ಕಲಬುರಗಿಯಿಂದ ಬೆಂಗಳೂರಿಗೆ ಮೀಸಲಾಗಿರುವಂತೆ ಪ್ರತ್ಯೇಕ ಹೊಸ ರೈಲು ಸಂಚಾರ ಸೇವೆ ಆರಂಭಿಸಬೇಕು ಎಂದು ಸಂಸದ ಉಮೇಶ್ ಜಾಧವ್ ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿದರು.
ನವದೆಹಲಿ (ಫೆ.08): ಕಲಬುರಗಿಯಿಂದ ಬೆಂಗಳೂರಿಗೆ ಪ್ರತಿನಿತ್ಯ 10 ಸಾವಿರಕ್ಕೂ ಅಧಿಕ ಜನರು ಸಂಚಾರ ಮಾಡುತ್ತಿದ್ದಾರೆ. ಆದರೆ, ಕಲಬುರಗಿಗೆ ಮೀಸಲಾಗಿ ಒಂದೇ ಒಂದು ರೈಲಿನ ವ್ಯವಸ್ಥೆಯಿಲ್ಲ. ಆದ್ದರಿಂದ ಕಲಬುರಗಿ- ಬೆಂಗಳೂರು ಮೀಸಲಾಗಿ ಹೊಸ ರೈಲು ಸಂಚಾರ ಆರಂಭಿಸಬೇಕು ಎಂದು ಸಂಸದ ಡಾ. ಉಮೇಶ ಜಾಧವ್ ಪ್ರಸ್ತಾಪ ಮಾಡಿದರು.
ಲೋಕ ಸಭೆಯ ಸಂಸತ್ ಅಧಿವೇಶನದ ಶೂನ್ಯ ವೇಳೆಯಲ್ಲಿ ಮಾತನಾಡಿದ ಕಲಬುರಗಿ ಸಂಸತ್ ಸದಸ್ಯರಾದ ಡಾ. ಉಮೇಶ್ ಜಾದವ್ ಅವರು ನಮ್ಮ ಕಲಬುರಗಿಯ ಸಾವಿರಾರು ನಾಗರಿಕರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವ ಅತ್ಯಂತ ಮಹತ್ವದ ವಿಷಯದ ಬಗ್ಗೆ ಪ್ರಸ್ತಾಪಿಸುತ್ತಿದ್ದೇನೆ. ಕಲಬುರಗಿ ಮತ್ತು ಬೆಂಗಳೂರಿನ ನಡುವೆ ಹೊಸ ರೈಲು ಸಂಚಾರವನ್ನು ಆರಂಭಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ತಾವು ಸಂಗ್ರಹಿಸಿದ್ದ ಆಹಿತಿಯನ್ನೂ ಕೂಡ ಸಂಸತ್ತಿನ ಮುಂದೆ ಬಿಚ್ಚಿಟ್ಟರು.
undefined
ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಅಕ್ರಮ ತನಿಖೆಯನ್ನು ಸಿಓಡಿಗೆ ವಹಿಸಿದ ಸಿಎಂ ಸಿದ್ದರಾಮಯ್ಯ
ಆರ್‌ಟಿಐ ಇಂದ ಪಡೆದ ಮಾಹಿತಿಯನ್ನು ಪ್ರಸ್ತಾಪಿಸಿ ಕಲ್ಬುರ್ಗಿಯಿಂದ ಬೆಂಗಳೂರು ಮಧ್ಯ ದಿನಾಲು 2,100 ಟಿಕೆಟ್, ಬೆಂಗಳೂರಿನಿಂದ ಕಲ್ಬುರ್ಗಿಗೆ ಸರಿಸುಮಾರು 3,300 ಟಿಕೆಟ್ ಬುಕಿಂಗ್ ಆಗುತ್ತಿದೆ. ಇದರ ಜೊತೆ ದಿನಾಲು ಕಲ್ಬುರ್ಗಿಯಿಂದ ಬೆಂಗಳೂರಿಗೆ ಸರಿ ಸುಮಾರು 60 ರಿಂದ 70 ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಓಡಾಡುತ್ತಿವೆ. ಇದೆಲ್ಲ ಕೂಡಿಸಿದರೆ ಕಲ್ಬುರ್ಗಿಯಿಂದ ಬೆಂಗಳೂರಿಗೆ ಹೋಗುವವರ ಸಂಖ್ಯೆ ಸರಿ ಸುಮಾರು 10,000 ಜನಕ್ಕಿಂತಲೂ ಮೇಲಿದೆ ಎಂದರು.
ಬಸವ ಎಕ್ಸ್‌ಪ್ರೆಸ್ ಮತ್ತು ಸೋಲಾಪುರ-ಹಾಸನ ಎಕ್ಸ್‌ಪ್ರೆಸ್‌ನಂತಹ ರೈಲುಗಳ ಕೋಟಾಗಳನ್ನು ವ್ಯವಸ್ಥಿತವಾಗಿ ಕಡಿತಗೊಳಿಸಿರುವುದು ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ. ಕಲಬುರಗಿಯ ಜನರು ಕಾಯ್ದಿರಿಸಲಾದ ಟಿಕೆಟ್‌ಗಳನ್ನು ಪಡೆಯಲು ಸೋಲಾಪುರದಿಂದ ಟಿಕೆಟ್ ತೆಗೆದು ಕಲ್ಬುರ್ಗಿಯಲ್ಲಿ ಟ್ರೈನ್ ಹತ್ತುವ ಪರಿಸ್ಥಿತಿ ಎದುರಾಗುತ್ತಿದೆ. ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಕಲಬುರಗಿ-ಬೆಂಗಳೂರು ನಡುವೆ ಮೀಸಲಾದ ರೈಲಿನ ಕೊರತೆ ಎದ್ದು ಕಾಣುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುವ ಕಲಬುರಗಿಯ ಜನರು ಬೇರೆ ಕಡೆಯಿಂದ ಬರುವ ಕಲ್ಬುರ್ಗಿಯಿಂದ ಹಾದು ಹೋಗುವ ರೈಲುಗಳ ಮೇಲೆ ಅವಲಂಬಿತರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ ಸರ್ಕಾರದಲ್ಲೂ ಶೇ.40 ಕಮಿಷನ್ ಕಂಟಿನ್ಯೂ ಆಗಿದೆ; ಆಗ ಶಾಸಕರು ಕೇಳ್ತಿದ್ರು, ಈಗ ಅಧಿಕಾರಿಗಳೇ ಕೇಳ್ತಾರೆ!
ಕಲಬುರಗಿಯು ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಧಾನ ಕಛೇರಿಯಾಗಿರುವುದರಿಂದ, ಉದ್ಯೋಗ, ಸಭೆಗಳು ಮತ್ತು ವ್ಯಾಪಾರದಂತಹ ವಿವಿಧ ಕಾರಣಗಳಿಗಾಗಿ ಗಣನೀಯ ಸಂಖ್ಯೆಯ ಜನರು ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಮೀಸಲಾದ ರೈಲು ಸೇವೆಯ ಅನುಪಸ್ಥಿತಿಯು ಸಾಮಾನ್ಯ ಜನರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತಿದೆ ಆದರೆ ಪ್ರದೇಶದ ಒಟ್ಟಾರೆ ಬೆಳವಣಿಗೆ ಮತ್ತು ಸಂಪರ್ಕಕ್ಕೆ ಅಡ್ಡಿಯಾಗುತ್ತದೆ. ಆದ್ದರಿಂದ ಬೆಂಗಳೂರು-ಕಲಬುರಗಿ-ಬೆಂಗಳೂರು ಹೊಸ ರೈಲು ಸೇವೆಯನ್ನು ಶೀಘ್ರವಾಗಿ ಆರಂಭಿಸಲು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಲ್ಲಿ ಕೇಳಿಕೊಂಡರು.