ಮುಸ್ಲಿಂ ರಾಷ್ಟ್ರದಲ್ಲಿ ನಿಮಗೆ ಸಿಗ್ತಾಳೆ ತಾತ್ಕಾಲಿಕ ಹೆಂಡತಿ! ಏನಿದು ಪ್ಲೆಸರ್ ಮ್ಯಾರೇಜ್?

By Bhavani Bhat  |  First Published Oct 8, 2024, 12:32 PM IST

ಇಂಡೋನೇಷ್ಯಾದಲ್ಲಿ ಬಡ ಮಹಿಳೆಯರು ಹಣಕ್ಕಾಗಿ ತಾತ್ಕಾಲಿಕ ಮದುವೆಯಾಗುವ ಪದ್ಧತಿ 'ಸುಖದ ಮದುವೆ' ಹೆಚ್ಚುತ್ತಿದೆ. ಈ ಒಪ್ಪಂದದ ವಿವಾಹಗಳು ಕಾನೂನುಬಾಹಿರವಾದರೂ, ಬಡತನ ಮತ್ತು ಸಡಿಲ ಕಾನೂನು ಜಾರಿಯಿಂದಾಗಿ ಈ ಅಭ್ಯಾಸ ಮುಂದುವರಿದಿದೆ.


ಇಂಡೋನೇಷ್ಯಾದಲ್ಲಿ ಒಂದು ಬೆಳವಣಿಗೆ ಅಲ್ಲಿನವರ ನಿದ್ದೆಗೆಡಿಸಿದೆ. ಅದೇ ತಾತ್ಕಾಲಿಕ ಮದುವೆ ಅಥವಾ ʼಸುಖಕ್ಕಾಗಿ ಮದುವೆʼ. ಸುಖದ ಅವಶ್ಯಕತೆ ಮುಗಿದ ಬಳಿಕ ಡೈವೋರ್ಸ್!‌ ಇದೇ ಒಂದು ದಂಧೆ ಆಗುತ್ತಿದೆ ಎಂಬುದು ಅಲ್ಲಿನ ಸಂಪ್ರದಾಯವಾದಿಗಳಿಗೆ ಮಂಡೆ ಬಿಸಿ ಮಾಡಿದೆ. ಈ ಕುರಿತು ಲಾಸ್‌ ಏಂಜಲೀಸ್‌ ಟೈಮ್ಸ್‌ ವರದಿ ಮಾಡಿದ ಬಳಿಕ ಕೋಲಾಹಲವೇ ಎದ್ದಿದೆ. 

ಅದು ನಡೆಯುವುದು ಹೀಗೆ: ಇಲ್ಲಿನ ಬಡ ಸಮುದಾಯಗಳಲ್ಲಿನ ಮುಸ್ಲಿಂ ಮಹಿಳೆಯರು ಹೊರಿಗಿನಿಂದ ಬರುವ ಪುರುಷ ಟೂರಿಸ್ಟ್‌ಗಳಿಗೆ ತಾತ್ಕಾಲಿಕ ಹೆಂಡತಿಯರಾಗಿ ಹೋಗುತ್ತಾರೆ. ಇದಕ್ಕೆ ಪ್ರತಿಯಾಗಿ ಆ ಪುರುಷ, ಈ ಮಹಿಳೆಗೆ ಅಥವಾ ಆಕೆಯ ಕುಟುಂಬಕ್ಕೆ ಕೈತುಂಬ ಹಣ ಅಥವಾ ವಧು ದಕ್ಷಿಣೆ ಕೊಡಬೇಕು. ಸಾಮಾನ್ಯವಾಗಿ ಇದು Pleasure Marriage ಅಥವಾ "ಸಂತೋಷದ ಮದುವೆ" ಎಂದು ಕರೆಯಲ್ಪಡುತ್ತದೆ. ಇಬ್ಬರ ಅವಶ್ಯಕತೆಯೂ ಮಗಿದ ಬಳಿಕ ಡೈವೋರ್ಸ್‌ ಮಾಡಿಕೊಳ್ಳುತ್ತಾರೆ. ಈ ಮದುವೆಯ ಅವಧಿ ಒಂದು ತಿಂಗಳಿನಿಂದ ಹಿಡಿದು ಎರಡು ಮೂರು ವರ್ಷಗಳೂ ಇರಬಹುದು. 

Latest Videos

undefined

ಇದನ್ನು ಮಾಡೋ ಹೆಚ್ಚಿನ ಮಹಿಳೆಯರು ಬಡ ಕುಟುಂಬದವರು. ಇದು ಅವರಿಗೆ ತಮ್ಮ ಆರ್ಥಿಕ ತೊಂದರೆಗಳ ನಡುವೆ ತಮ್ಮ ಕುಟುಂಬವನ್ನು ಬೆಂಬಲಿಸುವ ಸಾಧನ. ಪ್ರಾಕೃತಿಕ ಸೌಂದರ್ಯ ಮತ್ತು ಅರೇಬಿಕ್ ಪ್ರಭಾವಗಳಿಗೆ ಹೆಸರುವಾಸಿಯಾದ ಜನಪ್ರಿಯ ಪ್ರವಾಸಿ ತಾಣವಾದ ಇಂಡೋನೇಷ್ಯಾದ ಪುಂಕಾಕ್ ಪ್ರದೇಶದಲ್ಲಿ ಈ ಅಭ್ಯಾಸ ಈಗ ಪ್ರಚಲಿತವಾಗಿದೆ.

ಈ ʼಸಂತೋಷದ ವಿವಾಹʼ ಈಗ ಬೆಳೆಯುತ್ತಿರುವ ಉದ್ಯ. ಇದು ಸ್ಥಳೀಯ ಪ್ರವಾಸೋದ್ಯಮವನ್ನು ಉತ್ತೇಜಿಸಿದೆ. ಇಂಡೋನೇಷ್ಯಾದಲ್ಲಿ ಈ ಬಗೆಯ ಒಪ್ಪಂದದ ವಿವಾಹಗಳು ಕಾನೂನುಬಾಹಿರ. ಆದರೆ ಕಾನೂನು ಜಾರಿ ಸಡಿಲ. 

ಕಹಾಯಾ ಎಂಬ ಒಬ್ಬ ಮಹಿಳೆಯ ಕಥೆ ಹೀಗಿದೆ. 17ನೇ ವಯಸ್ಸಿನಲ್ಲಿ ಸೌದಿ ಅರೇಬಿಯಾ 50ರ ಹರೆಯ ಉದ್ಯಮಿ ಒಬ್ಬನನ್ನು ಈಕೆ ಮದುವೆಯಾದಳು. $2000 ವಧು ದಕ್ಷಿಣೆ ಪಡೆದಳು. ಎರಡು ವರ್ಷದಲ್ಲಿ ಡೈವೋರ್ಸ್‌ ಸಿಕ್ಕಿತು. ಮೊದಲ ಪತಿ ಆಕೆಯನ್ನು ಮತ್ತು ಆಕೆಯಲ್ಲಿ ಹುಟ್ಟಿದ ಮಗಳನ್ನು ತೊರೆದ. ನಂತರ ಅಂತಹ 15 ಮದುವೆ ಮಾಡಿಕೊಂಡಳು. ಕಹಾಯಾ ಸಾಮಾನ್ಯವಾಗಿ ಪ್ರತಿ ಮದುವೆಗೆ US$300 ಮತ್ತು US$500 ರ ನಡುವೆ ಗಳಿಸುತ್ತಾಳೆ. ಇದು ಜೀವನದ ವೆಚ್ಚವನ್ನು ಸರಿದೂಗಿಸಲು ಮತ್ತು ತನ್ನ ಪೋಷಕರ ಆರೋಗ್ಯದ ಖರ್ಚುವೆಚ್ಚ ನೋಡಿಕೊಳ್ಳಲು ನೆರವಾಗುತ್ತದಂತೆ. ಇನ್ನೊಬ್ಬ ಮಹಿಳೆ ನಿಸಾ, ತಾನು ಕನಿಷ್ಠ 20 ಬಾರಿ ಮದುವೆಯಾಗಿದ್ದೇನೆ ಎಂದು ಹೇಳಿದ್ದಾಳೆ. ನಿಸಾಗೆ ಈಗ ಇಬ್ಬರು ಮಕ್ಕಳಿದ್ದಾರೆ. 

ಊಟಿಯಿಂದ ಕೇವಲ 20 ನಿಮಿಷ ದೂರದಲ್ಲಿರುವ ಹಿಡನ್ ಜೆಮ್, ಇದು ಬುಡಕಟ್ಟು ಜನಾಂಗಗಳ ಜೀವತಾಣ

ಪ್ಲೆಶರ್‌ ಮ್ಯಾರೀಜ್‌ಗಳನ್ನು ಶಿಯಾ ಇಸ್ಲಾಮಿಕ್‌ ಸಮುದಾಯದಲ್ಲಿ 'ನಿಕಾಹ್ ಮುತಾ' ಎಂದು ಕರೆಯಲಾಗುತ್ತದೆ. ಅಲ್ಲಿ ಅವಧಿ ಮತ್ತು ಮಹರ್ (ವಧು ದಕ್ಷಿಣೆ) ಪೂರ್ವನಿರ್ಧರಿತವಾಗಿಋುತ್ತದೆ. ಆದರೆ ಶಿಯಾ ಸಮುದಾಯದವರನ್ನೂ ಒಳಗೊಂಡಂತೆ ಅನೇಕ ಇಸ್ಲಾಮಿಕ್ ವಿದ್ವಾಂಸರು ಈ ಅಭ್ಯಾಸವನ್ನು ಅನೈತಿಕವೆಂದು ಖಂಡಿಸುತ್ತಾರೆ. ಇಂಡೋನೇಷ್ಯಾ ನಿಕಾಹ್ ಮುತಾಹ್ ಅನ್ನು ವಿವಾಹದ ಕಾನೂನುಬದ್ಧ ರೂಪವೆಂದು ಗುರುತಿಸುವುದಿಲ್ಲ. ಏಕೆಂದರೆ ಇದು ಸ್ಥಿರವಾದ, ದೀರ್ಘಾವಧಿಯ ಕುಟುಂಬ ಸಂಬಂಧಗಳನ್ನು ಸ್ಥಾಪಿಸುವುದಿಲ್ಲ. ಇದು ಗೊತ್ತಾದರೆ ದಂಡ ಮತ್ತು ಜೈಲು ಶಿಕ್ಷೆ ಆಗಬಹುದು.

ಆದರೆ ಹಲವರು ರಂಗೋಲಿ ಕೆಳಗೆ ತೂರುತ್ತಲೇ ಇದ್ದಾರೆ. ದುರ್ಬಲ ಮಹಿಳೆಯರನ್ನು ಶೋಷಿಸುವವರು ಹಾಗೂ ಪತ್ನಿಯಾಗುವ ಹೆಸರಿನಲ್ಲಿ ಕಾಸು ಮಾಡುವವರು ಇಬ್ಬರೂ ಇಲ್ಲಿದ್ದಾರೆ. ಇಲ್ಲಿ ಗಂಡಸು ದುರ್ಬಲಾಗಿದ್ದರೆ, ಆತನನ್ನೇ ಮದುವೆಯ ಹೆಸರಿನಲ್ಲಿ ಸುಲಿಯಲಾಗುತ್ತದೆ. ಇಂಡೋನೇಷ್ಯಾದ ಮಹಿಳೆ ನಿಮಗೆ ಸುಖ ಕೊಡುವ ಹೆಸರಿನಲ್ಲಿ ನಿಮ್ಮಿಂದ ಸಾಕಷ್ಟು ಕಾಸು ಕಿತ್ತುಕೊಳ್ಳುತ್ತಾಳೆ. 

ಭಾರತದಲ್ಲಿರುವ ಈ ಹುಲಿ ಅಭಯಾರಣ್ಯದಲ್ಲಿ ಒಮ್ಮೆಯಾದ್ರೂ ರೋಮಾಂಚಕ ಜೀಪ್ ಸಫಾರಿ ಮಾಡಿ
 

click me!