ಭಾರತದಲ್ಲಿ ಉನ್ನತ ಮಟ್ಟದ ಪ್ರವಾಸೋದ್ಯಮ ಅಭಿವೃದ್ಧಿ ಅತೀ ಅಗತ್ಯ; ತಜ್ಞರ ವರದಿ

Published : Jul 11, 2022, 12:33 PM IST
ಭಾರತದಲ್ಲಿ ಉನ್ನತ ಮಟ್ಟದ ಪ್ರವಾಸೋದ್ಯಮ ಅಭಿವೃದ್ಧಿ ಅತೀ ಅಗತ್ಯ; ತಜ್ಞರ ವರದಿ

ಸಾರಾಂಶ

ಕೋವಿಡ್ ಸೋಂಕು (Covid virus) ಹರಡಲು ಆರಂಭವಾದ ನಂತರ ಜಗತ್ತಿನ ಹಲವು ದೇಶಗಳಲ್ಲಿ ಪ್ರವಾಸೋದ್ಯಮಕ್ಕೆ (Tourism) ಹೊಡೆತ ಬಿದ್ದಿದೆ. ಈ ಮಧ್ಯೆ ತಜ್ಞರ ವರದಿಯೊಂದು ಭಾರತವು ಉನ್ನತ-ಮಟ್ಟದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಹಣವನ್ನು ವಿನಿಯೋಗಿಸಬೇಕು, ಜಾಗತಿಕ ಬಿಜ್ ಈವೆಂಟ್‌ಗಳನ್ನು ಆಯೋಜಿಸುವತ್ತ ಗಮನಹರಿಸಬೇಕು ಎಂದು ಸೂಚಿಸಿದೆ.

ಪ್ರವಾಸೋದ್ಯಮ (Tourism) ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು ವ್ಯಾಪಾರ ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರಮುಖ ದೇಶವಾಗಿ ಭಾರತವನ್ನು ಕೇಂದ್ರೀಕರಿಸಬೇಕು ಎಂದು ತಜ್ಞರ ವರದಿ ಸೂಚಿಸಿದೆ. ಜೊತೆಗೆ ಶ್ರೀಮಂತ ಪ್ರವಾಸಿಗರನ್ನು ಕರೆತರಲು ಉನ್ನತ-ಮಟ್ಟದ' ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸರ್ಕಾರವು ಹಣವನ್ನು ವಿನಿಯೋಗಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ. ನಾಂಗಿಯಾ ಆಂಡರ್‌ಸನ್‌ ಎಲ್ಎಲ್‌ಪಿ ಸಿದ್ಧಪಡಿಸಿದ 'ರೀಬಿಲ್ಡಿಂಗ್ ಟೂರಿಸಂ ಫಾರ್ ದಿ ಫ್ಯೂಚರ್ 2022' ವರದಿಯು, ಕೋವಿಡ್‌ (Covid) ನಂತರ, 'ಬ್ಲೀಸರ್ ಟ್ರಾವೆಲ್' ಎಂಬ ಹೊಸ ಪದವನ್ನು ರಚಿಸಲಾಗಿದೆ ಎಂದು ಹೇಳಿದೆ, ಇದು ವ್ಯಾಪಾರವನ್ನು ವಿರಾಮ ಚಟುವಟಿಕೆಗಳೊಂದಿಗೆ ಬೆರೆಸುವ ವೃತ್ತಿಪರರ ಬೆಳವಣಿಗೆಯಾಗಿದೆ.

ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಹೊಂದಿರುವ ಯುವ ವೃತ್ತಿಪರರಲ್ಲಿ ಈ ಪ್ರವೃತ್ತಿ ಕಂಡುಬಂದಿದೆ ಮತ್ತು ಅವರು ಕೆಲಸ ಮಾಡುವ ಸ್ಥಳವನ್ನು ಹುಡುಕಲು ಮತ್ತು ಪ್ರಕೃತಿ (Nature)ಯನ್ನು ಆನಂದಿಸಲು ನಿರ್ಧರಿಸಿದ್ದಾರೆ. ನಂಗಿಯಾ ಆಂಡರ್ಸನ್ ಎಲ್‌ಎಲ್‌ಪಿಯ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಸಲಹಾ ಮುಖ್ಯಸ್ಥ ಸೂರಜ್ ನಾಂಗಿಯಾ, ಪ್ರಯಾಣಿಕರು ಮತ್ತು ಸ್ಥಳೀಯ ಪ್ರವಾಸಿಗರು ಉತ್ತಮ ಅನುಭವಕ್ಕಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ, ಇದರಲ್ಲಿ ಕಾಯ್ದಿರಿಸುವಿಕೆ ಮತ್ತು ಅತ್ಯುತ್ತಮ ಪ್ರಯಾಣದ ಆಯ್ಕೆಗಳು ಯಾವುವು ಎಂಬುದನ್ನು ಕಂಡುಹಿಡಿಯುತ್ತಿದ್ದಾರೆ ಎಂದು ತಿಳಿಸಿದರು. 

ಮನೆಗೆ ಹೋಗೋದಕ್ಕಿಂತ ಗೋವಾ ವಿಮಾನವೇ ಚೀಪರ್ ! ಊಬರ್ ಬಿಲ್ ನೋಡಿದ ವ್ಯಕ್ತಿ ಶಾಕ್

ಪ್ರವಾಸೋದ್ಯಮ ಕ್ಷೇತ್ರವು ಚೇತರಿಸಿಕೊಳ್ಳಲು, ಭಾರತವು ವ್ಯಾಪಾರ ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರಮುಖ ದೇಶವಾಗಿ ಅಭಿವೃದ್ಧಿ ಹೊಂದಬೇಕು ಮತ್ತು ಉನ್ನತ ಮಟ್ಟದ ಪ್ರವಾಸೋದ್ಯಮವನ್ನು ಉತ್ತೇಜಿಸಬೇಕು ಎಂದು ವರದಿ ಸಲಹೆ ನೀಡಿದೆ. ಭಾರತ ಈಗಾಗಲೇ ಬಲವಾದ ಕೊಡುಗೆಯ ಆಕರ್ಷಣೆಯನ್ನು ಸುಧಾರಿಸುವತ್ತ ಗಮನಹರಿಸಬೇಕು ಮತ್ತು ಹೆಚ್ಚು ವ್ಯಾಪಾರ ಕಾರ್ಯಕ್ರಮಗಳನ್ನು ರಚಿಸುವುದರೊಂದಿಗೆ, ನಮ್ಮ ದೇಶಕ್ಕೆ ಜನರನ್ನು ಹೆಚ್ಚು ಆಕರ್ಷಿಸುವ ಮತ್ತು ಅಂತಾರಾಷ್ಟ್ರೀಯ ಪ್ರೇಕ್ಷಕರನ್ನು ಹೆಚ್ಚಿಸುವ ಕೆಲಸವಾಗಬೇಕು ಎಂದು ತಿಳಿಸಲಾಗಿದೆ. 

ಸರ್ಕಾರವು ರಚನಾತ್ಮಕ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಸಾಹಸ ಪ್ರವಾಸೋದ್ಯಮಕ್ಕಾಗಿ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಬೇಕು. ಯೋಜನೆ ಭಾರತವನ್ನು 365-ದಿನಗಳ ಕಾಲ ಪ್ರವಾಸಿ ತಾಣವಾಗಿ ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಲಾಗಿದೆ. ಕೋವಿಡ್ ಸೋಂಕಿನ ನಂತರ ಗ್ರಾಹಕರ ನಡವಳಿಕೆಯಲ್ಲಿ ಆಗಿರುವ ಬದಲಾವಣೆಯನ್ನು ಗಮನಿಸಲಾಗಿದೆ. ಹೀಗಾಗಿ ಸರ್ಕಾರ ಪ್ರಯಾಣಿಕರಿಗೆ ಆಕರ್ಷಕ ಕೊಡುಗೆಯಾಗಬಹುದಾದ ಕೆಲವು ಈವೆಂಟ್‌ಗಳನ್ನು ಪ್ರಾರಂಭಿಸಬೇಕು ಎಂದು ವರದಿ ಸೂಚಿಸಿದೆ. 

20 ರೂ. ಚಹಾಕ್ಕೆ 70 ರೂ. ಬಿಲ್‌ : ಸೇವಾ ಶುಲ್ಕ ಎಂದ ರೈಲ್ವೇ ಇಲಾಖೆ

2020 ರಲ್ಲಿ, GDPಗೆ ಪ್ರಯಾಣ ಮತ್ತು ಪ್ರವಾಸೋದ್ಯಮ ಉದ್ಯಮದ ಕೊಡುಗೆ 121.9 ಶತಕೋಟಿ ರೂ. ಇದು 2028 ರ ವೇಳೆಗೆ 512 ಶತಕೋಟಿ ರೂ. ತಲುಪುವ ನಿರೀಕ್ಷೆಯಿದೆ ಎಂದು ತಿಳಿಸಲಾಗಿದೆ. 2020ರಲ್ಲಿ, ಭಾರತೀಯ ಪ್ರವಾಸೋದ್ಯಮ ಕ್ಷೇತ್ರವು 31.8 ಮಿಲಿಯನ್ ಉದ್ಯೋಗಗಳನ್ನು ಹೊಂದಿದೆ. ಇದು ದೇಶದ ಒಟ್ಟು ಉದ್ಯೋಗದ ಶೇಕಡಾ 7.3 ರಷ್ಟಿತ್ತು. 2029ರ ವೇಳೆಗೆ, ಇದು ಸುಮಾರು 53 ಮಿಲಿಯನ್ ಉದ್ಯೋಗಗಳನ್ನು ನಿರೀಕ್ಷಿಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?
ನಿವೃತ್ತಿ ನಂತ್ರವೂ ಪರದಾಡಬೇಕಾಗಿಲ್ಲ, ನೆಮ್ಮದಿ ಜೀವನಕ್ಕೆ ಈ ದೇಶಗಳು ಬೆಸ್ಟ್