Travelling Tips: ಡಿಸ್ಕೌಂಟ್‌ನಲ್ಲಿ ರೈಲು ಪ್ರಯಾಣ ಮಾಡೋದು ಹೇಗೆ?

By Suvarna News  |  First Published Jan 23, 2023, 7:15 PM IST

ರೈಲು ಪ್ರಯಾಣದ ವೇಳೆಯೂ ಸಾಕಷ್ಟು ಖರ್ಚಾಗುತ್ತದೆ.  ರೈಲಿನ ಟಿಕೆಟ್ ದರ ಕಡಿಮೆಯೇನಿಲ್ಲ. ರೈಲ್ವೆ ಪ್ರಯಾಣದಲ್ಲಿ ಟಿಕೆಟ್ ಖರ್ಚು ಕಡಿಮೆಯಾಗ್ಬೇಕು, ಹಣ ಉಳಿಸಿ ಪ್ರಯಾಣ ಬೆಳೆಸಬೇಕು ಎನ್ನುವವರು ಕೆಲವೊಂದು ಟಿಪ್ಸ್ ಫಾಲೋ ಮಾಡ್ಬೇಕು. 
 


ಡಿಜಿಟಲ್ ಯುಗದಲ್ಲಿ ಎಲ್ಲವೂ ಸುಲಭವಾಗಿದೆ. ಮನೆಯಲ್ಲೇ ಕುಳಿತು ಆರಾಮವಾಗಿ ಬಹುತೇಕ ಕೆಲಸಗಳನ್ನು ಮಾಡಬಹುದು. ಇದ್ರಲ್ಲಿ ಟ್ರೈನ್ ಟಿಕೆಟ್ ಬುಕಿಂಗ್ ಕೂಡ ಸೇರಿದೆ. ಹಿಂದೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ರೈಲಿನ ಟಿಕೆಟ್ ಬುಕ್ ಮಾಡ್ಬೇಕಾಗಿತ್ತು. ಆದ್ರೆ ಈಗ ಹಾಗಲ್ಲ. ಮನೆಯಲ್ಲಿ ಆರಾಮವಾಗಿ ಕುಳಿತು ನಿಮಗೆ ಬೇಕಾದ ರೈಲಿನ ಟಿಕೆಟ್ ಬುಕ್ ಮಾಡಬಹುದು. 

ರೈಲ್ವೆ (Railway) ಇಲಾಖೆ ಕೂಡ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ಸೇವೆಗಳನ್ನು ಜಾರಿಗೆ ತಂದಿದೆ. ಆನ್ಲೈನ್ (Online) ಟಿಕೆಟ್ ಬುಕ್ ಮಾಡುವವರು ನೀವಾಗಿದ್ದರೆ ಕೆಲ ವಿಷ್ಯಗಳನ್ನು ತಿಳಿದಿರಬೇಕು. ಸಾಮಾನ್ಯವಾಗಿ ಬಹುತೇಕ ಜನರು ಪೂರ್ಣ ಬೆಲೆಯನ್ನು ನೀಡಿ ಟಿಕೆಟ್ (Ticket) ಖರೀದಿ ಮಾಡ್ತಾರೆ. ಬುದ್ಧಿವಂತಿಕೆ ಉಪಯೋಗಿಸಿದ್ರೆ ಕಡಿಮೆ ಖರ್ಚಿನಲ್ಲಿ ನೀವು ಟಿಕೆಟ್ ಬುಕ್ ಮಾಡಬಹುದು. ನಾವಿಂದು ಕಡಿಮೆ ಖರ್ಚಿನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಲು ಏನೆಲ್ಲ ಆಯ್ಕೆಯಿದೆ ಎಂಬುದನ್ನು ನಿಮಗೆ ಹೇಳ್ತೆವೆ. 

Tap to resize

Latest Videos

ಈ ಕಂಪನಿ ನೀಡುತ್ತೆ ಆಫರ್ : EaseMyTrip ಎಂಬುದು ಟ್ರಾವೆಲ್ ಕಂಪನಿಯಾಗಿದೆ. ನೀವು ಇದ್ರಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಬಹುದು. ಕಂಪನಿ ಅನೇಕ ರೈಲು ಟಿಕೆಟ್ ಗೆ ಆಫರ್ ನೀಡುತ್ತದೆ. ಕಂಪನಿ ವೆಬ್‌ಸೈಟ್‌ (Website) ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಗ್ರಾಹಕರು 100 ರೂಪಾಯಿಗಿಂತ ಹೆಚ್ಚಿನ ದರದ ಟಿಕೆಟ್‌ಗಳನ್ನು ಬುಕ್ ಮಾಡಿದ್ರೆ ಶೇಕಡಾ 20ರವರೆಗೆ ಕೊಡುಗೆ ಪಡೆಯುತ್ತಾರೆ. ಅಂದ್ರೆ ನೀವು ಟಿಕೆಟ್ ಖರೀದಿ ವೇಳೆ ಶೇಕಡಾ 20ರಷ್ಟು ರಿಯಾಯಿತಿ ಪಡೆದಂತೆ ಆಗುತ್ತದೆ.

ಕಾರ್ಡ್ ಆಯ್ಕೆ ಮಾಡ್ಕೊಳ್ಳುವ ವೇಳೆ ಗಮನವಿರಲಿ : ನೀವು ಟಿಕೆಟ್ ಖರೀದಿ ಮಾಡುವಾಗ ನಗದು ನೀಡ್ಬೇಕಾಗಿಲ್ಲ. ಕಾರ್ಡ್ ಮೂಲಕ ಪಾವತಿಸುವ ಆಯ್ಕೆ ಇದೆ. ಕಾರ್ಡ್ ಮೂಲಕ ಟಿಕೆಟ್ ಬುಕ್ ಮಾಡುವವರು ನೀವಾಗಿದ್ದರೆ ಯಾವ ಕಾರ್ಡ್ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಗಮನಿಸಿ. ಕೆಲ ಕಾರ್ಡ್ ಗಳ ಮೂಲಕ ನೀವು ಟಿಕೆಟ್ ಬುಕ್ ಮಾಡಿದ್ರೆ ಆಫರ್ ಸಿಗುತ್ತದೆ. ಉತ್ತಮ ಕ್ಯಾಶ್‌ಬ್ಯಾಕ್ (Cashback) ಕೂಡ ನೀವು ಪಡೆಯಬಹುದಾಗಿದೆ. ಹಾಗಾಗಿ ಯಾವ ಕಾರ್ಡ್ ನಲ್ಲಿ ಹೆಚ್ಚಿನ ಕ್ಯಾಶ್ ಬ್ಯಾಕ್ ಸಿಗ್ತಿದೆ, ಯಾವ ಕಾರ್ಡ್ ಆಫರ್ ನೀಡ್ತಿದೆ ಎಂಬುದನ್ನು ಗಮನಿಸಿ ಪಾವತಿ ಮಾಡಿ. 

ದಿನದ 24 ಗಂಟೆಯೂ ಬೆಳಕಿದ್ದರೆ ಜೀವನ ಹೇಗಿರುತ್ತೆ? ಇಲ್ ಹೋಗಿ ಗೊತ್ತಾಗುತ್ತೆ!

ಪ್ಲಾಟಿನಂ ಕಾರ್ಡ್ ಆಯ್ಕೆ ಮಾಡಿಕೊಳ್ಳಿ : ಐಆರ್ ಸಿಟಿಟಿ (IRCTC) ಪ್ರಯಾಣಿಕರ ಅನುಕೂಲಕ್ಕಾಗಿ ಎಸ್ ಬಿಐ ಜೊತೆ ಒಪ್ಪಂದ ಮಾಡಿಕೊಂಡಿದೆ. ಎಸ್ ಬಿಐ ಸಹಯೋಗದೊಂದಿಗೆ ಟಿಕೆಟ್ ಬುಕಿಂಗ್‌ಗಾಗಿ ಪ್ಲಾಟಿನಂ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸುವ ಬದಲು ಐಆರ್ ಸಿಟಿಸಿ ಎಸ್ ಬಿಐ ಕಾರ್ಡನ್ನು ನೀವು ಬಳಸಬಹುದು. ಇದ್ರಲ್ಲಿ ಟಿಕೆಟ್ ಕಾಯ್ದಿರಿಸುವ ಜೊತೆಗೆ ನೀವು ಬೇರೆ ರಿಯಾಯಿತಿ ಕೂಡ ಪಡೆಯಬಹುದಾಗಿದೆ.  ಐಆರ್ ಸಿಟಿಸಿ ಕ್ರೆಡಿಟ್ ಕಾರ್ಡ್ ಪಡೆದ 45 ದಿನಗಳ ಒಳಗೆ ನೀವು 500 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಸ್ವಾಗತ ಉಡುಗೊರೆಯಾಗಿ 350 ಬೋನಸ್ ಪಾಯಿಂಟ್‌ಗಳನ್ನು ಪಡೆಯಬಹುದು.  

IRCTC TOUR PACKAGE : ಅಂಡಮಾನ್ ಟ್ರಾವೆಲ್ ಪ್ಲ್ಯಾನ್ ಮಾಡಿದ್ದರೆ ಈ ಮಾಹಿತಿ ನಿಮಗಾಗಿ

ಹಿರಿಯ ನಾಗರಿಕರಿಗೆ ಸೌಲಭ್ಯ : ರೈಲ್ವೆ ಇಲಾಖೆ ವಿವಿಧ ವರ್ಗದವರಿಗೆ ಟಿಕೆಟ್ ದರದಲ್ಲಿ ಬದಲಾವಣೆ ಮಾಡುತ್ತದೆ. ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ಸಿಗುತ್ತದೆ. ನೀವು ಹಿರಿಯ ನಾಗರಿಕರ ಟಿಕೆಟ್ ಬುಕ್ ಮಾಡ್ತಿದ್ದರೆ ಅದನ್ನು ನಮೂದಿಸುವ ಮೂಲಕ ಮೂಲ ದರಕ್ಕಿಂತ ಕಡಿಮೆ ದರಕ್ಕೆ ಟಿಕೆಟ್ ಖರೀದಿ ಮಾಡಿ. 

click me!