ಡಾ.ಬ್ರೋಗೆ ಸಿಕ್ಕಿತು ಹೆಂಗಸಿನ ಅಸ್ಥಿ ಪಂಜರ! ಎಳೆ ಎಳೆಯಾಗಿ ಬಿಚ್ಚಿಟ್ಟ ಅದರ ಮಾಹಿತಿ...

Published : Aug 10, 2025, 06:34 PM ISTUpdated : Aug 11, 2025, 10:31 AM IST
Dr Bro

ಸಾರಾಂಶ

ಡಾ.ಬ್ರೋ ಅವರು ಕುತೂಹಲದ ಅಸ್ಥಿಪಂಜರದ ಮಾಹಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಎಲ್ಲಿಯದ್ದು ಇದು? ಇವರಿಗೆ ಸಿಕ್ಕಿದ್ದು ಹೇಗೆ? 

2025ರಲ್ಲಿ ನಾನು ಬ್ಲಾಸ್ಟ್ ಆಗುತ್ತೇನೆ ಎಂದು ಹೇಳುವ ಮೂಲಕ ಎಲ್ಲರಲ್ಲಿಯೂ ಕೌತುಕ ಹುಟ್ಟುಹಾಕಿದ್ದರು ಡಾ.ಬ್ರೊ. ಇಲ್ಲಿ ವರ್ಷದ ಬಹುತೇಕ ದಿನಗಳನ್ನು ತಮ್ಮ ವಿಶ್ವ ಪ್ರವಾಸದಲ್ಲಿಯೇ ಕಳೆಯಲು ನಿರ್ಧರಿಸಿದ್ದಾರಾ? ಅವರು ಮದುವೆ ಮಾಡಿಕೊಳ್ಳುತ್ತಾರಾ ಅಥವಾ ಹೊಸದೊಂದು ಉದ್ಯಮವನ್ನು ಆರಂಭಿಸುವ ದೊಡ್ಡ ಗುರಿಯನ್ನು ಇಟ್ಟುಕೊಂಡಿದ್ದಾರಾ? ಎಂಬ ಪ್ರಶ್ನೆಗಳನ್ನು ಅವರ ಅಭಿಮಾನಿಗಳು ಕೇಳಿದ್ದರು. ಯಾವುದೇ ಕಾರ್ಯಕ್ಕೂ ಕೈ ಹಾಕಿದರೂ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದ್ದರು. ಅದರಂತೆಯೇ ಡಾ.ಬ್ರೋ ನಾಲ್ಕೈದು ತಿಂಗಳುಗಳಿಂದ ನಾಪತ್ತೆಯಾಗಿದ್ದಾರೆ. ಡಾ. ಬ್ರೋ ಕೊನೆಯದಾಗಿ ಯೂಟ್ಯೂಬಲ್ಲಿ ವಿಡಿಯೋ ಬಿಟ್ಟಿದ್ದು, ಮಾರ್ಚ್ ತಿಂಗಳಲ್ಲಿ. ಚೀನಾದ ನಡೆದಾಡುವ ದೇವತೆ ಬಗ್ಗೆ ವಿಡಿಯೋ ಮಾಡಿದ್ದರು, ಅಲ್ಲದೇ ತಮ್ಮ ಇನ್’ಸ್ಟಾಗ್ರಾಂನಲ್ಲಿ ಟಿಬೆಟ್ ನ ಸುಂದರವಾದ ಮಾರ್ಫಾ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಸುಂದರವಾದ ಪರಿಸರ, ಅಲ್ಲಿ ನಿಶ್ಯಬ್ಧತೆಯ ಕುರಿತಾಗಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು.

ಅದಾಗಿ ನಾಲ್ಕು ತಿಂಗಳು ಕಳೆದರೂ ಡಾ. ಬ್ರೋ ಯಾವುದೇ ವಿಡಿಯೋ ಬಿಡುಗಡೆ ಮಾಡಿಲ್ಲ. ಅತಿ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಡಾ. ಬ್ರೋ ವಿಡಿಯೋ ಮಾಡದೇ ಇರೋದು ಈಗ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಒಂದೆರಡು ಬಾರಿ ತಮ್ಮ ಇನ್’ಸ್ಟಾಗ್ರಾಂನಲ್ಲಿ (Instagram)ಯಾವುದೋ ಪ್ರೊಮೋಷನ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದನ್ನು ಬಿಟ್ಟರೆ, ಯಾವುದೇ ದೇಶದ ವಿಡಿಯೋ ಮಾಡಿಲ್ಲ. ಹಾಗಾಗಿ ಡಾ, ಬ್ರೋ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿದ್ಯಪ್ಪಾ ದೇವ್ರು ಎನ್ನುತ್ತಾ ಚರ್ಚೆ ಮಾಡ್ತಿದ್ದಾರೆ. ಆದರೆ ಇದರ ನಡುವೆಯೇ ಕೆಲ ದಿನಗಳ ಹಿಂದೆ ಅವರು ಹಾಕಿರುವ ಅಸ್ಥಿಪಂಜರದ ವಿಡಿಯೋ ಒಂದು ವೈರಲ್​ ಆಗ್ತಿದೆ.

ಸದ್ಯ ಅಸ್ಥಿಪಂಜರ ಎಂದರೆ ಧರ್ಮಸ್ಥಳ (Dharmasthala) ನೆನಪಾಗುತ್ತದೆ. ಆದರೆ ಡಾ.ಬ್ರೋ ಪರಿಚಯಿಸಿರುವುದು ಮಮ್ಮಿಯ ಬಗ್ಗೆ. ವಿದೇಶದ ಪ್ರವಾಸದ ವಿಡಿಯೋ ಇದಾಗಿದ್ದು, ಮತ್ತೆ ಅದನ್ನು ಶೇರ್​ ಮಾಡಿದಂತಿದೆ. ಇದರಲ್ಲಿ ಕುತೂಹಲವಾಗಿರುವ ಮಮ್ಮಿಯ ಪರಿಚಯವನ್ನು ಡಾ.ಬ್ರೋ ಮಾಡಿದ್ದಾರೆ. ಮಮ್ಮಿಯ ನಿಖರವಾದ ವಯಸ್ಸು ನಮಗೆ ಹೇಗೆ ಗೊತ್ತಾಗುತ್ತದೆ ಎಂದರೆ ಅದಕ್ಕೆ ಕಟ್ಟಿರುವ ದಾರದಿಂದ ಎಂದು ಗಗನ್​ ಹೇಳಿದ್ದಾರೆ. ಆ ಮಮ್ಮಿಯ ಕೊರಳಿನಲ್ಲಿ 374 ದಾರಗಳು ಇರುವ ಕಾರಣ, ಅದಕ್ಕೆ 374 ವಯಸ್ಸು ಆಗಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಇದೇ ವಿಡಿಯೋದಲ್ಲಿ, ಅವರು ದಾನಿ ಟ್ರೈಬ್​ಗಳ ಟ್ರೆಡಿಷನಲ್​ ಡ್ರೆಸ್​ ಬಗ್ಗೆಯೂ ಮಾತನಾಡಿದ್ದಾರೆ. ಪುರುಷರು ತಮ್ಮ ಖಾಸಗಿ ಅಂಗಕ್ಕೆ ಜೋಡಿಕೊಳ್ಳುವ ಉದ್ದನೆಯ ಪೈಪ್​ಗಳ ಬಗ್ಗೆ ಅವರು ಮಾಹಿತಿ ನೀಡಿದ್ದು, ಎಂದಿನಂತೆ ತಮ್ಮ ಹಾಸ್ಯದ ಧಾಟಿಯಲ್ಲಿ ಅದರ ಬಗ್ಗೆ ವಿವರಣೆ ನೀಡಿದ್ದಾರೆ. ಇನ್ನು ಇವರ ಬಗ್ಗೆ ಹೇಳುವುದಾದರೆ, ಡಾ. ಬ್ರೋ, ಇದುವರೆಗೆ ತಮ್ಮ ಚಾನೆಲ್‌ನಲ್ಲಿ 170 ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದು, ಇವರ ಯೂಟ್ಯೂಬ್ ಚಾನೆಲ್ (youtube channel) ಸುಮಾರು 2.8 ಮಿಲಿಯನ್ ಸಬ್‌ಸ್ಕ್ರೈಬರ್ಸ್‌ನ್ನು ಹೊಂದಿದೆ, ಅಲ್ಲದೆ ಇನ್’ಸ್ಟಾಗ್ರಾಂನಲ್ಲಿ 2.9 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ಯೂಟ್ಯೂಬರ್ ಇವರಾಗಿದ್ದಾರೆ.

ಉದ್ಯಮಿಯಾದ ಡಾ.ಬ್ರೋ

ಸದ್ಯ ತಮ್ಮ ಯೂಟ್ಯೂಬ್ ಜೊತೆಗೆ ಉದ್ಯಮಿಯೂ ಆಗಿರುವ ಗಗನ್ ಕೆಲವು ತಿಂಗಳ ಹಿಂದೆ ಗೋ ಪ್ರವಾಸ (gopravasa)ಎಂಬ ಕಂಪನಿಯನ್ನು ಆರಂಭಿಸಿದ್ದು, ಈ ಕಂಪೆನಿಯ ಮೂಲಕ ವಿದೇಶಿ ಪ್ರವಾಸ ಪ್ಲ್ಯಾನ್ ಮಾಡುತ್ತಿದ್ದರು. ಈ ಕಂಪನಿಯು ಪ್ಯಾಕೇಜ್‌ಗಳ ಮೂಲಕ ವಿದೇಶಿ ಪ್ರಯಾಣವನ್ನು ಒದಗಿಸುತ್ತಿದೆ. ಹಾಗಾಗಿ ಡಾ. ಬ್ರೋ ಖ್ಯಾತಿಯ ಗಗನ್ ಸದ್ಯ ತಮ್ಮ ಬ್ಯುಸಿನೆಸ್ ನಲ್ಲಿ ಬ್ಯುಸಿಯಾಗಿರೋದರಿಂದ, ಬೇರೆ ದೇಶಗಳಿಗೆ ಹೋಗಿಲ್ಲ. ಹಾಗಾಗಿ ಕಳೆದ 4 ತಿಂಗಳಿಂದ ಯಾವುದೇ ವಿಡಿಯೋ ಅಪ್ ಲೋಡ್ ಆಗಿಲ್ಲ ಎನ್ನಲಾಗುತ್ತಿದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!
ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್