ಸ್ಪೈಡರ್‌ಮ್ಯಾನ್ ಸಾಹಸ... ಮುಂಬೈ ಲೋಕಲ್ ಟ್ರೈನೊಳಗಿನ ವಿಡಿಯೋ ವೈರಲ್

Published : Oct 14, 2022, 05:02 PM IST
ಸ್ಪೈಡರ್‌ಮ್ಯಾನ್ ಸಾಹಸ... ಮುಂಬೈ ಲೋಕಲ್ ಟ್ರೈನೊಳಗಿನ ವಿಡಿಯೋ ವೈರಲ್

ಸಾರಾಂಶ

ಕೆಲ ದಿನಗಳ ಹಿಂದೆ ಮುಂಬೈ ಲೋಕಲ್ ಟ್ರೈನ್‌ನಲ್ಲಿ ಹೆಣ್ಣು ಮಕ್ಕಳು ಸೀಟಿಗಾಗಿ ಬಡಿದಾಡಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ನಡುವೆ ಮುಂಬೈ ಲೋಕಲ್ ಟ್ರೈನ್ ಒಳಗೆ ತನ್ನ ಸೀಟು ಬಳಿ ಹೋಗಲು ಯುವಕನೋರ್ವ ಮಾಡುತ್ತಿರುವ ಸಾಹಸದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

ಮುಂಬೈ: ಕೆಲ ದಿನಗಳ ಹಿಂದೆ ಮುಂಬೈ ಲೋಕಲ್ ಟ್ರೈನ್‌ನಲ್ಲಿ ಹೆಣ್ಣು ಮಕ್ಕಳು ಸೀಟಿಗಾಗಿ ಬಡಿದಾಡಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ನಡುವೆ ಮುಂಬೈ ಲೋಕಲ್ ಟ್ರೈನ್ ಒಳಗೆ ತನ್ನ ಸೀಟು ಬಳಿ ಹೋಗಲು ಯುವಕನೋರ್ವ ಮಾಡುತ್ತಿರುವ ಸಾಹಸದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

ತುಂಬಿ ತುಳುಕುತ್ತಿರುವ ರೈಲಿನಲ್ಲಿ ಪ್ರಯಾಣಿಸುವುದು ಸುಲಭದ ಮಾತಲ್ಲ ಸೀಟು ಸಿಗದವರು ನಡೆದಾಡುವ ಜಗದಲ್ಲೇ ಮಲಗಿಕೊಳ್ಳುತ್ತಾರೆ ಇದರಿಂದ ಸೀಟಿದ್ದವರು ಅತ್ತಿತ್ತ ಹೋಗಲು ಕಷ್ಟ ಪಡುವಂತಾಗುತ್ತದೆ. ಅದೇ ರೀತಿ ಇಲ್ಲೊಬ್ಬ ತನ್ನ ಸೀಟಿನ ಬಳಿ ಹೋಗಲು ರೈಲಿನ ಕಂಬಿ ಹಿಡಿದು ನೇತಾಡುತ್ತಾ ಮುಂದೆ ಸಾಗುವಂತಹ ಸ್ಥಿತಿ ಬಂದಿದೆ. ಈ ವಿಡಿಯೋ ವೈರಲ್ ಆಗಿದ್ದು 40 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

ವಿಡಿಯೋದಲ್ಲಿ ಕಾಣಿಸುವಂತೆ ರೈಲೇರಿ ಒಳಬಂದ ಯುವಕನಿಗೆ ಜನರು ನಿಲ್ಲಬೇಕಾದ ಜಾಗದಲ್ಲಿ ಹೆಂಗಸರೆಲ್ಲಾ ಉದ್ದಕ್ಕೆ ಮಲಗಿದ್ದು ಕಾಲಿಟ್ಟು ಮುಂದೆ ಸಾಗಲು ಆಗದಂತಹ ಸ್ಥಿತಿ ಕಂಡು ಬಂದಿದೆ. ಇದರಿಂದ ಆತ ಒಂದು ರೈಲಿನ ಒಳಗೆ ಮೇಲಿದ್ದ ಕಂಬಿಗಳಲ್ಲಿ ನೇತಾಡುತ್ತಾ ಸೀಟಿನ ಮೇಲ್ಭಾಗದಲ್ಲಿ ಒಂದೊಂದೆ ಕಾಲಿಡುತ್ತಾ ಮುಂದೆ ಹೋಗಿದ್ದಾನೆ. ಈ ವೇಳೆ ಅಲ್ಲಿ ಮಲಗಿದ್ದ ಮಹಿಳೆಯರೆಲ್ಲಾ ನಗುತ್ತಾ ಬೊಬ್ಬೆ ಹೊಡೆಯುತ್ತಾರೆ. 

ಗೌರಂಗ್ ಭರ್ದಾ ಎಂಬುವವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು ಇದು ಭಾರತದ ಸ್ಪೈಡರ್‌ಮ್ಯಾನ್ (Spiderman) ಎಂದು ಬರೆದುಕೊಂಡಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಕೆಲವರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದು, ಜನರಲ್ ಕೆಟಗರಿಯ ಯುವಕನೋರ್ವ ತನ್ನ ಸೀಟು ಹಿಡಿಯಲು ಪ್ರಯತ್ನಿಸುತ್ತಿದ್ದಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ತಮಾಷೆ ಎನಿಸಿದರು ಇದು ಬೇಸರದ ವಿಚಾರ ಯಾವಾಗ ಈ ಪರಿಸ್ಥಿತಿ ಬದಲಾಗುವುದೋ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಲೋಕಲ್‌ ಟ್ರೇನ್‌ನಲ್ಲಿ ಸೀಟಿಗಾಗಿ ಫೈಟು, ಜುಟ್ಟು ಹಿಡ್ಕೊಂಡು ಬಡಿದಾಡಿಕೊಂಡ್ರು ಹೆಣ್ಮಕ್ಳು!

ಸಾಮಾನ್ಯವಾಗಿ ಮುಂಬೈನ ಲೋಕಲ್ ರೈಲುಗಳು (Mumbai Local Train) ಯಾವಾಗಲೂ ಕಾಲು ಇಡಲು ಸಾಧ್ಯವಾಗದಷ್ಟು ಜನಸಂದಣಿಯಿಂದ ತಂಬಿರುತ್ತದೆ. ಇದೇ ಕಾರಣಕ್ಕೆ ಆ ರೈಲುಗಳು ಕುಖ್ಯಾತಿಯನ್ನು ಪಡೆದಿವೆ. ಈ ಲೋಕಲ್‌ ಟ್ರೈನ್‌ ಹತ್ತಲು ಜನ ಪಟ್ಟ ಪಾಡನ್ನು ಅನೇಕರು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹೇಳಿಕೊಂಡಿದ್ದನ್ನು ನೀವು ನೋಡಿರಬಹುದು. ಅದನ್ನೇರಿ ಪ್ರಯಾಣಿಸುವುದೇ ಮುಂಬೈನ ಅನೇಕ ಜನರ ದೈನಂದಿನ ಸಾಹಸವಾಗಿದೆ. ಅಂತಹ ಪರಿಸ್ಥಿತಿ ಇರುವಂತಹ ರೈಲಿನಲ್ಲಿ ವ್ಯಕ್ತಿಯೊಬ್ಬ ಲಾಗೇಜ್‌ ಇಡುವಂತಹ ಸ್ಥಳದಲ್ಲಿ ಹಾಯಾಗಿ ಯಾವ ಚಿಂತೆಯೂ ಇಲ್ಲದೇ ನಿದ್ರಿಸುತ್ತಿರುವ ಫೋಟೋವೊಂದು (Photo) ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಫೋಟೋದಲ್ಲಿ ಕಾಣಿಸುವಂತೆ ರೈಲಿನ ಲಾಗೇಜ್‌ ಇಡುವಂತಹ ಸ್ಥಳದಲ್ಲಿ ಜೀನ್ಸ್‌ ಪ್ಯಾಂಟ್ ಹಾಗೂ ಶರ್ಟ್ ಧರಿಸಿರುವ ವ್ಯಕ್ತಿಯೊಬ್ಬ ಬಟ್ಟೆಯೊಂದರಲ್ಲಿ ತನ್ನ ಮುಖವನ್ನು ಮುಚ್ಚಿಕೊಂಡು ಯಾರಿಗೂ ಕ್ಯಾರೇ ಎನ್ನದಂತೆ ನಿದ್ರೆಗೆ ಜಾರಿದ್ದಾನೆ. ಇದನ್ನು ನೋಡಿದ ರೈಲಿನಲ್ಲಿ ಪ್ರಯಾಣಿಸುವ ಸಹ ಪ್ರಯಾಣಿಕನೋರ್ವ ಈತನ ಫೋಟೋ ತೆಗೆದು ಸಾಮಾಜಿಕ ಜಾಲತಾಣವಾದ (Social Media) ರೆಡಿಟ್‌ನಲ್ಲಿ ಹಾಕಿದ್ದಾನೆ. ಈತನನ್ನು ನೋಡಿ ಸ್ವಲ್ಪ ಅಸೂಯೆಯಾಗುತ್ತಿದೆ ಎಂದು ಆತ ಬರೆದುಕೊಂಡಿದ್ದಾನೆ. 

ಪ್ರೀತಿಗೆ ಬಡತನವಿಲ್ಲ... ಮುಂಬೈ ಲೋಕಲ್ ರೈಲೊಳಗಿನ ಸುಂದರ ದೃಶ್ಯ ವೈರಲ್‌

ಕನಿಷ್ಠ 2,342 ರೈಲುಗಳು ಮುಂಬೈ ನಗರ ಜಾಲದಲ್ಲಿ ಸಂಚರಿಸುತ್ತವೆ. 390 ಕಿಲೋಮೀಟರ್ ದೂರದಲ್ಲಿ ಪ್ರತಿದಿನ ಸುಮಾರು 7.5 ಮಿಲಿಯನ್ ಪ್ರಯಾಣಿಕರನ್ನು ಸಾಗಿಸುತ್ತವೆ. ಮುಂಬೈ (Mumbai) ಸ್ಥಳೀಯ ರೈಲಿನ ದೈನಂದಿನ ಪ್ರಯಾಣಿಕರು ಭಾರತೀಯ ರೈಲ್ವೆಯ ದೈನಂದಿನ ಪ್ರಯಾಣಿಕರ ಸುಮಾರು 40 ಪ್ರತಿಶತವನ್ನು ಹೊಂದಿದ್ದಾರೆ. ಈ ಸ್ಥಳೀಯ ರೈಲುಗಳನ್ನು ಮುಂಬೈನ ಲೈಫ್‌ಲೈನ್ ಎಂದೇ ಕರೆಯಲಾಗುತ್ತದೆ.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹಿರಿಯ ನಾಗರಿಕರು, 45+ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೆ; ಇಲ್ಲಿದೆ ಸೂಪರ್ ಅಪ್‌ಡೇಟ್
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?