ಕಾಂಗ್ರೆಸ್ ಮೊದಲ ಗ್ಯಾರಂಟಿ ಶಕ್ತಿ ಯೋಜನೆ ಕೈ ಹಿಡಿದ ನಾರಿಯರು; 8 ತಿಂಗಳಲ್ಲಿ 151 ಕೋಟಿ ಮಹಿಳೆಯರ ಸಂಚಾರ

By Sathish Kumar KH  |  First Published Feb 12, 2024, 12:24 PM IST

ರಾಜ್ಯ ಸರ್ಕಾರದ ಮೊದಲ ಗ್ಯಾರಂಟಿಯಾದ ಶಕ್ತಿ ಯೋಜನೆ ಅಡಿಯಲ್ಲಿ (ಕರ್ನಾಟಕದ ಎಲ್ಲ ಮಹಿಳೆಯರಿಗೆ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣ) ಕಳೆದ 8 ತಿಂಗಳಲ್ಲಿ ಬರೋಬ್ಬರಿ 151 ಕೋಟಿ ಮಹಿಳೆಯರು ಸಂಚಾರ ಮಾಡಿದ್ದಾರೆ.


ಬೆಂಗಳೂರು (ಫೆ.12): ರಾಜ್ಯ ಸರ್ಕಾರದ ಮೊದಲ ಗ್ಯಾರಂಟಿಯಾದ ಶಕ್ತಿ ಯೋಜನೆ ಅಡಿಯಲ್ಲಿ (ಕರ್ನಾಟಕದ ಎಲ್ಲ ಮಹಿಳೆಯರಿಗೆ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣ) ಕಳೆದ 8 ತಿಂಗಳಲ್ಲಿ ಬರೋಬ್ಬರಿ 151 ಕೋಟಿ ಮಹಿಳೆಯರು ಸಂಚಾರ ಮಾಡಿದ್ದಾರೆ.

ಸರ್ಕಾರದ ಮೊದಲ ಗ್ಯಾರಂಟಿ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಎಂಟೇ ತಿಂಗಳಿಗೆ  ಶಕ್ತಿ ಯೋಜನೆಯಡಿ 151 ಕೋಟಿ ನಾರಿಯರು ಸಂಚಾರ ಮಾಡಿದ್ದಾರೆ. ಸರ್ಕಾರದ ಮೊದಲ ಗ್ಯಾರೆಂಟಿಗೆ 150 ಕೋಟಿ ಮಹಿಳೆಯರು ಬೆಂಬಲ ನೀಡಿದ್ದಾರೆ. 2023ರ ಜೂ.11 ರಿಂದ 2024ರ ಫೆ.12ವರೆಗೆ 151 ಕೋಟಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. KSRTC, BMTC ಸೇರಿ ಎಲ್ಲಾ ಸಾರಿಗೆ ನಿಗಮಗಳ ಮೂಲಕ ಮಹಿಳೆಯರ ಪ್ರಯಾಣ ಮಾಡಿದ್ದಾರೆ. 

Tap to resize

Latest Videos

HSRP ನಂಬರ್ ಪ್ಲೇಟ್ ಅಳವಡಿಕೆ ದಿನಾಂಕದ ಬಿಗ್‌ ಅಪ್ಡೇಟ್ ಕೊಟ್ಟ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ!

ಶಕ್ತಿ ಯೋಜನೆ ಜಾರಿಯಾಗಿ ಎಂಟು ತಿಂಗಳಿಗೆ 3,599 ಕೋಟಿ ರೂ. ವ್ಯಯ ಮಾಡಲಾಗಿದೆ. ಪ್ರತಿ‌ನಿತ್ಯ‌ ಲಕ್ಷ ಲಕ್ಷ ಮಹಿಳಾ ಮಣಿಗಳ ಟ್ರಾವೆಲ್ ನಿಂದ 3,614 ಕೋಟಿ ವ್ಯಯವಾಗಿದೆ. ಕಳೆದ 244 ದಿನಗಳಲ್ಲಿ  151,35,86,738 ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. (ಇಲ್ಲಿವರೆಗೆ  151,35,86,738 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಒಟ್ಟು  ಮಹಿಳಾ ಪ್ರಯಾಣಿಕರ ಪ್ರಯಾಣದಿಂದ 3614,52,04,190 ಕೋಟಿ ರೂ. ಸರ್ಕಾರದ ಹಣ ವೆಚ್ಚವಾಗಿದೆ.

ರಾಜ್ಯಪಾಲ ಭಾಷಣದಲ್ಲಿ ಕೇಂದ್ರದ ವಿರುದ್ಧ ಟಾಕ್‌ಫೈಟ್‌, ತೆರಿಗೆ ವಿಚಾರದಲ್ಲಿ ಕರ್ನಾಟಕಕ್ಕೆ ತಾರತಮ್ಯ ಉಲ್ಲೇಖ

2023 ಜೂನ್ 11ರಿಂದ 2024 ಫೆ 12 ವರೆಗೆ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ವಿವರ
ಕೆಎಸ್ ಆರ್ ಟಿಸಿ
- 45,45,17,37
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 1353,10,12,687
ಬಿಎಂಟಿಸಿ - 48,39,84,130
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 628,87,65,004
ವಾಯುವ್ಯ (NWKRTC)  - 35,41,36,589
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 902,46,96,592
ಕಲ್ಯಾಣ ಕರ್ನಾಟಕ (KKRTC) - 22,09,48,649
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 730,07,29,907

click me!