
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸದ್ಯ ದೇಶದ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಹಾಗೂ ಅತಿ ವೇಗದ ಭಾರತೀಯ ರೈಲುಗಳಲ್ಲಿ ಒಂದಾಗಿದೆ. ಭಾರತದ ಮಹಾನಗರಗಳಲ್ಲಿ ವಂದೇ ಭಾರತ್ ರೈಲುಗಳು ಈಗಾಗಲೇ ಸಂಚಾರ ಆರಂಭಿಸಿವೆ. ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಗೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಬೇಡಿಕೆ ಹೆಚ್ಚಿದೆ. ಸುಲಭವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಬಹುದು ಅನ್ನೋ ಕಾರಣಕ್ಕೆ ಹೆಚ್ಚಿನವರು ಇದರಲ್ಲಿ ಪ್ರಯಾಣಿಸಲು ಆಸಕ್ತಿ ತೋರಿಸುತ್ತಿದ್ದಾರೆ.
ಭಾರತೀಯ ರೈಲ್ವೇ ಪ್ರಪಂಚದಾದ್ಯಂತದ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾಗಿದೆ. ರೈಲು ಪ್ರಯಾಣವ (Train Journey) ಯಾವಾಗಲೂ ದೇಶದ ಕೆಲವು ಸುಂದರವಾದ ಭೂದೃಶ್ಯಗಳ ಮೂಲಕ ಹಾದುಹೋಗುತ್ತವೆ. ಇತ್ತೀಚೆಗೆ, ಭಾರತೀಯ ರೈಲ್ವೇಯು ಉತ್ತರ ಪ್ರದೇಶದ ವಾರಣಾಸಿ ಮೂಲಕ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡುತ್ತಿರುವ ಅತ್ಯದ್ಭುತವಾದ ವೀಡಿಯೊವನ್ನು ಹಂಚಿಕೊಂಡಿದೆ.
ಬರಲಿದೆ ಅತ್ಯಾಧುನಿಕ ಸೌಲಭ್ಯದ ಟಿಕೆಟ್ ದರ ಕಡಿಮೆ ಇರುವ ವಂದೇ ಸಾಧಾರಣ್ ಎಕ್ಸ್‌ಪ್ರೆಸ್
ಹಸಿರು ಕ್ಯಾನ್ವಾಸ್‌ನಲ್ಲಿ ವಾರಣಾಸಿ-ದೆಹಲಿ ವಂದೇಭಾರತ್ ಎಕ್ಸ್‌ಪ್ರೆಸ್
ವೀಡಿಯೋದಲ್ಲಿ ವಾರಣಾಸಿ-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಕೇವಲ ರೈಲಲ್ಲ, ಇದು ಚಲಿಸುವ ಕ್ಯಾನ್ವಾಸ್‌ನಂತೆ ಗೋಚರಿಸುತ್ತದೆ. ವಾರಣಾಸಿಯ ಹೊರವಲಯದಲ್ಲಿರುವ ಸೊಂಪಾದ ಕೃಷಿಭೂಮಿಗಳ (Agricultural land) ಮೂಲಕ ವೇಗವಾಗಿ ಚಲಿಸುವಾಗ ಅದ್ಭುತ ಪ್ರಕೃತಿ ಸೌಂದರ್ಯವನ್ನು ಚಿತ್ರಿಸುತ್ತದೆ. ಈ ಅತಿವೇಗದ ಅದ್ಭುತ ರೈಲಿನ ಪ್ರಯಾಣವು ಅಸಾಮಾನ್ಯ ಅನುಭವವಾಗಿದೆ. ಪ್ರಯಾಣಿಕರಿಗೆ ಸುಂದರ ಅನುಭವವನ್ನು ನೀಡುತ್ತದೆ
"ಹಸಿರು ಕ್ಯಾನ್ವಾಸ್‌ನಲ್ಲಿ ವಾರಣಾಸಿ-ದೆಹಲಿ ವಂದೇಭಾರತ್ ಎಕ್ಸ್‌ಪ್ರೆಸ್ ವಾರಣಾಸಿ ಹೊರವಲಯದಲ್ಲಿರುವ ಕೃಷಿಭೂಮಿಗಳ ಮೇಲೆ ವೇಗವಾಗಿ ಚಲಿಸುತ್ತಿದೆ' ಎಂದು ಭಾರತೀಯ ರೈಲ್ವೆ ಟ್ವೀಟ್‌ನಲ್ಲಿ ತಿಳಿಸಿದೆ.
ಜಪಾನ್ ರೀತಿ 14 ನಿಮಿಷದಲ್ಲೇ ವಂದೇ ಭಾರತ್ ರೈಲು ಸ್ವಚ್ಛಗೊಳಿಸಿದ ಸಿಬ್ಬಂದಿ!
ಉತ್ತರ ಪ್ರದೇಶಕ್ಕೆ ಶೀಘ್ರದಲ್ಲೇ ಮತ್ತೊಂದು ವಂದೇ ಭಾರತ್
ಈ ಮಧ್ಯೆ, ಭಾರತೀಯ ರೈಲ್ವೇ ಉತ್ತರ ಪ್ರದೇಶಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಪರಿಚಯಿಸಲು ಸಿದ್ಧವಾಗಿದೆ. ಈ ಘೋಷಣೆಯೊಂದಿಗೆ, ರಾಷ್ಟ್ರೀಯ ಸಾರಿಗೆ ವ್ಯವಸ್ಥೆಯು ರಾಜ್ಯಕ್ಕೆ ಮೂರು ಸೆಮಿ-ಹೈ-ಸ್ಪೀಡ್ ರೈಲುಗಳನ್ನು ಗೊತ್ತುಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 18ರಂದು ವಾರಣಾಸಿ ರೈಲು ನಿಲ್ದಾಣದಲ್ಲಿ (Railway station) ಈ ಆಧುನಿಕ ರೈಲನ್ನು ಉದ್ಘಾಟಿಸಲಿದ್ದಾರೆ. ರೈಲು ವಾರಣಾಸಿ ರೈಲು ನಿಲ್ದಾಣದಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ.
ಮುಂಬರುವ ರೈಲು, ನೀಲಿ ಮತ್ತು ಬಿಳಿ ಬಣ್ಣಗಳಲ್ಲಿ ಅಲಂಕರಿಸಲ್ಪಟ್ಟಿದೆ, ವಾರಣಾಸಿ ಮತ್ತು ನವದೆಹಲಿ ನಡುವೆ ಸಂಚರಿಸಲು ಸಿದ್ಧವಾಗಿದೆ. 2019ರಲ್ಲಿ ಹೊಸ ದೆಹಲಿ-ವಾರಣಾಸಿ-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 22435/22436 ಅನ್ನು ಪರಿಚಯಿಸಿದ ನಂತರ, ಅದೇ ಮಾರ್ಗದಲ್ಲಿ ಎರಡನೇ ಅಲ್ಟ್ರಾ-ಆಧುನಿಕ ರೈಲು ಪ್ರಯಾಣ ಮಾಡಲಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.