
ಗರ್ಭಧಾರಣೆ ಎನ್ನುವುದು ಹೆಣ್ಣಿಗೆ ಅತ್ಯಂತ ಸಂತೋಷದ ಮತ್ತು ಮಹತ್ವದ ಸಂಗತಿ. ಒಂಭತ್ತು ತಿಂಗಳು ತನ್ನ ಗರ್ಭದಲ್ಲಿ ಮಗುವನ್ನು ಇಟ್ಟುಕೊಂಡು ನಂತರ ತನ್ನ ಜೀವವನ್ನೇ ಪಣಕ್ಕಿಟ್ಟು ಮಗುವನ್ನು ಹೆರುವ ಕಷ್ಟ ಅವಳಿಗೆ ಮಾತ್ರ ಗೊತ್ತು. ಅದು ಅವಳ ಜೀವಮಾನದ ನೋವು ಹಾಗೆ ಇದು ಅತ್ಯಂತ ಖುಷಿಯ ಕ್ಷಣವೂ ಹೌದು.
ಇನ್ನು ನೌಕರಿ (Job) ಯಲ್ಲಿರುವ ಮಹಿಳೆ (Woman) ಯರಿಗೆ ಗರ್ಭಧಾರಣೆ (Pregnancy) ಯ ಸಮಯ ಹೇಳಿದಷ್ಟು ಸುಲಭವಲ್ಲ. ಏಕೆಂದರೆ, ಹೆರಿಗೆ (Childbirth) ನಂತ್ರ ಮತ್ತೆ ಕೆಲಸಕ್ಕೆ ಹೋಗ್ಬೇಕಾಗುತ್ತದೆ. ನವಜಾತ ಶಿಶುವನ್ನು ಬಿಟ್ಟು ಕೆಲಸಕ್ಕೆ ಹೋಗುವುದು ಸ್ವಲ್ಪ ಕಷ್ಟದ ಕೆಲಸ. ಹೆರಿಗೆಯ ಮೊದಲು ಮತ್ತು ನಂತರದ ರಜೆಯ ದಿನಗಳನ್ನು ತಾಳೆ ಹಾಕಿ ನೋಡಿ ಅವಳು ಹೆಜ್ಜೆ ಇಡಬೇಕಾಗುತ್ತದೆ.
TRAVEL TIPS : ರೈಲಿನಲ್ಲಿ ಹೋಗುವಾಗ ಸುಖಾಸುಮ್ಮನೆ ತಪ್ಪು ಮಾಡಿ, ದಂಡ ತುಂಬ್ಬೇಡಿ
ಈಗ ಸರ್ಕಾರಿ ನೌಕರರಿಗೆ, ಖಾಸಗಿ ನೌಕರರಿಗೆ ಮತ್ತು ಗುತ್ತಿಗೆ ನೌಕರರಿಗೆ ಸಾಮಾನ್ಯವಾಗಿ ನೂರಾ ಎಂಭತ್ತು ದಿನಗಳ ಮಾತೃತ್ವ ರಜೆ ಸಿಗುತ್ತದೆ. ಅವರವರ ನೌಕರಿಯ ಅನುಗುಣವಾಗಿ ವೇತನ ಸಹಿತ ಮತ್ತು ವೇತನ ರಹಿತ ರಜೆಗಳು ಸಿಗುತ್ತವೆ. ನಮ್ಮ ದೇಶದಲ್ಲಿ ಕೂಡ ಈಗ ಹೆರಿಗೆ ರಜೆಗಳ ಕುರಿತಾಗಿ ಅನೇಕ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕೆಲವು ಕಡೆ ತಾಯಿಯ ಜೊತೆಗೆ ತಂದೆಗೂ ಕೂಡ ಪೆಟರ್ನಿಟಿ ಲೀವ್ ಸಿಗುತ್ತದೆ. ಹೆರಿಗೆ ರಜೆಯ ಸೌಲಭ್ಯಗಳು ಬೇರೆ ಬೇರೆ ದೇಶದಲ್ಲಿ ಬೇರೆ ಬೇರೆ ರೀತಿ ಇರುತ್ತದೆ. ಇಂತಹ ಒಂದು ದೇಶಗಳ ಪೈಕಿ ದಕ್ಷಿಣ ಕೊರಿಯಾ ಕೂಡ ಒಂದು.
ದಕ್ಷಿಣ ಕೊರಿಯಾದಲ್ಲಿ 18 ತಿಂಗಳ ಕಾಲ ಪಿತೃತ್ವ ರಜೆಯನ್ನು ನೀಡಲಾಗುತ್ತದೆ. ದಕ್ಷಿಣ ಕೊರಿಯಾದಲ್ಲಿ ಜನಸಂಖ್ಯೆ ಕಡಿಮೆ ಇರುವುದರಿಂದ ಜನಸಂಖ್ಯೆಯನ್ನು ಹೆಚ್ಚಿಸಲು ಅವರು ಈ ರೀತಿಯ ಯೋಜನೆ ಜಾರಿಗೆ ತಂದಿದ್ದಾರೆ. ಇದರಿಂದ ಕೆಲಸದಲ್ಲಿರುವ ದಂಪತಿಗೆ ಹೆಚ್ಚಿನ ಅನುಕೂಲವಾಗುತ್ತಿದೆ.
ಜಗತ್ತಿನಲ್ಲೇ ಅತಿ ಹೆಚ್ಚು ಪಿತೃತ್ವ ರಜೆ ಜಾರಿಗೊಳಿಸಿದ ದೇಶ ಇದು : 18 ತಿಂಗಳ ಕಾಲ ಪಿತೃತ್ವ ರಜೆ ನೀಡಿರುವ ಕೊರಿಯಾ ಈಗ ಜಗತ್ತಿನಲ್ಲೇ ಅತ್ಯಂತ ಹೆಚ್ಚು ರಜೆಯನ್ನು ನೀಡುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2021ರಲ್ಲಿ ಕೊರಿಯಾದ ಬರ್ತ್ ರೇಟ್ ಶೇಕಡಾ 0.81 ಕ್ಕೆ ಇಳಿದಿತ್ತು. ಆರ್ಗನೈಸೇಶನ್ ಫಾರ್ ಇಕಾನಮಿಕ್ ಎಂಡ್ ಡೆವಲಪ್ಮೆಂಟ್ (OECD) ಪ್ರಕಾರ, ಈ ಬರ್ತ್ ರೇಟ್ ಸ್ಥಿರ ಜನಸಂಖ್ಯೆಗೆ ಅಗತ್ಯವಿರುವ ಶೇಕಡಾ 2.1 ಪ್ರಮಾಣಕ್ಕಿಂತಲೂ ಕಡಿಮೆ ಇತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೊರಿಯಾ ಜನನ ಪ್ರಮಾಣವನ್ನು ಏರಿಸಲು ಹೊಸ ಉಪಾಯ ಮಾಡಿದೆ. ಜನನ ಪ್ರಮಾಣ ದರವು ಜಪಾನ್ ನಲ್ಲಿ ಶೇಕಡಾ 1.37 ರಷ್ಟು ಮತ್ತು ಅಮೇರಿಕದಲ್ಲಿ ಶೇಕಡಾ 1.66 ರಷ್ಟಿದೆ.
ಈ ಯೋಜನೆಯಡಿ ದಕ್ಷಿಣ ಕೊರಿಯಾದಲ್ಲಿ ಪ್ರತಿ ದಂಪತಿಗೆ ಒಂದೂವರೆ ವರ್ಷಗಳ ಕಾಲ ಪೋಷಕರ ರಜೆ ಸಿಗುತ್ತದೆ. ಕೊರಿಯಾ ಪಿತೃತ್ವ ರಜೆ ಘೋಷಿಸಿದರೂ ಕೂಡ ವೇತನವನ್ನು ಇನ್ನೂ ದೃಢಪಡಿಸಿಲ್ಲ. ಆದರೆ ಸರ್ಕಾರದ ಯೋಜನೆಯ ಪ್ರಕಾರ, ಕೊರಿಯಾದ ಜನಸಂಖ್ಯೆಯ ಗಾತ್ರವಂತೂ ಹೆಚ್ಚಾದದ್ದು ನಿಜ. ಓಇಸಿಡಿಯ ಪ್ರಕಾರ ಪ್ರಸ್ತುತ ಕೊರಿಯಾ ದೇಶವು ವೇಗವಾಗಿ ಬೆಳೆಯುತ್ತಿರುವ 38 ದೇಶಗಳ ಪಟ್ಟಿಯಲ್ಲಿ ಸೇರಿದೆ.
ಚಳಿಗಾಲದಲ್ಲಿ ಬೇಸಿಗೆಯ ಬಿಸಿಯನ್ನು ಎಂಜಾಯ್ ಮಾಡಲು ಈ ತಾಣಗಳು ಬೆಸ್ಟ್
ಕೆಲವು ಮಾಧ್ಯಮಗಳ ವರದಿಯ ಪ್ರಕಾರ, ಕಳೆದ 16 ವರ್ಷಗಳಲ್ಲಿ ಚೈಲ್ಡ್ ಕೇರ್ ಸಬ್ಸಿಡಿ ಮತ್ತು ವೇತನ ಸಹಿತ ಪೋಷಕರ ರಜೆಗಳಿಗಾಗಿ ಸುಮಾರು 200 ಬಿಲಿಯನ್ ಡಾಲರ್ ಗಿಂತಲೂ ಹೆಚ್ಚು ಖರ್ಚು ಮಾಡಲಾಗಿದೆ. ಪಿತೃತ್ವ ರಜೆಯನ್ನು ಹೆಚ್ಚಿಗೆ ನೀಡಿದ್ರೆ ಕೆಲಸಕ್ಕೆ ಹೋಗುವ ಮಹಿಳೆಯರು ಮಕ್ಕಳನ್ನು ಪಡೆಯಲು ಆಸಕ್ತಿ ತೋರುತ್ತಾರೆಂದು ಸರ್ಕಾರ ನಂಬಿದೆ. ಯಾಕೆಂದ್ರೆ ಪತ್ನಿಗೆ ಪತಿ ಸಹಕಾರ ಹೆರಿಗೆ ಸಂದರ್ಭದಲ್ಲಿ ಅಗತ್ಯವಾಗಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.