
ಲಡಾಕ್ (ಜೂ.28) ಪ್ರವಾಸ ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖವಾಗಿದೆ. ಇತ್ತೀಚೆಗೆ ಅತೀ ಹೆಚ್ಚಿನ ಮಂದಿ ಪ್ರವಾಸ ತೆರಳುತ್ತಾರೆ. ಹೀಗೆ ಪ್ರವಾಸಕ್ಕೆ ತೆರಳುವಾಗ ನಿಯಮಗಳ ಬಗ್ಗೆ ಎಚ್ಚರವಿರಲಿ. ಕೆಲ ಸೂಕ್ಷ್ಮ ಪ್ರದೇಶಗಲ್ಲಿ ಹುಚ್ಚಾಟ ಮೆರೆದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದೀಗ ಲಡಾಕ್‌ನ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಪ್ಯಾಂಗಾಂಗ್ ಲೇಕ್ನಲ್ಲಿ ಕಾರು ಇಳಿಸಿ ಹುಚ್ಚಾಟ ಮೆರೆದ ನಾಲ್ವರು ಪ್ರವಾಸಿಗರಿಗೆ 2 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಈ ಮೂಲಕ ಎಲ್ಲಾ ಪ್ರವಾಸಿಗರಿಗೆ ಲಡಖ್ ಪ್ರವೋಸೋದ್ಯಮ ಇಲಾಖೆ ಕಠಿಣ ಎಚ್ಚರಿಕೆ ನೀಡಿದೆ.
ನಾಲ್ವರು ಗೆಳೆಯರು ಲಡಾಕ್‌ಗೆ ಪ್ರವಾಸ ತೆರಳಿದ್ದಾರೆ. ತಮ್ಮ ಮಹೀಂದ್ರ ಥಾರ್ ಕಾರಿನ ಮೂಲಕ ಲಡಾಖ್‌ನ ವಿವಿಧ ಪ್ರವಾಸಿ ತಾಣಗಳನ್ನು ಸಂದರ್ಶಿಸಿದ್ದಾರೆ. ಈ ನಾಲ್ವರು ಬಹುತೇಕ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪ್ರವಾಸ ಮಾಡಿದ್ದಾರೆ. ಈ ಪೈಕಿ ಪ್ಯಾಂಗಾಂಗ್ ಲೇಕ್ನಲ್ಲಿ ಕಾರು ಇಳಿಸಿದ್ದಾರೆ. ಇದು ಇಕೋ ಸೆನ್ಸಿಟೀವ್ ಝೋನ್. ಅತ್ಯಂತ ಸುಂದರ ಹಾಗ ಸ್ವಚ್ಚ ನೀರಿನ ಈ ಕೆರೆಯಲ್ಲಿ ಕಾರು ಇಳಿಸುವುದು, ನೀರಿನಲ್ಲಿ ಆಟವಾಡುವುದು, ಕಸ ಕಡ್ಡಿ ಎಸೆಯುವುದು ಸೇರಿದಂತೆ ಎಲ್ಲಾ ಚಟುವಟಿಕೆ ನಿಷೇಧ ಹೇರಲಾಗಿದೆ. 1972ರ ವೈಲ್ಡ್ ಲೈಫ್ ಪ್ರೊಟೆಕ್ಷನ್ ಕಾಯ್ದೆ ಈ ಪ್ರದೇಶ ಇಕೋ ಸೆನ್ಸಿಟೀವ್ ಝೋನ್ ಎಂದು ಘೋಷಿಸಲಾಗಿದೆ. ಇಲ್ಲಿ ಕಾರು ಇಳಿಸು ಹುಚ್ಚಾಟ ಮೆರೆದಿದ್ದಾರೆ. ಹೀಗಾಗಿ ನಾಲ್ವರು ಪ್ರವಾಸಿಗರಿಗೆ 2 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಚಂಡೀಘಡ ಹಾಗೂ ಪಂಜಾಬ್ ಮೂಲದ ನಾಲ್ವರ ಕಾರು ವಶಕ್ಕೆ ಪಡೆದ ಲಡಾಖ್ ಅಧಿಕಾರಿಗಳು ದಂಡ ಕಟ್ಟಿ ಕಾರು ರಿಲೀಸ್ ಮಾಡಿಸಿಕೊಳ್ಳಲು ಸೂಚಿಸಿದ್ದಾರೆ. ಇದರಂತೆ ನಾಲ್ವರು ಪ್ರವಾಸಿದರು ಕ್ಷಮಾಪಣೆ ಪತ್ರ ಬರೆದು 2 ಲಕ್ಷ ರೂಪಾಯಿ ದಂಡ ಪಾವತಿಸಿದ್ದಾರೆ. ಅಧಿಕಾರಿಗಳು ಖಡಕ್ ವಾರ್ನಿಂಗ್ ನೀಡಿ ನಾಲ್ವರು ಹಾಗೂ ಕಾರನ್ನು ರಿಲೀಸ್ ಮಾಡಿದ್ದಾರೆ.
ಜೂನ್ 23 ರಂದು ಪ್ರವಾಸಕ್ಕೆ ಬಂದ ಈ ನಾಲ್ವರು ನಿಯಮ ಉಲ್ಲಂಘಿಸಿ ಕಾರು ಪ್ಯಾಂಗಾಂಗ್ ಲೇಕ್‌ಗೆ ಇಳಿಸಿದ್ದಾರೆ. ಬಳಿಕ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇತ್ತ ಗಸ್ತು ತಿರುಗುತ್ತಿದ್ದ ಅಧಿಕಾರಿಗಳಿಗೂ ಈ ಕುರಿತು ಕೆಲ ಸೂಚನೆ ಸಿಕ್ಕಿದೆ. ಹೀಗಾಗಿ ಸಿಸಿಟಿವಿ ದೃಶ್ಯಗಳ ಪರಿಶೀಲನೆಯಲ್ಲಿ ತೊಡಗಿದ್ದರು. ಇತ್ತ ಸೋಶಿಯಲ್ ಮೀಡಿಾಯದಲ್ಲೂ ಈ ಕುರಿತು ಫೋಟೋಗಳು ವೈರಲ್ ಆಗಿತ್ತು. ಹೀಗಾಗಿ ಲಡಾಖ್ ಅಧಿಕಾರಿಗಳು ತನಿಖೆ ನಡೆಸಿ ಪ್ರವಾಸಿಗರಿಗೆ ದಂಡ ವಿಧಿಸಿದ್ದಾರೆ.
Acting strictly against rising menace of illegal off-roading, including cases of tourists driving cars in the ecologically sensitive lakes and river streams in Ladakh, the Ladakh Administration, on the directions of Lt. Governor Shri VK Saxena, has for the first time, begun… pic.twitter.com/zTr6x8p2TB
— ANI (@ANI) June 28, 2026
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.