ಬಂಪರ್ ಆಫರ್: ಒಂದು ರೂಪಾಯಿ ಖರ್ಚು ಮಾಡದೆ ಫಿನ್‌ಲ್ಯಾಂಡ್‌ಗೆ 7 ದಿನದ ಪ್ರವಾಸ, ಸಂಪೂರ್ಣ ವಿವರ ಇಲ್ಲಿದೆ

Published : Mar 23, 2026, 05:11 PM IST
Free Trip to Finland

ಸಾರಾಂಶ

Free Finland Trip: ಫಿನ್‌ಲ್ಯಾಂಡ್ ಪ್ರವಾಸ ಈಗ ಕೇವಲ ಕನಸಲ್ಲ! ಕೇವಲ ಒಂದು ವಿಡಿಯೋ ಚಾಲೆಂಜ್ ಮೂಲಕ ನೀವು 7 ದಿನಗಳ ಕಾಲ ಫಿನ್‌ಲ್ಯಾಂಡ್‌ನಲ್ಲಿ ರಾಜಾತಿಥ್ಯ ಪಡೆಯಬಹುದು. ವಸತಿ, ಆಹಾರ ಮತ್ತು ಸ್ಥಳೀಯ ಪ್ರಯಾಣ ಎಲ್ಲವೂ ಉಚಿತ! ಈ ರೋಚಕ ಪ್ರವಾಸದ ಅರ್ಹತೆಗಳೇನು ಮತ್ತು ಭಾಗವಹಿಸುವ ವಿಧಾನ ಇಲ್ಲಿದೆ.

ನಿಜವಾದ ಸಂತೋಷ ಎಂದರೆ ಏನು? ಅದನ್ನು ಪಡೆಯುವುದು ಹೇಗೆ? ಈ ಪ್ರಶ್ನೆಗಳಿಗೆ ಶತಮಾನಗಳಿಂದಲೂ ತತ್ವಜ್ಞಾನಿಗಳು ಉತ್ತರ ಹುಡುಕುತ್ತಲೇ ಇದ್ದಾರೆ. ಆದರೆ, ಈ ಪ್ರಶ್ನೆಗೆ ಅತ್ಯಂತ ಪ್ರಾಯೋಗಿಕ ಉತ್ತರ ಅಡಗಿರುವುದು ಫಿನ್‌ಲ್ಯಾಂಡ್ (Finland) ದೇಶದಲ್ಲಿ. ಹೌದು, ವಿಶ್ವಸಂಸ್ಥೆಯ (UN) ವರದಿಯ ಪ್ರಕಾರ ಸತತ ಎಂಟನೇ ವರ್ಷವೂ ಫಿನ್‌ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷದಾಯಕ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈಗ ತನ್ನ ಈ ಸಂತೋಷದ ರಹಸ್ಯವನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಲು ಫಿನ್‌ಲ್ಯಾಂಡ್ ಸಜ್ಜಾಗಿದೆ!

'ಚಿಲ್ ಲೈಕ್ ಎ ಫಿನ್' (Chill Like a Finn) ಅಭಿಯಾನ

ಫಿನ್‌ಲ್ಯಾಂಡ್‌ನ ಪ್ರವಾಸೋದ್ಯಮ ಇಲಾಖೆಯು 'ಚಿಲ್ ಲೈಕ್ ಎ ಫಿನ್' ಎಂಬ ವಿಶಿಷ್ಟ ಅಭಿಯಾನವನ್ನು ಹಮ್ಮಿಕೊಂಡಿದೆ. ಇದರ ಅಡಿಯಲ್ಲಿ ವಿಶ್ವದಾದ್ಯಂತ 6 ಜೋಡಿಗಳನ್ನು (12 ಜನರು) ಆಯ್ಕೆ ಮಾಡಿ, ಅವರಿಗೆ 7 ದಿನಗಳ ಕಾಲ ಫಿನ್‌ಲ್ಯಾಂಡ್‌ನಲ್ಲಿ ಸಂಪೂರ್ಣ ಉಚಿತ ಪ್ರವಾಸದ ಅವಕಾಶ ನೀಡಲಾಗುತ್ತದೆ.

ದಿನಾಂಕ: ಜೂನ್ 11, 2026 ರಿಂದ ಜೂನ್ 17, 2026 ರವರೆಗೆ.

ಸೌಲಭ್ಯಗಳು: ವಸತಿ, ಕಾರು ಬಾಡಿಗೆ, ಸೌನಾ ಬಾತ್, ಕಯಾಕಿಂಗ್, ಸೈಕ್ಲಿಂಗ್ ಸೇರಿದಂತೆ ಎಲ್ಲಾ ಸ್ಥಳೀಯ ಖರ್ಚುಗಳನ್ನು ಫಿನ್‌ಲ್ಯಾಂಡ್ ಸರ್ಕಾರವೇ ಭರಿಸಲಿದೆ.

ಗಮನಿಸಿ: ವೀಸಾ ಮತ್ತು ಟ್ರಾವೆಲ್ ಇನ್ಶೂರೆನ್ಸ್ ಖರ್ಚನ್ನು ಮಾತ್ರ ಪ್ರವಾಸಿಗರು ನೋಡಿಕೊಳ್ಳಬೇಕು.

ಏನಿರಲಿದೆ ಈ 7 ದಿನಗಳ ಯಾನದಲ್ಲಿ?

ಆಯ್ಕೆಯಾದ ಪ್ರವಾಸಿಗರನ್ನು ಪ್ರಕೃತಿ ಸೌಂದರ್ಯದ ಗಣಿಯಾದ 'ಫಿನ್ನಿಷ್ ಲೇಕ್‌ಲ್ಯಾಂಡ್' (Finnish Lakeland) ಪ್ರದೇಶಕ್ಕೆ ಕರೆದೊಯ್ಯಲಾಗುತ್ತದೆ.

ನಿಸರ್ಗದ ಮಡಿಲು: ನೂರಾರು ನೀಲಿ ಸರೋವರಗಳು, ದಟ್ಟ ಹಸಿರು ಅರಣ್ಯ ಮತ್ತು ಸುಂದರ ಬೆಟ್ಟಗಳ ನಡುವೆ ಈ ಪ್ರವಾಸವಿರುತ್ತದೆ.

ದಿನಚರಿ: ಕೊಲೊವೇಸಿ ನ್ಯಾಷನಲ್ ಪಾರ್ಕ್‌ನಲ್ಲಿ ಹೈಕಿಂಗ್, ತಣ್ಣನೆಯ ಸರೋವರದಲ್ಲಿ ಈಜುವುದು, ಸಾಂಪ್ರದಾಯಿಕ ಸೌನಾ ಸ್ನಾನ ಮತ್ತು ಚಂದದ ಕಾಂಡಲ್ ಲೈಟ್ ಡಿನ್ನರ್ ಮೂಲಕ ನಿಮ್ಮ ದಿನಗಳು ಕಳೆಯಲಿವೆ.

ಉದ್ದೇಶ: ಡಿಜಿಟಲ್ ಜಗತ್ತಿನಿಂದ ದೂರವಿದ್ದು, ಪ್ರಕೃತಿಯೊಂದಿಗೆ ಒತ್ತಡವಿಲ್ಲದ ಜೀವನವನ್ನು ಹೇಗೆ ನಡೆಸಬೇಕೆಂದು ಇಲ್ಲಿ ಕಲಿಸಲಾಗುತ್ತದೆ.

ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನ
18 ವರ್ಷ ತುಂಬಿದ, ಫಿನ್‌ಲ್ಯಾಂಡ್ ಹೊರತುಪಡಿಸಿ ಇತರ ದೇಶದ ಯಾವುದೇ ಪ್ರಜೆಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು.

ವೆಬ್‌ಸೈಟ್: ChillLikeaFinn.com ಗೆ ಭೇಟಿ ನೀಡಿ.

ವಿಡಿಯೋ ಚಾಲೆಂಜ್

ನಿಮ್ಮ ಸಂಗಾತಿ ಅಥವಾ ಸ್ನೇಹಿತರೊಂದಿಗೆ ನೀವು ಫಿನ್‌ಲ್ಯಾಂಡ್‌ನ ಬೇಸಿಗೆಯನ್ನು ಹೇಗೆ ಆನಂದಿಸುತ್ತೀರಿ ಎಂದು ವಿವರಿಸುವ ಒಂದು ಸಣ್ಣ ವಿಡಿಯೋ ಮಾಡಬೇಕು. (ಗಮನಿಸಿ: ಎಐ - AI ಬಳಸುವಂತಿಲ್ಲ).

ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಅಥವಾ ಟಿಕ್‌ಟಾಕ್‌ನಲ್ಲಿ #ChillLikeAFinn ಹ್ಯಾಶ್‌ಟ್ಯಾಗ್ ಬಳಸಿ ಅಪ್‌ಲೋಡ್ ಮಾಡಿ ಮತ್ತು @ourfinland (Instagram) ಅಥವಾ @visitfinland.com (TikTok) ಖಾತೆಗಳನ್ನು ಟ್ಯಾಗ್ ಮಾಡಿ.

ಕೊನೆಯ ಹಂತ
ಅಧಿಕೃತ ವೆಬ್‌ಸೈಟ್‌ನಲ್ಲಿ ಆ ವಿಡಿಯೋದ ಲಿಂಕ್ ನೀಡಿ ಅರ್ಜಿ ಸಲ್ಲಿಸಿ.

ಪ್ರಮುಖ ಮಾಹಿತಿ
ಜಂಟಿಯಾಗಿ ಅರ್ಜಿ ಸಲ್ಲಿಸುವವರಲ್ಲಿ ಒಬ್ಬರಿಗೆ ಡ್ರೈವಿಂಗ್ ಲೈಸೆನ್ಸ್ ಇರಲೇಬೇಕು.
ಸಾಮಾನ್ಯ ಇಂಗ್ಲಿಷ್ ಜ್ಞಾನ ಅತ್ಯಗತ್ಯ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 29, 2026.

ಫಲಿತಾಂಶ: ಏಪ್ರಿಲ್ 21, 2026 ರಂದು ವಿಜೇತರನ್ನು ಘೋಷಿಸಲಾಗುತ್ತದೆ.

ವಿಡಿಯೋ ಮಾಡುವಾಗ ನಿಮ್ಮ ಕ್ರಿಯೇಟಿವಿಟಿ ಮತ್ತು ನೈಜತೆಗೆ (Reality) ಹೆಚ್ಚು ಮಹತ್ವ ನೀಡಿ. ಫಿನ್‌ಲ್ಯಾಂಡ್ ಸೌಂದರ್ಯಕ್ಕಿಂತ ಹೆಚ್ಚಾಗಿ, ನೀವು ಆ ಪ್ರವಾಸಕ್ಕೆ ಎಷ್ಟು ಉತ್ಸುಕರಾಗಿದ್ದೀರಿ ಮತ್ತು ನೀವು ಹೇಗೆ 'ಚಿಲ್' ಆಗುತ್ತೀರಿ ಎಂಬುದನ್ನು ಅವರು ಗಮನಿಸುತ್ತಾರೆ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಮಾನದಲ್ಲಿ ಶವದೊಂದಿಗೆ 13 ಗಂಟೆಗಳ ಪ್ರಯಾಣ ಮಾಡಿದ 331 ಪ್ರಯಾಣಿಕರು: ಆಗಿದ್ದೇನು?
ರನ್‌ವೇಯಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದ ವಿಮಾನ: ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳೂ ಸಾವು