ಕರ್ನಾಟಕ ಜನ ಸುಲಭವಾಗಿ ತಲುಪಬಲ್ಲ ಈ ಸಮುದ್ರಕ್ಕೆ ಏಷ್ಯಾ ನಂ.1 ಬೀಚ್ ಪಟ್ಟ, ವಿಶ್ವದಲ್ಲಿ 6ನೇ ಸ್ಥಾನ

Published : Nov 08, 2026, 04:42 PM IST
Goa Beach

ಸಾರಾಂಶ

ಏಷ್ಯಾದ ನಂ.1 ಬೀಚ್ ಅನ್ನೋ ಪಟ್ಟ ಭಾರತದ ಈ ಕಡಲ ಕಿನಾರೆಗೆ ಸಿಕ್ಕಿದೆ. ವಿಶೇಷ ಅಂದರೆ ವಿಶ್ವದ ಅತ್ಯುತ್ತಮ ಬೀಚ್‌ಗಳಲ್ಲಿ 6ನೇ ಸ್ಥಾನ. ಈ ಬೀಚ್ ತಲಪುವುದು ಕರ್ನಾಟಕ ಮಂದಿಗೆ ಅತೀ ಸುಲಭ.

ಪ್ರವಾಸಿ ತಾಣಗಳ ಪೈಕಿ ಬೀಚ್ ಟೂರಿಸಂ ಅತ್ಯಂತ ಜನಪ್ರಿಯ. ರಜಾ ದಿನಗಳಲ್ಲಿ ಬೀಚ್ ಪ್ರವಾಸಿ ತಾಣಗಳು ತುಂಬಿ ತಳುಕುತ್ತದೆ. ಮಂಗಳೂರು, ಉಡುಪಿ, ಭಟ್ಕಳ, ಕಾರವಾರ ಸೇರಿದಂತೆ ಹಲವು ಕಡಲ ತೀರಗಳು ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಾಗಿವೆ. ಇದೀಗ ವಿಶ್ವದ ಬೀಚ್, ಪ್ರಾಕೃತಿಕ ಸೌಂದರ್ಯ, ಶುಚಿತ್ವ, ಅಲ್ಲಿನ ಸೌಲಭ್ಯ, ಮೋಜು ಮಸ್ತಿ ಅವಕಾಶ ಸೇರಿದಂತೆ ಹಲವು ಮಾನದಂಡಗಳನ್ನು ಆಧರಿಸಿ ರ್ಯಾಂಕಿಂಗ್ ನೀಡಲಾಗಿದೆ. ಅತ್ಯುತ್ತಮ ಬೀಚ್ ಪೈಕಿ ಇದೀಗ ಪಾಲೋಲೆಮ್ ಬೀಜ್ ಏಷ್ಯಾದ ನಂಬರ್ 1 ಬೀಚ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಷ್ಟೇ ಅಲ್ಲ ವಿಶ್ವದ ಅತ್ಯುತ್ತಮ ಬೀಚ್ ಪೈಕಿ 6ನೇ ಸ್ಥಾನದಲ್ಲಿದೆ.

ಪಾಲೋಲೆಮ್ ಬೀಚ್ ಸೌಂದರ್ಯ

ಏಷ್ಯಾದ ನಂ.1 ಪಟ್ಟ ಗಿಟ್ಟಿಸಿಕೊಂಡ ಪಾಲೋಲೆಮ್ ಬೀಚ್‌ಗೆ ಕರ್ನಾಟಕದ ಮಂದಿ ತಲುಪುವುದು ಸುಲಭ. ಇದು ದಕ್ಷಿಣ ಗೋವಾದಲ್ಲಿರುವ ಬೀಚ್. ಅಂದರೆ ನಮ್ಮ ಕಾರವಾರದಿಂದ ಕೆಲವೇ ದೂರದಲ್ಲಿರುವ ಪಾಲೊಲೆಮ್ ಬೀಚ್ ಏಷ್ಯಾದ ಅತ್ಯುತ್ತಮ ಬೀಚ್ ಪಟ್ಟ ಗಿಟ್ಟಿಸಿಕೊಂಡಿದೆ. ವಿಶ್ವದ 25 ಅತ್ಯುತ್ತಮ ಬೀಚ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಷ್ಯಾದ ಏಕೈಕ ಬೀಚ್ ಇದು.

ತಿಳಿ ಹಾಗೂ ಶುದ್ಧ ನೀರು, ಪ್ರಾಕೃತಿಕ ಸೌಂದರ್ಯ

ಪಾಲೋಲೆಮ್ ಬೀಚ್ ಶಾಂತವಾದ ತಿಳಿ ನೀರು ಹೊಂದಿದೆ. ಬೀಚ್ ಹಾಗೂ ಸಮುದ್ರದ ನೀರು ಶುಚಿಯಾಗಿದೆ. ಇನ್ನು ಪಾಲೋಲೆಮ್ ಬೀಚ್ ಅಪಾಯಗಳು ಅತ್ಯಂತ ಕಡಿಮೆ. ಈಜಾಡಲು, ಮೋಜು ಮಸ್ತಿ ಮಾಡಲು ಈ ಬೀಚ್ ಉತ್ತಮವಾಗಿದೆ. ಅಬ್ಬರದ ತೆರೆಗಳಿಲ್ಲ, ದಿಢೀರ್ ಆಳವಿಲ್ಲ. ಹೀಗಾಗಿ ಪ್ರವಾಸಿಗರಿಗೆ ಅತೀ ಹೆಚ್ಚು ಇಷ್ಟಾವಾಗುತ್ತದೆ. ಇನ್ನು ಬೀಚ್ ಕಿನಾರೆಯಲ್ಲಿ ರೆಸ್ಟೋರೆಂಟ್, ರೆಸಾರ್ಟ್, ಹೋಮ್ ಸ್ಟೇ ಸೇರಿದಂತೆ ಎಲ್ಲಾ ವ್ಯವಸ್ಥೆಗಳಿವೆ. ಗೋವಾ ವಿಶೇಷ ಖಾದ್ಯಗಳು ಸೇರಿದಂತೆ ಹಲವು ರೀತಿಯ ಖಾದ್ಯಗಳು , ಮೀನು ಆಹಾರಗಳು ಇಲ್ಲಿ ಸಿಗುತ್ತದೆ. ಇನ್ನು ಗೋವಾದ ವಿಶೇಷ ಫೆನ್ನಿ ಸೇರಿದಂತೆ ಮದ್ಯಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

ಅರ್ಧಚಂದ್ರಾಕೃತಿಯಲ್ಲಿರುವ ಈ ಬೀಚ್ ತಲುಪುದು ಸುಲಭ. ಕಾನಕೋನಾ ರೈಲ್ವೇ ನಿಲ್ದಾಣದಿಂದ ಕೂಗಳತೆ ದೂರದಲ್ಲಿ ಈ ಬೀಚ್ ಇದೆ. ಗೋವಾದ ಕಾನಕೋನಾ ರೈಲ್ವೇ ನಿಲ್ದಾಣದಿಂದ ಬಸ್, ಆಟೋ , ಕ್ಯಾಬ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳಿವೆ. ಇನ್ನು ಪಾಲೋಲೆಮ್, ಕಾನಕೋನಾ ಸೇರಿದಂತೆ ದಕ್ಷಿಣ ಗೋವಾ ಬೀಚ್‌ಗಳು ಸದ್ದು ಗದ್ದಲದಿಂದ ದೂರ ಉಳಿದಿದೆ. ಉತ್ತರ ಗೋವಾದ ಮಡ್ಗಾಂವ್ ಸೇರಿದಂತ ಇತರ ಬೀಚ್‌ಗಳು ಹೆಚ್ಚಿನ ಜನಸಂದಣಿ, ಸದ್ದು ಗದ್ದಲದಿಂದ ಕೂಡಿದೆ. ಆದರೆ ಪಾಲೋಲೆಮ್ ಸೇರಿದಂತೆ ದಕ್ಷಿಣ ಗೋವಾದ ಬೀಚ್ ಶಾಂತವಾಗಿರುವುದು ಮಾತ್ರವಲ್ಲ, ಅಸ್ವಾದಿಸಲು ಹೆಚ್ಚು ಸೂಕ್ತವಾಗಿದೆ.

ಪಾಲೋಲೆಮ್ ಬೀಚ್‌ನಲ್ಲಿ ಕೆಲ ದ್ವೀಪಗಳು ಇವೆ. ಪಕ್ಕದಲ್ಲೇ ಹಿನ್ನೀರುಗಳಿವೆ. ಇಲ್ಲಿ ಕಯಾಕಿಂಗ್ ಸೇರಿದಂತೆ ಹಲವು ಚಟುವಟಿಕೆಗಳಿವೆ. ಕರ್ನಾಟಕದ ಪಕ್ಕದಲ್ಲೇ ಇರುವ ಈ ಬೀಚ್ ಇದೀಗ ವಿಶ್ವದಲ್ಲೇ ಸದ್ದು ಮಾಡುತ್ತಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪರ್ವತ ಹತ್ತಿದಾಗ, ವಿಮಾನ ಮೇಲೇರಿದಾಗ, ಬಾವಿಯಲ್ಲಿ ಇಳಿದಾಗ ಕಿವಿ ಒಮ್ಮಲೇ ಕಟ್ಟಿಕೊಳ್ಳುವುದೇಕೆ?
ಲಾಡ್ಜ್‌, ಹೋಟೆಲ್‌ ರೂಂನಲ್ಲಿರೋ ಈ ವಸ್ತುಗಳನ್ನು ತಗೊಂಡು ಹೋಗ್ಬಹುದು; ಆದ್ರೆ ಇವುಗಳನ್ನು ತಗೊಂಡ್ರೆ ಕೇಸ್ ಪಕ್ಕಾ!