ಬೆಂಗಳೂರಿನಿಂದ ಹಂಪಿ ಪ್ರವಾಸಕ್ಕೆ ಹೋಗೋರಿಗೆ 'ವೋಲ್ವೋ' ಬಸ್ ಸೇವೆ ಆರಂಭಿಸಿದ KSRTC: ವೇಳಾಪಟ್ಟಿ ಇಲ್ಲಿದೆ

Published : Nov 11, 2026, 08:43 PM IST
KSRTC New Buses for Hospet and Rayadurga

ಸಾರಾಂಶ

ಕೆಎಸ್‌ಆರ್‌ಟಿಸಿ ಬೆಂಗಳೂರು-ಹೊಸಪೇಟೆಗೆ 'ವೋಲ್ವೋ ಮಲ್ಟಿ ಆಕ್ಸಲ್' ಮತ್ತು ರಾಯದುರ್ಗಕ್ಕೆ 'ನಾನ್ ಎಸಿ ಸ್ಲೀಪರ್' ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್‌ಗಳ ಮಾರ್ಗ, ವೇಳಾಪಟ್ಟಿ ಮತ್ತು ದರದ ಸಂಪೂರ್ಣ ಮಾಹಿತಿ ಇಲ್ಲಿದೆ. ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು.

ಬೆಂಗಳೂರು (ನ.11): ರಾಜ್ಯ ರಾಜಧಾನಿ ಬೆಂಗಳೂರಿನಿಂದ ಹೊಸಪೇಟೆಗೆ ನೂತನ 'ವೋಲ್ವೋ ಮಲ್ಟಿ ಆಕ್ಸಲ್' (Volvo Multi Axle) ಹಾಗೂ ರಾಯದುರ್ಗಕ್ಕೆ 'ನಾನ್ ಎಸಿ ಸ್ಲೀಪರ್' (Non A.C Sleeper) ಬಸ್ ಸೇವೆಯನ್ನು ಕೆಎಸ್‌ಆರ್‌ಟಿಸಿ ಬೆಂಗಳೂರು ಕೇಂದ್ರೀಯ ವಿಭಾಗವು ಆರಂಭಿಸಿದೆ. ಈ ಎರಡೂ ಹೊಸ ಬಸ್‌ಗಳು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ಕಾರ್ಯಾಚರಣೆ ನಡೆಸಲಿದ್ದು, ಇವುಗಳ ಮಾರ್ಗ, ವೇಳಾಪಟ್ಟಿ ಮತ್ತು ಟಿಕೆಟ್ ದರದ ಸಂಪೂರ್ಣ ಮಾಹಿತಿ ಇಲ್ಲಿದೆ.

1. ಬೆಂಗಳೂರು - ಹೊಸಪೇಟೆ 'ವೋಲ್ವೋ ಮಲ್ಟಿ ಆಕ್ಸಲ್' ಬಸ್ ಸೇವೆ

ಐತಿಹಾಸಿಕ ಹಂಪಿ ಪ್ರವಾಸ ಕೈಗೊಳ್ಳುವ ಪ್ರವಾಸಿಗರಿಗೆ ಮತ್ತು ಹೊಸಪೇಟೆ ಭಾಗದ ಜನರಿಗೆ ಈ ವೋಲ್ವೋ ಐಷಾರಾಮಿ ಸೇವೆ ಅತ್ಯಂತ ಅನುಕೂಲಕರವಾಗಿದೆ. ಈ ಬಸ್ ತುಮಕೂರು, ಶಿರಾ, ಚಿತ್ರದುರ್ಗ ಹಾಗೂ ಕೂಡ್ಲಿಗಿ ಮಾರ್ಗವಾಗಿ ಹೊಸಪೇಟೆ ತಲುಪಲಿದೆ.

ವೇಳಾಪಟ್ಟಿ (Time Table):

ಬೆಂಗಳೂರು ➔ ಹೊಸಪೇಟೆ:

ಬೆಂಗಳೂರು (ಕೆಂಪೇಗೌಡ ಬಸ್ ನಿಲ್ದಾಣ) ಹೊರಡುವ ಸಮಯ: ಸಂಜೆ 05:00 (17:00)

ಕೂಡ್ಲಿಗಿ ತಲುಪುವ ಸಮಯ: ರಾತ್ರಿ 10:30 (22:30)

ಹೊಸಪೇಟೆ ತಲುಪುವ ಸಮಯ: ರಾತ್ರಿ 11:15 (23:15)

ಹೊಸಪೇಟೆ ➔ ಬೆಂಗಳೂರು:

ಹೊಸಪೇಟೆ ಹೊರಡುವ ಸಮಯ: ಬೆಳಗ್ಗೆ 06:15

ಕೂಡ್ಲಿಗಿ: ಬೆಳಗ್ಗೆ 07:00

ಬೆಂಗಳೂರು ತಲುಪುವ ಸಮಯ: ಮಧ್ಯಾಹ್ನ 12:45

ಆನ್‌ಲೈನ್ ಟಿಕೆಟ್ ದರ ವಿವರ (ರೂ. ಗಳಲ್ಲಿ):

ಎಲ್ಲಿಂದ ಎಲ್ಲಿಗೆ ವಯಸ್ಕರಿಗೆ (Adult) ಮಕ್ಕಳಿಗೆ (Child)

ಬೆಂಗಳೂರು ಕೂಡ್ಲಿಗಿ ರೂ. 740/- ರೂ. 580/-

ಬೆಂಗಳೂರು ಹೊಸಪೇಟೆ ರೂ. 850/- ರೂ. 670/-

2. ಬೆಂಗಳೂರು - ರಾಯದುರ್ಗ 'ನಾನ್ ಎ.ಸಿ ಸ್ಲೀಪರ್' ಬಸ್ ಸೇವೆ

ರಾತ್ರಿ ವೇಳೆ ಆರಾಮದಾಯಕವಾಗಿ ಮಲಗಿಕೊಂಡು ಪ್ರಯಾಣಿಸಲು ಬಯಸುವ ಪ್ರಯಾಣಿಕರಿಗಾಗಿ ಈ ನಾನ್ ಎಸಿ ಸ್ಲೀಪರ್ ಬಸ್ ಪರಿಚಯಿಸಲಾಗಿದೆ. ಈ ಬಸ್ ತುಮಕೂರು, ಹಿರಿಯೂರು, ಚಳ್ಳಕೆರೆ, ಬಿ.ಜಿ. ಕೆರೆ ಹಾಗೂ ಮೊಳಕಾಲ್ಮೂರು ಮಾರ್ಗವಾಗಿ ರಾಯದುರ್ಗ ತಲುಪಲಿದೆ.

ವೇಳಾಪಟ್ಟಿ (Time Table):

ಬೆಂಗಳೂರು ➔ ರಾಯದುರ್ಗ:

ಬೆಂಗಳೂರು (ಕೆಂಪೇಗೌಡ ಬಸ್ ನಿಲ್ದಾಣ) ಹೊರಡುವ ಸಮಯ: ರಾತ್ರಿ 10:00 (22:00)

ಚಳ್ಳಕೆರೆ: ರಾತ್ರಿ 02:45

ಮೊಳಕಾಲ್ಮೂರು: ಮುಂಜಾನೆ 04:00

ರಾಯದುರ್ಗ ತಲುಪುವ ಸಮಯ: ಮುಂಜಾನೆ 04:30

ರಾಯದುರ್ಗ ➔ ಬೆಂಗಳೂರು:

ರಾಯದುರ್ಗ ಹೊರಡುವ ಸಮಯ: ರಾತ್ರಿ 11:00 (23:00)

ಮೊಳಕಾಲ್ಮೂರು: ರಾತ್ರಿ 11:30 (23:30)

ಚಳ್ಳಕೆರೆ: ರಾತ್ರಿ 01:00

ಬೆಂಗಳೂರು ತಲುಪುವ ಸಮಯ: ಬೆಳಗ್ಗೆ 05:30

ಆನ್‌ಲೈನ್ ಟಿಕೆಟ್ ದರ ವಿವರ (ರೂ. ಗಳಲ್ಲಿ):

ಎಲ್ಲಿಂದ ಎಲ್ಲಿಗೆ ವಯಸ್ಕರಿಗೆ (Adult) ಮಕ್ಕಳಿಗೆ (Child)

ಬೆಂಗಳೂರು ಚಳ್ಳಕೆರೆ ರೂ. 500/- ರೂ. 400/-

ಬೆಂಗಳೂರು ಮೊಳಕಾಲ್ಮೂರು ರೂ. 600/- ರೂ. 470/-

ಬೆಂಗಳೂರು ರಾಯದುರ್ಗ ರೂ. 650/- ರೂ. 500/-

ಟಿಕೆಟ್ ಮುಂಗಡ ಬುಕಿಂಗ್ ಹೇಗೆ?

ಪ್ರಯಾಣಿಕರು ಈ ಹೊಸ ಬಸ್ ಸೇವೆಗಳ ಸದುಪಯೋಗ ಪಡೆದುಕೊಳ್ಳಲು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್ www.ksrtc.in ಅಥವಾ ಕೆಎಸ್‌ಆರ್‌ಟಿಸಿ ಮೊಬೈಲ್ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಿಕೊಳ್ಳಬಹುದು. ಜೊತೆಗೆ ಅಧಿಕೃತ ಕೌಂಟರ್‌ಗಳಲ್ಲಿಯೂ ಟಿಕೆಟ್ ಲಭ್ಯವಿರುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌; ಕೇವಲ 7 ಗಂಟೆ ಪ್ರಯಾಣ- ಸಂಪೂರ್ಣ ಮಾಹಿತಿ ಇಲ್ಲಿದೆ
ಗೋವಾ, ತಿರುಪತಿ ಸೇರಿ ಹೊಸ ವರ್ಷಕ್ಕೆ 8 ರೈಲುಗಳು ರದ್ದು: ಟೂರ್‌ ಪ್ಲ್ಯಾನ್‌ ಮಾಡುವ ಮುನ್ನ ಇಲ್ಲಿ ನೋಡಿ