ತುಮಕೂರು ಜಿಲ್ಲೆಯ ಬಹುದಿನದ ಬೇಡಿಕೆ ಈಡೇರಿಸಿದ ರೈಲ್ವೆ ಇಲಾಖೆ!

By Santosh Naik  |  First Published Sep 3, 2024, 8:47 AM IST

ತುಮಕೂರು ಮತ್ತು ಯಶವಂತಪುರ ನಡುವೆ ಹೊಸ ಮೆಮು ರೈಲು ಸೇವೆಯನ್ನು ಪ್ರಾರಂಭಿಸಲಾಗಿದೆ. ಈ ಸೇವೆಯು ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುತ್ತದೆ ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹಲವಾರು ನಿಲ್ದಾಣಗಳಲ್ಲಿ ನಿಲ್ಲುತ್ತದೆ.


ಬೆಂಗಳೂರು (ಸೆ.3):  ತುಮಕೂರು ಜನರ ಬಹುದಿನದ ಬೇಡಿಕೆಯನ್ನು ರೈಲ್ವೆ ಇಲಾಖೆ ಈಡೇರಿಸಿದ್ದು,  ತುಮಕೂರು-ಯಶವಂತಪುರ ಮಾರ್ಗವಾಗಿ ಮೆಮು  ರೈಲು ಓಡಾಟಕ್ಕೆ  ಅನುಮತಿ ನೀಡಿದೆ. ರೆಗ್ಯುಲರ್ ಪ್ಯಾಸೆಂಜರ್ ಫ್ರೆಂಡ್ಲಿ ಮೆಮು ಟ್ರೈನ್  ಓಡಾಟಕ್ಕೆ ರೈಲ್ವೆ ಇಲಾಖೆ ಅನುಮೋದನೆ ಕೊಟ್ಟಿದೆ. ಪ್ರತಿದಿನ ಬೆಳಗ್ಗೆ  ಮತ್ತು ಸಂಜೆ ಪ್ಯಾಸೆಂಜರ್ ಟ್ರೈನ್ ಓಡಿಸುವಂತೆ ತುಮಕೂರು ಜನರು ಬಹುವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಆದರೆ, ಯಾರೂ ಕೂಡ ಈ ಬಗ್ಗೆ ಗಮನ ನೀಡಿರಲಿಲ್ಲ. ತುಮಕೂರು ಸಂಸದ ವಿ.ಸೋಮಣ್ಣ ರೈಲ್ವೆ ಇಲಾಖೆ (ರಾಜ್ಯ ಸಚಿವ) ಪದವಿ ವಹಿಸಿಕೊಳ್ಳುತ್ತಿದ್ದಂತೆ ಇದಕ್ಕೆ ಅನುಮೋದನೆ ಸಿಕ್ಕಿದೆ. ತುಮಕೂರು-ಯಶವಂತಪುರ ಮಾರ್ಗವಾಗಿ ಮೆಮು  (MEMU) ಟೈನ್ ಓಡಾಟಕ್ಕೆ ರೈಲ್ವೇ ಇಲಾಖೆ ಅನುಮತಿ ನೀಡಿದೆ. ಭಾನುವಾರ ಹೊರತುಪಡಿಸಿ ವಾರದ 6 ದಿನಗಳಲ್ಲಿ ಮೆಮು ಟ್ರೇನ್‌ ಓಡಾಟ ನಡೆಸಲಿದೆ.

ಮೆಮು ರೈಲು ಸೇವೆ ವಿವರ
ತುಮಕೂರು-ಯಶವಂತಪುರ ಮೆಮು ಟ್ರೈನ್ 06201(66561): ಬೆಳಗ್ಗೆ 8.55ಕ್ಕೆ ತುಮಕೂರಿನಿಂದ ಹೊರಟು 10.25ಕ್ಕೆ ಯಶವಂತಪುರ  ತಲುಪಲಿದೆ.

Tap to resize

Latest Videos

undefined

ಟ್ರೇನ್ ಸಂಖ್ಯೆ 06202(66562): ಯಶವಂತಪುರದಿಂದ 5.40ಕ್ಕೆ ಹೊರಟು ಸಾಯಂಕಾಲ 7.05ಕ್ಕೆ ತುಮಕೂರು ತಲುಪಲಿದೆ.

ಪ್ರತಿ ಸೋಮವಾರ ವಿಶೇಷ ಮೆಮು ಟ್ರೈನ್ ನಂಬರ್ 06205(6565) : ಬಾಣಸವಾಡಿ  ರೈಲ್ವೆ ನಿಲ್ದಾಣದಿಂದ 6.15ಕ್ಕೆ  ಹೊರಟು  ತುಮಕೂರಿಗೆ 8.35ಕ್ಕೆ ತಲುಪಲಿದೆ.

 ಪ್ರತಿ ಶನಿವಾರ ವಿಶೇಷ ಮೆಮು ಟ್ರೈನ್ ನಂಬರ್ 06206(66566): ತುಮಕೂರಿನಿಂದ ಸಾಯಂಕಾಲ 7.40ಕ್ಕೆ ಹೊರಟು ರಾತ್ರಿ  10.05ಕ್ಕೆ  ಬಾಣಸವಾಡಿ ತಲುಪಲಿದೆ.

ಭಾರೀ ಮಳೆ, 69 ರೈಲು ರದ್ದು ಮಾಡಿದ ಸೌತ್‌ ಸೆಂಟ್ರಲ್‌ ರೈಲ್ವೇಸ್‌!

ಮೆಮು ರೈಲು ಮಾರ್ಗಮಧ್ಯದಲ್ಲಿ ನಿಲುಗಡೆ ನೀಡುವ ನಿಲ್ದಾಣಗಳು: ಮೆಮು ರೈಲು ಓಡಾಟ ನಡೆಸುವ ಮಾರ್ಗದಲ್ಲಿ ಕ್ಯಾತಸಂದ್ರ, ಹೀರೇಹಳ್ಳಿ, ದಾಬಸ್ ಪೇಟೆ , ನಿಡವಂದ , ಮುದ್ದಲಿಂಗನಹಳ್ಳಿ, ದೊಡ್ಡಬೆಲೆ, ಭೈರನಾಯಕನಹಳ್ಳಿ, ಗೊಲ್ಲಹಳ್ಳಿ, ಸೋಲದೇವನಹಳ್ಳಿ ಹಾಗೂ ಚಿಕ್ಕಬಾಣಾವರದಲ್ಲಿ ಟ್ರೇನ್‌ ನಿಲ್ಲಲಿದೆ.

ಬೆಂಗಳೂರು ಏರ್‌ಪೋರ್ಟ್‌ಗೆ ದಿನಕ್ಕಿದೆ 6 ಟ್ರೇನ್‌, ಆದ್ರೆ ಪ್ರಯಾಣ ಮಾಡೋರು ಬರೀ 30 ಜನ!

click me!