
ಕಾಝಿರಂಗ(ಜ.07) ಭಾರತದ ಜನಪ್ರಿಯ ವನ್ಯಮೃಗಗಳ ಕಾಣ ಕಾಝಿರಂಗ ರಾಷ್ಟ್ರೀಯ ಅಭಯಾರಣ್ಯ. ಇಲ್ಲಿ ಘೇಂಡಾಮೃಗಗಳು ಸೇರಿದಂತೆ ಹಲವು ಪ್ರಾಣಿ ಪಕ್ಷಗಳು ಕಾಣಸಿಗುತ್ತದೆ. ಹೀಗಾಗಿ ಹಲವು ಪ್ರವಾಸಿಗರು ಆ ತಾಣಕ್ಕೆ ತೆರಳುತ್ತಾರೆ. ಹೀಗೆ ಪ್ರವಾಸಕ್ಕೆ ಬಂದ ಕುಟುಂಬ ಸಪಾರಿಗೆ ತೆರಳಿದೆ. ತೆರೆದ ಜೀಪಿನಲ್ಲಿ ಸಫಾರಿ ಮಾಡುತ್ತಾ ಸಾಗಿದ ಪ್ರವಾಸಿಗರಿಗೆ ಘೇಂಡಾಮೃಗಗಳ ಹಿಂಡು ಕಾಣಸಿಕ್ಕಿದೆ. ಪ್ರವಾಸಿಗರು ಕುಳಿತದಲ್ಲಿಂದಲೇ ಕುಣಿದಿದ್ದಾರೆ. ಆದರೆ ಘೇಂಡಾಮೃಗಗಳ ಗುಂಪು ದಾಳಿಗೆ ಸಜ್ಜಾಗಿತ್ತು. ವಾಹನದ ಮೇಲೆ ದಾಳಿಗೆ ಸಜ್ಜಾಗುತ್ತಿದ್ದಂತೆ ಸಫಾರಿ ಸಿಬ್ಬಂದಿಗಳು ವೇಗವಾಗಿ ಜೀಪು ತಿರುಗಿಸಿ ಸಾಗಿಸಿದ್ದಾರೆ. ಈ ವೇಳೆ ತಾಯಿ ಹಾಗೂ ಮಗಳು ದಾಳಿಗೆ ಸಜ್ಜಾದ ಘೇಂಡಾಮೃಗಗಳ ನಡುವೆ ಬಿದ್ದಿದ್ದಾರೆ. ಈ ಘಟನೆ ವಿಡಿಯೋ ಲಭ್ಯವಾಗಿದೆ. ಕೂದಲೆಳೆ ಅಂತರದಲ್ಲಿ ತಾಯಿ ಹಾಗೂ ಮಗಳನ್ನು ರಕ್ಷಣೆ ಮಾಡಲಾಗಿದೆ.
ಅಸ್ಸಾಂನಲ್ಲಿರುವ ಕಾಝಿರಂಗ ನ್ಯಾಷನಲ್ ಪಾರ್ಕ್ ಹಲವು ವನ್ಯ ಜೀವಿಗಳ ತಾಣವಾಗಿದೆ. ಪ್ರತಿ ದಿನ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಬಗೋರಿ ರೇಂಜ್‌ನ ಸಫಾರಿಯಲ್ಲಿ ಪ್ರವಾಸಿಗರು ತೆರಳಿದ್ದಾರೆ. ತೆರೆದ ಜೀಪಿನಲ್ಲಿ ಹಲವು ಪ್ರವಾಸಿಗರು ವನ್ಯ ಮೃಗಗಳ ವೀಕ್ಷಣೆಗೆ ತೆರಳಿದ್ದಾರೆ. ಪ್ರಾಣಿ ಪಕ್ಷಿಗಳನ್ನು ವೀಕ್ಷಿಸುತ್ತಾ ತೆರಳುತ್ತಿದ್ದ ಪ್ರವಾಸಿಗರ ವಾಹನಗಳು ಸಂಕೀರ್ಣ ಜಾಗಕ್ಕೆ ಬರುತ್ತಿದ್ದಂತೆ ಘೇಂಡಾಮೃಗಗಳ ಗುಂಪು ಪ್ರತ್ಯಕ್ಷವಾಗಿದೆ.
ಪ್ರವಾಸಿಗರಿದ್ದಾಗಲೇ ಸಫಾರಿ ವಾಹನವನ್ನು ಮೇಲೆತ್ತಿದ್ದ ಒಂಟಿ ಸಲಗ: ವೀಡಿಯೋ ವೈರಲ್
ಪ್ರವಾಸಿಗರು ಘೇಂಡಾಮೃಗಗಳನ್ನು ನೋಡಿ ಪುಳಕಿತರಾಗಿದ್ದಾರೆ. ಘೇಂಡಾಮೃಗಗಳ ಗುಂಪು ಪ್ರವಾಸಿಗ ವಾಹನಗಳನ್ನು ನೋಡುತ್ತಿದ್ದಂತೆ ರೊಚ್ಚಿಗೆದ್ದಿದೆ. ತಕ್ಷಣವೇ ಘೇಂಡಾಮೃಗ ದಾಳಿಗೆ ಸಜ್ಜಾಗಿದೆ.ಪ್ರವಾಸಿಗರ ವಾಹನಗಳ ಮೇಲೆ ದಾಳಿ ಮಾಡಲು ಮುಂದಾಗಿದೆ. ಹೀಗಾಗಿ ಎಲ್ಲಾ ಪ್ರವಾಸಿಗರ ವಾಹನ ನಿಂತಲ್ಲೇ ನಿಂತಿದೆ. ಇತ್ತ ಘೇಂಡಾಮೃಗಗಳು ಕಾಲು ಕೆರೆದು ದಾಳಿಗೆ ಮುಂದಾಗಿತ್ತು. ಇದರ ನಡುವೆ ಒಂದು ವಾಹನದ ಮೇಲೆ ದಾಳಿಗೆ ಮುಂದಾದಾಗ, ವಾಹನವನ್ನು ರಿವರ್ಸ್ ಮಾಡಲಾಗಿದೆ. ಅಷ್ಟರಲ್ಲೇ ಮುಂದೆ ನಿಂತಿದ್ದ ಕೆಲ ವಾಹನಗಳು ಅತೀ ವೇಗವಾಗಿ ತಿರುಗಿಸಿ ಸಾಗಿದೆ. ಆಧರೆ ವೇಗವಾಗಿ ತಿರುಗಿಸಿದ ಕಾರಣ ತೆರೆದ ಸಫಾರಿ ಜೀಪಿನಲ್ಲಿದ್ದ ತಾಯಿ ಹಾಗೂ ಮಗಳು ಇಬ್ಬರು ನೆಲಕ್ಕೆ ಬಿದ್ದಿದ್ದಾರೆ.
ಬಿದ್ದ ರಭಸದಲ್ಲಿ ಇಬ್ಬರಿಗೂ ಸಣ್ಣಪುಟ್ಟ ಗಾಯವಾಗಿದೆ. ತಕ್ಷಣ ಮೇಲೇಳಲು ಸಾಧ್ಯವಾಗಿಲ್ಲ. ಇತ್ತ ಘೇಂಡಾಮೃಗ ದಾಳಿಗೆ ಮುನ್ನುಗ್ಗಿ ಬಂದಿದೆ. ಚೀರಾಟ, ಕೂಗಾಟ ಶುರುವಾಗಿದೆ. ಬಿದ್ದಲ್ಲಿಂದ ಎದ್ದ ತಾಯಿ ಮಗಳನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಇಬ್ಬರಿಗೂ ಸರಿಯಾಗಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ಸಹಾಯಕ್ಕಾಗಿ ಕೂಗಿ ಕೊಂಡಿದ್ದಾರೆ. ಆದರೆ ಹಿಂದೆ ಹಿದ್ದ ಸಫಾರಿ ಜೀಪ್ ತಕ್ಷಣ ರಿವರ್ಸ್ ಗೇರ್ ಮೂಲಕ ಆಗಮಿಸಿ ತಾಯಿ ಹಾಗೂ ಮಗಳು ಇಬ್ಬರನ್ನು ರಕ್ಷಿಸಿದೆ. ಇತ್ತ ಘೇಂಡಾಮೃಗ ಇನ್ನೇನು ಹತ್ತಿರ ಬರಬೇಕು ಅನ್ನುವಷ್ಟರಲ್ಲಿ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಹೀಗಾಗಿ ತಾಯಿ ಹಾಗೂ ಮಗಳು ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ವಿಡಿಯೋ ಲಭ್ಯವಾಗಿದೆ. ಇದರ ಬೆನ್ನಲ್ಲೇ ಕಾಝಿರಂಗ ರಾಷ್ಟ್ರೀಯ ಉದ್ಯಾನವನ ಅಧಿಕಾರಿಗಳು ಪ್ರಕರಣದ ತನಿಖೆಗೆ ಮುಂದಾಗಿದ್ದಾರೆ. ಪ್ರವಾಸಿಗರು ಸಿಬ್ಬಂದಿಗಳ ಮೇಲೆ ಆರೋಪ ಮಾಡಿದ್ದಾರೆ. ಘೇಂಡಾಮೃಗದ ಬಳಿಕವಾಹನ ನಿಲ್ಲಿಸಲಾಗಿತ್ತು. ಬಳಿಕ ಯಾವುದೇ ಸೂಚನೆ ನೀಡಲಿಲ್ಲ. ಏಕಾಏಕಿ ಒಂದೇ ರಭಸದಲ್ಲಿ ವಾಹನ ತಿರುಗಿಸಿದ್ದಾರೆ. ನಾವು ಘೇಂಡಾಮೃಗಗಳನ್ನು ನೋಡುತ್ತಾ ನಿಂತಿದ್ದೇವು. ಸರಿಯಾಗಿ ಕಾಣದ ಕಾರಣ ಎದ್ದು ನಿಂತು ಪ್ರಾಣಿಗಳನ್ನು ವಕ್ಷಿಸುತ್ತಿದ್ದೆವು. ಕನಿಷ್ಠ ಸೂಚನೆ ನೀಡಿಲ್ಲ. ಜೊತೆಗೆ ಅತೀ ವೇಗವಾಗಿ ಚಲಾಯಿಸಿದ್ದೇ ಈ ಅವಘಡಕ್ಕೆ ಕಾರಣ ಎಂದು ದೂರಿದ್ದಾರೆ. ಇತ್ತ ಸಿಬ್ಬಂದಿಗಳು ಪ್ರವಾಸದ ವೇಳೆ ಸಫಾರಿ ಮಾಡುವಾಗ ಪ್ರವಾಸಿಗರು ಹೇಗೆ ಇರಬೇಕು, ಏನು ಮಾಡಬೇಕು, ಮಾಡಬಾರದು ಅನ್ನೋ ಮಾರ್ಗಸೂಚಿ ಫಲಕಗಳು ಎಲ್ಲಾ ಕಡೆ ಇದೆ. ಈ ಕುರಿತು ಆರಂಭದಲ್ಲೇ ಸೂಚನೆ ನೀಡಲಾಗುತ್ತದೆ. ಹೀಗಾಗಿ ಪ್ರವಾಸಿಗರು ವನ್ಯ ಪ್ರಾಣಿಗಳ ವೀಕ್ಷಣೆ ಮಾಡಿ ಆನಂದಿಸಿ, ಮೊಬೈಲ್ ಹಿಡಿದು ಫೋಟೋ, ವಿಡಿಯೋ ಸೆರೆಹಿಡಿಯಲು ಹೋದಾಗ ಈ ರೀತಿ ಆಗಿದೆ ಎಂದಿದ್ದಾರೆ.
ಬನ್ನೇರುಘಟ್ಟ ಸಫಾರಿ ಬಸ್‌ನ ಕಿಟಕಿ ಹಿಡಿದು ನೇತಾಡಿದ ಚಿರತೆ: ಕಕ್ಕಾಬಿಕ್ಕಿಯಾದ ಪ್ರವಾಸಿಗರು!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.