ರೈಲಿನ AC ಕೋಚ್‌ಗಳಲ್ಲಿ ಕೊಡುವ ಬೆಡ್‌ಶೀಟ್ ಹೇಗೆ ತೊಳೆಯಲಾಗುತ್ತೆ? ಹೊರ ಬಂತು ವಿಡಿಯೋ 

By Mahmad Rafik  |  First Published Dec 2, 2024, 11:54 AM IST

ರೈಲುಗಳಲ್ಲಿ ಪ್ರಯಾಣಿಕರಿಗೆ ನೀಡಲಾಗುವ ಬಿಳಿ ಬಣ್ಣದ ಹೊದಿಕೆಗಳನ್ನು ಹೇಗೆ ಶುಚಿಗೊಳಿಸಲಾಗುತ್ತದೆ ಎಂಬುದರ ವಿಡಿಯೋವನ್ನು ಸುದ್ದಿಸಂಸ್ಥೆ ಹಂಚಿಕೊಂಡಿದೆ. 121 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಉತ್ಪಾದಿಸುವ ದೊಡ್ಡ ಬಾಯ್ಲರ್‌ಗಳಲ್ಲಿ ಹಾಕಿ ಶುಚಿಗೊಳಿಸಲಾಗುತ್ತದೆ.


ನವದೆಹಲಿ: ರೈಲು ಜಾಲ  ಭಾರತೀಯರ ಜೀವನಾಡಿ ಎಂದೇ ಹೇಳಬಹುದು. ಎಲ್ಲಾ ವರ್ಗದವರು ರೈಲು ಪ್ರಯಾಣಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಭಾರತೀಯ ರೈಲ್ವೆ ಸಹ ಎಲ್ಲಾ ವರ್ಗದವರ ಅನುಕೂಲಕ್ಕೆ ತಕ್ಕಂತೆ ಸೇವೆಗಳನ್ನು ನೀಡುತ್ತದೆ. ಒಂದೇ ರೈಲಿನಲ್ಲಿ ಎಸಿ, ಸ್ಲೀಪರ್ ಮತ್ತು ಜನರಲ್ ಕೋಚ್‌ ಅಳವಡಿಕೆ ಮಾಡಲಾಗಿರುತ್ತದೆ. ಪ್ರಯಾಣಿಕರು  ತಮ್ಮ ಆರ್ಥಿಕ ಶಕ್ತಿಯನುಸಾರವಾಗಿ ಆಸನಗಳನ್ನು ಕಾಯ್ಡಿರಿಸಬಹುದು.  ರೈಲಿನ ಎಸಿ ಕೋಚ್‌ ಪ್ರಯಾಣಿಕರಿಗೆ ಹಾಸಿಗೆ ಮತ್ತು ಹೊದಿಕೆಯನ್ನು ನೀಡಲಾಗುತ್ತದೆ. ಪ್ರಯಾಣ ಮುಗಿದ ಬಳಿಕ ರೈಲಿನಲ್ಲಿಯೇ ಇವುಗಳನ್ನು ಬಿಟ್ಟು ಹೋಗಬೇಕಾಗುತ್ತದೆ. 

ಕೆಲ ದಿನಗಳ ಹಿಂದೆಯಷ್ಟೇ ರೈಲಿನಲ್ಲಿ ನೀಡಲಾಗುವ ಬೆಡ್‌ಶೀಟ್ ತಿಂಗಳಿಗೊಮ್ಮೆ ತೊಳೆಯಲಾಗುತ್ತದೆ ಎಂಬ ಮಾಹಿತಿ ಹೊರ ಬಂದಿತ್ತು. ಬೆಡ್‌ಶೀಟ್ ಜೊತೆಯಲ್ಲಿ ಬಿಳಿ ಬಣ್ಣದ ಹೊದಿಕೆಗಳನ್ನು ಸಹ  ಪ್ರಯಾಣಿಕರಿಗೆ ನೀಡಲಾಗುತ್ತದೆ. ಇದೀಗ ಈ ಬಿಳಿ ಹೊದಿಕೆಯನ್ನು ಹೇಗೆ ಶುಚಿಗೊಳಿಸಲಾಗುತ್ತೆ ಎಂಬುದರ ವಿಡಿಯೋವನ್ನು ಸುದ್ದಿಸಂಸ್ಥೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈಲ್ ಆಗುತ್ತಿದೆ. 

Latest Videos

undefined

ಇದನ್ನೂ ಓದಿ: 45+ ವರ್ಷ ಮಹಿಳೆಯರಿಗೆ, 58+ ವರ್ಷ ಪುರುಷರಿಗೆ ಭಾರತೀಯ ರೈಲ್ವೆಯಿಂದ ವಿಶೇಷ ಸೌಲಭ್ಯಗಳು

ಹೇಗೆ ತೊಳೆಯಲಾಗುತ್ತೆ?
ಬಿಳಿಬಣ್ಣದ ಬೆಡ್‌ಶೀಟ್ ಮತ್ತು ದಿಂಬಿನ ಕವರ್‌ಗಳನ್ನು 121 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಉತ್ಪಾದಿಸುವ ದೊಡ್ಡ ಬಾಯ್ಲರ್‌ಗಳಲ್ಲಿ ಹಾಕಿ ಶುಚಿಗೊಳಿಸಲಾಗುತ್ತದೆ.  ಈ ವಿಶೇಷ ಬಾಯ್ಲರ್‌ಗಳಲ್ಲಿ ಹೊದಿಕೆಯನ್ನು 30 ನಿಮಿಷ ಈ ಉಗಿಗೆ ಒಳಪಡಿಸಲಾಗುತ್ತದೆ. ಸಂಪೂರ್ಣವಾಗಿ ಕ್ರಿಮಿನಾಶಕಕ್ಕೆ ಒಳಪಟ್ಟ ನಂತರವೇ ಹೊದಿಕೆಗಳನ್ನು ಹೊರಗಡೆ ತೆಗೆಯಲಾಗುತ್ತದೆ. ಎಲ್ಲವೂ ಯಂತ್ರೋಪಕರಣಗಳ ಸಹಾಯದಿಂದಲೇ ಶುಚಿ ಕಾರ್ಯ ನಡೆಯುತ್ತದೆ.  ಬಾಯ್ಲರ್‌ಗೆ ಹಾಕುವ ಮುನ್ನು ನುರಿತ ಸಿಬ್ಬಂದಿ ಎಲ್ಲಾ ಹೊದಿಕೆಗಳನ್ನು ಪರಿಶೀಲಿಸುತ್ತಾರೆ. ಬಾಯ್ಲರ್‌ನಿಂದ ಹೊರ ಬಂದ ಹೊದಿಕೆಯನ್ನು ಕ್ರಮಬದ್ಧವಾಗಿ ಪ್ಯಾಕ್ ಮಾಡೋದನ್ನು ವಿಡಿಯೋದಲ್ಲಿ ಕಾಣಬಹುದು.

ಬಿಳಿ ಬಣ್ಣದ ಹೊದಿಕೆ ಬಳಸೋದು ಏಕೆ? 
ಬಟ್ಟೆಗಳನ್ನು 121 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ತೊಳೆಯಲಾಗುತ್ತದೆ. ಕಠಿಣ ತೊಳೆಯುವ ಪರಿಸ್ಥಿತಿಗಳಿಗೆ ಬಿಳಿ ಬಣ್ಣದ ಬಟ್ಟೆಯ ಸೂಕ್ತವಾಗಿರುತ್ತದೆ. ಹೆಚ್ಚಿನ ತಾಪಮಾನ ಮತ್ತು ಬಲವಾದ ಡಿಟರ್ಜೆಂಟ್‌ಗಳಿಗೆ ಒಡ್ಡಿಕೊಳ್ಳುವುದನ್ನು ಒಳಗೊಂಡಿರುವ ಕಠಿಣವಾದ ತೊಳೆಯುವ ಪ್ರಕ್ರಿಯೆಯು ಬಣ್ಣದ ಬಟ್ಟೆಗಳು ಮಸುಕಾಗಲು ಅಥವಾ ಮಂದವಾಗಲು ಕಾರಣವಾಗಬಹುದು. ಇದಕ್ಕೆ ವ್ಯತಿರಿಕ್ತವಾಗಿ, ಬಿಳಿ ಬೆಡ್ ಶೀಟ್‌ಗಳನ್ನು ಪರಿಣಾಮಕಾರಿಯಾಗಿ ಬಿಳುಪುಗೊಳಿಸಬಹುದು. ಹಾಗಾಗಿ ರೈಲ್ವೆ ಇಲಾಖೆ ಬಿಳಿ ಬಣ್ಣದ ಹೊದಿಕೆಗಳನ್ನು ಬಳಸುತ್ತದೆ.

ಇದನ್ನೂ ಓದಿ: ರೈಲು ಟಿಕೆಟ್ ಬುಕಿಂಗ್‌ಗೆ ಹೊಸ ನಿಯಮ ಇವರಿಗೆ ಮಾತ್ರ ಅನ್ವಯವಾಗಲ್ಲ

| Durg, Chhattisgarh | Visuals from a mechanised laundry of Raipur railway division where linen are being cleaned to provide hygienic and high-quality bedrolls to the passengers. pic.twitter.com/zduorlINyf

— ANI (@ANI)
click me!