ಮಹಿಳೆಯರ ಸುರಕ್ಷಿತ ಪ್ರಯಾಣಕ್ಕಾಗಿ ಇಂಡಿಗೋ ಏರ್‌ಲೈನ್ಸ್‌ನಿಂದ ಹೊಸ ಕ್ರಮ

By Vinutha Perla  |  First Published May 29, 2024, 9:27 AM IST

ಇಂಡಿಗೋದಲ್ಲಿನ ಮಹಿಳಾ ಪ್ರಯಾಣಿಕರು ಇನ್ನು ಮುಂದೆ ಫ್ಲೈಟ್‌ನಲ್ಲಿ ಸೀಟ್ ಬುಕ್ ಮಾಡುವಾಗ ಯಾವೆಲ್ಲಾ ಸೀಟುಗಳನ್ನು ಮಹಿಳೆಯರು ಮುಂಗಡವಾಗಿ ಕಾಯ್ದಿರಿಸಿದ್ದಾರೆ ಎಂಬುದನ್ನು ನೋಡಬಹುದು. ಈ ಮೂಲಕ ಸಹ ಪ್ರಯಾಣಿಕರು ಮಹಿಳೆಯರೇ ಇರುವ ಸೀಟನ್ನು ಆಯ್ಕೆ ಮಾಡಿಕೊಳ್ಳಬಹುದು.


ನವದೆಹಲಿ: ಇಂಡಿಗೋ ಏರ್‌ಲೈನ್ಸ್‌ನ ಮಹಿಳಾ ಪ್ರಯಾಣಿಕರು ಇನ್ನು ಮುಂದೆ ವೆಬ್‌ನಲ್ಲಿ ಚೆಕ್ ಇನ್ ಮಾಡುವ ಸಮಯದಲ್ಲಿ ಯಾವೆಲ್ಲಾ ಸೀಟುಗಳನ್ನು ಮಹಿಳೆಯರು ಮುಂಗಡವಾಗಿ ಕಾಯ್ದಿರಿಸಿದ್ದಾರೆ ಎಂಬುದನ್ನು ನೋಡಬಹುದು. ಈ ಮೂಲಕ ಸಹ ಪ್ರಯಾಣಿಕರು ಮಹಿಳೆಯರೇ ಇರುವ ಸೀಟನ್ನು ಆಯ್ಕೆ ಮಾಡಿಕೊಳ್ಳಬಹುದು. 'ನಮ್ಮ ಮಹಿಳಾ ಪ್ರಯಾಣಿಕರಿಗೆ ಪ್ರಯಾಣದ ಅನುಭವವನ್ನು ಹೆಚ್ಚು ಆರಾಮದಾಯಕವಾಗಿಸಲು' ಈ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ ಎಂದು ಇಂಡಿಗೋ ಏರ್‌ಲೈನ್ಸ್ ತಿಳಿಸಿದೆ.

ಏರ್‌ಲೈನ್ಸ್‌ನ ಈ ಹೊಸ ವ್ಯವಸ್ಥೆ ಸೀಟ್ ಆಯ್ಕೆಯ ಸಮಯದಲ್ಲಿ, ಮಹಿಳಾ ಪ್ರಯಾಣಿಕರು ಮುಂಚಿತವಾಗಿ ಕಾಯ್ದಿರಿಸಿದ ಆಸನಗಳನ್ನು ತೋರಿಸುತ್ತದೆ. ಈ ಕ್ರಮದ ಹಿಂದಿನ ಉದ್ದೇಶವೆಂದರೆ ಮಹಿಳಾ ಪ್ರಯಾಣಿಕರು ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರೆ, ಸುರಕ್ಷತೆಯ ಕಾರಣಗಳಿಗಾಗಿ ಇನ್ನೊಬ್ಬ ಮಹಿಳೆ ಬುಕ್ ಮಾಡಿರುವ ಸೀಟಿನ ಸಮೀಪವೇ ಆಸನವನ್ನು ಕಾಯ್ದಿರಿಸುವುದಾಗಿದೆ.

Latest Videos

undefined

ರನ್‌ವೇ ಮೇಲೇ ವಿಮಾನ ಪ್ರಯಾಣಿಕರಿಗೆ ತಿಂಡಿ, ಊಟ: ಇಂಡಿಗೋಗೆ ಕೇಂದ್ರ ನೋಟಿಸ್‌

ಬೆಂಗಳೂರಿನ ದಂಪತಿಯ ಹಾಲಿಡೇ ಟ್ರಿಪ್‌ ಅನ್ನು ಇಂಡಿಗೋ ಏರ್‌ಲೈನ್ಸ್‌ ಹಾಳು ಮಾಡಿದೆ ಎಂದು ಆರೋಪಿಸಿದ ದೂರುದಾರರು ನಗರದ ಗ್ರಾಹಕ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದ ಘಟನೆ ಈ ಹಿಂದೆ ನಡೆದಿತ್ತು.. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ 70,000 ರೂಪಾಯಿ ಪರಿಹಾರ ನೀಡುವಂತೆ ಏರ್‌ಲೈನ್ಸ್‌ಗೆ ಆದೇಶ ನೀಡಿತತ್ತು.

ಬೆಂಗಳೂರು ದಂಪತಿಯ ಲಗೇಜ್‌ ಅನ್ನು ಇಂಡಿಗೋ ಏರ್‌ಲೈನ್ಸ್‌ 2 ದಿನಗಳ ನಂತರ ಹಿಂದಿರುಗಿಸಿದ್ದು, ಇದರಿಂದ ತಮ್ಮ ಟ್ರಿಪ್‌ ಹಾಳಾಗಿದೆ ಎಂದು ಅವರು ಆರೋಪಿಸಿದ್ದರು. 2021 ರ ಅಂತ್ಯದ ವೇಳೆಗೆ ಬೈಯಪ್ಪನಹಳ್ಳಿ ನಿವಾಸಿ ಸುರಭಿ ಶ್ರೀನಿವಾಸ್ ಮತ್ತು ಅವರ ಪತಿ ಬೋಲಾ ವೇದವ್ಯಾಸ್ ಶೆಣೈ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿರೋ ಪೋರ್ಟ್ ಬ್ಲೇರ್‌ಗೆ ರಜೆಯ ಮೇಲೆ ಹೋಗಲು ನಿರ್ಧರಿಸಿದರು.

ಬೆಂಗಳೂರು- ಶಿವಮೊಗ್ಗ ವಿಮಾನ ಟಿಕೆಟ್‌ ಬುಕಿಂಗ್‌ ಆರಂಭ: ಟಿಕೆಟ್‌ ದರ 3,999 ರೂ.

ಬಳಿಕ, ಅವರು ಇಂಡಿಗೋದಲ್ಲಿ ಬೆಂಗಳೂರಿನಿಂದ ಪೋರ್ಟ್ ಬ್ಲೇರ್‌ಗೆ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿದರು ಮತ್ತು ನವೆಂಬರ್ 1, 2021 ರಂದು ರಜಾ ತಾಣಕ್ಕೆ ಹೋದರು. ಆದರೆ, ಅಂಡಮಾನ್‌ನಲ್ಲಿ ದೋಣಿ ವಿಹಾರಕ್ಕಾಗಿ ಬಟ್ಟೆ, ಔಷಧ ಮತ್ತು ಬೋಟ್‌ ಟಿಕೆಟ್‌ಗಳನ್ನು ಒಳಗೊಂಡಿದ್ದ ಅವರ ತಪಾಸಣೆ ಮಾಡಿದ ಲಗೇಜ್, ಪೋರ್ಟ್ ಬ್ಲೇರ್ ತಲುಪಲು ವಿಫಲವಾಗಿದೆ. ಈ ಹಿನ್ನೆಲೆ ತಮ್ಮ ಸ್ವತ್ತು ತಲುಪಿಲ್ಲವೆಂದು ದಂಪತಿ ಇಂಡಿಗೋಗೆ ದೂರು ನೀಡಿದ್ದಾರೆ. ಇದರ ನಂತರ, ಇಂಡಿಗೋದ ಗ್ರೌಂಡ್ ಸಿಬ್ಬಂದಿ ಬ್ಯಾಗ್ ಅನ್ನು ಮರುದಿನವೇ ತಲುಪಿಸುವುದಾಗಿ ಭರವಸೆ ನೀಡಿದರು.

ಆದರೆ, ನವೆಂಬರ್ 3 ರ ಅಂತ್ಯದ ವೇಳೆಗೆ ಅವರ ಲಗೇಜ್‌ ತಲುಪಿದ್ದು, ಆ ಹೊತ್ತಿಗೆ ಅವರ ಅರ್ಧಕ್ಕಿಂತ ಹೆಚ್ಚು ರಜೆ ಮುಗಿದಿತ್ತು. ಈ ಕಾರಣಕ್ಕಾಗಿ ಅವರು ಮೂಲಭೂತ ವಸ್ತುಗಳನ್ನು ಸಹ ಖರೀದಿಸಬೇಕಾಯಿತು ಎಂದೂ ತಿಳಿದುಬಂದಿದೆ. 

click me!