ಬೆಂಗಳೂರಿನಿಂದ ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಹಠಾತ್ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು. ಈ ವೇಳೆ ವಿಮಾನದಲ್ಲಿದ್ದ ವೈದ್ಯ ಜೋಡಿಯೊಂದು ಕೂಡಲೇ ನೆರವಿಗೆ ಧಾವಿಸುವ ಮೂಲಕ ವ್ಯಕ್ತಿಯೊಬ್ಬರ ಜೀವ ಉಳಿಸಿದ ಮಾನವೀಯ ಘಟನೆ ನಡೆದಿದೆ.
ಬೆಂಗಳೂರಿನಿಂದ ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಹಠಾತ್ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು. ಈ ವೇಳೆ ವಿಮಾನದಲ್ಲಿದ್ದ ವೈದ್ಯ ಜೋಡಿಯೊಂದು ಕೂಡಲೇ ನೆರವಿಗೆ ಧಾವಿಸುವ ಮೂಲಕ ವ್ಯಕ್ತಿಯೊಬ್ಬರ ಜೀವ ಉಳಿಸಿದ ಮಾನವೀಯ ಘಟನೆ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯೊಬ್ಬರು ತಮ್ಮ ಮಗನೊಂದಿಗೆ ಇಂಡಿಗೋ ವಿಮಾನ ಸಂಖ್ಯೆ 6E 503ದಲ್ಲಿ ಬೆಂಗಳೂರಿನಿಂದ ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದರು. ಅವರು ಲಿವರ್ ಸಮಸ್ಯೆಯ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ವಿಮಾನದಲ್ಲಿ ಕೋಲ್ಕತಾಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರಿಗೆ ಮಾರ್ಗಮಧ್ಯೆ ಉಸಿರಾಡುವುದಕ್ಕೆ ಕಷ್ಟವಾಗಿದೆ. ಜೊತೆಗೆ ಅವರು ರಕ್ತವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದಾರೆ.
ಈ ವೇಳೆ ವಿಮಾನದಲ್ಲಿದ್ದ ವೈದ್ಯ ಜೋಡಿ ಡಾಕ್ಟರ್ ಎಂ.ಎಂ ಸಮಿಮ್ ಹಾಗೂ ಅವರ ಪತ್ನಿ ಡಾ ನಜ್ನಿನ್ ಪರ್ವಿನ್ ಅವರು ಹಾಗೂ ಬೆಂಗಳೂರಿನ ರಾಮಯ್ಯ ಆಸ್ಪತ್ರೆಯ ಮತ್ತೊಬ್ಬ ಸರ್ಜನ್ ಡಾಕ್ಟರ್ ಕೂಡಲೇ ಅಸ್ವಸ್ಥರಾದ ವ್ಯಕ್ತಿ ಬಳಿ ಆಗಮಿಸಿ ತಮ್ಮ ಬಳಿ ಇದ್ದ ನಿಗದಿತ ವೈದ್ಯಕೀಯ ಸೌಲಭ್ಯಗಳ ಮೂಲ ಅವರ ರೋಗಿಯ ಜೀವ ಉಳಿಸುವ ಪ್ರಯತ್ನ ಮಾಡಿದ್ದಾರೆ.
ವಿಮಾನ ಹಾರಿಸಲು ನಿರಾಕರಿಸಿದ ಇಂಡಿಗೋ ಪೈಲಟ್: ಪುಣೆ ಬೆಂಗಳೂರು ಫ್ಲೈಟ್ 5 ಗಂಟೆ ವಿಳಂಬ
ಅಸ್ವಸ್ಥರಾದ ವ್ಯಕ್ತಿ ಉಸಿರಾಡುವುದಕ್ಕೆ ಕಷ್ಟ ಪಡುವುದರ ಜೊತೆ ರಕ್ತವಾಂತಿ ಮಾಡಿಕೊಳ್ಳುತ್ತಿದ್ದರು. ಅವರ ರಕ್ತದೊತ್ತಡ ಸಾಮಾನ್ಯಕ್ಕಿಂತ ಕಡಿಮೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂತು. ಈ ವೇಳೆ ವಿಮಾನದಲ್ಲಿದ್ದ ಆಕ್ಸಿಜನ್ ಸಿಲಿಂಡರ್ ಬಳಸಿ ಅವರಿಗೆ ಆಕ್ಸಿಜನ್ ನೀಡಲು ಶುರು ಮಾಡಿದೆವು. ಅಲ್ಲದೇ ಸಾಮಾನ್ಯವಾಸ ಲವಣಾಂಶವುಳ್ಳ ದ್ರವಾಂಶವನ್ನು (normal saline) ಕೂಡ ಅವರಿಗೆ ಡ್ರಿಪ್ ಮೂಲಕ ದೇಹಕ್ಕೆ ಹೋಗುವಂತೆ ಮಾಡಿದೆವು. ಇವೆಲ್ಲ ವೈದ್ಯಕೀಯ ಸೌಲಭ್ಯಗಳು ವಿಮಾನದಲ್ಲಿ ಇದ್ದವು. ಇದಾದ ನಂತರ ಕೂಡಲೇ ವಾಂತಿ ನಿಯಂತ್ರಣಕ್ಕೆ ಬಂತು. ಅಲ್ಲದೇ ಅವರ ದೇಹದ ಆಮ್ಲಜನಕ ಪ್ರಮಾಣವೂ ಕೂಡ ಸಾಮಾನ್ಯ ಹಂತಕ್ಕೆ (95) ಬಂತು ಎಂದು ವೈದ್ಯ ಡಾಕ್ಟರ್ ಪರ್ವೀನ್ ಅವರು ಹೇಳಿದರು.
ಇದಾದ ನಂತರ ವಿಮಾನ ಕೋಲ್ಕತಾದಲ್ಲಿ ಲ್ಯಾಂಡ್ ಆಯ್ತು. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಕೂಡಲೇ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯ್ತು ಎಂದು ಮಾಹಿತಿ ಸಿಕ್ಕಿದೆ.
ವಿಮಾನ ಲೇಟ್ : ಸಿಟ್ಟಿಗೆದ್ದ ಜನ ಬೈದಾಡಿದ್ರೂ ತಾಳ್ಮೆ ವಹಿಸಿದ ಗಗನಸಖಿಗೆ ವ್ಯಾಪಕ ಶ್ಲಾಘನೆ
ಬೆಂಗಳೂರಿನ ರಾಮಯ್ಯ ಆಸ್ಪತ್ರೆಯ ವೈದ್ಯ ಹಾಗೂ ಈ ವೈದ್ಯ ಜೋಡಿಯಾದ ಡಾಕ್ಟರ್ ಎಂ.ಎಂ ಸಮಿಮ್ ಹಾಗೂ ಅವರ ಪತ್ನಿ ಡಾ ನಜ್ನಿನ್ ಪರ್ವಿನ್ ಅವರ ಕಾರ್ಯಕ್ಕೆ ಈಗ ತೀವ್ರ ಶ್ಲಾಘನೆ ವ್ಯಕ್ತವಾಗಿದೆ. ಇವರಲ್ಲಿ ವೈದ್ಯ ಡಾಕ್ಟರ್ ಎಂ.ಎಂ ಸಮಿಮ್ ಅವರು ನಿಮ್ಹಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವೈದ್ಯಕೀಯ ಕೋರ್ಸ್ ಮಾಡಿದವರಾಗಿದ್ದು, ಚಿನ್ನದ ಪದಕ ಪಡೆದಿದ್ದಾರೆ. ಸಾಧಕರನ್ನು ಇಂತಹ ತೆರೆಮರೆಯ ಸಾಧಕರನ್ನು ಸದಾ ಗುರುತಿಸುವ ಬೆಟರ್ ಇಂಡಿಯಾ ಈ ಮೂವರು ವೈದ್ಯರ ಕಾರ್ಯದ ಬಗ್ಗೆ ಲಿಂಕ್ಡಿನ್‌ನಲ್ಲಿ ಪೋಸ್ಟ್ ಮಾಡಿದ್ದು, ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಈ ಸುದ್ದಿ ನೋಡಿದ ಅನೇಕರು ಮಾನವೀಯತೆ ಇನ್ನು ಜೀವಂತವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.