ಆಸ್ಟ್ರೇಲಿಯಾದ ಸಂಸ್ಥೆಯೊಂದು ತನ್ನ ಉದ್ಯೋಗಿಗಳನ್ನು ಬಾಲಿ ಪ್ರವಾಸ ಕರೆದೊಯ್ದಿದೆ. ಈ ವಿಚಾರವೀಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಉದ್ಯೋಗ ಮಾಡುತ್ತಿರುವ ಅನೇಕರು ಅಯ್ಯೋ ನಮ್ಮ ಉದ್ಯೋಗದಾತರೂ ಕೂಡ ಹಾಗೆ ಇದ್ದಿದ್ದರೆ ಎಷ್ಟು ಚೆಂದ ಇರ್ತಿತ್ತು. ನಾವು ಕೂಡ ಬಾಲಿ ಗೀಲಿ ಸುತ್ಕೊಂಡು ಮಸಾಜ್ ಸನ್ ಬಾತ್ ಎಲ್ಲಾ ಮಾಡ್ಕೊಂಡು ಬೀಚ್‌ಗಳನ್ನೆಲ್ಲಾ ಸುತ್ಕೊಂಡು ಬರ್ಬೋದಿತ್ತು ಎಂದೆಲ್ಲಾ ಬಾಯ್ಬಿಡುತ್ತಿದ್ದಾರೆ.
ಕೆಲಸ ಮಾಡುವ ಸಂಸ್ಥೆ ಉದ್ಯೋಗಿಗಳಿಗೆ ಎಲ್ಲಾ ಸವಲತ್ತನ್ನು ನಿಷ್ಠೆಯಿಂದ ನೀಡುವುದು ತೀರಾ ಕಡಿಮೆ ಒಂದು ವೇಳೆ ಏನಾದರೂ ಸವಲತ್ತು ನೀಡಿದರು ಅದಕ್ಕೆ ತಕ್ಕಂತೆ ಸ್ಯಾಲರಿಯಲ್ಲಿ ಕಡಿತ ಮಾಡುವುದು ಉದ್ಯೋಗ ಮಾಡುತ್ತಿರುವ ಎಲ್ಲರಿಗೂ ತಿಳಿದ ವಿಚಾರ. ಇನ್ನು ಹಬ್ಬಗಳು ಬಂದಾಗ ಸಣ್ಣ ಪುಟ್ಟ ಗಿಫ್ಟ್‌ಗಳನ್ನು ಕೆಲವೊಂದು ಸಂಸ್ಥೆಗಳು ಆಗಾಗ ನೀಡುತ್ತಿರುತ್ತವೆ. ಆದರೆ ಕೆಲವೊಂದು ಸಂಸ್ಥೆಗಳಲ್ಲಿ ಸಣ್ಣ ಗಿಫ್ಟ್ ಕೂಡ ಸಿಗುವುದು ಭಾರಿ ಕಷ್ಟದ ವಿಚಾರ.
ಈ ಎಲ್ಲ ಇಲ್ಲಗಳ ನಡುವೆ ಆಸ್ಟ್ರೇಲಿಯಾದ ಸಂಸ್ಥೆಯೊಂದು ತನ್ನ ಉದ್ಯೋಗಿಗಳನ್ನು ಬಾಲಿ ಪ್ರವಾಸ ಕರೆದೊಯ್ದಿದೆ. ಈ ವಿಚಾರವೀಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಉದ್ಯೋಗ ಮಾಡುತ್ತಿರುವ ಅನೇಕರು ಅಯ್ಯೋ ನಮ್ಮ ಉದ್ಯೋಗದಾತರೂ ಕೂಡ ಹಾಗೆ ಇದ್ದಿದ್ದರೆ ಎಷ್ಟು ಚೆಂದ ಇರ್ತಿತ್ತು. ನಾವು ಕೂಡ ಬಾಲಿ ಗೀಲಿ ಸುತ್ಕೊಂಡು ಮಸಾಜ್ ಸನ್ ಬಾತ್ ಎಲ್ಲಾ ಮಾಡ್ಕೊಂಡು ಬೀಚ್‌ಗಳನ್ನೆಲ್ಲಾ ಸುತ್ಕೊಂಡು ಬರ್ಬೋದಿತ್ತು ಎಂದೆಲ್ಲಾ ಬಾಯ್ಬಿಡುತ್ತಿದ್ದಾರೆ.
ಜುಲೈ ತಿಂಗಳಲ್ಲಿ ಭಾರತದ ಈ ಪ್ರದೇಶ ರುದ್ರ ರಮಣೀಯವಾಗಿರುತ್ತೆ
ಅಷ್ಟು ಮಾತ್ರವಲ್ಲ ಆ ಸಂಸ್ಥೆಯಲ್ಲಿ ನಮಗೇನಾದರೂ ಉದ್ಯೋಗವಕಾಶ ಸಿಗಬಹುದೇ ಎಂದು ಹುಡುಕಾಟ ನಡೆಸುತ್ತಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿ (Sydney) ಮೂಲದ ಡಿಜಿಟಲ್ ಮಾರ್ಕೆಟಿಂಗ್ ಸಂಸ್ಥೆಯೊಂದು (digital marketing firm) ತನ್ನ ಉದ್ಯೋಗಿಗಳಿಗೆ ಈ ಅದ್ಭುತವಾದ ಅವಕಾಶ ನೀಡಿದೆ. ಇದೇ ಕಾರಣಕ್ಕೆ ಈಗ ಸಂಸ್ಥೆಯೂ ಆನ್‌ಲೈನ್‌ನಲ್ಲಿ ನೆಟ್ಟಿಗರ ಗಮನ ಸೆಳೆದಿದೆ. ಸೂಪ್ ಏಜೆನ್ಸಿ ಎಂದು ಕರೆಯಲ್ಪಡುವ ಕಂಪನಿಯು ತನ್ನ ಉದ್ಯೋಗಿಗಳನ್ನು ಬಾಲಿಯಲ್ಲಿ ಕೆಲಸದ ಜೊತೆ ರಜೆಗೆ ಕರೆದೊಯ್ದಿದೆ. ಕಂಪನಿಯು ತನ್ನ ಉದ್ಯೋಗಿಗಳನ್ನು ಇಂಡೋನೇಷ್ಯಾದಲ್ಲಿ ಹೆಚ್ಚು ಬೇಡಿಕೆಯಿರುವ ರಜೆಯ ವೇಳೆ ಭೇಟಿ ನೀಡುವ ತಾಣಗಳಿಗೆ ಉದ್ಯೋಗಿಗಳಿಗೆ ಎಲ್ಲಾ ವೆಚ್ಚವನ್ನು ಪಾವತಿಸಿ ಕರೆದೊಯ್ಯುತ್ತಿದೆ. ಉದ್ಯೋಗಿಗಳು ಇಲ್ಲಿ ಕೆಲಸದೊಂದಿಗೆ ರಜೆಯನ್ನು ಆನಂದಿಸುತ್ತಿರುವ ವಿಡಿಯೋ ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ವೈರಲ್ ಆಗಿದೆ.
Ribon Gum Company; ಉದ್ಯೋಗ ಕಳೆದುಕೊಂಡವರಿಗೆ ಆತ್ಮವಿಶ್ವಾಸ ನೀಡಿದ ಗುರುದಕ್ಷಿಣಾ
ಬಾಲಿಯಲ್ಲಿರುವ ರೆಸಾರ್ಟ್‌ನ ಪನೋರಮಾ ಸೀನರಿ ಕಾಣಿಸುವುದರೊಂದಿಗೆ ಈ ವಿಡಿಯೋ ಪ್ರಾರಂಭವಾಗುತ್ತದೆ, ಐಷಾರಾಮಿ ರೆಸಾರ್ಟ್‌ನಲ್ಲಿ ಉದ್ಯೋಗಿಗಳು ತಮ್ಮ ಲ್ಯಾಪ್‌ಟಾಪ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಟ್ರಕ್ಕಿಂಗ್, ಜಲಪಾತಗಳಿಗೆ ಉದ್ಯೋಗಿಗಳು ಭೇಟಿ ನೀಡುತ್ತಿರುವುದನ್ನು, ಹಾಗೆಯೇ ಮೀಟಿಂಗ್‌ಗಳ ಮಧ್ಯೆ ರುಚಿ ರುಚಿಯಾದ ಆಹಾರವನ್ನು ಸವಿಯುವುದನ್ನು ಕಾಣಬಹುದು. ಈ ವಿಡಿಯೋಗೆ ಸಾವಿರಾರು ಜನ ಕಾಮೆಂಟ್ ಮಾಡಿದ್ದು, ಆ ಸಂಸ್ಥೆಯಲ್ಲಿ ಉದ್ಯೋಗವಕಾಶಗಳಿವೆಯೋ ಎಂದು ಗಂಭೀರವಾಗಿ ಪ್ರಶ್ನಿಸುತ್ತಿದ್ದಾರೆ.
ಒಟ್ಟಿನಲ್ಲಿ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಉದ್ಯೋಗ ಮಾಡುವವರಲ್ಲಿ ಹೊಸ ಕನಸುಗಳನ್ನು ಚಿಗುರಿಸಿದೆ. ನಮ್ಮ ಸಂಸ್ಥೆಯೂ ಹೀಗೆ ಟ್ರಿಪ್ ಮಾಡ್ತಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಎಂದು ಮರುಗುತ್ತಿರೋದಂತು ನಿಜ.