ಹಾವು ಕಂಡ್ರೆ ಮಾರು ದೂರ ಓಡುವ ಜನರು ನಾವು. ವಿಷಕಾರಿ ಹಾವು ಹೆಚ್ಚು ಅಪಾಯಕಾರಿ. ಅದು ಕಚ್ಚೋದಿರಲಿ ನೆಕ್ಕಿದ್ರೂ ಭಯಕ್ಕೆ ಅನೇಕರು ಸಾಯ್ತಾರೆ. ಹಾಗಿರೋವಾಗ ಈ ಕೆಫೆಯಲ್ಲಿ ಹಾವಿನದ್ದೇ ದರ್ಬಾರ್. ಆದ್ರೂ ಗ್ರಾಹಕರು ಕಡಿಮೆ ಆಗ್ಲಿಲ್ಲ.
ಮೀಟಿಂಗ್ ಇರಲಿ ಇಲ್ಲ ಡೇಟಿಂಗ್ ಇರಲಿ ಈಗ ಎಲ್ಲರ ಫೆವರೆಟ್ ಜಾಗ ಕಾಫಿ ಕೆಫೆ. ಜನರು ಕಾಫಿ ಕುಡಿತಾ ಕೆಲಸ ಮಾಡಲು ಇಷ್ಟಪಡ್ತಾರೆ. ಇಲ್ಲಿ ಸಮಯದ ಮಿತಿ ಇರೋದಿಲ್ಲ. ಹಾಗಾಗಿಯೇ ನಾಲ್ಕು ಜನ ಸ್ನೇಹಿತರ ಮೊದಲ ಆಯ್ಕೆ ಕಾಫಿ ಕೆಫೆ. ಅಲ್ಲಲ್ಲಿ ಕಾಫಿ ಕೆಫೆಗಳ ಸಂಖ್ಯೆ ಹೆಚ್ಚಿರುವ ಕಾರಣ ಸ್ಪರ್ಧೆ ಹೆಚ್ಚಾಗಿದೆ. ಗ್ರಾಹಕರನ್ನು ಸೆಳೆಯಲು ಹೊಸ ಥೀಮ್, ಆಕರ್ಷಕ ಒಳಾಂಗಣ ವಿನ್ಯಾಸ ಅನಿವಾರ್ಯವಾಗಿದೆ. ಪ್ರತಿ ಕೆಫೆ, ರೆಸ್ಟೋರೆಂಟ್ ಗಳು ತಮ್ಮದೇ ಭಿನ್ನ ವಿನ್ಯಾಸದಿಂದ ಗ್ರಾಹಕರನ್ನು ಆಕರ್ಷಿಸುತ್ತವೆ.
ಅತ್ಯಂತ ಪರಿಣಾಮಕಾರಿ ಕೆಫೆ (Cafe) ಮಾರ್ಕೆಟಿಂಗ್ ಐಡಿಯಾಗಳಲ್ಲಿ ಒಂದು ಪಿಇಟಿ ಕಾಫಿ ಕೆಫಿ. ಇಲ್ಲಿ ಮುಖ್ಯವಾಗಿ ಬೆಕ್ಕುಗಳು ಮತ್ತು ನಾಯಿಗಳನ್ನು ಹೈಲೈಟ್ ಮಾಡುತ್ತದೆ. ಈ ಪ್ರಾಣಿ (Animal) ಗಳು ಗ್ರಾಹಕರಿಗೆ ಯಾವುದೇ ಹಾನಿ ಮಾಡೋದಿಲ್ಲ. ಗ್ರಾಹಕರನ್ನು ಮನೆಯವರಂತೆ ಸ್ವಾಗತಿಸಿ, ಪ್ರೀತಿ ತೋರಿಸ್ತವೆ. ಪ್ರಾಣಿ ಪ್ರಿಯರಿಗೆ ಇಂಥ ಕೆಫೆಗಳು ಹೆಚ್ಚು ಇಷ್ಟವಾಗುತ್ವೆ. ಮುದ್ದಾದ ನಾಯಿ ಅತ್ತಿಂದಿತ್ತ ಓಡಾಡ್ತಿದ್ದರೆ ಅದನ್ನು ನೋಡ್ತಾ ಕಾಫಿ ಕುಡಿಯೋದು, ನಿಮ್ಮಿಷ್ಟದ ಆಹಾರ ಸೇವನೆ ಮಾಡೋದು ಎಷ್ಟು ಆನಂದ ನೀಡುತ್ತೆ ಅಲ್ವಾ?
undefined
ಹಿಮಾಲಯದ ತಪ್ಪಲಿನಲ್ಲಿರೋ ಈ ರಹಸ್ಯಮಯ ತಾಣದ ಬಗ್ಗೆ ಗೊತ್ತಿದ್ಯಾ?
ಎಲ್ಲರ ಮನೆಯಲ್ಲೂ ಸಾಕು ನಾಯಿ, ಬೆಕ್ಕನ್ನು ಸಾಕೋದು ಸಾಧ್ಯವಿಲ್ಲ. ಅಂಥ ಸಂದರ್ಭದಲ್ಲಿ ಅವರು ಸಾಕು ಪ್ರಾಣಿಗಳಿರುವ ಜಾಗವನ್ನು ಅರೆಸಿ ಹೋಗ್ತಾರೆ. ಆದ್ರೆ ಇಲ್ಲೊಂದು ಕೆಫೆ ಮತ್ತಷ್ಟು ಭಿನ್ನವಾಗಿದೆ.
ನಾಯಿ, ಬೆಕ್ಕನ್ನು ಮುಟ್ಟಿದಂತೆ ಜನರು ಹಾವನ್ನು ಮುಟ್ಟೋದಿಲ್ಲ. ತರಬೇತಿ ಪಡೆದ ಜನರನ್ನು ಬಿಟ್ರೆ ಮತ್ತ್ಯಾರು ಹಾವು ಮುಟ್ಟುವ ಧೈರ್ಯ ಮಾಡೋದಿಲ್ಲ. ಆದ್ರೆ ಈ ಕೆಫೆಯಲ್ಲಿ ನೀವು ಆರಾಮವಾಗಿ ಹಾವನ್ನು ಸ್ಪರ್ಶಿಸಬಹುದು. ಈ ಹಾವು ನಿಮ್ಮ ಕೈ, ಕತ್ತಿನ ಮೇಲೆ ಆರಾಮವಾಗಿ ಓಡಾಡ್ತಿರುತ್ತದೆ. ಅದ್ರ ಜೊತೆಯಲ್ಲೇ ಕುಳಿತು ಆಹಾರ ಸೇವನೆ ಮಾಡ್ಬಹುದು. ಈ ಹಾವಿನ ಕೆಫೆ ಇರೋದು ಮಲೇಷಿಯಾದಲ್ಲಿ.
ಈ ಕೆಫೆಯಲ್ಲಿ ಬರೀ ಹಾವು ಮಾತ್ರವಲ್ಲ ವಿಷಕಾರಿ ಪ್ರಾಣಿಗಳನ್ನು ಕೂಡ ನೀವು ನೋಡ್ಬಹುದು. ಫಾಂಗ್ಸ್ ಡೆಕೋರಿಯಾ ಹೆಸರಿನ ಈ ಕೆಫೆಯಲ್ಲಿ ಅನೇಕ ಸರಿಸ್ರಪಗಳಿವೆ. ಈ ಕೆಫೆಯಲ್ಲಿ ಅಲ್ಲಲ್ಲಿ ಗ್ಲಾಸಿನ ಬಾಕ್ಸ್ ಇದೆ. ಅದರಲ್ಲಿ ನೀವು ವಿಷಕಾರಿ ಪ್ರಾಣಿಗಳನ್ನು ನೋಡ್ಬಹುದು. ಟೇಬಲ್ ಮೇಲೆ ಕುಳಿತ ಗ್ರಾಹಕರು, ಕೈ, ಕುತ್ತಿಗೆಗೆ ಹಾವು ಸುತ್ತಿಕೊಂಡಿರೋದನ್ನು ಕೂಡ ನೋಡ್ಬಹುದು. ಎರಡು ವರ್ಷಗಳ ಹಿಂದೆ ಈ ಕೆಫೆ ಶುರುವಾಗಿದೆ. ಈ ಕೆಫೆಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿತ್ಯ ಅನೇಕ ಗ್ರಾಹಕರು ಇಲ್ಲಿಗೆ ಬಂದು ಹಾವಿನ ಜೊತೆ ಸಮಯ ಕಳೆಯುತ್ತಾರೆ. fangs.kl ಹೆಸರಿನ ಇನ್ಸ್ಟಾಗ್ರಾಮ್ ನಲ್ಲೂ ಇದ್ರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇಲ್ಲಿ ಕಪ್ಪೆಗಳನ್ನು ಕೂಡ ನೀವು ನೋಡ್ಬಹುದು. ಗ್ರಾಹಕರು ಹಾವಿನ ಜೊತೆ ಆಟವಾಡ್ತಿರೋದನ್ನು ಕಾಣಬಹುದು.
ಗೋವಾದ ಪ್ರಸಿದ್ಧ ತಾಣ ಕ್ಯಾಲಂಗುಟ್‌ಗೆ ಹೋಗೋಕೆ ಇನ್ನು ಮುಂದೆ ಪ್ರವಾಸಿಗರು ಕಟ್ಬೇಕು ಪ್ರವೇಶ ತೆರಿಗೆ
ಈ ಕೆಫೆ ಇನ್ನೊಂದು ವಿಶೇಷ ಅಂದ್ರೆ, ಇಲ್ಲಿ ಯಾವುದೇ ಹಾವು, ಹಲ್ಲಿ, ಕಪ್ಪೆ ನೆಲದ ಮೇಲೆ ಓಡಾಡೋದಿಲ್ಲ. ಹಾಗಾಗಿ ನೀವು ಧೈರ್ಯದಿಂದ ಕುಳಿತುಕೊಳ್ಳಬಹುದು. ಅವುಗಳನ್ನು ಗ್ಲಾಸ್ ನಲ್ಲಿ ಇಡಲಾಗಿದೆ. ಗ್ರಾಹಕರು ಅದನ್ನು ಸ್ಪರ್ಶಿಸಲು ಬಯಸಿದ್ರೆ ಸಿಬ್ಬಂದಿ ಮಾರ್ಗದರ್ಶನ ನೀಡುತ್ತಾರೆ. ಕೆಫೆಗೆ ಬಂದ ಗ್ರಾಹಕರು ಎಲ್ಲ ಪ್ರಾಣಿಗಳನ್ನು ಆರಾಮವಾಗಿ ನೋಡ್ಬಹುದು. ಹಾವಿಗೆ ಮಾತ್ರವಲ್ಲ ಫಾಂಗ್ಸ್ ಡೆಕೋರಿಯಾ ರುಚಿಕರವಾದ ಸಿಹಿತಿಂಡಿಗಳಿಗೂ ಪ್ರಸಿದ್ಧಿ ಪಡೆದಿದೆ. ಮಲೇಷಿಯಾಗೆ ಹೋದ ಅನೇಕ ಪ್ರವಾಸಿಗರು ಕೆಫೆಯ ಮಿನಿ ಟೂರ್ ಮಾಡಿ ಬರ್ತಾರೆ. ನೀವೂ ಮುಂದಿನ ಬಾರಿ ಅಲ್ಲಿಗೆ ಹೋದ್ರೆ ತಪ್ಪದೆ ಹಾವುಗಳನ್ನು ನೋಡಿ, ಮುಟ್ಟಿ ಬನ್ನಿ.