National Tourism Day : ದೇಶದ ಆರ್ಥಿಕ ವೃದ್ಧಿಗೆ ನೆರವಾಗೋ ದಿನದ ಮಹತ್ವ, ಇತಿಹಾಸ

Suvarna News   | Asianet News
Published : Jan 25, 2022, 01:09 PM IST
National Tourism Day : ದೇಶದ ಆರ್ಥಿಕ ವೃದ್ಧಿಗೆ ನೆರವಾಗೋ ದಿನದ ಮಹತ್ವ, ಇತಿಹಾಸ

ಸಾರಾಂಶ

ಇಂದು ದೇಶದಲ್ಲಿ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತಿದೆ. ಹ್ಯಾಪಿ ನ್ಯಾಷನಲ್ ಟೂರಿಸಂ ಡೇ ಎಂದು ವಿಶ್ ಮಾಡುವ ನಾವು, ಅದು ಶುರುವಾಗಿದ್ದು ಎಂದು ಹಾಗೂ ಅದರ ಮಹತ್ವವೇನು ಎಂಬುದನ್ನು ತಿಳಿಯಬೇಕು.   

ಭಾರತ (India) ವೈವಿಧ್ಯಮಯ ದೇಶ. ಕಾಶ್ಮೀರ (Kashmir)ದಿಂದ ಕನ್ಯಾಕುಮಾರಿ (Kanyakumari)ಯವರೆಗೆ ಅನೇಕ ಪ್ರವಾಸಿ ಸ್ಥಳಗಳನ್ನು ಭಾರತ ಹೊಂದಿದೆ. ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಭಾರತದ ಸುಂದರ ಸ್ಥಳಗಳು ಸೆಳೆಯುತ್ತವೆ. ಭಾರತದ ಪ್ರವಾಸಿ ತಾಣಗಳನ್ನು ಉತ್ತೇಜಿಸಲು ಪ್ರತಿ ವರ್ಷ ಡಿಸೆಂಬರ್ 25 ರಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ಪ್ರವಾಸೋದ್ಯಮವು ಕೋಟಿಗಟ್ಟಲೆ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ. ಪ್ರವಾಸೋದ್ಯಮ ದಿನದ ಮೂಲಕ ಭಾರತದ ಐತಿಹಾಸಿಕತೆ, ಸೌಂದರ್ಯ, ಪ್ರಕೃತಿ ಸೌಂದರ್ಯ, ಸಂಸ್ಕೃತಿಯನ್ನು ದೇಶ-ವಿದೇಶಗಳಿಗೆ ಪಸರಿಸಲಾಗುತ್ತದೆ. ರಾಷ್ಟ್ರೀಯ ಪ್ರವಾಸೋದ್ಯಮ ದಿನ ಯಾವಾಗ ಪ್ರಾರಂಭವಾಯಿತು ಎಂದು ನಿಮಗೆ ತಿಳಿದಿದೆಯೇ? 2022 ರ ಪ್ರವಾಸೋದ್ಯಮ ದಿನದ ಥೀಮ್ ಏನು? ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಇತಿಹಾಸ ಮತ್ತು ಉದ್ದೇಶವೇನು ಎಂಬುದನ್ನು ಇಂದು ಹೇಳ್ತೆವೆ.

ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಥೀಮ್ 2022 : ಪ್ರತಿ ವರ್ಷ ಒಂದೊಂದು ಥೀಮ್ ನಲ್ಲಿ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಪ್ರವಾಸೋದ್ಯಮ ಸಚಿವಾಲಯವು 'ಆಜಾದಿ ಕಾ ಅಮೃತ್ ಮಹೋತ್ಸವ'ದ ಅಡಿಯಲ್ಲಿ ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸುತ್ತಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗಿದ್ದು,ಅದರ ಸಂಭ್ರಮದಲ್ಲಿ 75 ವಾರಗಳ ಭವ್ಯ ಆಚರಣೆಗೆ ನಿರ್ಧರಿಸಲಾಗಿದೆ. ಈ ವರ್ಷದ ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಥೀಮ್ 'ಗ್ರಾಮೀಣ ಮತ್ತು ಸಮುದಾಯ ಕೇಂದ್ರಿತ ಪ್ರವಾಸೋದ್ಯಮ’ವಾಗಿದೆ.

ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಅಂಗವಾಗಿ, ತೆಲಂಗಾಣ ಸರ್ಕಾರದ ಸಹಯೋಗದೊಂದಿಗೆ ಕೇಂದ್ರವು ಸೆಮಿನಾರ್‌ಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅನೇಕ ರಾಜ್ಯಗಳು ತಮ್ಮ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕಾರ್ಯಕ್ರಮಗಳನ್ನು ಆಯೋಜಿಸಿದ್ದರೆ, ಕೇಂದ್ರ ಸರ್ಕಾರವು ಹೈದರಾಬಾದ್‌ನ ಹೊರವಲಯದಲ್ಲಿರುವ ನೇಕಾರರ ಗ್ರಾಮವಾದ ತೆಲಂಗಾಣದ ಪೋಚಂಪಲ್ಲಿ ಗ್ರಾಮದಲ್ಲಿ ಪ್ರಮುಖ ಕಾರ್ಯಕ್ರಮವನ್ನು ಆಯೋಜಿಸಿದೆ. 

ಕೈಯಿಂದ ನೇಯ್ದ ಇಕತ್ ಸೀರೆಗಳಿಗೆ ಪೋಚಂಪಲ್ಲಿ ಹೆಸರುವಾಸಿಯಾಗಿದೆ. ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ (UNWTO) ನವೆಂಬರ್ 2021 ರಲ್ಲಿ ಪೋಚಂಪಲ್ಲಿಯನ್ನು ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮಗಳ ಪಟ್ಟಿಗೆ ಸೇರಿಸಿತ್ತು. ಪ್ರವಾಸೋದ್ಯಮ ದಿನದ ಅಂಗವಾಗಿ 75 ಪ್ರಮುಖ ಸ್ಥಳಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಬೆಳಕು ಮತ್ತು ಧ್ವನಿ ಕಾರ್ಯಕ್ರಮಗಳು ಸಹ ನಡೆಯಲಿವೆ.  
ಸೋಮವಾರ, ಪ್ರವಾಸೋದ್ಯಮ ಸಚಿವಾಲಯವು ಭಾರತೀಯ ಪ್ರವಾಸೋದ್ಯಮದ ರಸಪ್ರಶ್ನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.  ರಸಪ್ರಶ್ನೆ ಉದ್ದೇಶವು ಭಾರತದ ವಿವಿಧ ಪ್ರವಾಸೋದ್ಯಮ, ವಾಸ್ತುಶಿಲ್ಪ, ಸಂಸ್ಕೃತಿ ಮತ್ತು ಪಾಕಪದ್ಧತಿಯನ್ನು ಜನರಿಗೆ ತಿಳಿಸುವುದು ಮತ್ತು ದೇಶದೊಳಗೆ ಲಭ್ಯವಿರುವ ಪ್ರವಾಸೋದ್ಯಮ ಅವಕಾಶಗಳ ಬಗ್ಗೆ ಜ್ಞಾನವನ್ನು ಪರೀಕ್ಷಿಸುವುದಾಗಿದೆ.  

Winter Vacation: ಮೈ ಕೊರೆಯೋ ಚಳಿಯ ಆನಂದ ಪಡೆಯಬೇಕಂದ್ರೆ ಭಾರತದ ಈ ಪ್ರವಾಸಿ ತಾಣ ಬೆಸ್ಟ್

ಪ್ರವಾಸೋದ್ಯಮ ದಿನದ ಇತಿಹಾಸ : ಪ್ರಪಂಚದಾದ್ಯಂತ ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಆದರೆ ಭಾರತದಲ್ಲಿ ಪ್ರವಾಸೋದ್ಯಮ ದಿನವನ್ನು ಜನವರಿ 25 ರಂದು ಆಚರಿಸಲಾಗುತ್ತದೆ. ಆದ್ರೆ ಯಾವಾಗ ಆಚರಣೆ ಶುರುವಾಗಿದೆ ಎನ್ನುವ ಬಗ್ಗೆ ಸರಿಯಾದ ಸ್ಪಷ್ಟತೆಯಿಲ್ಲ. 1948ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ, ಭಾರತದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರವಾಸೋದ್ಯಮ ಸಾರಿಗೆ ಸಮಿತಿಯನ್ನು ರಚಿಸಲಾಯಿತು. ಮೂರು ವರ್ಷಗಳ ನಂತರ ಅಂದರೆ 1951 ರಲ್ಲಿ, ದೆಹಲಿ ನಂತ್ರ ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಪ್ರವಾಸೋದ್ಯಮ ದಿನದ ಪ್ರಾದೇಶಿಕ ಕಚೇರಿ ಶುರುವಾಯಿತು. 1998 ರಲ್ಲಿ ಪ್ರವಾಸೋದ್ಯಮ ಮತ್ತು ಸಂಪರ್ಕ ಸಚಿವಾಲಯದ ಅಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯನ್ನು ಸೇರಿಸಲಾಯಿತು.

Jammu Kashmirದಲ್ಲಿ ಹಿಂದೆಂದೂ ಇಲ್ಲದಷ್ಟು ಚಳಿ ಚಳಿ.. ತಾಪಮಾನ ಎಷ್ಟು ಗೊತ್ತಾ?

ಪ್ರವಾಸೋದ್ಯಮ ದಿನದ ಆಚರಣೆಯಿಂದ ಭಾರತದ ಆರ್ಥಿಕ ವೃದ್ಧಿಯಾಗ್ತಿದೆ. ಆದ್ರೆ ಕೊರೊನಾ ಕಾರಣದಿಂದಾಗಿ ಪ್ರವಾಸೋದ್ಯಮದ ಮೇಲೆ ದೊಡ್ಡ ಹೊಡೆತಬಿದ್ದಿದೆ. 2024ರವರೆಗೆ ಸ್ಥಿತಿ ಇದೇ ರೀತಿ ಮುಂದುವರೆಯಲಿದೆ,ಜನರು ಕೊರೊನಾ ಗುಂಗಿನಿಂದ ಹೊರಗೆ ಬರಲು ಸಮಯಬೇಕೆಂದು ವಿಶ್ವ ಪ್ರವಾಸೋದ್ಯಮ ಸಂಸ್ಥೆ ಹೇಳಿದೆ.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?
ನಿವೃತ್ತಿ ನಂತ್ರವೂ ಪರದಾಡಬೇಕಾಗಿಲ್ಲ, ನೆಮ್ಮದಿ ಜೀವನಕ್ಕೆ ಈ ದೇಶಗಳು ಬೆಸ್ಟ್