ಪುಸ್ತಕ ಹರಿದ್ರೆ ಹಣವಲ್ಲ‌, ಸಾಕುಪ್ರಾಣಿ ಫೋಟೊ ನೀಡಿ..ಲೈಬ್ರರಿಯ ವಿಚಿತ್ರ ಷರತ್ತಿದು!

By Roopa Hegde  |  First Published May 28, 2024, 1:27 PM IST

ಗ್ರಂಥಾಲಯದಿಂದ ತಂದ ಪುಸ್ತಕ ಅನೇಕ ಬಾರಿ ಹರಿಯೋದಿದೆ. ನಮ್ಮ ತಪ್ಪು ಅಥವಾ ಸಾಕುಪ್ರಾಣಿಗಳು, ಮಕ್ಕಳು ಪುಸ್ತಕ ಹಾಳು ಮಾಡ್ತಿರುತ್ತಾರೆ. ಲೈಬ್ರರಿಗೆ ಹೋದಾಗ ಅದಕ್ಕೆ ದಂಡ ನೀಡ್ಬೇಕಾಗುತ್ತದೆ. ಈ ಲೈಬ್ರರಿ ಮಾತ್ರ ದಂಡದ ಬದಲು ಭಿನ್ನ ಷರತ್ತು ವಿಧಿಸಿದೆ.
 


ಇದು ಡಿಜಿಟಲ್ ಯುಗ (Digiral Era). ಈಗ ಮನೆಯಲ್ಲೇ ಕುಳಿತು ಮೊಬೈಲ್ ನಲ್ಲಿಯೇ ನಾವು ಸಾಕಷ್ಟು ಕಥೆ, ಲೇಖನ ಓದಬಹುದು. ಆದ್ರೆ ಈಗ್ಲೂ ಪುಸ್ತಕ ಓದುವವರ ಸಂಖ್ಯೆ ಶೂನ್ಯವಾಗಿಲ್ಲ. ಪುಸ್ತಕ ಪ್ರೇಮಿಗಳ (Book Lovers) ಸಂಖ್ಯೆ ಸಾಕಷ್ಟಿರುವ ಕಾರಣ ಅಲ್ಲಲ್ಲಿ ಒಂದೊಂದು ಲೈಬ್ರರಿಯನ್ನು.ನಾವು ನೋಡ್ಬಹುದು. ಹಿಂದೆ ಸಾರ್ವಜನಿಕ ಲೈಬ್ರರಿಗಳ ಸಂಖ್ಯೆ ಸಾಕಷ್ಟಿತ್ತು. ಪುಸ್ತಕ ತೆಗೆದುಕೊಂಡು ಹೋದವರು ಅದನ್ನು ಹರಿದು ಅಥವಾ ಕೊಳಕು ಮಾಡ್ಕೊಂಡು ಬರ್ತಿದ್ದರು. ಈ ಸಮಯದಲ್ಲಿ ಲೈಬ್ರರಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿತ್ತು. ಓದುಗರಿಗೆ ಪುಸ್ತಕ ಹರಿದ ಕಾರಣಕ್ಕೆ ದಂಡ ವಿಧಿಸುತ್ತಿತ್ತು.  ಈಗ್ಲೂ ಲೈಬ್ರರಿಯಲ್ಲಿ ಈ ನಿಯಮವಿದೆ. ಆದ್ರೆ ಒಂದು ಲೈಬ್ರರಿ ಮಾತ್ರ ತನ್ನ ಭಿನ್ನ ಕ್ರಮದಿಂದ ಎಲ್ಲರ ಗಮನ ಸೆಳೆದಿದೆ. ಆ ಗ್ರಂಥಾಲಯದಿಂದ ನೀವು ಪುಸ್ತಕ ತೆಗೆದುಕೊಂಡಿದ್ದು, ಪುಸ್ತಕ ಹರಿದುಹೋದ್ರೆ ಹಣ ನೀಡ್ಬೇಕಾಗಿಲ್ಲ. ನಿಮ್ಮ ಮನೆಯಲ್ಲಿರುವ ಸಾಕುಪ್ರಾಣಿ ಫೋಟೋ ನೀಡ್ಬೇಕು. ಇದಲ್ಲದೆ ಇನ್ನೂ ಅನೇಕ  ವಿಚಿತ್ರ ರೂಲ್ಸ್ ಈ ಗ್ರಂಥಾಲಯದಲ್ಲಿದೆ. ಅದೇನು ಎಂಬುದರ ವಿವರ ಇಲ್ಲಿದೆ.

ವಿಚಿತ್ರ ನಿಯಮ ಪಾಲನೆ ಮಾಡುವ ಲೈಬ್ರರಿ (Library) ಅಮೆರಿಕದಲ್ಲಿದೆ. ವಿಸ್ಕಾನ್ಸಿನ್‌ನಲ್ಲಿರುವ ಮಿಡಲ್‌ಟನ್ ಪಬ್ಲಿಕ್ ಲೈಬ್ರರಿಯಲ್ಲಿ ಓದುಗರು (Readers) ವಿಶಿಷ್ಟ ನಿಯಮ ಪಾಲನೆ ಮಾಡ್ಬೇಕಾಗಿದೆ. ಲೈಬ್ರರಿ ತನ್ನ ನಿಯಮಕ್ಕೆ ಅನ್-ಬಿಲ್ಲಿ-ವೀಬಲ್ ಎಂದು ಹೆಸರಿಟ್ಟಿದೆ. ಪುಸ್ತಕ (Book) ಹರಿದಾಗ, ನಮ್ಮ ಮನೆಯಲ್ಲಿರುವ ಸಾಕುಪ್ರಾಣಿ ಹರಿದಿದೆ ಅಂತ ಓದುಗರು ತಪ್ಪಿಸಿಕೊಳ್ಳುವಂತಿಲ್ಲ. ಪುಸ್ತಕ ಹರಿದ ಸಾಕುಪ್ರಾಣಿ (Pets) ಫೋಟೋವನ್ನು ನೀಡ್ಬೇಕು. ಒಂದ್ವೇಳೆ ನೀವು ಸಾಕುಪ್ರಾಣಿ ಫೋಟೋ ನೀಡಿದ್ರೆ ನಿಮ್ಮ ದಂಡದ ಶುಲ್ಕ ಸಂಪೂರ್ಣ ಮನ್ನಾ ಆಗುತ್ತದೆ. ಇಷ್ಟೇ ಅಲ್ಲ, ಒಂದ್ವೇಳೆ ನಿಮ್ಮ ಬಳಿ ಹಣವಿಲ್ಲ, ಶುಲ್ಕ ಪಾವತಿಸಲು ಸಾಧ್ಯವಾಗ್ತಿಲ್ಲ ಎಂಬ ಸ್ಥಿತಿಯಲ್ಲೂ ನೀವು ಲೈಬ್ರರಿ ಪುಸ್ತಕ ಓದಲು ಬಯಸಿದ್ರೆ ನೀವು ನಿಮ್ಮ ಹೊಟ್ಟೆ ಫೋಟೋವನ್ನು ಲೈಬ್ರರಿಗೆ ತೋರಿಸಬೇಕು. ಆಗ ನಿಮಗೆ ಪುಸ್ತಕ ಓದಲು ಗ್ರಂಥಾಲಯದಲ್ಲಿ ಅನುಮತಿ ಸಿಗುತ್ತದೆ. 

Tap to resize

Latest Videos

ಸೀ ಫೇಸ್ ಹೊಟೆಲ್ ರೂಂ ಬುಕ್ ಮಾಡಿದ ಯುವತಿಗೆ ಆಘಾತ ಜೊತೆಗೆ ತಡೆಯಲಾಗದ ನಗು, ಕಾರಣ ವೈರಲ್!

ಫೇಸ್ಬುಕ್ ನಲ್ಲಿ ಪೋಸ್ಟ್ (Facebook Post) ಹಾಕಿದ ಲೈಬ್ರರಿ : ಮಿಡಲ್‌ಟನ್ ಪಬ್ಲಿಕ್ ಲೈಬ್ರರಿ, ಕೆಲ ದಿನಗಳ ಹಿಂದೆ ಫೇಸ್ಬುಕ್ ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದೆ. ನಿಮ್ಮ ಮನೆ ಸಾಕುಪ್ರಾಣಿ ಹಾಗೂ ಚಿಕ್ಕ ಮಕ್ಕಳಿಗೆ ಪುಸ್ತಕ ಇಷ್ಟವಾಗುತ್ತದೆ. ಸಾಕುಪ್ರಾಣಿ ಅದನ್ನು ತಿಂದ್ರೆ ಅಥವಾ ಹರಿದು ಹಾಕಿದ್ರೆ ನೀವು ದಂಡ ನೀಡ್ಬೇಕಾಗಿಲ್ಲ. ಅದರ ಬದಲು ಕ್ಯೂಟ್ ಅಪರಾಧಿ ಫೋಟೋವನ್ನು ನಮಗೆ ನೀಡಿದ್ರೆ ಸಾಕು. ನಾವು ದಂಡ ಶುಲ್ಕವನ್ನು ಮನ್ನಾ ಮಾಡುತ್ತೇವೆ ಎಂದು ಲೈಬ್ರರಿ ಹೇಳಿದೆ. 

ವಾರಣಾಸಿ ಭೇಟಿ ನೀಡಿದಾಗ ಈ 7 ಅನುಭವ ಮಿಸ್ ಮಾಡ್ಕೋಬೇಡಿ..

ಲೈಬ್ರರಿ ಈ ನಿಯಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ : ಗ್ರಂಥಾಲಯ ಈ ನಿಯಮ ಜಾರಿಗೆ ತಂದು ಇನ್ನು ತಿಂಗಳು ಕಳೆದಿಲ್ಲ. ಆಗ್ಲೇ ಎಲ್ಲಡೆಯಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ನಾಲ್ಕು ಓದುಗರು ಈಗಾಗಲೇ ಇದ್ರ ಲಾಭ ಪಡೆದಿದ್ದಾರೆ. ಡೈಸಿ ಹೆಸರಿನ ನಾಯಿ, ದಿ ಗೆಸ್ಟ್ ಹೆಸರಿನ ಪುಸ್ತಕವನ್ನು ಹರಿದಿತ್ತು. ಡೈಸಿ ಮಾಲೀಕ ಅದ್ರ ಫೋಟೋವನ್ನು ಗ್ರಂಥಾಲಯಕ್ಕೆ ನೀಡಿದ್ದ. ಲೈಬ್ರರಿ ಅವರ ದಂಡವನ್ನು ಮನ್ನಾ ಮಾಡಿತ್ತು. ಕ್ವಿಕ್ ಮತ್ತು ವಾರ್ಡ್ ಹೆಸರಿನ ನಾಯಿ ಕೂಡ ಪುಸ್ತಕ ಹಾಳು ಮಾಡಿತ್ತು. ನಾಲ್ಕನೇ ಸ್ಥಾನದಲ್ಲಿ ಆಕಾಶವನ್ನು ದೋಷಿ ಮಾಡಲಾಗಿತ್ತು. ಅದ್ರ ಫೋಟೋ ಪಡೆದ ಲೈಬ್ರರಿ ದಂಡ ಮನ್ನಾ ಮಾಡಿದೆ. ಗ್ರಂಥಾಲಯದಲ್ಲಿ ಪ್ರತಿ ತಿಂಗಳು ಎರಡಾದ್ರೂ ಪುಸ್ತಕ ಹಾಳಾಗುತ್ತದೆ. ಈಗ ದಂಡದ ಬದಲು ನಾಯಿ, ಬೆಕ್ಕಿನ ಫೋಟೋ ಕೇಳಿ ಮಿಡಲ್‌ಟನ್ ಪಬ್ಲಿಕ್ ಲೈಬ್ರರಿ ಚರ್ಚೆಯಲ್ಲಿದೆ. 

click me!