ಭಾರತದಲ್ಲೂ ನ್ಯೂಡ್ ಬೀಚ್‌ಗಳಿವೆ, ನಿಮಗೆ ಗೊತ್ತೆ?

By Suvarna News  |  First Published Jun 12, 2021, 7:21 PM IST

ನ್ಯೂಡ್ ಬೀಚ್ ಎಂದರೆ ನೀವು ಯಾರದೇ ಭಯವಿಲ್ಲದೆ ನಗ್ನವಾಗಿ ನೀರಿಗೆ ಇಳಿಯಬಹುದಾದ, ಆಡಬಹುದಾದ ಬೀಚ್‌. ಅಂಥ ಬೀಚ್‌ಗಳು ಭಾರತದಲ್ಲೂ ಇವೆ, ಇಲ್ಲಿವೆ ನೋಡಿ.
 


ನ್ಯೂಡ್ ಬೀಚ್ ಅಥವಾ ನಗ್ನವಾಗಿ ಯಾರ ಭಯವಿಲ್ಲದೆ ಎಂಜಾಯ್ ಮಾಡಬಹುದಾದ ಸಮುದ್ರ ತೀರಗಳು ವಿದೇಶಗಳಲ್ಲಿ ಸಾಮಾನ್ಯ. ಅಮೆರಿಕ, ಯುರೋಪ್‌ನಂಥ ದೇಶಗಳಲ್ಲಿ ಇವು ಸಾಮಾನ್ಯ ಹಾಗೂ ಇದೊಂದು ಬಗೆಯ ಜೀವನಶೈಲಿಯೇ ಆಗಿವೆ. ವಾರದ ಐದು ದಿನ ದುಡಿದ ಯುವಕ- ಯುವತಿಯರು ಉಳಿದೆರಡು ದಿನಗಳಲ್ಲಿ ಬೀಚ್‌ಗೆ ಬಂದು ನಗ್ನವಾಗಿ ಮಿಂದು, ತೀರದ ಮರಳಲ್ಲಿ ಬೆತ್ತಲಾಗಿ ಮಲಗಿ, ಸನ್‌ಬಾತ್‌ ಮಾಡಿಕೊಂಡು ಎದ್ದು ಹೋಗುತ್ತಾರೆ. 

ಆದರೆ ಭಾರತದಲ್ಲಿ ಇಂಥ ನಗ್ನತೆಗೆ ಆಸ್ಪದವಿಲ್ಲ. ಇಲ್ಲಿ ಸಾರ್ವಜನಿಕವಾಗಿ ನಗ್ನತೆಯ ಪ್ರದರ್ಶನ ಅಸಭ್ಯತೆ ಅನ್ನಿಸಿಕೊಳ್ಳುತ್ತದೆ. ಇಲ್ಲಿನ ಸಂಪ್ರದಾಯವೂ ಹಾಗಿಲ್ಲ- ಹಾಗೇ ಕಾನೂನಿನ ದೃಷ್ಟಿಯಿಂದಲೂ ಇದು ಅಪರಾಧ. ಹೀಗಾಗಿ ತುಂಬ ಜನ ಹೋಗುವ ಬೀಚ್‌ಗಳನ್ನು ಇದನ್ನು ನೀವು ಕಾಣಲಾರಿರಿ. ಆದರೆ ಭಾರತದಲ್ಲೂ ಕೆಲವು ಬೀಚ್‌ಗಳಲ್ಲಿ ನೀವು ಆರಾಮಾಗಿ ಉಡುಗೆಯನ್ನೆಲ್ಲ  ಕಳಚಿಟ್ಟು ನೀರಿಗೆ ಜಿಗಿದು ಮುಕ್ತವಾಗಿ ಮೀಯಬಹುದು, ಆಡಬಹುದು. ಅಂಥ ತಾಣಗಳು ಯಾವುವು, ತಿಳಿಯೋಣ ಬನ್ನಿ.


 

Tap to resize

Latest Videos

undefined

ಅಗಟ್ಟಿ ಐಲ್ಯಾಂಡ್ ಬೀಚ್, ಲಕ್ಷದ್ವೀಪ 
ಇದನ್ನು ಟಾಪ್‌ಲೆಸ್‌ ಬೀಚ್ ಅಂತಲೂ ಕರೆಯುತ್ತಾರೆ. ಇಲ್ಲಿನ ಹೈಲೈಟ್ ಅಂದರೆ ತಾಳೆ ಮರಗಳು ಹಾಗೂ ತೆಂಗಿನ ಮರಗಳು, ಹವಳದ ದಿಬ್ಬಗಳು ಮತ್ತು ಶುಭ್ರ ಬಿಳಿ ಮರಳು. ಪ್ರಕೃತಿಯ ಮಧ್ಯೆ ಪ್ರಶಾಂತತೆ ಅರಸುವವರಿಗೆ ಇದು ಹೇಳಿ ಮಾಡಿಸಿದಂತಿದೆ. ನೀವಿಲ್ಲಿ ಅನೇಕ ದೇಶಿ- ವಿದೇಶಿ ಜೋಡಿಗಳು ನಗ್ನವಾಗಿ ಇರುವುದನ್ನು ಕಾಣಬಹುದು. ಆದರೆ ನೀವಿಲ್ಲಿಗೆ ಹೇಗೆಂದರೆ ಹಾಗೆ ಹೋಗುವಂತಿಲ್ಲ. ಇಲ್ಲಿ ಹೋಗುವುದಕ್ಕೆ ವಿಶೇಷ ಅನುಮತಿ ಅಗತ್ಯ.

ಓಂ ಬೀಚ್, ಗೋಕರ್ಣ
ಗೋಕರ್ಣದಲ್ಲಿ ಇರುವ ಈ ಸಮುದ್ರ ತೀರ ಓಂ ಎಂಬ ಅಕ್ಷರದ ರೂಪದಲ್ಲಿ ಇರುವದರಿಂದಾಗಿ ಅದಕ್ಕೆ ಈ ಹೆಸರು. ಈ ಕೋವಿಡ್‌ ಟೈಮ್‌ನಲ್ಲಿ ಇರಲಿಕ್ಕಿಲ್ಲ, ಆದರೆ ವರ್ಷದ ಉಳಿದ ಯಾವುದೇ ಸಮಯದಲ್ಲಿ ಹೋದರೂ ಈ ಬೀಚ್‌ನಲ್ಲಿ ಜರ್ಮನಿ, ಆಸ್ಟ್ರೇಲಿಯ, ಫಿನ್ಲೆಂಡ್, ಸ್ವಿಜರ್‌ಲ್ಯಾಂಡ್ ಮುಂತಾದ ದೇಶಗಳ ಪ್ರವಾಸಿಗರು ದಂಡುದಂಡಾಗಿ ಬೆತ್ತಲೆಯಾಗಿ ಸಮುದ್ರದಲ್ಲಿ ಇರುತ್ತಾರೆ ಅಥವಾ ಮರಳಲ್ಲಿ ಬಿದ್ದುಕೊಂಡಿರುತ್ತಾರೆ. ಕೆಲವರು ಗುಂಪು ಸೇರಿ ವಯಲಿನ್ ನುಡಿಸುವುದು, ಡ್ರಮ್ ಬಾರಿಸುವುದು ಮಾಡುತ್ತಿರುತ್ತಾರೆ.

ಅಪರಿಚಿತರ ಜೊತೆ ಸೆಕ್ಸ್ ತೀರ್ಥಯಾತ್ರೆ! ಇದು ಇಂಡೋನೇಷ್ಯಾ ಸ್ಪೆಶಲ್! ...
 

ಮರಾರಿ ಬೀಚ್, ಕೇರಳ
ಕೇರಳದ ಮರಾರಿ ಬೀಚ್ ತುಂಬಾ ಜನ ಬರದ, ಕೆಟ್ಟ ಕುತೂಹಲದ ಕಣ್ಣುಗಳು ಇರಿಯದಂಥ ದೂರ ಪ್ರತ್ಯೇಕ ಪ್ರದೇಶದಲ್ಲಿ ಇದೆ. ಇಲ್ಲಿಗೆ ಹೋದರೆ ನೀವು ಇಲ್ಲಿನ ನಿಸರ್ಗ ಸೌಂದರ್ಯಕ್ಕೆ ಬೆರಗಾಗಬಹುದು. ಹಾಗೇ ಯಾರ ಭಯವೂ ಇಲ್ಲದೆ ನಗ್ನ ಸ್ನಾನ ಮಾಡಬಹುದು. ದೇವರ ಸ್ವಂತ ನಾಡಿನಲ್ಲಿ ನೂಡಿಸ್ಟ್‌ಗಳಿಗೆ ಸ್ವಾಗತವಿದೆ. ಇಲ್ಲಿ ಸಿಗುವ ಕೆಂಡದಲ್ಲಿ ಸುಟ್ಟ ಮೀನಿನ ರುಚಿ ಪ್ರಖ್ಯಾತ.
 

ಪ್ಯಾರಡೈಸ್ ಬೀಚ್‌, ಗೋಕರ್ಣ
ಗೋಕರ್ಣದ ಪ್ಯಾರಡೈಸ್ ಬೀಚ್ ಎಂಥ ಜಾಗದಲ್ಲಿ ಇದೆ ಎಂದರೆ, ಅಲ್ಲಿಗೆ ಯಾವ ವಾಹನವೂ ಹೋಗುವುದಿಲ್ಲ. ಒಂದೋ ನೀವು ಗುಡ್ಡ ಬೆಟ್ಟ ಹಾಗೂ ಕಾಡಿನ ನಡುವೆ ನಡೆದು ಸಮುದ್ರ ತೀರವನ್ನು ಸೇರಬೇಕು; ಅಥವಾ ಓಂ ಬೀಚ್‌ನಿಂದ ಕರೆದೊಯ್ಯುವ ದೋಣಿಗಳಲ್ಲಿ ಅಲ್ಲಿಗೆ ಹೋಗಬೇಕು. ಒಂದು ಕಾಲದಲ್ಲಿ ಇದು ಹಿಪ್ಪೀಗಳ ಅಡ್ಡೆ ಎಂದೇ ಪ್ರಖ್ಯಾತವಾಗಿತ್ತು. ಈಗ ಈ ಬೀಚ್ ಖಾಸಗಿಯವರ ಸೊತ್ತಾಗಿದ್ದು, ನೀವು ಇಲ್ಲಿ ಸಮುದ್ರಕ್ಕೆ ಇಳಿಯುವುದಾದರೇ ಆ ತೀರದಲ್ಲೇ ರೆಸಾರ್ಟ್ ಕೂಡ ಇದೆ. ಇಲ್ಲಿಂದ ಓಂ ಬೀಚ್, ನಿರ್ವಾಣ ಬೀಚ್‌ಗಳಿಗೆಲ್ಲಾ ಟ್ರೆಕ್ಕಿಂಗ್‌ ಹೋಗಬಹುದು. 



ಓರ್ಜಾನ್ ಬೀಚ್, ಗೋವಾ
ಗೋವಾ ಸಮುದ್ರ ತೀರ ಬಯಸಿ ಬರುವ ವಿದೇಶಿ ಪ್ರವಾಸಿಗರ ಸ್ವರ್ಗ. ಆದರೆ ಈ ಬೀಚ್‌ನ ಬಗ್ಗೆ ಬಹಳ ಮಂದಿಗೆ ಗೊತ್ತಿಲ್ಲ. ಇಲ್ಲಿಗೆ ತಲುಪಿಕೊಳ್ಳುವುದೂ ಸುಲಭವಲ್ಲ. ಇದು ಹಿಪ್ಪಿಗಳ ಹಾಗೂ ಫಾರಿನರ್‌ಗಳ ನಡುವೆ ಜನಪ್ರಿಯ. ಸ್ಥಳೀಯರು ಇಲ್ಲಿಗೆ ಹೋಗುವುದೇ ಕಡಿಮೆ. ತಮ್ಮಷ್ಟಕ್ಕೇ ಸಮಯ ಕಳೆಯಬಯಸುವವರಿಗೆ ಈ ಏಕಾಂತ ಜಾಗ ಹೇಳಿ ಮಾಡಿಸಿದಂತಿದೆ. ಭೇಟಿ ಕೊಡುವವರು ನಗ್ನರಾಗಲೇಬೇಕು ಎಂಬ ರೂಲ್ಸ್ ಏನೂ ಇಲ್ಲಿ ಇಲ್ಲ. ಹಾಗಂತ ಇಲ್ಲಿ ಫೋಟೋಗ್ರಾಫಿ ಮಾತ್ರ ಮಾಡುವಂತಿಲ್ಲ.  

click me!