Travel Tips : ಜೋಗ ಜೊತೆ ಎಷ್ಟು ಅದ್ಭುತ ಜಲಪಾತಗಳಿವೆ ಭಾರತದಲ್ಲಿ ಗೊತ್ತಾ?

By Suvarna NewsFirst Published Sep 12, 2022, 2:30 PM IST
Highlights

ಪ್ರವಾಸದ ಹುಚ್ಚು ಅನೇಕರಿಗೆ ಇರುತ್ತದೆ. ಸುಂದರ ಸ್ಥಳಗಳನ್ನು ನೋಡಲು ವಿದೇಶಕ್ಕೆ ಹೋಗ್ತಾರೆ. ಆದ್ರೆ ನಮ್ಮ ದೇಶದಲ್ಲಿಯೇ ಸಾಕಷ್ಟು ಪ್ರವಾಸಿ ತಾಣಗಳಿವೆ. ಸೆಪ್ಟೆಂಬರ್ – ಅಕ್ಟೋಬರ್ ನಲ್ಲಿ ವೀಕ್ಷಣೆ ಮಾಡಬಹುದಾದ ಕೆಲ ಸುಂದರ ಜಲಪಾತಗಳ ವಿವರ ಇಲ್ಲಿದೆ.
 

ಭಾರತ ಪ್ರವಾಸಿ ತಾಣಗಳ ನೆಲೆಬೀಡು. ಇಲ್ಲಿನ ಪ್ರಕೃತಿ ವಿದೇಶಿಗರನ್ನು ಸೆಳೆಯುತ್ತದೆ. ಭಾರತದ ಕೆಲವೊಂದು ಪ್ರವಾಸಿ ತಾಣಗಳು ಮನಸ್ಸಿಗೆ ಮುದ ನೀಡುತ್ತವೆ. ಮನಸ್ಸಿನ ಎಲ್ಲ ನೋವನ್ನು ಮರೆಸಿ ಶಾಂತಿ ನೀಡುವ ಶಕ್ತಿ ಪ್ರಕೃತಿಗಿದೆ. ಮಳೆಗಾಲವೆಂದ್ರೆ ಬಹುತೇಕ ಎಲ್ಲರಿಗೂ ಇಷ್ಟ. ಎಲ್ಲೆಡೆ ಹಸಿರು, ಧುಮ್ಮುಕ್ಕಿ ಹರಿಯುವ ಜಲಧಾರೆಯನ್ನು ಪ್ರತಿಯೊಬ್ಬರೂ ಕಣ್ತುಂಬಿಕೊಳ್ಳಲು ಬಯಸ್ತಾರೆ. ಭಾರತದಲ್ಲಿರುವ ಜಲಪಾತಗಳು ಮತ್ತು ಸುಂದರವಾದ ಕಣಿವೆಗಳು ಪ್ರವಾಸಿಗರನ್ನು ಸ್ವರ್ಗದ ಅನುಭವ ನೀಡುತ್ತದೆ. ಇಂದು ನಾವು ಭಾರತದಲ್ಲಿರುವ ಪ್ರಸಿದ್ಧ ಜಲಪಾತಗಳ ಬಗ್ಗೆ ಮಾಹಿತಿ ನೀಡ್ತೇವೆ. ಸೆಪ್ಟೆಂಬರ್ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಒಳ್ಳೆಯ ಸಮಯವಾಗಿದ್ದು, ನೀವೂ ಪ್ರವಾಸದ ಪ್ಲಾನ್ ಮಾಡ್ತಿದ್ದರೆ ಆ ಪ್ರದೇಶಗಳಿಗೆ ಹೋಗಿ ಬನ್ನಿ.

ಭಾರತ (India) ದಲ್ಲಿರುವ ಪ್ರಸಿದ್ಧ ಜಲಪಾತಗಳು (Waterfalls) : 

ಜೋಗ ಜಲಪಾತ (Jog Waterfall ) ( ಕರ್ನಾಟಕ ) : ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತವನ್ನು ನೋಡಲು ಎರಡು ಕಣ್ಣು ಸಾಲದು. ಶರಾವತಿ ನದಿಯಲ್ಲಿ ಹುಟ್ಟುವ ಜಲಪಾತ ಇದು. ಜೋಗ ಜಲಪಾತ, ಭಾರತದ ಎರಡನೇ ಅತಿ ದೊಡ್ಡ ಜಲಪಾತವಾಗಿದೆ. ಯುನೆಸ್ಕೋ ಪಟ್ಟಿಯಲ್ಲಿಯೂ ಜೋಗ ಜಲಪಾತ ಸ್ಥಾನ ಪಡೆದಿದೆ. ಇದಕ್ಕೆ ಗೇರುಸೊಪ್ಪಿನ ಜಲಪಾತ ಎಂದೂ ಕರೆಯಲಾಗುತ್ತದೆ.  ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಪ್ರವಾಸಕ್ಕೆ ಅಧ್ಬುತ ತಾಣ ಇದು. ಈ ಜಲಪಾತ 1115 ಅಡಿ ಎತ್ತರದಲ್ಲಿದೆ. ಒಂದೇ ಸ್ಥಳದಲ್ಲಿ ನಾಲ್ಕು ಜಲಪಾತ ನೋಡುವ ಅವಕಾಶ ನಮಗೆ ಇಲ್ಲಿ ಸಿಗುತ್ತದೆ. ಇಲ್ಲಿ ರಾಜಾ, ರಾಣಿ, ರಾಕೆಟ್, ರೋರ್ ಹೆಸರಿನ ನಾಲ್ಕು ಜಲಪಾತವನ್ನು ನೋಡಬಹುದಾಗಿದೆ. 

TRAVEL TIPS: ವಿಮಾನ ಪ್ರಯಾಣ ಆರಾಮದಾಯಕವಾಗಿಸಲು ಸಿಂಪಲ್ ಟ್ರಿಕ್ಸ್‌

ಕೇರಳದ ಅತಿರಪಿಲ್ಲಿ ಜಲಪಾತ (Athirappilly Waterfall) : ಅತಿರಪಿಲ್ಲಿ ಜಲಪಾತ ಕೇರಳದಲ್ಲಿದೆ.  ತ್ರಿಶೂರ್‌ನ ವಝುಚಾಲ್‌ನ ದಟ್ಟವಾದ ಕಾಡುಗಳಲ್ಲಿ ಈ ಜಲಪಾತವನ್ನು ನೋಡಬಹುದು. ಇದು ಚಾಲಕುಡಿ ನದಿಯಿಂದ ಹುಟ್ಟುತ್ತದೆ. ಈ ಜಲಪಾತ ಸುಮಾರು 80 ಅಡಿ ಎತ್ತರದಲ್ಲಿದೆ. ಭಾರತದ ಅತ್ಯಂತ ಸುಂದರವಾದ ಜಲಪಾತಗಳಲ್ಲಿ ಅತಿರಪಿಲ್ಲಿ ಜಲಪಾತ ಒಂದು. ಅನೇಕ ಸಿನಿಮಾ ಶೂಟಿಂಗ್ ಗಳು ಇಲ್ಲಿ ನಡೆಯುತ್ತವೆ. ಕೇರಳದ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿರುವ ಇದನ್ನು ಒಮ್ಮೆಯಾದ್ರೂ ನೋಡ್ಲೇಬೇಕು. 

ಗೋವಾದ (Goa) ದೂಧಸಾಗರ ಜಲಪಾತ :  ವಿಶ್ವದ 227 ನೇ ಅತಿ ಎತ್ತರದ ಜಲಪಾತ ಎಂದು ಗೋವಾದ ದೂಧಸಾಗರ ಜಲಪಾತನವನ್ನು ಕರೆಯಲಾಗುತ್ತದೆ. ಗೋವಾದ ಅತ್ಯಂತ ವಿಶೇಷ ಮತ್ತು ಜನಪ್ರಿಯ ಸ್ಥಳಗಳಲ್ಲಿ ಈ ಜಲಪಾತ ಒಂದಾಗಿದೆ. 1,020 ಮೀಟರ್ ಎತ್ತರದಲ್ಲಿ ದೂಧಸಾಗರ ಜಲಪಾತವಿದೆ. ಮಳೆಗಾಲದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲೂ ಜನರು ಇಲ್ಲಿಗೆ ಬಂದು ಈ ಪ್ರವಾಸಿ ತಾಣದ ಸೌಂದರ್ಯವನ್ನು ಕಣ್ತುಂಬಿಕೊಳ್ತಾರೆ. ಗೋವಾ ಬೀಚ್ ಸೌಂದರ್ಯ ಮಾತ್ರ ಸವಿದವರು ಈ ಬಾರಿ ದೂಧಸಾಗರ ಜಲಪಾತ ನೋಡಲು ಮರೆಯಬೇಡಿ.

ಆಂಧ್ರ ಪ್ರದೇಶದ (Andhra Pradesh) ತಲಕೋನಾ ಜಲಪಾತ : ಆಂಧ್ರಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ತಲಕೋನಾ ಜಲಪಾತ ಕೂಡ ಒಂದು. ಇದು  ಮಣ್ಣಿನಲ್ಲಿರುವ ಸುಂದರ ಜಲಪಾತವಾಗಿದೆ. ತಲಕೋನ ಜಲಪಾತದ ಎತ್ತರ ಸುಮಾರು 70 ಅಡಿ. ಆಂಧ್ರಪ್ರದೇಶದ ಅತಿ ಎತ್ತರದ ಜಲಪಾತ ಎಂದೂ ತಲಕೋನ ಜಲಪಾತನವನ್ನು ಕರೆಯಲಾಗುತ್ತದೆ. ಇದ್ರ ಚಿಲುಮೆ ನೀರು ಅನೇಕ ಔಷಧಿ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರ್ತಾರೆ.

ವಿದೇಶದಲ್ಲಿ ಮಜಾ ಮಾಡ್ಬೇಕಂದ್ರೆ ಈ Loan ಗೆ ಅಪ್ಲೈ ಮಾಡಿ

ಮೇಘಾಲಯ ನೊಹಶಾಂಗ್ಥಿಯಾಂಗ್ ಜಲಪಾತ :  ಮೇಘಾಲಯದ ಮೌಸ್ಮೈ ಗ್ರಾಮದಲ್ಲಿ ಇರುವ ಈ ಜಲಪಾತವು ದೇಶದ ನಾಲ್ಕನೇ ಅತಿ ಎತ್ತರದ ಜಲಪಾತವಾಗಿದೆ. ಮೇಘಾಲಯದಲ್ಲಿರುವ ಈ ಸುಂದರ ಜಲಪಾತವನ್ನು ಮೌಸಮೈ ಜಲಪಾತ ಎಂದೂ ಕರೆಯುತ್ತಾರೆ. 

 


 

click me!