ಹೊಸ ವರ್ಷವನ್ನು ವಿಶೇಷ ಸ್ಥಳದಲ್ಲಿ ವೆಲ್ ಕಂ ಮಾಡ್ಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತೆ. ಈ ಬಾರಿ ಎಲ್ಲಿ ಹೋಗೋದು ಅಂತಾ ಪ್ಲಾನ್ ಶುರು ಮಾಡಿರ್ತಾರೆ. ಅಂಥವರಿಗೆ ಇಲ್ಲೊಂದು ಸುಂದರ ಸ್ಥಳದ ಮಾಹಿತಿ ಇದೆ.
ಎರಡು ವರ್ಷಗಳಿಂದ ಕೊರೊನಾ ಬಗ್ಗೆ ಇದ್ದ ಭಯ ಈಗಿಲ್ಲ. ಜನರು ಮನೆಯಿಂದ ಹೊರ ಬಂದಿದ್ದಾರೆ. ಹೊಸ ವರ್ಷಾಚರಣೆಗೆ ಎರಡು ವರ್ಷ ಬ್ರೇಕ್ ಬಿದ್ದಿತ್ತು. ಬಹುತೇಕರು ಮನೆಯಲ್ಲಿಯೇ ಹೊಸ ವರ್ಷವನ್ನು ಸ್ವಾಗತಿಸಿದ್ದರು. ಆದ್ರೆ ಈ ಬಾರಿ ದೊಡ್ಡ ನ್ಯೂ ಇಯರ್ ವೆಲ್ ಕಂ ಮಾಡೋಕೆ ಸಾಕಷ್ಟು ಅವಕಾಶವಿದೆ. ಹೊಸ ವರ್ಷ ಪಾರ್ಟಿ ಮಾಡೋಕೆ, ಸುತ್ತಾಡೋಕೆ ಆಲೋಚನೆ ಮಾಡ್ತಿದ್ರೆ ಈಗ್ಲೇ ಪ್ಲಾನ್ ಸಿದ್ಧಪಡಿಸಿ. ಯಾಕೆಂದ್ರೆ ಹೊಸ ವರ್ಷಕ್ಕೆ ಇನ್ನೊಂದು ತಿಂಗಳು ಬಾಕಿ ಇದೆ. ಈಗ್ಲೇ ನೀವು ಪ್ರವಾಸಿ ಸ್ಥಳ, ಸಾರಿಗೆ ಟಿಕೆಟ್ ಹಾಗೂ ರೂಮ್ ಬುಕ್ ಮಾಡಿದಲ್ಲಿ ನಿಮ್ಮ ಬಜೆಟ್ ಕಡಿಮೆಯಾಗುತ್ತದೆ. ಕೊನೆ ಕ್ಷಣದಲ್ಲಿ ವಿಮಾನ ಟಿಕೆಟ್ ನಿಂದ ಹಿಡಿದು ಹೊಟೇಲ್ ರೂಮ್ ವರೆಗೆ ಎಲ್ಲವೂ ದುಬಾರಿಯಾಗುತ್ತದೆ.
ಕಡಿಮೆ ಬಜೆಟ್ (Budget) ನಲ್ಲಿ ಸುಂದರ ಸ್ಥಳವೊಂದರಲ್ಲಿ ವರ್ಷಾಂತ್ಯವನ್ನು ಕಳೆದು ಹೊಸ ವರ್ಷ (NewYear) ವನ್ನು ವೆಲ್ ಕಂ ಮಾಡ್ಬೇಕು ಎನ್ನುವವರು ಸಾಕಷ್ಟು ಮಂದಿಯಿದ್ದಾರೆ. ವಿದೇಶ ದುಬಾರಿ, ಸ್ವದೇಶದಲ್ಲಿ ಕೆಲ ಪ್ರವಾಸಿ ತಾಣಗಳಲ್ಲಿ ಜನರ ಸಂಖ್ಯೆ ಹೆಚ್ಚಿರುತ್ತದೆ. ಕಡಿಮೆ ಖರ್ಚಿನಲ್ಲಿ, ಪ್ರಕೃತಿ ಮಡಿಲಲ್ಲಿ, ಸಂತೋಷದಿಂದ ಹೊಸ ವರ್ಷವನ್ನು ಸ್ವಾಗತಿಸುತ್ತೇನೆ ಎನ್ನುವವರಿಗೆ ಇಲ್ಲೊಂದು ಸುಂದರ ಪ್ರವಾಸಿ ತಾಣದ ಮಾಹಿತಿ ಇದೆ. ಹೊಸ ವರ್ಷವನ್ನು ಎಲ್ಲಿ ಆಚರಿಸೋದು ಎಂಬ ಗೊಂದಲ ನಿಮಗಿದ್ದರೆ ನೀವು ಹಿಮಾಚಲ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬಹುದು. ಹಿಮಾಚಲ ಪ್ರದೇಶದಲ್ಲಿ ಅನೇಕ ಸುಂದರ ಸ್ಥಳಗಳಿವೆ. ಅದ್ರಲ್ಲೂ ಹಿಮಾಚಲ ಪ್ರದೇಶದ ಕಸೋಲ್ (Kasol) ಗಿರಿಧಾಮ ನಿಮ್ಮ ಮನಸ್ಸು ಕದಿಯೋದ್ರಲ್ಲಿ ಎರಡು ಮಾತಿಲ್ಲ. ಕಸೋಲ್ ನ ಸುಂದರವಾದ ಬೆಟ್ಟಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ನೀವು ಒಮ್ಮೆ ಅಲ್ಲಿಗೆ ಹೋದ್ರೆ ಮತ್ತೆ ಮತ್ತೆ ಹೋಗ್ಬೇಕೆಂಬ ಬಯಕೆಯಾಗುತ್ತದೆ.
Travel Gide: ಸೂರ್ಯನೇ ಮುಳುಗದ ನಾಡಲ್ಲಿ ಪ್ರವಾಸ ಹೇಗಿರಬೇಕು?
ಕಸೋಲ್ ಗೆ ಹೋಗೋದು ಹೇಗೆ? : ನೀವು ಬೆಂಗಳೂರಿನಿಂದ ಕಸೋಲ್ ಗೆ ಪ್ರಯಾಣ ಬೆಳೆಸುತ್ತಿದ್ದರೆ ಸಾಕಷ್ಟು ಮಾರ್ಗಗಳಿವೆ. ನೀವು ರೈಲು, ಬಸ್, ವಿಮಾನ ಹೀಗೆ ನಿಮಗೆ ಅನುಕೂಲವಾದ ಸಾರಿಗೆಯಲ್ಲಿ ಪ್ರಯಾಣ ಬೆಳೆಸಬಹುದು. ಬಸ್ ನಲ್ಲಿ ಪ್ರಯಾಣ ಮಾಡಲು ನಿಮಗೆ ಎರಡು ದಿನ ಬೇಕು. ಎರಡು ಸಾವಿರದಿಂದ 6 ಸಾವಿರದವರೆಗೆ ಖರ್ಚು ಬರುತ್ತದೆ. ನೀವು ಇಲ್ಲಿಂದ ಕಾರಿನಲ್ಲೇ ಹೋಗ್ತೀರಿ ಎಂದಾದ್ರೆ ಸುಮಾರು 48 ಗಂಟೆ ಪ್ರಯಾಣ ಬೆಳೆಸಬೇಕಾಗುತ್ತದೆ. ವಿಮಾನದಲ್ಲಿ ಪ್ರಯಾಣಿಸುವವರಿಗೂ ಸಾಕಷ್ಟು ಆಯ್ಕೆಯಿದೆ. ನೀವು ಅಮೃತಸರಕ್ಕೆ ಹೋಗಿ ಅಲ್ಲಿಂದ ಟ್ಯಾಕ್ಸಿ ಮೇಲೆ ಹೋಗ್ಬಹುದು. ಇಲ್ಲವೆ ಚಂಡೀಗಢದ ನಂತ್ರ ಟ್ಯಾಕ್ಸಿ ಹಿಡಿಯಬಹುದು. ಧರ್ಮಶಾಲಾದಿಂದ ಕೂಡ ನೀವು ಟ್ಯಾಕ್ಸಿ ಮೇಲೆ ಹೋಗಬಹುದು. ಕುಲು – ಮನಾಲ್ ವಿಮಾನ ನಿಲ್ದಾಣ ಬೆಸ್ಟ್ ಆಯ್ಕೆಯಾಗಿದೆ. ನೀವು ವಿಮಾನ ನಿಲ್ದಾಣದಲ್ಲಿ ಪ್ರಯಾಣ ಬೆಳೆಸಬಹುದು, ಬೇರೆ ಬೇರೆ ವಿಮಾನ ನಿಲ್ದಾಣದಕ್ಕೆ ದರ ಬೇರೆ ಬೇರೆ ಇದೆ. ದೆಹಲಿಯಿಂದ ಪ್ರಯಾಣ ಬೆಳೆಸುತ್ತಿದ್ದರೆ 500 ರಿಂದ ಸಾವಿರ ರೂಪಾಯಿಗೆ ಟಿಕೆಟ್ ದರವಿದ್ದು,12 ಗಂಟೆಯಲ್ಲಿ ನೀವು ಕಸೋಲ್ ತಲುಪುತ್ತೀರಿ. ರೈಲು ಪ್ರಯಾಣ ಕಷ್ಟವಾಗುತ್ತದೆ. ಕಸೋಲ್ ನಿಂದ 144 ಕಿಲೋಮೀಟರ್ ದೂರದಲ್ಲಿ ರೈಲು ನಿಲ್ದಾಣವಿದೆ.
ಕಸೋಲ್ ಪ್ರಯಾಣ ವೆಚ್ಚ : ಕಸೋಲ್ ನಲ್ಲಿ ಸಾಕಷ್ಟು ಹೋಟೆಲ್ ಗಳು ಲಭ್ಯವಿದೆ. ರೂಮಿನ ಬೆಲೆ 500 ರಿಂದ 1000 ರೂಪಾಯಿ ಇರುತ್ತದೆ. ಇಲ್ಲಿ ನೀವು ಖೀರ್ಗಂಗಾ, ಮಲಾನಾ ಗ್ರಾಮಕ್ಕೆ ಭೇಟಿ ನೀಡಬಹುದು.
Travel Destinations: ಸೆಲೆಬ್ರಿಟಿಗಳ ಇಷ್ಟದ ಪ್ರವಾಸಿ ತಾಣಕ್ಕೆ ನೀವೂ ಭೇಟಿ ನೀ
ಕಸೋಲ್ ಪ್ರವಾಸಿ ಸ್ಥಳಗಳು : ಕಸೋಲ್ ಕುಲುವಿನಿಂದ 42 ಕಿಮೀ ದೂರದಲ್ಲಿರುವ ಸುಂದರವಾದ ಗಿರಿಧಾಮವಾಗಿದೆ. ಕಸೋಲ್ ಅನ್ನು ಮಿನಿ ಇಸ್ರೇಲ್ ಎಂದೂ ಕರೆಯುತ್ತಾರೆ. ಇಲ್ಲಿ ಇಸ್ರೇಲಿ ಸಂಸ್ಕೃತಿಯ ಝಲಕ್ ಇದೆ. ಕಸೋಲ್‌ನಲ್ಲಿ ದಟ್ಟವಾದ ಕಾಡುಗಳ ನಡುವೆ ಹರಿಯುವ ಪಾರ್ವತಿ ನದಿಯು ಸಾಹಸಿಗರಿಗೆ ಬೆಸ್ಟ್. ಇದರ ಹೊರತಾಗಿ ತೋಶ್ ಮತ್ತು ಮಲಾನಾ ಗ್ರಾಮವನ್ನು ನೀವು ವೀಕ್ಷಣೆ ಮಾಡಬಹುದು.