Bengaluru: ಯಶವಂತಪುರ To ಹೊಸೂರು ಮಾರ್ಗದಲ್ಲಿ ಪ್ರಯಾಣ ಮಾಡೋರಿಗೆ ರೈಲ್ವೆ ಇಲಾಖೆಯ ಗುಡ್‌ನ್ಯೂಸ್‌!

By Santosh Naik  |  First Published Sep 3, 2024, 9:04 AM IST

ಯಶವಂತಪುರದಿಂದ ಹೊಸೂರಿಗೆ ಹೊಸ ಮೆಮು ರೈಲು ಸೇವೆ ಆರಂಭವಾಗಲಿದೆ. ಬೆಳಗ್ಗೆ 10.45ಕ್ಕೆ ಯಶವಂತಪುರದಿಂದ ಹೊರಡುವ ರೈಲು ಮಧ್ಯಾಹ್ನ 12.30ಕ್ಕೆ ಹೊಸೂರು ತಲುಪಲಿದೆ. ಹೊಸೂರಿನಿಂದ ಸಂಜೆ 3.20ಕ್ಕೆ ಹೊರಡುವ ರೈಲು ಸಂಜೆ 5.15ಕ್ಕೆ ಯಶವಂತಪುರ ತಲುಪಲಿದೆ.


ಬೆಂಗಳೂರು (ಸೆ.3): ತುಮಕೂರು ಮಾರ್ಗ ಮಾತ್ರವಲ್ಲ, ಯಶವಂತಪುರದಿಂದ ಹೊಸೂರು ಮಾರ್ಗದಲ್ಲಿ ಓಡಾಟ ನಡೆಸುವವರಿಗೂ ಭಾರತೀಯ ರೈಲ್ವೆ ಗುಡ್‌ ನ್ಯೂಸ್‌ ನೀಡಿದೆ. ಈ ಮಾರ್ಗದಲ್ಲಿಯೂ ಹೊಸ ಮೆಮು ರೈಲು ಓಡಾಟ ನಡೆಸಲಿದೆ. ಇತ್ತೀಗಷ್ಟೇ ಈ ಮಾರ್ಗಕ್ಕೆ ಹೊಸ ಮೆಮು ರೈಲು ಓಡಾಟ ನಡೆಸಲು ಇಲಾಖೆ ಅನುಮೋದನೆ ನೀಡಿದೆ.ಯಶವಂತಪುರ - ಹೊಸೂರು  ಮೆಮು ರೈಲು, ರೈಲು ಸಂಖ್ಯೆ 06203(66563)ಅಲ್ಲಿ ಓಡಾಟ ನಡೆಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.ಯಶವಂತಪುರ- ಹೊಸೂರು ಮಾರ್ಗವಾಗಿ ಮೆಮು ರೈಲು ಸಂಚಾರ ನಡೆಸಲಿದೆ. ಬೆಳಗ್ಗೆ 10.45ಕ್ಕೆ ಯಶವಂತಪುರದಿಂದ ಹೊರಟು ಮಧ್ಯಾಹ್ನ 12.30ಕ್ಕೆ ಹೊಸೂರು ತಲುಪಲಿದೆ. ಇನ್ನು 06204(66564) ನಂಬರ್‌ನ  ಹೊಸೂರು - ಯಶವಂತಪುರ ಮೆಮು ರೈಲು ಮಧ್ಯಾಹ್ನ 3.20ಕ್ಕೆ ಹೊಸೂರಿನಿಂದ ಹೊರಟು ಸಂಜೆ 5.15ಕ್ಕೆ ಯಶವಶವಂತಪುರ ತಲುಪಲಿದೆ ಎಂದು ತಿಳಿಸಲಾಗಿದೆ. ರೈಲು ಮಾರ್ಗ ನಡುವೆ ನಿಲುಗಡೆ ನೀಡುವ ರೈಲ್ವೆ ನಿಲ್ದಾಣಗಳೆಂದರೆ ಹೆಬ್ಬಾಳ , ಬಾಣಸವಾಡಿ , ಬೆಳ್ಳಂದೂರು ರಸ್ತೆ , ಕಾರ್ಮೆಲರಾಂ, ಹೀಲಲಿಗೆ ಹಾಗೂ ಆನೆಕಲ್ ರಸ್ತೆಯಲ್ಲಿ ರೈಲು ನಿಲ್ಲಲಿದೆ.

ತುಮಕೂರು ಜಿಲ್ಲೆಯ ಬಹುದಿನದ ಬೇಡಿಕೆ ಈಡೇರಿಸಿದ ರೈಲ್ವೆ ಇಲಾಖೆ!

Latest Videos

undefined

ಬೆಂಗಳೂರು ಏರ್‌ಪೋರ್ಟ್‌ಗೆ ದಿನಕ್ಕಿದೆ 6 ಟ್ರೇನ್‌, ಆದ್ರೆ ಪ್ರಯಾಣ ಮಾಡೋರು ಬರೀ 30 ಜನ!

 

click me!