ದಸರಾ, ದೀಪಾವಳಿಗೆ ಬೆಂಗಳೂರು-ರಾಯಚೂರು-ಯಾದಗಿರಿ ಮಾರ್ಗವಾಗಿ ವಿಶೇಷ ರೈಲು! ಊರಿಗೆ ಹೊರಟವರಿಗೆ ಗುಡ್‌ನ್ಯೂಸ್

Published : Sep 29, 2026, 07:44 PM IST
Indian Railway Bengaluru Raichur Special Train

ಸಾರಾಂಶ

ದಸರಾ ಮತ್ತು ದೀಪಾವಳಿ ಹಬ್ಬದ ದಟ್ಟಣೆ ಕಡಿಮೆ ಮಾಡಲು ರೈಲ್ವೆ ಇಲಾಖೆ ಬೆಂಗಳೂರು-ರಾಯಚೂರು-ಯಾದಗಿರಿ ಮಾರ್ಗವಾಗಿ ವಿಶೇಷ ರೈಲನ್ನು ಘೋಷಿಸಿದೆ. ಈ ರೈಲು ಚರ್ಲಪಲ್ಲಿ ಮತ್ತು ಎಸ್‌ಎಂವಿಟಿ ಬೆಂಗಳೂರು ನಡುವೆ ಸಂಚರಿಸಲಿದ್ದು, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ.

ಬೆಂಗಳೂರು (ಸೆ.29): ದಸರಾ ಮತ್ತು ದೀಪಾವಳಿ ಹಬ್ಬಗಳು ಸಮೀಪಿಸುತ್ತಿದ್ದಂತೆ ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗುತ್ತದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಹಬ್ಬದ ಸಮಯದಲ್ಲಿ ಬಸ್ ಅಥವಾ ರೈಲು ಟಿಕೆಟ್ ಸಿಗುವುದು ಬಹುದೊಡ್ಡ ಸವಾಲು. ಈ ದಟ್ಟಣೆಯನ್ನು ಕಡಿಮೆ ಮಾಡಲು ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಬೆಂಗಳೂರು - ರಾಯಚೂರು - ಯಾದಗಿರಿ ಮಾರ್ಗವಾಗಿ ವಿಶೇಷ ರೈಲೊಂದನ್ನು ಘೋಷಿಸಿದೆ.

ಮುಂಬರುವ ಹಬ್ಬದ ಸೀಸನ್‌ನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಚರ್ಲಪಲ್ಲಿ (ಹೈದರಾಬಾದ್) ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರು ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ನಡೆಸಲಿದೆ. ಈ ರೈಲು ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ನಿಲ್ದಾಣಗಳಾದ ಸೇಡಂ, ಯಾದಗಿರಿ ಮತ್ತು ರಾಯಚೂರು ಮೂಲಕ ಹಾದುಹೋಗುವುದರಿಂದ ಈ ಭಾಗದ ಜನರಿಗೆ ತವರಿಗೆ ತೆರಳಲು ಹೆಚ್ಚು ಅನುಕೂಲವಾಗಲಿದೆ.

ರೈಲಿನ ದಿನಾಂಕ ಮತ್ತು ವೇಳಾಪಟ್ಟಿ:

ರೈಲು ಸಂಖ್ಯೆ 07065 (ಚರ್ಲಪಲ್ಲಿ – SMVT ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್) ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಒಟ್ಟು 10 ಟ್ರಿಪ್‌ಗಳನ್ನು ಮಾಡಲಿದೆ.

ಸಂಚರಿಸುವ ದಿನಾಂಕಗಳು: ಅಕ್ಟೋಬರ್ 5, 12, 19, 26 ಹಾಗೂ ನವೆಂಬರ್ 2, 9, 16, 23, 30 ರಂದು ಈ ರೈಲು ಸಂಚರಿಸಲಿದೆ.

ಸಮಯ: ಈ ರೈಲು ರಾತ್ರಿ 09:50 ಗಂಟೆಗೆ ಚರ್ಲಪಲ್ಲಿಯಿಂದ ಹೊರಟು, ಮರುದಿನ ಮಧ್ಯಾಹ್ನ 01:15 ಗಂಟೆಗೆ ಎಸ್‌ಎಂವಿಟಿ (SMVT) ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.

ಮಾರ್ಗಮಧ್ಯೆ ಎಲ್ಲೆಲ್ಲಿ ನಿಲ್ಲಲಿದೆ?

ಈ ವಿಶೇಷ ರೈಲು ಹೈದರಾಬಾದ್‌ನಿಂದ ಹೊರಟು ಬೆಂಗಳೂರು ತಲುಪುವ ಮಾರ್ಗಮಧ್ಯೆ ಈ ಕೆಳಗಿನ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

  • ಸಿಕಂದರಾಬಾದ್ ಜಂಕ್ಷನ್, ಬೇಗಂಪೇಟೆ, ಲಿಂಗಂಪಲ್ಲಿ, ವಿಕಾರಾಬಾದ್ ಜಂಕ್ಷನ್
  • ಸೇಡಂ, ಯಾದಗಿರಿ, ಕೃಷ್ಣ, ರಾಯಚೂರು ಜಂಕ್ಷನ್ (ಕಲ್ಯಾಣ ಕರ್ನಾಟಕ ಭಾಗ)
  • ಮಂತ್ರಾಲಯಂ ರೋಡ್, ಆದೋನಿ, ಗುಂತಕಲ್ ಜಂಕ್ಷನ್, ಅನಂತಪುರ, ಧರ್ಮಾವರಂ ಜಂಕ್ಷನ್ ಹಾಗೂ ಹಿಂದೂಪುರ.

ಸಾಮಾನ್ಯವಾಗಿ ಹಬ್ಬದ ದಿನಗಳಲ್ಲಿ ಖಾಸಗಿ ಬಸ್‌ಗಳು ದುಪ್ಪಟ್ಟು ದರ ವಸೂಲಿ ಮಾಡುತ್ತವೆ. ಇಂತಹ ಸಮಯದಲ್ಲಿ ಕಡಿಮೆ ದರದಲ್ಲಿ ಹಾಗೂ ಸುರಕ್ಷಿತವಾಗಿ ಊರು ತಲುಪಲು ಬಯಸುವ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಹಾಗೂ ಆಂಧ್ರಪ್ರದೇಶದ ಗಡಿ ಭಾಗದ ಜನರಿಗೆ ಈ ವಿಶೇಷ ರೈಲು ವರದಾನವಾಗಲಿದೆ. ಪ್ರಯಾಣಿಕರು ಐಆರ್‌ಸಿಟಿಸಿ (IRCTC) ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಶ್ವದ ವಿಚಿತ್ರ ಗ್ರಾಮ! ಇಲ್ಲಿ ಹುಟ್ಟಿದವರೆಲ್ಲ ಕುರುಡರಾಗ್ತಾರೆ, ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಿ
ಆನೆಗಳ ಸ್ವರ್ಗ ಅಂಬೋಸೆಲಿ: ಕಿಲಿಮಂಜಾರೋ ಹಿನ್ನೆಲೆಯ ಈ ವನ್ಯಲೋಕ ನೋಡಿದರೆ ಬೆರಗಾಗ್ತೀರಾ!