ಮದ್ಯಪಾನ ಮಾಡಿ ವಾಹನವನ್ನು ಎಂದಿಗೂ ಚಲಾಯಿಸಬಾರದು. ಇದು ಅತ್ಯಂತ ಅಪಾಯಕಾರಿಯಾಗಿದೆ. ಭಾರತದಲ್ಲಿ ಇದಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನು ಜಾರಿಯಲ್ಲಿದೆ. ಆಲ್ಕೋಹಾಲ್ ಸೇವನೆ ಮಾಡಿ ವಾಹನ ಚಲಾಯಿಸುವ ವೇಳೆ ಪೊಲೀಸ್ ಕೈಗೆ ಸಿಕ್ಕಿಬಿದ್ರೆ ದಂಡದ ಜೊತೆ ಜೈಲು ಗ್ಯಾರಂಟಿ.
ಭಾರತದಲ್ಲಿ ಮದ್ಯಪಾನಿಗಳ ಸಂಖ್ಯೆ ಏರಿಕೆಯಾಗ್ತಿದೆ. ಹೊಸ ವರ್ಷದ ಸಂಭ್ರಮಾಚರಣೆಯೊಂದರಲ್ಲೇ ಬೆಂಗಳೂರಿನಲ್ಲಿ 183 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿತ್ತು. ಅಂದ್ರೆ ಮದ್ಯ ಪ್ರೇಮಿಗಳ ಸಂಖ್ಯೆ ಎಷ್ಟಿದೆ ಎಂಬುದನ್ನು ನೀವು ಅಂದಾಜಿಸಬಹುದು. ಮದ್ಯಪಾನ ಮಾಡಿ ಮನೆಯಲ್ಲಿದ್ರೆ ಸಮಸ್ಯೆಯಿಲ್ಲ. ಆದ್ರೆ ಆಲ್ಕೋಹಾಲ್ ಸೇವನೆ ಮಾಡಿದ ನಂತ್ರ ವಾಹನ ಚಲಾಯಿಸುವವರ ಸಂಖ್ಯೆ ಭಾರತದಲ್ಲಿ ಹೆಚ್ಚಿದೆ. ಇದ್ರಿಂದ ಅನಾಹುತಗಳು ನಡೆಯುತ್ತಲೆ ಇರುತ್ವೆ. ಭಾರತದಲ್ಲಿ ಡ್ರಿಂಕ್ ಅಂಡ್ ಡ್ರೈವ್ ಕಾನೂನು ಬಾಹಿರವಾಗಿದೆ.
ಕಾನೂನಿ (Law) ನಲ್ಲಿ ಮದ್ಯಪಾನ (Alcohol) ಮಾಡಿ, ವಾಹನ (Vehicle) ಚಲಾವಣೆ ಮಾಡಿದ್ರೆ ಶಿಕ್ಷೆ (Punishment) ಯಾಗುತ್ತದೆ ಎಂಬುದರ ಅರಿವಿದ್ದರೂ ಅನೇಕರು ಮದ್ಯಪಾನ ಮಾಡಿಯೇ ವಾಹನ ಓಡಿಸ್ತಾರೆ. ಇದ್ರಿಂದ ಅವರು ಮಾತ್ರವಲ್ಲ ಅಮಾಯಕರ ಪ್ರಾಣ ತೆಗೆಯುತ್ತಾರೆ. ಡ್ರಿಂಕ್ ಅಂಡ್ ಡ್ರೈವ್ ನಿಂದಾಗುವ ಅನಾಹುತ ತಪ್ಪಿಸಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ನಾವಿಂದು ಅದ್ರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡ್ತೇವೆ.
Knowledge : ಈ ದೇಶದಲ್ಲಿ ಅಪರಾಧಿಗಳೇ ಇಲ್ಲ…! ಹಾಗಾದ್ರೆ ಜೈಲು ಇನ್ಯಾಕೆ?
ಮದ್ಯಪಾನ ಸೇವನೆ ಮಾಡಿದ ನಂತ್ರ ಕೆಲವರು ಮೌತ್ ಫ್ರೆಶ್ನರ್ ಸೇವಿಸಿ ವಾಹನ ಚಲಾಯಿಸುತ್ತಾರೆ. ಮದ್ಯಪಾನ ಮಾಡಿರೋದು ಪೊಲೀಸರಿಗೆ ತಿಳಿಯಬಾರದು ಎನ್ನುವ ಕಾರಣಕ್ಕೆ ಅವರು ಮೌತ್ ಫ್ರೆಶ್ನರ್ ಬಳಸ್ತಾರೆ. ಆದ್ರೆ ಇದ್ರಿಂದ ಪಾರಾಗಲು ಸಾಧ್ಯವಿಲ್ಲ. ಟ್ರಾಫಿಕ್ ಪೊಲೀಸರ ಬಳಿ ಬ್ರೀತ್‌ಅಲೈಸರ್ ಎಂಬ ವಿಶೇಷ ಯಂತ್ರವಿದೆ. ಅದ್ರ ಸಹಾಯದಿಂದ ಚಾಲಕ ಆಲ್ಕೋಹಾಲ್ ಸೇವನೆ ಮಾಡಿದ್ದಾನೆಯೇ ಎಂಬುದನ್ನು ಪತ್ತೆ ಮಾಡಬಹುದು.
ಡ್ರಿಂಕ್ ಅಂಡ್ ಡ್ರೈವ್ ಕೇಸ್ ಗೆ ಏನು ಶಿಕ್ಷೆ? : ಭಾರತದಲ್ಲಿ ಯಾವುದೇ ವ್ಯಕ್ತಿ ಕುಡಿದು ವಾಹನ ಚಲಾವಣೆ ಮಾಡ್ತಿದ್ದರೆ ಟ್ರಾಫಿಕ್ ಪೊಲೀಸರು ಆತನ ಮೇಲೆ ಸೆಕ್ಷನ್ 185 ರಡಿ ದೂರು ದಾಖಲಿಸುತ್ತಾರೆ. BAC ಪರೀಕ್ಷೆ ಮಾಡಿದ ನಂತ್ರ ದಂಡ ವಿಧಿಸಬಹುದು. ವಾಹನವನ್ನು ಸಹ ಕಸ್ಟಡಿಗೆ ತೆಗೆದುಕೊಳ್ಳಬಹುದು. ಆದರೆ ನಿರ್ದಿಷ್ಟ ಮಿತಿಯಲ್ಲಿ ಮದ್ಯ ಸೇವಿಸಿದ್ದರೆ ನಿಮ್ಮ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಶುಲ್ಕ ವಿಧಿಸುವುದಿಲ್ಲ. ಮಿತಿ ಮೀರಿದ್ರೆ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 207 ರ ಅಡಿಯಲ್ಲಿ ನಿಮ್ಮ ವಾಹನವನ್ನು ವಶಪಡಿಸಿಕೊಳ್ಳಲಾಗುತ್ತದೆ. ವಾಹನದ ಎಲ್ಲಾ ದಾಖಲೆಗಳನ್ನು ಸಹ ಸಂಚಾರ ಪೊಲೀಸರು ಸಂಗ್ರಹಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೆ. ಏಳು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 2,000 ರೂಪಾಯಿಯಿಂದ 10,000 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.
ಇನ್ನು ಬೆಂಗಳೂರಿನಲ್ಲಿ ಕುಡಿದು ವಾಹನ ಚಾಲನೆ ಮಾಡಿದರೆ ಮೊದಲ ಬಾರಿ 10,000 ರೂಪಾಯಿ ದಂಡ ಅಥವಾ 6 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಎರಡನೇ ಬಾರಿ ಅಪರಾಧಕ್ಕೆ 15,000 ರೂಪಾಯಿ ದಂಡ ಅಥವಾ 2 ವರ್ಷಗಳವರೆಗೆ ಜೈಲು ಶಿಕ್ಷೆಯಾಗುತ್ತದೆ.
FLIGHT RULES : ಗಗನಸಖಿಯರ ಆಕರ್ಷಕ ಬ್ಯಾಗ್ ಒಳಹೊಕ್ಕಿ ನೋಡಿದಾಗ…
ಎಷ್ಟು ಆಲ್ಕೋಹಾಲ್ ಸೇವಿಸಿ ವಾಹನ ಚಲಾಯಿಸಬಹುದು? : ಮದ್ಯ ಸೇವಿಸಿ ವಾಹನ ಚಾಲನೆ ಮಾಡುವ ಸಹವಾಸಕ್ಕೆ ಹೋಗ್ಬಾರದು. ಅಷ್ಟಾಗಿಯೂ ಒಬ್ಬ ವ್ಯಕ್ತಿಯ ರಕ್ತದಲ್ಲಿ ಆಲ್ಕೋಹಾಲ್ ಅಂಶ ಶೇಕಡಾ 0.03 ರಷ್ಟಿದ್ದರೆ, ಅಂದರೆ 100 ಮಿಲಿಯಲ್ಲಿ 30 ಮಿಗ್ರಾಂ ಇದ್ದರೆ ಆತನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಿಲ್ಲ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಇದ್ದರೆ ಕಾನೂನು ಕ್ರಮಕೈಗೊಳ್ಳಲಾಗುವುದು.
ಸಂಶೋಧನೆ ಹೇಳೋದೇನು? : ವರ್ಜೀನಿಯಾ ಟೆಕ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ 600 ಮಿಲಿ ಬಿಯರ್ ಹಾಗೂ 60 ಮಿಲಿ ವಿಸ್ಕಿ ಸೇವನೆ ಮಾಡುವುದ್ರಿಂದ ನಮ್ಮ ರಕ್ತದಲ್ಲಿ ಆಲ್ಕೋಹಾಲ್ ಸೇರುತ್ತದೆ. 9.5 ಮಿಲಿ ಆಲ್ಕೋಹಾಲ್ ಮೂತ್ರದ ಮೂಲಕ ದೇಹದಿಂದ ಹೊರಬರಲು ಕನಿಷ್ಠ 1 ಗಂಟೆ ಬೇಕಾಗುತ್ತದೆ. ಹಾಗಾಗಿ ಆಲ್ಕೋಹಾಲ್ ಸೇವನೆ ಮಾಡಿದ 2 ಗಂಟೆಯ ನಂತ್ರ ವಾಹನ ಚಲಾವಣೆ ಮಾಡುವುದು ಸೂಕ್ತ ಎನ್ನುತ್ತಾರೆ ತಜ್ಞರು.