ಪ್ರಪಂಚದ ಅತ್ಯಂತ ಆಕರ್ಷಣಿಯ ನಗರಗಳಿವು: ಭಾರತದ ಯಾವ ನಗರಿ ಪಟ್ಟಿಯಲ್ಲಿದೆ

By Anusha Kb  |  First Published Dec 15, 2024, 7:49 PM IST

ಯುರೋಮಾನಿಟರ್ ಇಂಟರ್‌ನ್ಯಾಶನಲ್‌ನ ಟಾಪ್ 100 ಸಿಟಿ ಡೆಸ್ಟಿನೇಶನ್ಸ್ ಇಂಡೆಕ್ಸ್ 2024 ರ ಪ್ರಕಾರ, ಪ್ಯಾರಿಸ್ ಸತತ ನಾಲ್ಕನೇ ಬಾರಿಗೆ ವಿಶ್ವದ ಅತ್ಯಂತ ಆಕರ್ಷಕ ನಗರವಾಗಿದೆ. ಭಾರತದ ರಾಜಧಾನಿ ದೆಹಲಿ 74ನೇ ಸ್ಥಾನ ಪಡೆದಿದ್ದು, ಈ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ನಗರಿ ಎನಿಸಿದೆ. 


ಜಾಗತಿಕ ಮಾರುಕಟ್ಟೆ ಸಂಶೋಧನಾ ಕಂಪನಿಯಾದ ಯುರೋಮಾನಿಟರ್ ಇಂಟರ್‌ನ್ಯಾಶನಲ್ ಇತ್ತೀಚೆಗೆ ತನ್ನ ಟಾಪ್ 100 ಸಿಟಿ ಡೆಸ್ಟಿನೇಶನ್ಸ್ ಇಂಡೆಕ್ಸ್ 2024 ಅನ್ನು ಬಿಡುಗಡೆ ಮಾಡಿದೆ. ಇದು ಜಗತ್ತಿನಾದ್ಯಂತ ಅತ್ಯಂತ ಆಕರ್ಷಕವಾಗಿರುವ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,  ಫ್ರಾನ್ಸ್‌ ದೇಶದ ರಮಣೀಯ ಪ್ರವಾಸಿ ತಾಣ ಪ್ರೇಮಿಗಳ ನಗರಿ ಪ್ಯಾರಿಸ್‌ ಈ ಆಕರ್ಷಣೀಯ ನಗರಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದಿದೆ. 

ನಗರದ ಆರ್ಥಿಕತೆ, ಪ್ರವಾಸೋದ್ಯಮ ಕಾರ್ಯಕ್ಷಮತೆ, ಮೂಲಸೌಕರ್ಯಗಳು ಅಲ್ಲಿನ ಯೋಜನೆಗಳು ಹಾಗೂ ಮನವಿಗಳು, ಆರೋಗ್ಯ,  ಸುರಕ್ಷತೆ, ಸುಸ್ಥಿರತೆ ಮುಂತಾದವುಗಳನ್ನು ಆಧರಿಸಿ ಈ ಶ್ರೇಯಾಂಕ ಅಥವಾ ರಾಂಕಿಂಗ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ  ಪ್ಯಾರಿಸ್‌ ಮೊದಲ ಸ್ಥಾನವನ್ನು ಪಡೆದಿದ್ದರೆ ಸ್ಪೇನ್‌ನ ರಾಜಧಾನಿ ಮ್ಯಾಡ್ರಿಡ್‌ಗೆ 2 ಸ್ಥಾನ ಲಭಿಸಿದೆ. ನಂತರದ ಮೂರು ಸ್ಥಾನಗಳಲ್ಲಿ ಕ್ರಮವಾಗಿ ಜಪಾನ್‌ನ ಟೋಕಿಯೋ, ಇಟಲಿಯ ರೋಮ್‌ ಹಾಗೂ ಇಟಲಿಯ ಮತ್ತೊಂದು ನಗರ ಮಿಲಾನೋ ಸ್ಥಾನ ಪಡೆದಿದ್ದು, ಟಾಪ್ ಐದು ಆಕರ್ಷಣೀಯ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಆದರೆ ಯುರೋಮಾನಿಟರ್ ಇಂಟರ್‌ನ್ಯಾಶನಲ್‌ನ ಪಟ್ಟಿಯಲ್ಲಿ ಭಾರತದ ರಾಜಧಾನಿ ದೆಹಲಿ 74ನೇ ಸ್ಥಾನ ಪಡೆದಿದ್ದು, ಈ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ನಗರಿ ಎನಿಸಿದೆ. 

Tap to resize

Latest Videos

ಯುರೋಮಾನಿಟರ್ ಇಂಟರ್‌ನ್ಯಾಷನಲ್‌ನ ಟಾಪ್ 100 ಸಿಟಿ ಡೆಸ್ಟಿನೇಶನ್ಸ್ ಇಂಡೆಕ್ಸ್ 2024 ರ ಪ್ರಕಾರ, ಪ್ಯಾರಿಸ್ ವಿಶ್ವದ ಅತ್ಯಂತ ಆಕರ್ಷಕ ನಗರವಾಗಿದೆ. ಹಾಗಂತ ಪ್ಯಾರಿಸ್ ಈ ಹಿರಿಮೆ ಗಳಿಸಿಕೊಂಡಿರುವುದು ಇದೇ ಮೊದಲಲ್ಲ, ಸತತನ ನಾಲ್ಕನೇ ಬಾರಿಗೆ ಫ್ರೆಂಚ್ ರಾಜಧಾನಿ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡು ದಾಖಲೆ ನಿರ್ಮಿಸಿದೆ.  ಪ್ರವಾಸೋದ್ಯಮ ಮೂಲಸೌಕರ್ಯ, ಆರೋಗ್ಯ ಮತ್ತು ಸುರಕ್ಷತೆ ವಿಭಾಗಗಳಲ್ಲಿ ಪ್ಯಾರಿಸ್ ಗಮನಾರ್ಹವಾಗಿ ಉತ್ತಮವಾಗಿದೆ.

ಪ್ಯಾರಿಸ್ ಒಂದು ಅದ್ಭುತವಾದ ಪ್ರೇಮ ನಗರಿಯಾಗಿದ್ದು, ಪ್ರತಿ ರಸ್ತೆಯೂ ಪೋಸ್ಟ್‌ಕಾರ್ಡ್‌ನಂತೆ ಭಾಸವಾಗುತ್ತದೆ. ಫ್ರೆಂಚ್ ರಾಜಧಾನಿಯಲ್ಲಿ ಕೇವಲ ಐಫೆಲ್ ಟವರ್ ಮಾತ್ರವಲ್ಲ. ಕಲೆಯ ದೊಡ್ಡ ನಿಧಿ ಎನಿಸಿರುವ ಲೌವ್ರೆಯೂ ಮೋನಾಲಿಸಾ ಮುಂತಾದ ಕಲಾಕೃತಿಗಳಿಗೆ ನೆಲೆಯಾಗಿದೆ. ಇದು ನಗರದಲ್ಲಿ ಭೇಟಿ ನೀಡಲೇಬೇಕಾದ ಮತ್ತೊಂದು ಸ್ಥಳವಾಗಿದೆ. ಇಲ್ಲೇ ನಡೆಯುತ್ತಾ ಸಾಗಿದರೆ ಗೋಥಿಕ್ ವಿನ್ಯಾಸದ ಮೇರುಕೃತಿಯಾದ ನೊಟ್ರೆ ಡೇಮ್  ಕ್ಯಾಥೆಡ್ರಲ್  ಅನ್ನು ನೀವು ನೋಡಬಹುದು. ಇದರ ಜೊತೆಗೆ ಇಲ್ಲಿ ಆರ್ಕ್ ಡಿ ಟ್ರಯೋಂಫ್ ( Arc de Triomphe), ಚಾಂಪ್ಸ್-ಎಲಿಸೀಸ್(Champs-Élysées), ಮಾಂಟ್ಮಾರ್ಟ್ರೆ(Montmartre), ಸ್ಯಾಕ್ರೆ-ಕೋರ್ (Sacré-Cœur)ಅಲ್ಲದೇ ಇನ್ನು ಅನೇಕ ರಮಣೀಯ ಸ್ಥಳಗಳನ್ನು ನೋಡಬಹುದಾಗಿದೆ. 

undefined

ಲಕ್ಸೆಂಬರ್ಗ್ ಗಾರ್ಡನ್ಸ್‌ನಂತಹ ಸುಂದರವಾದ ಸ್ಥಳಗಳು ನಗರದ ಉತ್ಸಾಹಭರಿತ ವಾತಾವರಣಕ್ಕೆ ಸುಂದರ ಸ್ಪರ್ಶವನ್ನು ನೀಡುತ್ತದೆ. ಈ ಎಲ್ಲಾ ಸ್ಥಳಗಳು ವಾರ್ಷಿಕವಾಗಿ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತವೆ.  
2024 ರಲ್ಲಿ, ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಅನ್ನು ಆಯೋಜಿಸಿದ್ದರಿಂದ  ಅತೀಹೆಚ್ಚು ಪ್ರವಾಸಿಗರ ಭೇಟಿಗೆ ಸಾಕ್ಷಿಯಾಯ್ತು. ಬ್ಯುಸಿನೆಸ್ ಇನ್ಸೈಡರ್ ಪ್ರಕಾರ ಒಲಿಂಪಿಕ್ ಕ್ರೀಡಾಕೂಟದ ಸಮಯದಲ್ಲಿ 11 ಮಿಲಿಯನ್ ಜನರು ಈ ಪ್ರೇಮ ನಗರಿಗೆ ಭೇಟಿ ನೀಡಿದ್ದರು. 

2024 ರಲ್ಲಿ ಇಲ್ಲಿಗೆ  19 ಪ್ರತಿಶತದಷ್ಟು ಅಂತಾರಾಷ್ಟ್ರೀಯ ಪ್ರವಾಸಿಗರ ಆಗಮನದೊಂದಿಗೆ ಜಾಗತಿಕ ಪ್ರವಾಸೋದ್ಯಮವು ಕೋವಿಡ್‌ ಸಾಂಕ್ರಾಮಿಕ ರೋಗದ ನಂತರ ಮತ್ತೆ ಅಭಿವೃದ್ಧಿ ಹೊಂದುತ್ತಿದೆ ಎಂದು ಯುರೋಮಾನಿಟರ್ ಇಂಟರ್ನ್ಯಾಷನಲ್ ವರದಿ ಹೇಳಿದೆ. ಯುರೋಪ್ 793 ಮಿಲಿಯನ್ ಪ್ರವಾಸಿಗರೊಂದಿಗೆ ಪ್ರವಾಸಿಗರು ಅತೀ ಹೆಚ್ಚು ಭೇಟಿ ನೀಡಿದ ಪ್ರದೇಶಗಳಲ್ಲಿ ಒಂದಾಗಿದೆ. ಹಾಗೆಯೇ ಏಷ್ಯಾದಲ್ಲಿ, ಬ್ಯಾಂಕಾಕ್ 32 ಮಿಲಿಯನ್ ಪ್ರವಾಸಿಗರರೊಂದಿಗೆ ಹೊಸ ದಾಖಲೆ ನಿರ್ಮಿಸಿದೆ. 

click me!