ಸೂರ್ಯಾಸ್ತವಾಗ್ತಿದ್ದಂತೆ ಮನಸ್ಸು ನಿದ್ರೆ ಬಯಸುತ್ತದೆ. ಕತ್ತಲಾಗ್ತಿದ್ದಂತೆ ದಿನ ಮುಗಿದು ರಾತ್ರಿ ಶುರುವಾಯ್ತು ಎಂದು ನಾವು ಲೆಕ್ಕ ಹಾಕ್ತೆವೆ. ಆದ್ರೆ ಇಡೀ ದಿನ ಸೂರ್ಯ ನಿಮ್ಮ ಜೊತೆಗಿದ್ದರೆ ಏನಾಗ್ಬೇಡ? ಅನೇಕ ದೇಶಗಳಲ್ಲಿ ಸೂರ್ಯ ಮುಳುಗೋದೆ ಇಲ್ಲ ಗೊತ್ತಾ?
ಯಾಕಾದ್ರೂ ಬೆಳಗಾಗುತ್ತೋ, ಸೂರ್ಯ ಬಂದ ತಕ್ಷಣ ದಿನದ ಕೆಲಸ ಶುರು ಅಂತಾ ಕೆಲವರು ಬೇಸರಪಟ್ಟುಕೊಳ್ತಾರೆ. ಮತ್ತೆ ಕೆಲವರು ಸೂರ್ಯನ ಬೆಳಕನ್ನು ಇಷ್ಟಪಡ್ತಾರೆ. ಯಾರಿಗೆ ಇಷ್ಟವಾಗ್ಲಿ, ಯಾರಿಗೆ ಕಷ್ಟವಾಗ್ಲಿ, ಸೂರ್ಯ ತನ್ನ ಕೆಲಸ ಮಾಡ್ತಿರುತ್ತಾನೆ. ಸೂರ್ಯ ದಿನದ 12 ಗಂಟೆಗಳ ಕಾಲ ನಮ್ಮ ಜೊತೆಗಿರ್ತಾನೆ. ನಂತ್ರ ಮರೆಯಾಗ್ತಾನೆ. ಆತ ಮರೆಯಾಗ್ತಿದ್ದಂತೆ ಕತ್ತಲು ಆವರಿಸುತ್ತದೆ. ನಾವೆಲ್ಲ ನಿದ್ರೆಗೆ ಜಾರುತ್ತೇವೆ. ಬೇರೆ ಬೇರೆ ದೇಶದಲ್ಲಿ ಸೂರ್ಯಾಸ್ತ ಹಾಗೂ ಸೂರ್ಯೋದಯ ಬೇರೆ ಸಮಯದಲ್ಲಿ ಆಗುತ್ತದೆ. ಇದು ನಿಮಗೆಲ್ಲ ತಿಳಿದಿರುವ ವಿಷ್ಯ. ಆದ್ರೆ ಈ ಜಗತ್ತಿನಲ್ಲಿ ಸೂರ್ಯ ಮುಳುಗದ ಅನೇಕ ದೇಶಗಳಿವೆ. ಹಗಲು – ರಾತ್ರಿ ಎನ್ನದೆ ಸದಾ ಸೂರ್ಯನ ಬೆಳಕು ಆ ದೇಶದ ಮೇಲೆ ಬೀಳುತ್ತಿರುತ್ತದೆ. ಅರೇ..! ಹೀಗಾದ್ರೆ ಯಾವಾಗ ಏಳಬೇಕು ಮತ್ತು ಯಾವಾಗ ಮಲಗಬೇಕು? ಅಲ್ಲಿನ ಜನ ಹಗಲು – ರಾತ್ರಿಯನ್ನು ಹೇಗೆ ಗುರುತಿಸ್ತಾರೆ ಎಂಬೆಲ್ಲ ಪ್ರಶ್ನೆ ನಿಮ್ಮಲ್ಲಿ ಓಡ್ತಿರಬಹುದು. ಸೂರ್ಯ ಮುಳುಗದ ದೇಶ ಯಾವುದು ಎಂಬುದನ್ನು ನಾವಿಂದು ಹೇಳ್ತೇವೆ.
ಈ ದೇಶ (Country) ಗಳಲ್ಲಿ ಮುಳಗಲ್ಲ ಸೂರ್ಯ (Sun) :
ನಾರ್ವೆ (Norway) : ನಾರ್ವೆಯನ್ನು ಲ್ಯಾಂಡ್ ಆಫ್ ಮಿಡ್ ನೈಟ್ ಸನ್ ಎಂದೇ ಕರೆಯಲಾಗುತ್ತದೆ. ನಾರ್ವೆಯಲ್ಲಿ ಸೂರ್ಯಾಸ್ತವಾಗದ ಕೆಲ ದಿನಗಳಿವೆ. ಮೇ ಅಂತ್ಯದಿಂದ ಜುಲೈ ಕೊನೆಯವರೆಗೂ ಸೂರ್ಯಾಸ್ತವೇ ಆಗೋದಿಲ್ಲ. ಸುಮಾರು 76 ದಿನಗಳವರೆಗೆ ಸೂರ್ಯ ಸದಾ ಜನರ ಕಣ್ಣಿಗೆ ಕಾಣ್ತಾನೆ. ದಿನದ ಸುಮಾರು 20 ಗಂಟೆಗಳ ಕಾಲ ನಾರ್ವೆಯಲ್ಲಿ ಸೂರ್ಯನ ಬೆಳಕು ಬಲವಾಗಿರುತ್ತದೆ. ಇನ್ನು ನಾರ್ವೆಯ ಸ್ವಾಲ್ಬಾರ್ಡ್‌ನಲ್ಲಿ ಈ ಸಮಯ ಸ್ವಲ್ಪ ಭಿನ್ನವಾಗಿದೆ. ಏಪ್ರಿಲ್ 10 ರಿಂದ ಆಗಸ್ಟ್ 23 ರವರೆಗೆ ಇಲ್ಲಿ ಸೂರ್ಯ ಅಸ್ತಂಗತನಾಗೋದಿಲ್ಲ. ಇಲ್ಲಿ ಕೇವಲ 40 ನಿಮಿಷ ಮಾತ್ರ ರಾತ್ರಿಯಿರುತ್ತದೆ. ಉಳಿದ ಸಮಯದಲ್ಲಿ ಸೂರ್ಯನ ಬೆಳಕು ಇರುತ್ತದೆ. ಇಲ್ಲಿ ಸೂರ್ಯ ರಾತ್ರಿ 12 ಗಂಟೆ 43 ನಿಮಿಷಕ್ಕೆ ಅಸ್ತಮಿಸುತ್ತಾನೆ ಮತ್ತು 40 ನಿಮಿಷಗಳ ನಂತರ ಮತ್ತೆ ಉದಯಿಸುತ್ತಾನೆ. ಇಲ್ಲಿ ರಾತ್ರಿ 1 ಗಂಟೆ 30 ನಿಮಿಷವಾಗ್ತಿದ್ದಂತೆ ಬೆಳಗಾಗುತ್ತದೆ. ಆದ್ರೆ ನಾರ್ವೆಯಲ್ಲಿ ವಿಚಿತ್ರ ಊರೊಂದಿದೆ. ಅಲ್ಲಿ 100 ವರ್ಷಗಳಿಂದ ಸೂರ್ಯನ ಬೆಳಕು ತಲುಪೇಯಿಲ್ಲ.
ಐಸ್ಲ್ಯಾಂಡ್ (Iceland) : ಐಸ್ಲ್ಯಾಂಡ್ ಯುರೋಪ್ ನಲ್ಲಿ ಅತಿದೊಡ್ಡ ದ್ವೀಪಗಳಲ್ಲಿ ಒಂದಾಗಿದೆ. ಗ್ರೇಟ್ ಬ್ರಿಟನ್ ನಂತರದ ಸ್ಥಾನ ಇದಕ್ಕಿದೆ. ಇಲ್ಲಿ ಕೂಡ ಕೆಲ ದಿನಗಳ ಕಾಲ ಸೂರ್ಯ ಮುಳುಗುವುದಿಲ್ಲ. ಜೂನ್‌ನಲ್ಲಿ ಸೂರ್ಯ ಅಸ್ತಂಗತನಾಗುವುದಿಲ್ಲ. 24 ಗಂಟೆಯೂ ಸೂರ್ಯನ ಬೆಳಕು ಇರುತ್ತದೆ.
TRAVEL DESTINATIONS: ಸೆಲೆಬ್ರಿಟಿಗಳ ಇಷ್ಟದ ಪ್ರವಾಸಿ ತಾಣಕ್ಕೆ ನೀವೂ ಭೇಟಿ ನೀಡಿ
ಅಲಾಸ್ಕಾ ( Alaska) : ಸೂರ್ಯ ಮುಳುಗದ ದೇಶಗಳಲ್ಲಿ ಅಲಾಸ್ಕಾ ಕೂಡ ಒಂದು. ಮೇ ಅಂತ್ಯದಿಂದ ಜುಲೈ ಅಂತ್ಯದವರೆಗೆ ಇಲ್ಲಿ ಸೂರ್ಯನ ಬೆಳಕಿರುತ್ತದೆ. ಚಳಿಗಾಲದಲ್ಲಿ ಅಂದರೆ ನವೆಂಬರ್ ಆರಂಭದಲ್ಲಿ ಒಂದು ತಿಂಗಳು ಮಾತ್ರ ರಾತ್ರಿ ಇರುತ್ತದೆ. ಇದನ್ನು ಪೋಲರ್ ನೈಟ್ಸ್ ಎಂದು ಕರೆಯಲಾಗುತ್ತದೆ.
ಫಿನ್ಲ್ಯಾಂಡ್ (Finland) : ಸರೋವರಗಳಿಂದ ಕೂಡಿರುವ ಫಿನ್ಲ್ಯಾಂಡ್ ನಲ್ಲಿ 73 ದಿನಗಳ ಕಾಲ ನೀವು ಸದಾ ಸೂರ್ಯನನ್ನು ನೋಡಬಹುದು. ಆದರೆ ಚಳಿಗಾಲದಲ್ಲಿ ಸೂರ್ಯ ಇಲ್ಲಿ ಕಾಣಸಿಗುವುದಿಲ್ಲ.
ಕೆನಡಾ (Canada) : ಇದು ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿದೆ. ಕೆನಡಾದ ನುನಾವುತ್ ನಗರದಲ್ಲಿ ಸೂರ್ಯ 2 ತಿಂಗಳವರೆಗೆ ಮುಳುಗುವುದಿಲ್ಲ. ಕೆನಡಾದ ವಾಯುವ್ಯ ಭಾಗದಲ್ಲಿ ಬೇಸಿಗೆಯಲ್ಲಿ ಸುಮಾರು 50 ದಿನಗಳ ಕಾಲ ಬಿಸಿಲಿರುತ್ತದೆ.
ಮಕ್ಕಳ ಜೊತೆ ಪ್ರಯಾಣಿಸುವಾಗ ಮೆಡಿಕಲ್ ಕಿಟ್‌ನಲ್ಲಿ ಈ ವಸ್ತುಗಳಿರಲಿ
ಸ್ವೀಡನ್ ( Sweden) : ಸ್ವೀಡನ್ ಕೂಡ ಬಹಳ ಸುಂದರವಾದ ದೇಶಗಳಲ್ಲಿ ಒಂದು. ಇಲ್ಲಿ ಮೇ ತಿಂಗಳ ಆರಂಭದಿಂದ ಆಗಸ್ಟ್ ಅಂತ್ಯದವರೆಗೆ ಸೂರ್ಯ ಕೆಲವೇ ಕೆಲವು ಗಂಟೆ ಕಣ್ಮರೆಯಾಗ್ತಾನೆ. ಇಲ್ಲಿ ರಾತ್ರಿ 12 ಗಂಟೆಗೆ ಸೂರ್ಯಾಸ್ತವಾದ್ರೆ 4 ಗಂಟೆ 30 ನಿಮಿಷಕ್ಕೆ ಮತ್ತೆ ಬರ್ತಾನೆ.