ಕುಮಾರಪರ್ವತ ಚಾರಣಕ್ಕೂ ಆನ್‌ಲೈನ್‌ ಬುಕ್ಕಿಂಗ್ ಕಡ್ಡಾಯ: ಅರಣ್ಯ ಸಚಿವ ಈಶ್ವರ ಖಂಡ್ರೆ

By Sathish Kumar KH  |  First Published Feb 6, 2024, 12:36 PM IST

ಚಾರಣಿಗರ ಸ್ವರ್ಗವಾಗಿರುವ ಕುಮಾರ ಪರ್ವತದಲ್ಲಿ ಇನ್ನು ಮುಂದೆ ಚಾರಣ ಮಾಡುವವರಿಗೆ ಆನ್‌ಲೈನ್‌ ನೋಂದಣಿಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.


ಮಂಗಳೂರು (ಫೆ.06): ರಾಜ್ಯದ ಚಾರಣಿಗರ ಸ್ವರ್ಗವಾಗಿರುವ ಕುಮಾರ ಪರ್ವತದಲ್ಲಿ ಇನ್ನು ಮುಂದೆ ಚಾರಣ ಮಾಡುವವರಿಗೆ ಆನ್‌ಲೈನ್‌ ನೋಂದಣಿಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಪರ್ವತ ಚಾರಣ ಪಥದಲ್ಲಿ ಜನಜಂಗುಳಿಯಿಂದ ಪರಿಸರ ಹಾನಿ ಭೀತಿ ಎದುರಾಗಿದೆ. ಹೀಗಾಗಿ, ಚಾರಣ ನಿಯಂತ್ರಣ ಸಂಬಂಧ ವರದಿ ಸಲ್ಲಿಸಲು ಸೂಚಿಸಿದ್ದೇನೆ. ಅದರ ಜೊತೆಗೆ ಚಾರಣಕ್ಕೆ ಆನ್ ಲೈನ್ ದಾಖಲಾತಿಗೆ ಕ್ರಮವಹಿಸಲಾಗುತ್ತದೆ. ಕುಮಾರ ಪರ್ವತದಲ್ಲಿ ಸುಮಾರು 20 ಕಿ.ಮೀ ಇರಬಹುದು. ಇಂಥ ಜಾಗದಲ್ಲಿ ಎಷ್ಟು ಜನ ಹೋಗಬಹುದು ಅಂತ ನೋಡಿ ಆನ್ ಲೈನ್ ಮೂಲಕ ನಿಗದಿ ಮಾಡಲಾಗುತ್ತದೆ. ಮಿತಿ ಹಾಕಿ‌ ಚಾರಣಿಗರಿಗೆ ನಾವು ಪಾಸ್ ಗಳನ್ನು ಕೊಡ್ತೇವೆ. ಅದನ್ನ ಮೀರಿ ಯಾರಿಗೂ‌ ಬರಲು ಅವಕಾಶ‌ ಇಲ್ಲ. ಚಾರಣ ನಿಯಂತ್ರಣವನ್ನ ಮಾಡಲೇ ಬೇಕಿದ್ದು, ಅದರ ತುರ್ತು ಅಗತ್ಯವಿದೆ ಎಂದು ಹೇಳಿದರು.

Latest Videos

undefined

ಪರಿಹಾರ ಬಿಡುಗಡೆ ವಿಳಂಬಕ್ಕೆ ಸಚಿವ ಈಶ್ವರ ಖಂಡ್ರೆ ನಿರ್ಲಕ್ಷವೇ ಕಾರಣ: ಭಗವಂತ ಖೂಬಾ

ಕರಾವಳಿ ನಿಯಂತ್ರಣ ವಲಯದಲ್ಲಿ ಹಲವೆಡೆ‌ ಕಟ್ಟಡಗಳ ನಿರ್ಮಾಣ ಆಗಿದೆ. ಈ ಬಗ್ಗೆ‌ ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ವರದಿ ಸಲ್ಲಿಸಲು ಸೂಚಿಸಿದ್ದೇನೆ. ಈ ಭಾಗದಲ್ಲಿ ಮೂರು ಎಕರೆಗಿಂತ ಕಡಿಮೆ ಬೇಸಾಯ ಮಾಡುವ ರೈತರಿದ್ದಾರೆ. ಅವರಿಗೆ‌ ತೊಂದರೆ ಆಗದ ರೀತಿಯಲ್ಲಿ ಅರಣ್ಯ ಒತ್ತುವರಿ ತೆರವಿಗೆ ಸೂಚಿಸಿದ್ದೇನೆ. ಜೊತೆಗೆ‌ ಅರಣ್ಯ ಮತ್ತು‌ ಕಂದಾಯ ಇಲಾಖೆಯ ಜಂಟಿ ಸರ್ವೇ ಆಗಬೇಕಿದೆ. ಅಂಥ ಕಡೆ ಸರ್ವೇ ನಡೆಸಿ ಅರಣ್ಯ‌ ಇಲಾಖೆ ವಶಕ್ಕೆ ಪಡೆಯಲಾಗಿತ್ತದೆ. ಏಕ ಬಳಕೆ ಪ್ಲಾಸ್ಟಿಕ್ ತ್ಯಾಜ್ಯದಿಂದ ಅಪಾರ ಹಾನಿಯಾಗ್ತಿದೆ. ಕರಾವಳಿ ಪ್ರದೇಶಗಳನ್ನ ಪ್ಲಾಸ್ಟಿಕ್ ಮುಕ್ತ ನಗರ ಮಾಡುವ ಗುರಿ ಇದೆ. ರಾಜ್ಯದ ಎಲ್ಲಾ ಚಾರಣ ಪಥಗಳನ್ನ ಆನ್ ಲೈನ್ ದಾಖಲಾತಿ ವ್ಯಾಪ್ತಿಗೆ ತರ್ತೇವೆ. ಏಕಾಏಕಿ ಸಾವಿರಾರು ಜನ ಹೋದ್ರೆ ಇಕ್ಕಟ್ಟಾಗಿ ಸಮಸ್ಯೆ ಆಗುತ್ತದೆ ಎಂದು ಹೇಳಿದರು.

ಅರಗಿನ ಮನೆ ಸ್ಥಳ ಹಿಂದೂಗಳಿಗೆ ಸೇರಿದ್ದು: ರಾಮಾಯಣ ಬಳಿಕ ಮಹಾಭಾರತ ಕೇಸಲ್ಲೂ ಹಿಂದೂಗಳಿಗೆ ಜಯ!

ಕರ್ನಾಟಕ ಅರಣ್ಯ ಪ್ರದೇಶದ ಸಿಆರ್ ಝಡ್ ವಲಯದ ಅಕ್ರಮದ ಬಗ್ಗೆ ಪರಿಶೀಲನೆ ಮಾಡಿದ್ದೇನೆ. ಅಲ್ಲಿನ ಅಕ್ರಮ ಚಟುವಟಿಕೆಗಳ ಬಗ್ಗೆ ವರದಿ ಕೇಳಿದ್ದೇನೆ. ಅಕ್ರಮ ರೆಸಾರ್ಟ್‌ಗಳಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ಹೋಮ್ ಸ್ಟೇ ಗಳಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಲಾಗುತ್ತದೆ. ಅರಣ್ಯ ಉಳಿಸಲು ಹೆಲಿಕಾಪ್ಟರ್ ಬೇಕಾದರೂ ಬಳಕೆ ಮಾಡ್ತೇವೆ. ಕಾಡ್ಗಿಚ್ಚು ನಿಯಂತ್ರಣಕ್ಕೆ ಖಾಸಗಿ ಹೆಲಿಕಾಪ್ಟರ್ ಅವಶ್ಯಕತೆ ಇದ್ದರೆ ಬಳಕೆ ಮಾಡುತ್ತೇವೆ. ಆದರೆ, ನಮ್ಮ‌ ಇಲಾಖೆಗೆ ಪ್ರತ್ಯೇಕ ಹೆಲಿಕಾಪ್ಟರ್ ಅವಶ್ಯಕತೆ ಇಲ್ಲ. ಬೆಳ್ತಂಗಡಿ ಕಳೆಂಜ ಅರಣ್ಯ ಭೂಮಿ ವಿವಾದದಲ್ಲಿ ಸರ್ವೇ ಆಗ್ತಿದೆ. ಆ ಮೇಲೆ ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದರು.

click me!