ವಿಶ್ವದ ಟಾಪ್ 10 ಪ್ರವಾಸಿ ತಾಣಗಳಲ್ಲಿ ಕೊಡಗು ಜಿಲ್ಲೆಗೆ 7 ನೇ ಸ್ಥಾನ..!

By Girish Goudar  |  First Published Dec 14, 2023, 10:36 PM IST

ಹಸಿರು ಕಾನನಗಳಿಂದ ಕಣ್ಣು ಕೋರೈಸುವ ಮಲೆ ಪರ್ವತ, ಧುಮ್ಮಿಕ್ಕಿ ಹರಿಯುವ ಜಲಧಾರೆ. ಚಳಿ, ಮಳೆಗಾಲ ಆರಂಭವಾಯಿತ್ತೆಂದರೆ ಹಿಮದ ರಾಶಿಯನ್ನೇ ಹೊದ್ದು ಮಲಗುವ ಬೆಟ್ಟಗುಡ್ಡ. ಇದು ಪ್ರಾಕೃತಿಕ ಸಹಜ ಸೌಂದರ್ಯದಿಂದ ಲಕ್ಷಾಂತರ ಪ್ರವಾಸಿಗರ ಸೆಳೆಯುವ ಪ್ರವಾಸಿ ಜಿಲ್ಲೆ ಕೊಡಗಿನ ಸೌಂದರ್ಯ
 


ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಡಗು

ಕೊಡಗು(ಡಿ.14): ಕೊಡಗು ಜಿಲ್ಲೆ ಪ್ರವಾಸಿ ತಾಣಗಳ ತವರೂರು ಅನ್ನೋದು ಗೊತ್ತೇ ಇದೆ. ಇಲ್ಲಿನ ಪ್ರತೀ ಪ್ರವಾಸಿತಾಣಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಅದು ಎಷ್ಟರಮಟ್ಟಿಗೆ ಎಂದರೆ ಭಾರತದ ಬಹುತೇಕ ಪ್ರವಾಸಿಗರು ಕೊಡಗು ಜಿಲ್ಲೆಯನ್ನು ಗೂಗಲ್ ನಲ್ಲಿ ಸರ್ಚ್ ಮಾಡುತ್ತಾರೆ ಎನ್ನುವುದೇ ಅಚ್ಚರಿ. 

Latest Videos

undefined

ಹಸಿರು ಕಾನನಗಳಿಂದ ಕಣ್ಣು ಕೋರೈಸುವ ಮಲೆ ಪರ್ವತ, ಧುಮ್ಮಿಕ್ಕಿ ಹರಿಯುವ ಜಲಧಾರೆ. ಚಳಿ, ಮಳೆಗಾಲ ಆರಂಭವಾಯಿತ್ತೆಂದರೆ ಹಿಮದ ರಾಶಿಯನ್ನೇ ಹೊದ್ದು ಮಲಗುವ ಬೆಟ್ಟಗುಡ್ಡ. ಇದು ಪ್ರಾಕೃತಿಕ ಸಹಜ ಸೌಂದರ್ಯದಿಂದ ಲಕ್ಷಾಂತರ ಪ್ರವಾಸಿಗರ ಸೆಳೆಯುವ ಪ್ರವಾಸಿ ಜಿಲ್ಲೆ ಕೊಡಗಿನ ಸೌಂದರ್ಯ. ಹೌದು ವಿಶ್ವಮಟ್ಟದಲ್ಲಿ  ಕೊಡಗಿನ ಪ್ರವಾಸಿ ತಾಣಗಳು ಗುರುತ್ತಿಸಿಕೊಂಡಿದ್ದು, 2023 ನೇ ಸಾಲಿನಲ್ಲಿ ಭಾರತೀಯರು ಹುಡುಕಾಡಿರುವ ಪ್ರವಾಸಿ ತಾಣಗಳಲ್ಲಿ ಕೊಡಗು ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಇದು ಕೊಡಗಿನ ಪ್ರವಾಸೋದ್ಯಮಿಗಳಲ್ಲಿ ಖುಷಿ ಮೂಡುವಂತೆ ಮಾಡಿದೆ. ವಿಶ್ವದ ಟಾಪ್ 10 ಪ್ರವಾಸಿ ತಾಣಗಳನ್ನು ಹುಡುಕಾಡಿರುವುದರಲ್ಲಿ ಕೊಡಗು ಜಿಲ್ಲೆ 7 ನೇ ಸ್ಥಾನದಲ್ಲಿ ಇದೆ.

ಕೊಡಗು: ಶರವೇಗದಲ್ಲಿ ಮುನ್ನುಗ್ಗಿ ಮೈಜುಮ್ಮೆನಿಸಿದ ಎತ್ತಿನಗಾಡಿ ಓಟ..!

ವಿಶ್ವದ 10 ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಭಾರತದ ಮೂರು ರಾಜ್ಯಗಳನ್ನು ಹೆಚ್ಚು ಹುಡುಕಾಡಿದ್ದಾರೆ. ಅದರಲ್ಲಿ ಗೋವಾ 2 ನೇ ಸ್ಥಾನದಲ್ಲಿ ಇದ್ದರೆ, ಕಾಶ್ಮೀರ 6 ನೇ ಸ್ಥಾನದಲ್ಲಿದೆ. ಕೊಡಗು 7 ನೇ ಸ್ಥಾನದಲ್ಲಿದೆ. ಅಂದರೆ ದೇಶದಲ್ಲಿ ಭಾರತದ ಮೂರು ರಾಜ್ಯಗಳು ವಿಶ್ವದ ಟಾಪ್ 10 ರ ಸ್ಥಾನದಲ್ಲಿ ಇವೆ. 

ಪ್ರವಾಸಿಗರ ಹಾಟ್ಸ್ಪಾಟ್ ಎನ್ನುವ ಮಡಿಕೇರಿಯ ರಾಜಾಸೀಟ್, ಅಬ್ಬಿಫಾಲ್ಸ್, ಕಾವೇರಿ ನಿಸರ್ಗಧಾಮ, ದುಬಾರೆ ಸಾಕಾನೆ ಶಿಬಿರ, ಕೋಟೆ ಅಬ್ಬಿಫಾಲ್ಸ್, ಇರ್ಪುಫಾಲ್ಸ್ ಸೇರಿದಂತೆ 18 ಕ್ಕೂ ಹೆಚ್ಚು ಪ್ರವಾಸಿ ತಾಣಗಳು ಕೊಡಗು ಜಿಲ್ಲೆಯಲ್ಲಿವೆ. ಇವುಗಳಿಗೆ ವಾರಾಂತ್ಯಗಳಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಪ್ರವಾಸಿಗರು ಬಂದರೆ, ಕೆಲಸದ ದಿನಗಲ್ಲಿ ನಿತ್ಯ ಕನಿಷ್ಠ 30 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. 

ಜಿಲ್ಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಹೋಂಸ್ಟೇಗಳಿದ್ದರೆ, 1000 ಕ್ಕೂ ಹೆಚ್ಚು ರೆಸಾರ್ಟ್ಗಳಿವೆ. ಇವುಗಳೆಲ್ಲವೂ ವರ್ಷದ ಕೊನೆಯ ದಿನಗಳಲ್ಲಿ ತುಂಬಿ ಹೋಗಿರುತ್ತವೆ ಎಂದರೆ ಎಷ್ಟು ಪ್ರವಾಸಿಗರು ಬರುತ್ತಾರೆ ಎನ್ನುವುದನ್ನು ನೀವೇ ಊಹಿಸಿಕೊಳ್ಳಿ ಎಂದು  ಹೊಟೇಲ್ ಮತ್ತು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಹೇಳಿದ್ದಾರೆ. 

ವಿಶ್ವ 10 ಪ್ರಸಿದ್ಧ ಪ್ರವಾಸಿ ರಾಜ್ಯಗಳಲ್ಲಿ ಕೊಡಗು ಜಿಲ್ಲೆ 7 ನೇ ಸ್ಥಾನ ಪಡೆದುಕೊಂಡಿದೆ. ಇದು ಜಿಲ್ಲೆಯ ಪ್ರವಾಸೋದ್ಯಮ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ ಎನ್ನುವುದರ ಸೂಚನೆ ಎಂದು ಪ್ರವಾಸೋದ್ಯಮಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈ ಪಟ್ಟಿಯಲ್ಲಿ ವಿಯೆಟ್ನಾಂ ಮೊದಲ ಸ್ಥಾನದಲ್ಲಿದ್ದರೆ ನಂತರದ ಸ್ಥಾನಗಳನ್ನು ಗೋವಾ, ಬಾಲಿ, ಶ್ರೀಲಂಕಾ, ಥೈಲ್ಯಾಂಡ್, ಕಾಶ್ಮೀರ, ಕೊಡಗು, ಅಂಡಮಾನ್ ಮತ್ತು ನಿಕೋಬಾರ್, ಇಟಲಿ ಹಾಗೂ ಸ್ವಿಡ್ಜರ್ಲ್ಯಾಂಡ್ ಪಡೆದುಕೊಂಡಿವೆ. ಕೊಡಗು ಜಿಲ್ಲೆಯಲ್ಲಿರುವ ಹಚ್ಚ ಹಸಿರಿನ ಪ್ರಕೃತಿ, ದಟ್ಟಕಾನನ, ಧುಮ್ಮಿಕಿ ಹರಿಯುವ ಜಲಪಾತಗಳು, ನದಿ ತೊರೆಗಳು ಪ್ರವಾಸಿಗರನ್ನು ಕಣ್ಮನ ಸೆಳೆಯುತ್ತಿವೆ. ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಆಹ್ಲಾದಕರ ನೀಡುತ್ತವೆ ಎಂದು ಪ್ರವಾಸಿಗರು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. 

ಕೊಡಗು: ಎರಡು ವಿವಿಗಳ ಗೊಂದಲಕ್ಕೆ ಸಿಬ್ಬಂದಿ, ವಿದ್ಯಾರ್ಥಿಗಳ ಪರದಾಟ..!

ಮಡಿಕೇರಿಯ ರಾಜಾಸೀಟಿಗೆ ಅತೀ ಹೆಚ್ಚು ಪ್ರವಾಸಿಗರು ಬರುತ್ತಾರೆ ಎನ್ನುವುದನ್ನು ಕೊಡಗು ಪ್ರವಾಸೋದ್ಯಮ ಇಲಾಖೆಯೇ ಮಾಹಿತಿ ನೀಡಿದೆ. ಜೊತೆಗೆ ನಿಸರ್ಗಧಾಮ, ದುಬಾರೆಗಳಿಗೂ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗುವಂತೆ ಜಾಲತಾಣಗಳನ್ನು ಸೃಷ್ಟಿಸುವ, ಆ ಮೂಲಕ ಪ್ರವಾಸಿಗರಿಗೆ ಮಾಹಿತಿ ಒದಗಿಸುವ ಕೆಲಸ ಮಾಡಲು ಚಿಂತಿಸಲಾಗಿದೆ ಎನ್ನುತ್ತಿದ್ದಾರೆ

ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಅನಿತಾ ಭಾಸ್ಕರ್. ಒಟ್ಟಿನಲ್ಲಿ ಕೊಡಗು ಜಿಲ್ಲೆಯು ವರ್ಷದಿಂದ ವರ್ಷಕ್ಕೆ ಪ್ರವಾಸೋದ್ಯಮದಲ್ಲಿ ವಿಶ್ವದ ಗಮನ ಸೆಳೆಯುತ್ತಿದೆ ಎನ್ನುವುದಕ್ಕೆ ಗೂಗಲ್ನಲ್ಲಿ ಅತೀ ಹೆಚ್ಚು ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳನ್ನು ಹುಡುಕುತ್ತಿದ್ದಾರೆ ಎನ್ನುವುದು ಸಾಕ್ಷಿ. ಇದು ನಿಜಕ್ಕೂ ಖುಷಿಯ ವಿಚಾರವೇ ಸರಿ.

click me!