Jammu Kashmirದಲ್ಲಿ ಹಿಂದೆಂದೂ ಇಲ್ಲದಷ್ಟು ಚಳಿ ಚಳಿ.. ತಾಪಮಾನ ಎಷ್ಟು ಗೊತ್ತಾ?

By Suvarna News  |  First Published Jan 20, 2022, 5:52 PM IST

ಉತ್ತರ ಕಾಶ್ಮೀರದಲ್ಲಿರುವ ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್ ಇತ್ತೀಚೆಗೆ ಅತೀ ಕಡಿಮೆ ತಾಪಮಾನ ಇರುವ ಜಾಗ ಎಂದು ಹೊಸ ದಾಖಲೆ ಸೃಷ್ಟಿಸಿದೆ.


ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದೆ. ಮನೆಯಲ್ಲಿ ಬೆಚ್ಚಗೆ ಕುಳಿತುಬಿಡೋಣ ಎಂದು ಅನಿಸುತ್ತದೆ. ನಮಗೇ ಇಷ್ಟೊಂದು ಚಳಿಯಾಗುತ್ತಿದೆ ಎಂದಾದರೆ ಇನ್ನು ಜಮ್ಮು-ಕಾಶ್ಮೀರದಂತಹ ಪ್ರದೇಶದಲ್ಲಿ ಇನ್ನೆಷ್ಟು ಚಳಿ ಇರಬಹುದು ಎಂಬ ಕುತೂಹಲ (Curiosity) ಹಲವರಲ್ಲಿ ಇರುತ್ತದೆ. ಹಿಮಾಲಯ ಪರ್ವತಕ್ಕೆ ಹತ್ತಿರ ಇರುವ ಈ ಪ್ರದೇಶದಲ್ಲಿ  ಯಾವಾಗಲೂ ಚಳಿ ಹೆಚ್ಚಾಗಿಯೇ ಇರುತ್ತದೆ.  ಈ ಬಾರಿಯಂತೂ ಇಲ್ಲಿನ ತಾಪಮಾನ ದಾಖಲೆಯನ್ನೇ ಸೃಷ್ಟಿಸಿದೆ.

ಗುಲ್ಮಾರ್ಗ್ ಸ್ಕೀಯಿಂಗ್ (Skiing)  ಆಟಕ್ಕೆ ಹೆಸರು ಪಡೆದ ಪ್ರದೇಶ. ಇತ್ತೀಚೆಗೆ ಗುಲ್ಮಾರ್ಗ್ ಸೇರಿ ಇನ್ನೂ ಕೆಲವು ಕಾಶ್ಮೀರದ ಎತ್ತರದ ಪ್ರದೇಶಗಳು ಹಿಮಪಾತಕ್ಕೆ ಸಾಕ್ಷಿಯಾಗಿವೆ. ಬೇರೆ ಕಡೆಗಳಲ್ಲಿ ಸಣ್ಣಗೆ ಮಳೆ ಬೀಳುತ್ತಿದ್ದ ಸಂದರ್ಭದಲ್ಲಿ ಈ ಕೆಲವು ಪ್ರದೇಶಗಳಲ್ಲಿ ಹಿಮಪಾತವಾಗಿದೆ. ಹಾಗೂ ಮೋಡ ಕವಿದ ವಾತಾವರಣ ಇದ್ದ ಕಾರಣ ಕನಿಷ್ಠ ತಾಪಮಾನ (Temperature) ಉಂಟಾಗಿರಬಹುದು ಎಂಬುದು ಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Tap to resize

Latest Videos

undefined

ಗುಲ್ಮಾರ್ಗ (Gulmarg) ನಲ್ಲಿ ಸುಮಾರು 1.2cm ನಷ್ಟು ತಾಜಾ (Fresh) ಹಿಮಪಾತವಾಗಿದೆ (Snowfall) ಎಂಬ ಅಧಿಕೃತ ಮಾಹಿತಿ ಹೊರಬಂದಿದೆ. ಇನ್ನೂ ಕೆಲವು  ಭಾಗಗಳಲ್ಲಿ ಈ ರೀತಿಯಾದಂತಹ ಹಿಮಪಾತವಾಗಿದೆ. ಇದಕ್ಕಿಂತ ಮೊದಲು ಹಲವು ಕಣಿವೆ ಭಾಗಗಳಲ್ಲಿ ಮಳೆಯಾಗಿತ್ತು. ಇದರಿಂದಾಗಿ ಕಾಶ್ಮೀರದ ಹಲವಾರು ಪ್ರದೇಶಗಳು ಅತಿ ಕಡಿಮೆ (Minimum) ಉಷ್ಣಾಂಶಕ್ಕೆ ಸಾಕ್ಷಿಯಾದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Beautiful Churches: ಭಾರತದಲ್ಲೇ ಅತಿ ಜನಪ್ರಿಯ ಚರ್ಚ್‌ಗಳಿವು..

ಈ ಕೆಳಗಿನ ಭಾಗಗಳಲ್ಲಿ ಕಡಿಮೆ ತಾಪಮಾನ ಉಂಟಾಗಿದೆ.

  •  ಜಮ್ಮು ಮತ್ತು ಕಾಶ್ಮೀರದ ಬೇಸಿಗೆಯ ರಾಜಧಾನಿಯಾಗಿರುವ (Capital) ಶ್ರೀನಗರದಲ್ಲಿ  2.7 ಡಿಗ್ರಿ ಸೆಲ್ಸಿಯಸ್‌ ನಷ್ಟು ಕನಿಷ್ಠ ತಾಪಮಾನವಿತ್ತು
  •  ಗುಲ್ಮಾರ್ಗ್‌ ನ‌ ಪ್ರಸಿದ್ಧ ಸ್ಕೀಯಿಂಗ್‌ ಪ್ರದೇಶದಲ್ಲಿ ಮೈನಸ್‌ 6 ಡಿಗ್ರಿ ಸೆಲ್ಸಿಯಸ್ (Celsius) ತಾಪಮಾನವಿತ್ತು. ಇದು ಇದುವರೆಗಿನ ಅತೀ ಕನಿಷ್ಠ ತಾಪಮಾನವಾಗಿದೆ.
  • ಇನ್ನು ಅಮರನಾಥ ಯಾತ್ರೆಯ ಮೂಲ ಶಿಬಿರ ಎಂದು ಕರೆಯಲ್ಪಡುವ ದಕ್ಷಿಣ ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್‌ನಲ್ಲಿ  ಮೈನಸ್‌ 1.3ಡಿಗ್ರಿ (Degree) ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. 
  • ಖಾಜಿಗುಂಡ್‌ನಲ್ಲಿ ಕನಿಷ್ಠ 1.3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.  ಇದರರ ಹತ್ತಿರದಲ್ಲಿಯೇ ಇರುವ ಕೋಕರ್‌ನಾಗ್‌ನಲ್ಲಿ 0.2ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.
  • ಉತ್ತರ ಕಾಶ್ಮೀರದ ಕುತ್ವಾರದಲ್ಲಿ ಕನಿಷ್ಠ 1.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ವರದಿಯಾಗಿದೆ. 

ಕಾಶ್ಮೀರವು ಪ್ರಸ್ತುತ 40 ದಿನಗಳ ಕಠಿಣ ಚಳಿಗಾಲವನ್ನು ಅನುಭವಿಸಬೇಕಾಗಿದೆ. ಇದಕ್ಕೆ ಚಿಲ್ಲಾ ಇ ಕಲನ್‌ (Chilla i Kalan) ಎಂದು ಹೆಸರು. ಇದು ಕಳೆದ ವರ್ಷ ಡಿಸೆಂಬರ್‌ 21 ರಿಂದ ಪ್ರಾರಂಭವಾಗಿದೆ. ಈ ಕಾರಣದಿಂದಾಗಿ ತಾಪಮಾನ ಇಳಿಕೆಯಾಗಿತ್ತದೆ. ಜೊತೆಗೆ ನೀರಿನ (Water) ಸರೋವರಗಳನ್ನು (Lake) ಚಿಲ್ಲಾ ಇ ಕಲನ್‌ ಘನೀಕರಣವಾಗುವ (Freezing) ಹಾಗೆ ಮಾಡುತ್ತದೆ. ಹಿಮಪಾತವಾಗುವುದಕ್ಕೆ ಇದು ಮುಖ್ಯ ಕಾರಣವಾಗುತ್ತದೆ.

Winter Vacation: ಮೈ ಕೊರೆಯೋ ಚಳಿಯ ಆನಂದ ಪಡೆಯಬೇಕಂದ್ರೆ ಭಾರತದ ಈ ಪ್ರವಾಸಿ ತಾಣ ಬೆಸ್ಟ್

ಇನ್ನೂ ಮುಂದುವರಿದಂತೆ ಮುಂದಿನ ದಿನಗಳಲ್ಲಿ ಕೂಡ ಸಣ್ಣದಾಗಿ ಮಳೆ (Light rain)ಬರುವ ಸಾಧ್ಯತೆ ಇದೆ. ಜೊತೆಗೆ ಹಿಮಪಾತವಾಗುವ ಸಾಧ್ಯತೆ ಕೂಡ ಇದೆ. ಆದರೆ ದೊಡ್ಡ ಮಳೆ ಅಥವಾ ಹಿಮಪಾತದ ಸಾಧ್ಯತೆ ಇಲ್ಲ ಎಂಬುದಾಗಿ ಹವಾಮಾನ ಇಲಾಖೆಯವರು ತಿಳಿಸಿದ್ದಾರೆ. ನೀವೇನಾದರೂ ಹಿಮದೃಶ್ಯದ ಸೆರೆ ಹಿಡಿಯ ಬಯಸಿದರೆ, ಚಳಿಯ ರುದ್ರಾವತಾರ ನೋಡ ಬಯಸಿದರೆ ಈಗ ಕಾಶ್ಮೀರ ಪ್ರವಾಸ ಪ್ಲ್ಯಾನ್ ಮಾಡಿ. 

click me!