ವರ್ಕ್ ಫ್ರಮ್ ಹೋಮ್ ಮಾಡ್ತಿರುವವರಿಗೆ ಗುಡ್‌ನ್ಯೂಸ್‌ : ಸ್ಪೆಷಲ್ ವೀಸಾ ನೀಡಲಿದೆ ಇಂಡೋನೇಷ್ಯಾ

By Anusha KbFirst Published Jun 25, 2022, 4:04 PM IST
Highlights

ಬಾಲಿ: ಪ್ರವಾಸಿಗರನ್ನು ದೇಶಕ್ಕೆ ಸೆಳೆದು ಈ ಮೂಲಕ ಆರ್ಥಿಕ ಚೇತರಿಕೆಗೆ ಮುಂದಾಗಿರುವ ಇಂಡೋನೇಷ್ಯಾವೂ ಹೊಸ ಡಿಜಿಟಲ್ ಅಲೆಮಾರಿ ವೀಸಾವನ್ನು ಪರಿಚಯಿಸುವ ಯೋಜನೆಗಳ ಬಗ್ಗೆ ಯೋಚಿಸುತ್ತಿದೆ.  ಅದು ಪ್ರೀಲ್ಯಾನ್ಸಿಂಗ್ ಮಾಡುವವರಿಗೆ ದೇಶದಲ್ಲಿ ತೆರಿಗೆ ಮುಕ್ತವಾಗಿ ವಾಸಿಸಲು ಮತ್ತು ಕೆಲಸ ಮಾಡಲು ಅನುವು ಮಾಡಿ ಕೊಡುತ್ತದೆ.

ಬಾಲಿ: ಪ್ರವಾಸಿಗರನ್ನು ದೇಶಕ್ಕೆ ಸೆಳೆದು ಈ ಮೂಲಕ ಆರ್ಥಿಕ ಚೇತರಿಕೆಗೆ ಮುಂದಾಗಿರುವ ಇಂಡೋನೇಷ್ಯಾವೂ ಹೊಸ ಡಿಜಿಟಲ್ ಅಲೆಮಾರಿ ವೀಸಾವನ್ನು ಪರಿಚಯಿಸುವ ಯೋಜನೆಗಳ ಬಗ್ಗೆ ಯೋಚಿಸುತ್ತಿದೆ.  ಅದು ಪ್ರೀಲ್ಯಾನ್ಸಿಂಗ್ ಮಾಡುವವರಿಗೆ ದೇಶದಲ್ಲಿ ತೆರಿಗೆ ಮುಕ್ತವಾಗಿ ವಾಸಿಸಲು ಮತ್ತು ಕೆಲಸ ಮಾಡಲು ಅನುವು ಮಾಡಿ ಕೊಡುತ್ತದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಮತ್ತು ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಮೂಲಕ ಏಷ್ಯಾ ರಾಷ್ಟ್ರವು ಸುಮಾರು 36 ಲಕ್ಷ ಸಾಗರೋತ್ತರ ಪ್ರವಾಸಿಗರನ್ನು ಆಕರ್ಷಿಸಲು ಚಿಂತನೆ ನಡೆಸಿದೆ.

ಐದು ವರ್ಷಗಳ ಈ 'ಡಿಜಿಟಲ್ ಅಲೆಮಾರಿ ವೀಸಾ' ದ ಪ್ರಸ್ತಾಪವನ್ನು ಇಂಡೋನೇಷ್ಯಾದ ಪ್ರವಾಸೋದ್ಯಮ ಸಚಿವ ಸ್ಯಾಂಡಿಯಾಗ ಯುನೊ (Sandiaga Uno) ಅವರು ಪ್ರಸ್ತಾಪಿಸಿದ್ದಾರೆ. ಅವರು ಮೂರು 'ಎಸ್' ಪದಗಳಿಂದ ಆರಂಭವಾಗುವ ಸೂರ್ಯ, ಸಮುದ್ರ ಮತ್ತು ಮರಳು ( sun, sea and sand) ಇವುಗಳನ್ನು ಇಂಡೋನೇಷ್ಯಾದ  "ಪ್ರಶಾಂತತೆ, ಆಧ್ಯಾತ್ಮಿಕತೆ ಮತ್ತು ಸಮರ್ಥನೀಯತೆ" (serenity, spirituality and sustainability) ಆಗಿ ಪರಿವರ್ತಿಸುವ ಗುರಿಯನ್ನು ಹೊಂದಿದ್ದಾರೆ. ಅಲ್ಲಿನ ಮಾಧ್ಯಮ ಬ್ಲೂಮ್‌ಬರ್ಗ್ ವರದಿ ಮಾಡಿದಂತೆ, ಈ ರೀತಿಯಲ್ಲಿ ಮಾಡುವುದರಿಂದ ನಾವು ಉತ್ತಮ ಗುಣಮಟ್ಟದ ಮತ್ತು ಸ್ಥಳೀಯ ಆರ್ಥಿಕತೆಯ ಚೇತರಿಕೆಗೆ ಉತ್ತಮ ಪರಿಣಾಮವನ್ನು ಪಡೆಯಬಹುದು ಎಂದು ಸಚಿವರು ಹೇಳಿದರು.

ಇಂಡೋನೇಷ್ಯಾ ಟ್ರಿಪ್ ಹೋಗ್ತಿದ್ದೀರಾ... ಹಾಗಿದ್ರೆ ಇದ್ನ ಮಿಸ್ ಮಾಡ್ಬೇಡಿ

ಡಿಜಿಟಲ್ ಅಲೆಮಾರಿ ವೀಸಾವನ್ನು ಸ್ವತಂತ್ರ ಉದ್ಯೋಗಿಗಳು (freelancers) ಅಥವಾ ದೂರದಲ್ಲಿರುವ ಕೆಲಸಗಾರರಿಗೆ ನೀಡಲಾಗುವುದು. ಈ ವೀಸಾ ಪಡೆದ ಬಳಿಕ ಅವರು ಬಾಲಿಯಂತಹ (Bali) ಸುಂದರ ದ್ವೀಪಗಳಲ್ಲಿ ತೆರಿಗೆ ಮುಕ್ತವಾಗಿ ವಾಸಿಸಬಹುದು. ಆದರೆ ಒಂದು ಷರತ್ತು ಇದೆ. ಇಂಡೋನೇಷ್ಯಾದ ಹೊರಗಿನಿಂದ  ಗಳಿಕೆ ಮಾಡುತ್ತಿರುವವರಿಗೆ ಮಾತ್ರ ಹೀಗೆ ತೆರಿಗೆ ಮುಕ್ತವಾಗಿ ವಾಸಿಸುವ ಅವಕಾಶ ಇದೆ. 

ವರದಿಗಳ ಪ್ರಕಾರ, ಡಿಜಿಟಲ್ ಅಲೆಮಾರಿಗಳು (digital nomads) ತಮ್ಮ ಆದ್ಯತೆಯ ಪಟ್ಟಿಯಲ್ಲಿ ಏಷ್ಯಾವನ್ನು (Asia) ಹೊಂದಿದ್ದಾರೆ. ಇದನ್ನು ಮತ್ತಷ್ಟು ವಿಶಿಷ್ಠಗೊಳಿಸಿದರೆ, ಇಂಡೋನೇಷ್ಯಾ (Indonesia), ವಿಶೇಷವಾಗಿ ಬಾಲಿ (Bali), ಪ್ರವಾಸಿಗರ ಪ್ರಮುಖ ಆಯ್ಕೆಗಳಲ್ಲಿ ಒಂದಾಗಿದೆ. ವಿವಿಧ ಸಮೀಕ್ಷೆಗಳಲ್ಲಿ ಗಮನಿಸಿದಂತೆ  ಆದ್ಯತೆಯ ಆಧಾರದ ಮೇಲೆ ಇಂಡೋನೇಷ್ಯಾ ಈ ವಿಶೇಷ ವೀಸಾಗಳನ್ನು ನೀಡಲು ನಿರ್ಧರಿಸಿದೆ.

ಎಲ್ಲಿಂದ ಬೇಕಾದ್ರು ಕೆಲ್ಸ ಮಾಡಿ, ಸ್ಯಾಲರಿ ಕಡಿಮೆ ಮಾಡಲ್ಲ: ಉದ್ಯೋಗಿಗಳಿಗೆ Airbnb ಆಫರ್
2021 ರಿಂದ ಇದೇ ರೀತಿಯ ಕೆಲಸಗಳು ನಡೆಯುತ್ತಿವೆ ಆದರೆ ಗಡಿಗಳಲ್ಲಿ ಹೆಚ್ಚುತ್ತಿರುವ COVID-19 ಪ್ರಕರಣಗಳ ಕಾರಣ ಸರ್ಕಾರವು ಈ ಯೋಜನೆಗಳನ್ನು  ಕೆಲ ಕಾಲ ಸ್ತಗಿತಗೊಳಿಸಿದೆ. ಇದೀಗ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಹಲವು ನಿರ್ಬಂಧಗಳನ್ನು ತೆರವುಗೊಳಿಸಲು ಸರ್ಕಾರ ನಿರ್ಧರಿಸಿದೆ. ಬಿಸಿಯಾಗಿರುವಾಗಲೇ ಕಬ್ಬಿಣವನ್ನು ಹೊಡೆಯಬೇಕು ಎಂಬ ಮಾತನ್ನು ಪಾಲಿಸುತ್ತಿರುವ ಇಂಡೋನೇಷ್ಯಾ ಈ ಸಂದರ್ಭವನ್ನು ಚೆನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ಇದರ ಪರಿಣಾಮವೇ ಡಿಜಿಟಲ್ ಅಲೆಮಾರಿ ವೀಸಾ (digital nomad visa).

ಇಂಡೋನೇಷ್ಯಾದಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಕೋವಿಡ್ 19 ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡಿತು. ಸಕ್ರಿಯ ರೋಗಿಗಳ ಸಂಖ್ಯೆ ಪ್ರತಿದಿನ ಸುಮಾರು 54,000 ಕ್ಕೆ ಏರಿತು. ಆದರೆ ನಂತರದಲ್ಲಿ ಪರಿಸ್ಥಿತಿ ಸುಧಾರಿಸಿದೆ. ಇದಾದ ಬಳಿಕ ಏಪ್ರಿಲ್‌ನಲ್ಲಿ, 1,11,000 ಪ್ರವಾಸಿಗರು ದೇಶಕ್ಕೆ ಭೇಟಿ ನೀಡಿದ್ದರು. ಇದರಿಂದ ಪ್ರವಾಸಿಗರ ಆಗಮನದಲ್ಲಿ ಗಣನೀಯ ಏರಿಕೆ ಕಂಡಿತು. ಇದು ಸಾಂಕ್ರಾಮಿಕ ರೋಗದ ನಂತರದ ಅತ್ಯಧಿಕ ಮಾಸಿಕ ಮೊತ್ತವಾಗಿ ದಾಖಲಾಗಿದೆ.

click me!