತೆ ಪ್ರವಾಸಕ್ಕೆ ತೆರಳಿದ್ರೆ ಖರ್ಚು ಸ್ವಲ್ಪ ಹೆಚ್ಚೇ. ಹಾಗಂತ ಪ್ರವಾಸ ರದ್ದು ಮಾಡೋಕೆ ಆಗುತ್ತಾ? ನೀವೂ ಭಾರತ ಬಿಟ್ಟು ವಿದೇಶ ನೋಡ್ಬೇಕೆಂಬ ಕನಸು ಕಾಣ್ತಿದ್ದರೆ ಕಡಿಮೆ ಬಜೆಟ್ ನಲ್ಲಿ ಕೆಲ ದೇಶಗಳನ್ನು ಸುತ್ತಿ ಬರಬಹುದು. ನಾವಿಂದು ಕಡಿಮೆ ಖರ್ಚಿನಲ್ಲಿ ನೀವು ಯಾವೆಲ್ಲ ದೇಶ ನೋಡ್ಬಹುದು ಎಂಬುದನ್ನು ನಿಮಗೆ ಹೇಳ್ತೇವೆ. 

ನೇಪಾಳ (Nepal) : ನೇಪಾಳ ಅತ್ಯುತ್ತಮ ಪ್ರವಾಸಿ ತಾಣ (Tourist Spot) ಗಳಲ್ಲಿ ಒಂದು. ಇಲ್ಲಿನ ಪ್ರಾಕೃತಿಕ ಸೌಂದರ್ಯ ನಿಜಕ್ಕೂ ಕಣ್ಮನ ಸೆಳೆಯುತ್ತದೆ. ಪರ್ವತಗಳು,  ಗುಪ್ತ ಮಠಗಳು, ದೇವಾಲಯಗಳು ಸೇರಿದಂತೆ ಅನೇಕ ಸುಂದರ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಟ್ರಕ್ಕಿಂಗ್ ನಲ್ಲಿ ಆಸಕ್ತಿಯಿರುವವರಿಗೆ ಇದು ಹೇಳಿ ಮಾಡಿಸಿದ ಸ್ಥಳ. ಕಠ್ಮಂಡು, ಪೋಖರಾ, ಜನಕ್ಪುರ ಇಲ್ಲಿನ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ನೀವು ನಾಲ್ಕು ದಿನದ ಟೂರ್ ಪ್ಲಾನ್ ಮಾಡಿದ್ರೆ ಎಲ್ಲ ಸ್ಥಳಗಳನ್ನು ವೀಕ್ಷಿಸಬಹುದು. ನಾಲ್ಕು ದಿನದ ಪ್ರವಾಸದ ವೆಚ್ಚ ಸುಮಾರು 25000 ರೂಪಾಯಿಗಳು. ಕಡಿಮೆ ಖರ್ಚಿನಲ್ಲಿ ವಿದೇಶ ಸುತ್ತಬೇಕು ಎನ್ನುವವರಿಗೆ ನೇಪಾಳ ಬೆಸ್ಟ್. 

ಭೂತಾನ್ (Bhutan) : ಭೂತಾನ್ ಭಾರತದ ನೆರೆಯ ರಾಷ್ಟ್ರಗಳಲ್ಲಿ ಒಂದಾಗಿದೆ. ಇದು ಅತ್ಯುತ್ತಮ ಅಂತರಾಷ್ಟ್ರೀಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಬರುತ್ತದೆ. ಇದು ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ತವರೂರು.  ಇಲ್ಲಿ ಅನೇಕ ಬೌದ್ಧ ದೇವಸ್ಥಾನಗಳಿವೆ. ಪಾರೋ, ಥಿಂಪು, ವಾಂಗ್ಡ್ಯೂ ಫೋಡ್ರಾಂಗ್ ಸೇರಿದಂತೆ ಅನೇಕ ಪ್ರವಾಸಿ ಸ್ಥಳಗಳು ಇಲ್ಲಿವೆ. ಇಲ್ಲಿ ಭಾರತೀಯ ಪ್ರವಾಸಿಗರ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಇಲ್ಲಿನ ಪ್ರಕೃತಿ ಸೌಂದರ್ಯ ಅದ್ಭುತವಾಗಿದೆ. ಇಲ್ಲಿ ನೀವು ರಜೆ ಮಜಾ ಮಾಡಬಹುದು, ಕಡಿಮೆ ಬಜೆಟ್ ನಲ್ಲಿ ಊರು ಸುತ್ತಬಹುದು. ಒಂದು ದಿನದ ಭೂತಾನ್ ಖರ್ಚು ಒಬ್ಬ ವ್ಯಕ್ತಿಗೆ 4 ರಿಂದ 5 ಸಾವಿರಕ್ಕೆ ಬರುತ್ತದೆ.

ಈ ತಾಣಗಳು ಮಾನ್ಸೂನ್‌ನಲ್ಲೂ ಹನಿಮೂನನ್ನು ರೋಮ್ಯಾಂಟಿಕ್ ಆಗಿಸುತ್ತೆ

ಶ್ರೀಲಂಕಾ (Sri Lanka) : ಶ್ರೀಲಂಕಾ ಒಂದು ಸಣ್ಣ ದ್ವೀಪ. ಅಲ್ಲಿ ವಿಶ್ವ ಪರಂಪರೆಯ ಮಿಶ್ರಣವಿದೆ. ಭಾರತೀಯರನ್ನು ಆಕರ್ಷಿಸುವ ಪ್ರವಾಸಿ ಸ್ಥಳಗಳಲ್ಲಿ ಶ್ರೀಲಂಕಾ ಕೂಡ ಒಂದು. ಇಲ್ಲಿ ಭಾರತೀಯರು ಸಮುದ್ರಾಹಾರ (Seafood) ವನ್ನು ಹೆಚ್ಚು ಆನಂದಿಸುತ್ತಾರೆ. ಬೆಂಟೋಟಾ,ನುವಾರಾ ಎಲಿಯಾ, ಕೊಲಂಬೊ ಸೇರಿದಂತೆ ಶ್ರೀಲಂಕಾದಲ್ಲಿ ನೋಡಲು, ಸುತ್ತಾಡಲು ಅನೇಕ ಸ್ಥಳಗಳಿವೆ. ಶ್ರೀಲಂಕಾಕ್ಕೆ ನೀವು ಐದು ದಿನಗಳ ಪ್ಲಾನ್ ಮಾಡಿ ಬಂದ್ರೆ ಒಳ್ಳೆಯದು. 5 ದಿನಗಳ ಪ್ರವಾಸಕ್ಕೆ ಇದರ ವೆಚ್ಚ  ಪ್ರತಿ ವ್ಯಕ್ತಿಗೆ 7000 ರೂಪಾಯಿ. 

ಕೋವಿಡ್‌ ನಂತರ ಭೂತಾನ್ ರೀ ಓಪನ್‌; ಪ್ರವಾಸಿಗರಿಗೆ ಮೂರು ಪಟ್ಟು ಶುಲ್ಕ ಹೆಚ್ಚಳ

ಮಲೇಷ್ಯಾ (Malaysia):  ಕಡಿಮೆ ಬಜೆಟ್‌ನಲ್ಲಿ ಅಂತರರಾಷ್ಟ್ರೀಯ ರಜಾದಿನವನ್ನು ಆನಂದಿಸಲು ಬಯಸಿದರೆ ಮಲೇಷ್ಯಾ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಇಲ್ಲಿನ ವಾಸ್ತುಶಿಲ್ಪವು ಈ ದೇಶದ ಸೌಂದರ್ಯವನ್ನು ಹೆಚ್ಚಿಸಿದೆ. ಇಲ್ಲಿ ಭೇಟಿ ನೀಡಲು ಅನೇಕ ಉತ್ತಮ ಸ್ಥಳಗಳೂ ಇವೆ. ಪೆನಾಂಗ್ ಹಿಲ್, ಕಿನಾಬಾಲು ಪರ್ವತ, ಮಲಕ್ಕಾ ಮಲೇಷ್ಯಾದ ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ. ಮಲೇಷ್ಯಾ ಕೂಡ ಹನಿಮೂನ್ ಗೆ ಹೇಳಿ ಮಾಡಿಸಿದ ಜಾಗ. ಇಲ್ಲಿ ಒಂದು ದಿನದ ವೆಚ್ಚ ಸುಮಾರು 7500 ರೂಪಾಯಿಗಳು.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!