
ಸಾಮಾಜಿಕ ಜಾಲತಾಣಗಳಲ್ಲಿ ದಿನವೂ ಸಾವಿರಾರು ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಒಂದಕ್ಕಿಂತ ಒಂದು ವೀಡಿಯೋಗಳು ವಿಭಿನ್ನವಾಗಿದ್ದ ಇಂಟರ್‌ನೆಟ್‌ನಲ್ಲಿ ಬ್ರೌಸಿಂಗ್ ಮಾಡುವವರನ್ನು ಸೆಳೆಯುತ್ತಲೇ ಇರುತ್ತದೆ. ಅದೇ ರೀತಿ ಇಲ್ಲೊಂದು ಶ್ವಾನದ ವೀಡಿಯೋ ವೈರಲ್ ಆಗಿದ್ದು, ವೀಡಿಯೋ ನೋಡಿದ ಜನ ಈ ಶ್ವಾನಕ್ಕೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ಕೆಲಸ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಅಂತಹದ್ದೇನಿದೆ ಆ ವೀಡಿಯೋದಲ್ಲಿ.. ಇಲ್ಲಿದೆ ಡಿಟೇಲ್ಸ್.
ಭಾರತದಲ್ಲಿ ದಿನವೊಂದಕ್ಕೆ ಲಕ್ಷಾಂತರ ಜನ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ದರವೂ ಕಡಿಮೆ ಇರುವುದರಿಂದ ರೈಲುಗಳು ಭಾರತದ ಜನರ ಜೀವನಾಡಿಯಾಗಿದೆ. ಹೀಗೆ ರೈಲು ಪ್ರಯಾಣ ಮಾಡುವ ವೇಳೆ ಜನರು ರೈಲಿನ ಬಾಗಿಲಲ್ಲಿ ನಿಂತು ಪ್ರಯಾಣಿಸುತ್ತಾರೆ. ಕೆಲವರು ಚಲಿಸುವ ರೈಲನ್ನು ಹತ್ತಲು ಹೋಗುತ್ತಾರೆ ಇನ್ನು ಕೆಲವರು ಚಲಿಸುವ ರೈಲಿನಿಂದ ಇಳಿಯಲು ಹೋಗಿ ತಮ್ಮ ಜೀವಕ್ಕೆ ಕಂಟಕ ತಂದು ಕೊಡುತ್ತಾರೆ. ರೈಲು ನಿಲ್ದಾಣಗಳಲ್ಲಿ ಇಂತಹ ಅವಘಡಗಳು ನಡೆಯದಂತೆ ನೋಡಿಕೊಳ್ಳಲು ಭದ್ರತಾ ಸಿಬ್ಬಂದಿ ಇದ್ದರೂ ಕೂಡ ಕೆಲವೊಮ್ಮೆ ಅವಘಡಗಳು ನಡೆದು ಹೋಗುತ್ತವೆ. ಆದರೆ ಹೀಗೆ ರೈಲಿನ ಬಾಗಿಲಿನಲ್ಲಿ ನಿಲ್ಲುತ್ತಿರುವ ಜನರನ್ನು ಶ್ವಾನವೊಂದು ರೈಲು ಚಲಿಸಲು ಆರಂಭಿಸುತ್ತಿದ್ದಂತೆ ರೈಲಿನ ಜೊತೆ ಜೊತೆಗೆ ಓಡುತ್ತಾ ಜನ ರೈಲೊಳಗೆ ಹೋಗುವಂತೆ ಮಾಡುತ್ತಿದೆ. ಈ ವೀಡಿಯೋ ಈಗ ಸಾಕಷ್ಟು ವೈರಲ್ ಆಗಿದೆ. ವೀಡಿಯೋ ನೋಡಿದ ಜನ ಈ ಶ್ವಾನಕ್ಕೆ ರೈಲಿನಲ್ಲಿ ರೈಲ್ವೆ ಪೊಲೀಸ್ ಪಡೆಯಲ್ಲಿ ಕೆಲಸ ನೀಡುವಂತೆ ಮನವಿ ಮಾಡ್ತಿದ್ದಾರೆ.
ನಿಮ್ಮನೇ ನೋಡೋರಿಲ್ಲ ಈ ನಾಯಿ ಏಕೆ ಎಂದ ವ್ಯಕ್ತಿ ಸಾಧು ನೀಡಿದ ಉತ್ತರಕ್ಕೆ ಶಾಕ್
ಭಾರತೀಯ ರೈಲ್ವೆ ಅಧಿಕಾರಿ ಅನಂತ್ ರೂಪನಗುಡಿ ಅವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 22 ಸೆಕೆಂಡ್‌ಗಳ ಈ ವೀಡಿಯೋದಲ್ಲಿ ನಾಯಿಯೊಂದು ರೈಲು ಚಲಿಸಲು ನಿಧಾನವಾಗಿ ಆರಂಭಿಸುತ್ತಿದ್ದಂತೆ ರೈಲು ಹಳಿಯಲ್ಲಿ ಓಡುವಾಗ ನಾಯಿ ಪ್ಲಾಟ್‌ಫಾರ್ಮ್‌ನಲ್ಲಿ ಓಡುತ್ತಾ ರೈಲಿನ ಬಾಗಿಲಿನಲ್ಲಿ ನಿಂತವರನ್ನೆಲ್ಲಾ ಬೊಗಳಿ ಒಳ ಹೋಗುವಂತೆ ಮಾಡುತ್ತದೆ. ಜನರಿಲ್ಲದ ಬಾಗಿಲಿನತ್ತ ಕೇರ್ ಮಾಡದೇ ಮುಂದೆ ಹೋಗುವ ಶ್ವಾನ, ರೈಲಿನ ಬಾಗಿಲಿನಲ್ಲಿ ಕುಳಿತಿರುವವರನ್ನು ರೈಲಿನ ಜೊತೆ ಜೊತೆಯೇ ಓಡಿಸಿಕೊಂಡು ಹೋಗುತ್ತಿದೆ. ಈ ವೇಳೆ ನಾಯಿಯ ನೋಡಿ ಜನ ರೈಲೊಳಗೆ ಹೋದರೆ ಮತ್ತೆ ಕೆಲವರು ರೈಲಿನ ಮೆಟ್ಟಿಲಿನಿಂದ ಕಾಲು ಮೇಲೆತ್ತುತ್ತಿದ್ದಾರೆ. ರೈಲಿನ ಜೊತೆ ಜೊತೆಯೇ ಓಡುವ ಈ ಶ್ವಾನ ಎಲ್ಲಿ ಕೆಳಗೆ ಬೀಳುತ್ತದೋ ಎಂದು ಜನ ಭಯಪಟ್ಟರೇ ಶ್ವಾನ ಮಾತ್ರ ಜಾಗರೂಕ ಹೆಜ್ಜೆ ಇಡುತ್ತಾ ಜನರನ್ನ ಓಡಿಸುತ್ತದೆ. ಎಲ್ಲಿಯೂ ಶ್ವಾನ ಮಾತ್ರ ಅಯತಪ್ಪುವುದಿಲ್ಲ, ತನ್ನ ಸುರಕ್ಷತೆಯ ಜೊತೆ ಜೊತೆಗೆ ಜನರ ಸುರಕ್ಷತೆಯತ್ತ ಗಮನ ಹರಿಸುತ್ತಿದೆ ಈ ಶ್ವಾನ.
ನಾಯಿಯಾದರೇನು, ಮಾತೃ ಮಮತೆ ಕಡಿಮೆಯಾಗುತ್ತಾ? ಹೊಟ್ಟೆ ತುಂಬಿಸಲು ತಾಯಿ ಹರಸಾಹಸ!: ಭಾವುಕ ವೀಡಿಯೋ ವೈರಲ್
ಈ ಶ್ವಾನದ ವೀಡಿಯೋವನ್ನು ಒಂದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ನಾಯಿಯನ್ನು ರೈಲ್ವೆಗೆ ಸೇರಿಸುವಂತೆ ಕೆಲವರು ಮನವಿ ಮಾಡ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.