ಹನಿಮೂನ್ ಸ್ವರ್ಗದಲ್ಲೇ ಹೈಯೆಸ್ಟ್ ಡಿವೋರ್ಸ್, ಮಾಲ್ಡೀವ್ಸ್‌ನಲ್ಲಿ ಯಾಕೆ ಹೀಗಾಗ್ತಿದೆ?

By Suvarna NewsFirst Published May 27, 2023, 11:52 AM IST
Highlights

ಸೆಲೆಬ್ರಿಟಿಗಳಿಂದ ಹಿಡಿದು ಮೇಲ್ಮಧ್ಯಮ ವರ್ಗದವರವರೆಗೆ ಹೆಚ್ಚಿನ ಜೋಡಿಗಳ ಮೆಚ್ಚಿನ ತಾಣ ಮಾಲ್ಡೀವ್ಸ್. ಆದರೆ ಇದೀಗ ಈ ರಾಷ್ಟ್ರ ವಿಶ್ವದಲ್ಲೇ ಅತ್ಯಧಿಕ ಡಿವೋರ್ಸ್ ಪ್ರಕರಣಗಳಿಗೆ ಸುದ್ದಿಯಲ್ಲಿದೆ. ಮಧುಚಂದ್ರದ ತಾಣದಲ್ಲೇ ಅತ್ಯಧಿಕ ಡಿವೋರ್ಸ್ ಪ್ರಕರಣಗಳಾಗುತ್ತಿರುವುದು ಯಾಕೆ?

ದಾಂಪತ್ಯದ ಮಧುರ ಕ್ಷಣಗಳನ್ನು ಜೀವನ ಪರ್ಯಂತ ನೆನೆಪಿಟ್ಟುಕೊಳ್ಳಬಹುದಾದಂಥಾ ರಸಮಯ ಕ್ಷಣಗಳನ್ನು ಕಳೆಯಲು ಅನೇಕ ಜೋಡಿಗಳು ಮಾಲ್ಡೀವ್ಸ್‌ಗೆ ಹೋಗುತ್ತಾರೆ. ಮಾಲ್ಡೀವ್ಸ್ 'ಮಧುಚಂದ್ರದ ಸ್ವರ್ಗ' ಅಂತಲೇ ಖ್ಯಾತಿ ಪಡೆದ ದ್ವೀಪರಾಷ್ಟ್ರ. ಕರ್ನಾಟಕವೂ ಸೇರಿದಂತೆ ಜಗತ್ತಿನ ನಾನಾ ಭಾಗಗಳ ಹೆಚ್ಚಿನ ನವಜೋಡಿಗಳು ಇಲ್ಲಿ ಹನಿಮೂನ್ ಅನ್ನು ಎನ್‌ಜಾಯ್ ಮಾಡ್ತಾರೆ. ಆದರೆ ಇದೀಗ ಹೊರಬಿದ್ದಿರುವ ಶಾಕಿಂಗ್ ನ್ಯೂಸ್ ಅಂದರೆ ಈ ಹನಿಮೂನ್‌ ಸ್ವರ್ಗ ಈಗ ಜಗತ್ತಿನಲ್ಲೇ ನಂ 1 ವಿಚ್ಛೇದನ ರಾಷ್ಟ್ರವಾಗಿ ಹೊರಹೊಮ್ಮಿದೆ. ನಿತ್ಯ ಸಾವಿರಾರು ಜೋಡಿಗಳ ನವಿರಾದ ಕ್ಷಣಗಳಿಗೆ ಎಲ್ಲ ಸೌಕರ್ಯ ಮಾಡಿಕೊಡುವ ಇಲ್ಲಿನ ಮಂದಿ ಮಾತ್ರ ತಮ್ಮ ದಾಂಪತ್ಯದಲ್ಲಿ ಸೋಲನುಭವಿಸುತ್ತಿದ್ದಾರೆ. ಅತ್ಯಧಿಕ ಡಿವೋರ್ಸ್ ಪ್ರಕರಣಗಳನ್ನು ದಾಖಲಿಸಿ ವಿಶ್ವವನ್ನು ಬೆಚ್ಚಿ ಬೀಳಿಸಿದೆ.

ಸುಂದರ ಕಡಲು, ಸೊಗಸಾದ ತಾಣಗಳು, ಅದ್ಭುತ ಪ್ರಕೃತಿ ಸೌಂದರ್ಯದ ದ್ವೀಪರಾಷ್ಟ್ರದಲ್ಲಿ ಅದ್ಯಾಕೆ ಡಿವೋರ್ಸ್ ಪ್ರಕರಣಗಳು ಹೆಚ್ಚು ಅಂದರೆ ಅದಕ್ಕೂ ಕಾರಣಗಳನ್ನು ತಜ್ಞರು ಅಂದಾಜಿಸಿದ್ದಾರೆ.

ಕಳೆದೆರಡು ದಶಕಗಳಿಂದ ಮಾಲ್ಡೀವ್ಸ್ ನಲ್ಲಿ ಪ್ರತಿ 1 ಸಾವಿರ ವೈವಾಹಿಕ ಸಂಬಂಧಗಳಲ್ಲಿ 5.52 ಜೋಡಿಗಳು ವಿಚ್ಛೇದನಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಮಾಲ್ಡೀವ್ಸ್‌ನ ದ್ವೀಪ ಪರಿಸರದಲ್ಲಿ ನೆಲೆನಿಲ್ಲಲು ಸ್ಥಳೀಯರಿಗೆ ಸೂಕ್ತ ಉದ್ಯೋಗಗಳಿಲ್ಲ. ಈ ದ್ವೀಪಕ್ಕೆ ಪ್ರವಾಸೋದ್ಯಮ, ಹಡಗು ನಿರ್ವಹಣೆ, ಸರಕು- ಸಾಗಾಟ, ಮೀನುಗಾರಿಕಾ ವೃತ್ತಿಗಳೇ ಆಸರೆ. ಅನ್ಯರಾಷ್ಟ್ರದ ಪ್ರವಾಸಿಗರನ್ನು ಆಕರ್ಷಿಸಿದರಷ್ಟೇ ಸ್ಥಳೀಯರ ಹೊಟ್ಟೆ ಭರ್ತಿಯಾಗುತ್ತದೆ. ಹೊರಗಿನ ರಾಷ್ಟ್ರಗಳಿಂದ ಆಗಮಿಸುವ ಜೋಡಿಗಳ ಸೇವೆಗೆ (ವಸತಿ, ಆಹಾರ ಪೂರೈಕೆ, ವಿಹಾರ ವ್ಯವಸ್ಥೆ) ಹೆಚ್ಚಿನ ಸಮಯವನ್ನು ಇಲ್ಲಿನ ಪುರುಷರು ಮೀಸಲಿಡುವುದರಿಂದ ತಮ್ಮ ಕುಟುಂಬದಿಂದ ದೂರವುಳಿಯುವುದು ಇವರಿಗೆ ಅನಿವಾರ್ಯ. ಅನ್ಯರ ಸುಖಕ್ಕಾಗಿ ತಮ್ಮ ಕುಟುಂಬದೊಂದಿಗೆ ಸುದೀರ್ಘ ಅಂತರ ಕಾಯ್ದುಕೊಳ್ಳುವುದು ವಿಚ್ಛೇದನಕ್ಕೆ ದಾರಿ ಮಾಡಿಕೊಡುತ್ತಿದೆ ಎನ್ನುವುದು ಸಾಮಾಜಿಕ ವಿಜ್ಞಾನಿಗಳು ಮುಂದಿಡುವ ಮೊದಲ ಕಾರಣ.

Viral Video: ಅಜ್ಜಿಯನ್ನು ಪ್ಯಾರಿಸ್ ಟೂರ್‌ಗೆ ಕರೆದೊಯ್ದ ಮೊಮ್ಮಕ್ಕಳು, ನೆಟ್ಟಿಗರಿಂದ ಮೆಚ್ಚುಗೆ

ಹೆಚ್ಚಿನ ಪ್ರಮಾಣದ ವಿಚ್ಛೇದನದಿಂದಾಗಿ(Divorce) ಗಿನ್ನೆಸ್‌ ಪುಸ್ತಕದಲ್ಲಿ ದಾಖಲಾಗಿರುವ ಮಾಲ್ಡೀವ್ಸ್‌ಗೆ ಇಸ್ಲಾಮಿಕ್‌ನ ಷರಿಯಾ ಕಾನೂನುಗಳು ಹಿನ್ನಡೆ ತಂದೊಡ್ಡಿವೆ. ಇಸ್ಲಾಮಿಕ್‌ ಬಹುಸಂಖ್ಯಾತ ರಾಷ್ಟ್ರಗಳಿಗೆ ಹೋಲಿಸಿದರೂ ಮಾಲ್ಡೀವ್ಸ್‌ ಮೊದಲಿನಿಂದಲೂ ಹೆಚ್ಚು ವಿಚ್ಛೇದನ ಪ್ರಮಾಣ ಹೊಂದಿದೆ. ಷರಿಯಾ ಕಾನೂನುಗಳ ಮೂಲಕ ಸಂಬಂಧ ತೊರೆಯುವುದು ಇಲ್ಲಿನವರಿಗೆ ಸುಲಭವೂ ಆಗಿರಬಹುದು. ಅಲ್ಲದೆ, ಸಮುದ್ರ ಪ್ರಯಾಣ ಹೊರಟವರು ಟ್ರಾವೆಲಿಂಗ್‌ ಏಜೆನ್ಸಿಗಳ(Travel agency) ನಿಯಂತ್ರಣದಲ್ಲಿರುತ್ತಾರೆ. ಯಾವಾಗ ಹಿಂತಿರುಗುತ್ತಾರೆ ಎಂದು ಹೇಳಲಾಗದು. 60-70ರ ದಶಕದಲ್ಲಿ ವಿಚ್ಛೇದನ ಎನ್ನುವುದು ಭ್ರಮೆ ಎಂದು ಜಗತ್ತು ಭಾವಿಸುತ್ತಿದ್ದ ಹೊತ್ತಿನಲ್ಲಿಯೇ ಮಾಲ್ಡೀವ್ಸ್‌ ಈ ವಿಚಾರದಲ್ಲಿ ಬಹುದೂರ ಸಾಗಿತ್ತು ಎನ್ನುತ್ತಾರೆ ತಜ್ಞರು.

ಜಸ್ಟ್‌ 1 ಲಕ್ಷ ಇದ್ರೆ ಸಾಕು ನೀವು ಜಗತ್ತಿನ ಈ ದೇಶಗಳಿಗೆ ಟ್ರಿಪ್ ಹೋಗ್ಬೋದು

ಜಗತ್ತಿನ ಬೇರೆ ಬೇರೆ ಭಾಗಗಳ ಜನರು ಮದುವೆಗಾಗಿ ಹೆಚ್ಚು ಖರ್ಚು ಮಾಡುತ್ತಾರೆ. ಆದರೆ ಮಾಲ್ಡೀವ್ಸ್‌ನವರು ದುಂದುವೆಚ್ಚ ಮಾಡುವುದಿಲ್ಲ. ಬದಲಿಗೆ ಪತಿ ತನ್ನ ಹೆಂಡತಿಗೆ ಸಣ್ಣ ಮೊತ್ತ ಪೂರೈಸುವ ಭರವಸೆ ನೀಡುತ್ತಾನೆ. ಬಳಿಕ ಸರಳವಾದ ಟೀ ಪಾರ್ಟಿ ನಡೆಯುತ್ತದೆ. ಇದರಲ್ಲಿ ಕುಟುಂಬದವರು, ನಿಕಟವರ್ತಿಗಳಷ್ಟೇ ಪಾಲ್ಗೊಳ್ಳುತ್ತಾರೆ. ಗರಿಷ್ಠ 80 ಸಾವಿರ ರೂ.ಗಳೊಳಗೆ ಇಲ್ಲಿ ಮದುವೆ ಮುಗಿಸುತ್ತಾರೆ. ಆದರೆ, ಸ್ಥಳೀಯ ಜನರು ಅನುಸರಿಸುವ ಈ ಪಾಕೆಟ್‌ ಫ್ರೆಂಡ್ಲಿ ಮದುವೆಯನ್ನು ಇಲ್ಲಿನ ವೆಡ್ಡಿಂಗ್‌(Wedding) ಏಜೆನ್ಸಿಗಳು ಅನುಸರಿಸುವುದಿಲ್ಲ. ಹೊರದೇಶಗಳಿಂದ ಇಲ್ಲಿಗೆ ಬರುವ ಜೋಡಿಗಳಿಗೆ ದುಬಾರಿ ವೆಚ್ಚದ ವೆಡ್ಡಿಂಗ್‌ ಪ್ಯಾಕೇಜ್‌ಗಳನ್ನು ಈ ಏಜೆನ್ಸಿಗಳು ಮುಂದಿಡುತ್ತವೆ. ಒಟ್ಟಾರೆ ಎಷ್ಟೋ ಮಂದಿಯ ದಾಂಪತ್ಯಕ್ಕೆ ಸುಂದರ ಭಾಷ್ಯ ಬರೆಯುವ ಮಾಲ್ಡೀವ್ಸ್ ಮಂದಿ ತಾವು ಮಾತ್ರ ಸಪರೇಶನ್‌(Separation) ಜ್ವಾಲೆಯಲ್ಲಿ ಬೇಯುತ್ತಿದ್ದಾರೆ.

click me!