ರೈಲು ವಿದ್ಯುತ್‌ನಿಂದ ಚಲಿಸುತ್ತಿದ್ರೂ ಜನರೇಟರ್ ಏಕೆ ಅಳವಡಿಸುತ್ತಾರೆ? ರಹಸ್ಯ ತಿಳಿದರೆ ನೀವು ಆಶ್ಚರ್ಯಚಕಿತರಾಗ್ತೀರಿ!

Published : Mar 10, 2025, 11:55 AM ISTUpdated : Mar 10, 2025, 12:55 PM IST
ರೈಲು ವಿದ್ಯುತ್‌ನಿಂದ ಚಲಿಸುತ್ತಿದ್ರೂ ಜನರೇಟರ್ ಏಕೆ ಅಳವಡಿಸುತ್ತಾರೆ? ರಹಸ್ಯ ತಿಳಿದರೆ ನೀವು ಆಶ್ಚರ್ಯಚಕಿತರಾಗ್ತೀರಿ!

ಸಾರಾಂಶ

Indian Railways: ವಿದ್ಯುತ್ ರೈಲುಗಳಲ್ಲಿ ಜನರೇಟರ್ ಕೋಚ್ ಏಕೆ ಅಳವಡಿಸುತ್ತಾರೆ ಎಂಬ ಪ್ರಶ್ನೆಗೆ ರಾಂಚಿ ರೈಲ್ವೆ ವಿಭಾಗದ ಹಿರಿಯ ಡಿಸಿಎಂ ನಿಶಾಂತ್ ಕುಮಾರ್ ಉತ್ತರ ನೀಡಿದ್ದಾರೆ. 

ನವದೆಹಲಿ: ಭಾರತೀಯ ರೈಲು ದೇಶದ ಜೀವನಾಡಿಯಾಗಿ ಕೆಲಸ ಮಾಡುತ್ತಿದೆ. ರೈಲುಗಳ ತಂತ್ರಜ್ಞಾನ ಸಹ ಸುಧಾರಣೆಯಾಗುತ್ತಿದ್ದು, ಡೀಸೆಲ್ ಇಂಜಿನ್ ಬಳಕೆ ಕಾಲಕ್ರಮೇಣ ಕಡಿಮೆಯಾಗುತ್ತಿದೆ. ಇಂದು  ಭಾರತದ ಬಹುತೇಕ ರೈಲು ಮಾರ್ಗಗಳು ವಿದ್ದುದೀಕರಣಗೊಳ್ಳುತ್ತಿವೆ. ಆದರೆ ರೈಲುಗಳು ವಿದ್ಯುತ್‌ನಿಂದ ಚಲಿಸುತ್ತಿದ್ದರೂ ಜನರೇಟರ್ ಅಳವಡಿಕೆ ಮಾಡಲಾಗಿರುತ್ತದೆ. ರೈಲಿಗೆ ನೇರವಾಗಿ ವಿದ್ಯುತ್ ಸಂಪರ್ಕವಿದ್ದರೂ, ಯಾಕೆ ಜನರೇಟರ್ ಬೋಗಿಯನ್ನು ಅಳವಡಿಕೆ ಮಾಡಲಾಗಿರುತ್ತೆ ಎಂಬ ಪ್ರಶ್ನೆ ಜನರಲ್ಲಿ ಮೂಡಿರುತ್ತದೆ. ಇಂದು ಆ ಪ್ರಶ್ನೆಗೆ ಉತ್ತರ ಈ ಲೇಖನದಲ್ಲಿದೆ. 

ರಾಜಧಾನಿ, ಶತಾಬ್ದಿ, ಡುರೊಂಟೊದಂತಹ ಎಕ್ಸ್‌ಪ್ರೆಸ್ ರೈಲುಗಳ ಕೊನೆಗೆ ಜನರೇಟರ್ ಕೋಚ್ ಅಳವಡಿಕೆ ಮಾಡಲಾಗಿರುತ್ತದೆ. ಈ ಬೋಗಿ ದೊಡ್ಡಮಟ್ಟದಲ್ಲಿ  ಶಬ್ದವನ್ನು ಮಾಡುತ್ತಿರುತ್ತದೆ. ನಿಲ್ದಾಣದಲ್ಲಿ ನಿಂತಿದ್ದರೂ ಇದರ  ಶಬ್ದ ಜೋರಾಗಿಯೇ ಇರುತ್ತದೆ. ದೀರ್ಘ ಪ್ರಯಾಣದ ರೈಲಿನಲ್ಲಿ  ಪ್ಯಾಂಟ್ರಿ ಕಾರ್, ಸ್ಲೀಪರ್ ಕೋಚ್, ಎಸಿ ಕೋಚ್ ನಂತೆಯೇ ಒಂದು ಜನರೇಟರ್ ಕೋಚ್ (ಜನರೇಟರ್ ಕಾರ್) ಅಳವಡಿಕೆ ಮಾಡಲಾಗಿರುತ್ತದೆ. ವಿದ್ಯುತ್ ರೈಲುಗಳಲ್ಲಿ ಜನರೇಟರ್ ಕಾರನ್ನು ಏಕೆ ಅಳವಡಿಸಲಾಗುತ್ತೆ ಎಂಬ ವಿಷಯ ಬಹುತೇಕರಿಗೆ ತಿಳಿದಿರಲ್ಲ. ಈ ಪ್ರಶ್ನೆಗೆ ರಾಂಚಿ ರೈಲ್ವೆ ವಿಭಾಗದ ಹಿರಿಯ ಡಿಸಿಎಂ ನಿಶಾಂತ್ ಕುಮಾರ್ ಉತ್ತರ ನೀಡಿದ್ದಾರೆ. 

ಜನರೇಟರ್ ಕೋಚ್ ಅಳವಡಿಕೆ ಯಾಕೆ?
ದೂರ ಪ್ರಯಾಣದ ರೈಲುಗಳಲ್ಲಿನ ಎಸಿ ಕೋಚ್‌ಗಳಿಗೆ ಹೆಚ್ಚಿನ ವಿದ್ಯುತ್ ಬೇಕಾಗುತ್ತದೆ. ಕೇವಲ ವಿದ್ಯುತ್ ಸರಬರಾಜಿನ ಮೇಲೆ ಅವಲಂಬನೆ ಆಗಲು ಸಾಧ್ಯವಿಲ್ಲ. ವಿದ್ಯುತ್ ಸರಬರಾಜಿನ ತಂತಿಯಿಂದಲೇ ಎಸಿ ಕೋಚ್ ನಿರ್ವಹಣೆ ಮಾಡೋದು ಅಸಾಧ್ಯವಾಗುತ್ತದೆ. ಈ ಹಿನ್ನೆಲೆ ದೂರ ಪ್ರಯಾಣದ ರೈಲುಗಳಲ್ಲಿ ಜನರೇಟರ್‌ ಕೋಚ್/ಕಾರ್ ಅಳವಡಿಕೆ ಮಾಡಲಾಗುತ್ತದೆ ಎಂದು ನಿಶಾಂತ್ ಕುಮಾರ್ ಹೇಳುತ್ತಾರೆ. ಪ್ರತಿ ಎಸಿ ಕೋಚ್‌ಗೆ ವಿದ್ಯುತ್ ಪೂರೈಸಲು ಜನರೇಟರ್ ಅವಶ್ಯಕತೆ ಇರುತ್ತದೆ ಎಂದು ನಿಶಾಂತ್ ಕುಮಾರ್ ಹೇಳುತ್ತಾರೆ. 

ಇದನ್ನೂ ಓದಿ: ಬೈಕ್, ಕಾರ್ ರೀತಿ ರೈಲಿನಲ್ಲಿ ಗೋವುಗಳನ್ನು ಟ್ರಾನ್ಸ್‌ಪೋರ್ಟ್ ಮಾಡಬಹುದಾ?

ದೂರದ ರೈಲುಗಳ ಇಂಜಿನ್ ಅಡಿಯಲ್ಲಿ ಬ್ಯಾಟರಿ ಅಳವಡಿಕೆ ಮಾಡಲಾಗಿರುತ್ತದೆ. ಈ  ಬ್ಯಾಟರಿ ಯಾವಾಗಲೂ ಚಾರ್ಜ್ ಆಗುತ್ತಿರುತ್ತದೆ. ಆದ್ರೆ ಈ  ಬ್ಯಾಟರಿ  ಕಾರ್ಯನಿರ್ವಹಿಸಲ್ಲ. ವಿದ್ಯುತ್ ಸರಬರಾಜು ನಿರಂತರವಾಗಿ ಇರುವಂತೆ ಮತ್ತು ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಜನರೇಟರ್ ಕೋಚ್‌ ಅಳವಡಿಸುವುದು ಅವಶ್ಯಕ.  ಶತಾಬ್ದಿ, ಡುರೊಂಟೊ, ಗರೀಬ್ ರಥ, ತೇಜಸ್ ಮತ್ತು ರಾಜಧಾನಿಯಂತಹ ರೈಲುಗಳಲ್ಲಿ ಹೆಚ್ಚು ಎಸಿ ಕೋಚ್‌ಗಳನ್ನು  ಹೊಂದಿರುತ್ತವೆ. ಹಾಗಾಗಿ ಈ ರೈಲುಗಳಿಗೆ ಹೆಚ್ಚಿನ ವಿದ್ಯುತ್ ಬೇಕಾಗುತ್ತದೆ. ಈ ರೈಲುಗಳಲ್ಲಿ ಕಡ್ಡಾಯವಾಗಿ ಜನರೇಟರ್ ಕಾರ್ ಅಳವಡಿಕೆ ಮಾಡಲಾಗಿರುತ್ತದೆ. ಈ ರೈಲುಗಳಲ್ಲಿ 24 ಗಂಟೆಯೂ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. 

ಇದನ್ನೂ ಓದಿ: ರೈಲಿನಲ್ಲಿ ಕೇಂದ್ರ ಸಚಿವರನ್ನ ನೋಡ್ತಿದ್ದಂತೆ ಸಿಗ್ನೇಚರ್ ಸ್ಟೆಪ್ಸ್ ಹಾಕಿ ಗರ್ಲ್ಸ್‌ ಗ್ಯಾಂಗ್‌ನಿಂದ ರೀಲ್ಸ್

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!
ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್