Viral Post: ಪ್ರಯಾಣಿಕರಿಗೆ ಉಚಿತ ಬಿಸ್ಕತ್, ವಾಟರ್ ಬಾಟಲ್ ಫ್ರೀ ನೀಡೋ ಚಾಲಕ!

Published : Apr 05, 2023, 11:33 AM IST
Viral Post: ಪ್ರಯಾಣಿಕರಿಗೆ ಉಚಿತ ಬಿಸ್ಕತ್, ವಾಟರ್ ಬಾಟಲ್ ಫ್ರೀ ನೀಡೋ ಚಾಲಕ!

ಸಾರಾಂಶ

ಸಮಾಜ ಸೇವೆ ಮಾಡೋಕೆ ಹಣ ಮುಖ್ಯವಾದ್ರೂ ಮನಸ್ಸಿರದೆ ಹೋದ್ರೆ ಯಾವುದೂ ಸಾಧ್ಯವಿಲ್ಲ. ಎಷ್ಟೂ ಶ್ರೀಮಂತರು ಕೈಬಿಚ್ಚಿ ದಾನ ಮಾಡೋದಿಲ್ಲ. ಆದ್ರೆ ದಿನದ ಸಂಪಾದನೆಯಲ್ಲಿ ಜೀವನ ನಡೆಸುವ ಜನರೇ ಉಳಿದವರ ಕಷ್ಟವನ್ನು ಆಲಿಸ್ತಾರೆ. ಇದಕ್ಕೆ ಈ ಆಟೋ ಚಾಲಕ ಹೊರತಾಗಿಲ್ಲ. ಪ್ರಯಾಣಿಕರ ಸೇವನೆ ವಿಶೇಷ ವ್ಯವಸ್ಥೆ ಮಾಡಿದ್ದಾನೆ.   

ಆಟೋ ಚಾಲಕರ ಪ್ರಪಂಚ ಭಿನ್ನವಾಗಿರುತ್ತದೆ. ದಿನಕ್ಕೆ ನೂರಾರು ಜನರ ಜೊತೆ ಅವರು ಮಾತುಕತೆ ನಡೆಸ್ತಾರೆ. ಕೆಲ ಪ್ರಯಾಣಿಕರು ಕೋಪ ಮಾಡಿಕೊಂಡ್ರೆ ಮತ್ತೆ ಕೆಲವರು ಕಿರಿಕಿರಿಯುಂಟು ಮಾಡ್ತಾರೆ. ಎಲ್ಲರನ್ನು ಸಹಿಸಿಕೊಂಡು, ಅವರನ್ನು ಸುರಕ್ಷಿತ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಬಿಡುವ ಜವಾಬ್ದಾರಿ ಆಟೋ ಚಾಲಕರದ್ದಿರುತ್ತದೆ. 

ಆಟೋ (Auto) ಚಾಲಕರ ಬಗ್ಗೆ ಅನೇಕ ಸಿನಿಮಾ, ಹಾಡುಗಳಿವೆ. ಕೆಲ ಆಟೋ ಚಾಲಕರು ಪ್ರಾಮಾಣಿಕವಾಗಿರ್ತಾರೆ. ಎಷ್ಟೋ ಬಾರಿ, ಆಟೋದಲ್ಲಿಯೇ ಹಣ, ಬಂಗಾರವನ್ನು ಮರೆತು ಹೋದ ಪ್ರಯಾಣಿಕರಿಗೆ ಆಟೋ ಚಾಲಕರು ಅದನ್ನು ಸುರಕ್ಷಿತವಾಗಿ ಹಿಂತಿರುಗಿಸಿದ ಉದಾಹರಣೆಯಿದೆ. ಕೆಲ ಆಟೋ ಚಾಲಕರು ಸಮಾಜ ಸೇವೆ (Social Service) ಗೆ ತಮ್ಮನ್ನು ಮುಡುಪಾಗಿಡುತ್ತಾರೆ. ಗರ್ಭಿಣಿಯರಿಗೆ ಉಚಿತ ಸೇವೆ ಎಂಬ ಬೋರ್ಡ್ ಗಳನ್ನು ನೇತು ಹಾಕುವ ಆಟೋ ಚಾಲಕರಿದ್ದಾರೆ. ತುರ್ತು ಸಂದರ್ಭದಲ್ಲಿ ಜನರ ನೆರವಿಗೆ ಅವರು ಬರ್ತಾರೆ. ಈಗ ಮುಂಬೈ (Mumbai) ನ ಆಟೋ ಚಾಲಕನೊಬ್ಬ ತನ್ನ ವಿಭಿನ್ನ ಸೇವೆಯಿಂದ ಪ್ರಸಿದ್ಧಿಯಾಗಿದ್ದಾನೆ.

ಮಾಜಿ ಗರ್ಲ್‌ಫ್ರೆಂಡ್‌ಗಾಗಿ ಚಳಿಯಲ್ಲೂ ಬರೋಬ್ಬರಿ 21 ಗಂಟೆ ಮಂಡಿಯೂರಿ ಕುಳಿತ ಪ್ರೇಮಿ!

ಇದು ಬೇಸಿಗೆ ಕಾಲ. ಮನೆಯಿಂದ ಹೊರಡುವ ಮುನ್ನ ನೀವು ಲೀಟರ್ ಗಟ್ಟಲೆ ನೀರು ಕುಡಿದ್ರೂ ಸ್ವಲ್ಪ ದೂರ ಹೋಗ್ತಿದ್ದಂತೆ ಬಾಯಾರಿಕೆ ಶುರುವಾಗುತ್ತದೆ. ಕೈನಲ್ಲಿ ನೀರಿನ ಬಾಟಲ್ ಇದ್ರೆ ಒಕೆ. ಇಲ್ಲವೆಂದ್ರೆ ಅಲ್ಲಿ, ಇಲ್ಲಿ ತಡಕಾಡೇಕು. ಅದೇ ನೀವು ಹತ್ತಿರ ಆಟೋದಲ್ಲಿಯೇ ನೀರು ಸಿಕ್ಕಿದ್ರೆ? ನೀರೇನೋ ಸಿಗ್ಬಹುದು, ಅದಕ್ಕೂ ಹಣ ನೀಡ್ಬೇಕಲ್ವಾ ಅಂತಾ ಪ್ರಶ್ನೆ ಮಾಡಬೇಡಿ. ಈಗಿನ ಕಾಲದಲ್ಲಿ ನೀರಿಗೂ ಬೆಲೆ ಬಂದಿದೆ ನಿಜ. ಆದ್ರೆ ಈ ಆಟೋ ಚಾಲಕ ನಿಮಗೆ ನೀರನ್ನು ಉಚಿತವಾಗಿ ನೀಡ್ತಾನೆ. ಬರೀ ನೀರು ಮಾತ್ರವಲ್ಲ ಬಿಸ್ಕತ್ ತಿನ್ನುವ ಅವಕಾಶವೂ ಇದೆ. ನಿಮಗೆ ಟೈಂ ಪಾಸ್ ಆಗ್ತಿಲ್ಲ ಅಂದ್ರೆ ಪೇಪರ್ ಕೂಡ ಓದ್ಬಹುದು.

ಯಸ್. ವೈರಲ್ ಆಗಿರುವ ಮುಂಬೈ ಆಟೋ ಚಾಲಕನ ವಿಶೇಷತೆ ಇದು. ಟ್ವಿಟರ್ ನಲ್ಲಿ ನಂದಿನಿ ಅಯ್ಯರ್ ಈ ಆಟೋ ಚಾಲಕನ ಫೋಟೋವನ್ನು ಹಂಚಿಕೊಂಡಿದ್ದಾರೆ. ಆಟೋದಲ್ಲಿ ಏನೆಲ್ಲ ಸೌಲಭ್ಯವಿದೆ ಎಂಬುದನ್ನು ಫೋಟೋ ನೋಡಿಯೇ ನೀವು ಹೇಳ್ಬಹುದು. ಪ್ರಯಾಣಿಕರು ಕುಳಿತುಕೊಳ್ಳುವ ಸೀಟ್ ಮುಂದೆ ಎರಡು ಸಣ್ಣ ರ್ಯಾಕ್ ಇದೆ. ಒಂದರಲ್ಲಿ ನೀರಿನ ಬಾಟಲಿಯಿದೆ. ಇನ್ನೊಂದರಲ್ಲಿ ಬಿಸ್ಕತ್ ಪ್ಯಾಕ್ ಗಳನ್ನು ನೀವು ನೋಡ್ಬಹುದು. ಅದ್ರ ಪಕ್ಕದಲ್ಲೇ ಪೇಪರನ್ನು ಇಡಲಾಗಿದೆ. ನಂದಿನಿ ಅಯ್ಯರ್, ಗೆಸ್ಚರ್ ಮುಖ್ಯ. ಮುಂಬೈ ಆಟೋ ವಾಲಾ ಉಚಿತವಾಗಿ ನೀರು ನೀಡ್ತಿದ್ದಾರೆ. ಇದು ತೃಪ್ತಿಕರ ವಿಷ್ಯವೆಂದು ಟ್ವೀಟ್ ಮಾಡಿದ್ದಾರೆ. 

ನಂದಿನಿ ಅಯ್ಯರ್ ಪೋಸ್ಟ್ ಮಾಡಿರುವ ಫೋಟೋದಲ್ಲಿ ನೋಡ್ಬಹುದು, ರ್ಯಾಕ್ ಬಳಿ, ಪ್ರಯಾಣಿಕರಿಗೆ ನೀರು ಹಾಗೂ ಇಲ್ಲಿರುವ ವಸ್ತುಗಳು ಉಚಿತ ಎಂದು ಬರೆಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟ್ : ನಂದಿನಿ ಅಯ್ಯರ್ ಈ ಟ್ವಿಟರ್ ಸಾಕಷ್ಟು ವೈರಲ್ ಆಗಿದೆ. ಟ್ವೀಟ್ನ್ನು ಸುಮಾರು 90,000 ಬಾರಿ ವೀಕ್ಷಣೆ ಮಾಡಲಾಗಿದೆ. 1800ಕ್ಕೂ ಹೆಚ್ಚು ಲೈಕ್‌ ಬಂದಿದೆ. ಆಟೋ ಚಾಲಕನ ಈ ಕೆಲಸದ ಬಗ್ಗೆ  ಜನರು ತಮ್ಮ ಪ್ರತಿಕ್ರಿಯೆಗಳನ್ನು ಕಾಮೆಂಟ್‌ ಮೂಲಕ ನೀಡುತ್ತಿದ್ದಾರೆ. 

Viral Video: ಈ ಹುಡುಗೀರ ಡ್ಯಾನ್ಸ್ ನೋಡಿ ಹುಡುಗರ ಹೃದಯದ ಬಡಿತವೇ ಹೆಚ್ಚು-ಕಮ್ಮ ಆಯ್ತಂತೆ!

ಆಟೋ ಚಾಲಕನ ಈ ಸೇವೆಯನ್ನು ಟ್ವಿಟರ್ ಬಳಕೆದಾರರು ಮೆಚ್ಚಿದ್ದಾರೆ. ಆಟೋ ಚಾಲಕನ ಈ ವಿಚಾರ ತುಂಬಾ ಚೆನ್ನಾಗಿದೆ ಎಂದು ಕಮೆಂಟ್ ಮಾಡಲಾಗಿದೆ. ಇನ್ನೊಬ್ಬ ಟ್ವಿಟರ್ ಬಳಕೆದಾರ ಚಾಲಕನ ಹೃದಯ ತುಂಬಾ ದೊಡ್ಡದು ಎಂದಿದ್ದಾರೆ. ಆಟೋ ಚಾಲಕ ಎಲ್ಲಿಯವನು ಎಂದು ಕೆಲವರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ನಂದಿನಿ ಚೆಂಬೂರ್ ನಾಕಾ ಪ್ರದೇಶದಲ್ಲಿ ಸಿಕ್ಕಿದ್ದರು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆಟೋದಲ್ಲಿ ಉಚಿತವಾಗಿ ನೀರಿನ ಬಾಟಲಿ ನೀಡಿ ಒಳ್ಳೆ ಕೆಲಸ ಮಾಡ್ತಿದ್ದಾರೆ, ಆದ್ರೆ ಇದ್ರ ಜೊತೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲಿ ಎಸೆಯಬೇಡಿ ಎಂಬ ಸಂದೇಶ ಕೂಡ ಇರಬೇಕಿತ್ತು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಿವೃತ್ತಿ ನಂತ್ರವೂ ಪರದಾಡಬೇಕಾಗಿಲ್ಲ, ನೆಮ್ಮದಿ ಜೀವನಕ್ಕೆ ಈ ದೇಶಗಳು ಬೆಸ್ಟ್
ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​