ಶಹಜಹಾನ್ ಇದ್ದಿದ್ದರೆ ಇಲ್ಲವಾಗಿರುತ್ತಿದ್ದ ತಾಜ್‌ಮಹಲ್‌ನ ತದ್ರೂಪಿ

By Suvarna News  |  First Published Apr 21, 2020, 7:29 PM IST

ನಿಜವಾದ ಲವ್ ಏನೆಂದು ಅರಿಯಲು ಆಗ್ರಾಕ್ಕೆ ಹೋಗಬೇಕೆನ್ನುತ್ತಾರೆ. ಆದರೆ, ಆಗ್ರಾವನ್ನು ವಿಶೇಷವಾಗಿಸಿದ ಆ ತಾಜ್‌ಮಹಲ್ ಜಗತ್ತಿನಲ್ಲಿ ಏಳು ಕಡೆ ಇದೆ ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ?


ತಾಜ್‌ಮಹಲ್ ಕಟ್ಟಿಸಿದ ಶಹಜಹಾನ್, 'ಇಂಥ ಸುಂದರವಾದ ಮತ್ತೊಂದು ಕಟ್ಟಡ ಯಾರೂ ಎಲ್ಲಿಯೂ ಕಟ್ಟಕೂಡದು' ಎಂದು ತಾಜ್‌ಮಹಲ್ ಕಟ್ಟಿದ ಕಾರ್ಮಿಕರ ಕೈಗಳನ್ನು ಕತ್ತರಿಸಿದ ವಿಷಯ ನಿಮಗೆ ಗೊತ್ತೇ ಇರಬಹುದು. ತನ್ನ ಪತ್ನಿ ಮಮ್ತಾಜ್‌ ನೆನಪಿಗಾಗಿ ಕಟ್ಟಿಸಿದ ತಾಜ್‌ಗೆ ಸರಿಸಮನಾದ ಅದ್ಬುತವೊಂದು ಜಗತ್ತಿನಲ್ಲೇ ಇರಬಾರದು ಎಂಬುದು ಆತನ ದುರಾಸೆಯಾಗಿತ್ತು. ಆದರೆ, ಆತ ಇಂದು ಇದ್ದಿದ್ದರೆ ಎಷ್ಟು ಕಟ್ಟಡ ಕಾರ್ಮಿಕರು ಕೈ ಕಳೆದುಕೊಳ್ಳುತ್ತಿದ್ದರೋ ಗೊತ್ತಿಲ್ಲ, ಏಕೆಂದರೆ, ತಾಜ್‌ಮಹಲ್‌ನ ತದ್ರೂಪಿ ಕಟ್ಟಡಗಳು ಭಾರತದಲ್ಲೇ ಈಗ ಬಹಳಷ್ಟಿವೆ. ವಿದೇಶದಲ್ಲೂ ಇವೆ. ಅವುಗಳ ಬಗ್ಗೆ ನಿಮಗೆ ತಿಳಿದಿದೆಯೇ?

ತಾಜ್ ಮಹಲ್, ಕೋಟಾ
ರಾಜಸ್ಥಾನದ ಕೋಟಾ ನಗರವು ಜಗತ್ತಿನ ಏಳು ಅದ್ಭುತಗಳನ್ನೂ ತನ್ನೊಡಲ್ಲಿ ಹಿಡಿದಿಟ್ಟುಕೊಂಡ ಗರ್ವ ಹೊಂದಿದೆ. ಅರೆ, ಹೇಗೆ ಅಂದಿರಾ? ಇಲ್ಲಿ ಜಗತ್ತಿನ ಎಲ್ಲ ಅದ್ಭುತಗಳ ತದ್ರೂಪುಗಳನ್ನೊಳಗೊಂಡ ಉದ್ಯಾನ ನಿರ್ಮಿಸಲಾಗಿದೆ. ಅಂದ ಮೇಲೆ ಇಲ್ಲೊಂದು ತಾಜ್ ಮಹಲ್ ಇರಲೇಬೇಕಲ್ಲ...

ಆಕೆ / ಆತನನ್ನು ನೋಡಿದರೆ ಮಾತ್ರ ಹೃದಯ ಕುಣಿಯುವುದೇಕೆ?

Tap to resize

Latest Videos

undefined

ಮಿನಿ ತಾಜ್ ಮಹಲ್, ಬುಲಂದ್‌ಶಹರ್
ತನ್ನ ಮೃತ ಪತ್ನಿಯ ಮೇಲಿನ ಪ್ರೇಮವನ್ನು ಸಾರಲು ತಾಜ್‌ಮಹಲ್ ಕಟ್ಟಿಸುವ ಸಾಮರ್ಥ್ಯ ಕೇವಲ ಶಹಜಹಾನ್‌ದಲ್ಲ, ಉತ್ತರ ಪ್ರದೇಶದ ಬುಲಂದ್‌ಶಹರ್‌ನ ನಿವೃತ್ತ ಪೋಸ್ಟ್ ಮಾಸ್ಟರ್ ಕೂಡಾ ತಮ್ಮ ಪತ್ನಿಯ ಮೇಲಿನ ಪ್ರೀತಿಯನ್ನು ತಾಜ್‌ಮಹಲ್ ಕಟ್ಟಿಸಿ ಸಾಬೀತುಪಡಿಸಿದ್ದಾರೆ. ಇಲ್ಲಿನ ಫೈಜುಲ್ ಹಸನ್ ಖಾದ್ರಿ ಎಂಬ ವ್ಯಕ್ತಿಯು, ತಾನು ಜೀವಿತಾವಧಿಯಲ್ಲಿ ಉಳಿಸಿದ್ದ ಅಷ್ಟೂ ಹಣವನ್ನು ಬಳಸಿ, ಪತ್ನಿಯ ನೆನಪಿಗಾಗಿ ಇಲ್ಲೊಂದು ಮಿನಿ ತಾಜ್‌ಮಹಲ್ ಕಟ್ಟಿಸಿದ್ದಾರೆ. 

ಶಾಹ್‌ಜಾದಿ ಕ ಮಕ್ಬರಾ, ಲಕ್ನೌ
ಇದು ಸ್ವಲ್ಪ ಜನಪ್ರಿಯವೇ. ಅದರಲ್ಲೂ ಲಕ್ನೌಗೆ  ನೀವು ಹೋಗಿದ್ದರೆ ಖಂಡಿತಾ ನೋಡಿರುತ್ತೀರಿ. ಇಲ್ಲಿನ ಛೋಟಾ ಇಮಾಂಬರಾ ಸಂಕೀರ್ಣದಲ್ಲಿರುವ ಈ ಕಟ್ಟಡ ತಾಜ್‌ಮಹಲ್‌ನ ಅವಳಿ ಸಹೋದರನಂತಿದೆ. ಕಟ್ಟಡದೊಳಗೆ ಅವಧ ಪಟ್ಟಣದ ಮೂರನೇ ಚಕ್ರವರ್ತಿ ಮೊಹಮ್ಮದ್ ಅಲಿ ಶಾ ಬಹದ್ದೂರ್ ಅವರ ಪುತ್ರಿ, ರಾಜಕುಮಾರಿ ಝೀನತ್ ಅಸಿಯಾಳ ಸಮಾಧಿಯಿದೆ. 

ಬೀಬಿ ಕಾ ಮಕ್ಬರ, ಔರಂಗಾಬಾದ್
ಆಗ್ರಾದಲ್ಲಿರುವ ಒರಿಜಿನಲ್ ತಾಜ್‌ಮಹಲ್ ಪತಿಯು ಪತ್ನಿಯೆಡೆಗಿದ್ದ ಪ್ರೀತಿಯನ್ನು ಸಾಬೀತುಪಡಿಸಲು ಕಟ್ಟಿಸಿದ್ದರೆ, ಔರಂಗಾಬಾದ್‌ನಲ್ಲಿರುವ ತಾಜ್ ತದ್ರೂಪಿ ಕಟ್ಟಡವು ತಾಯಿಯ ಮೇಲಿನ ಪ್ರೀತಿಯ ತೋರ್ಪಡಿಕೆಯಾಗಿ ಕಟ್ಟಲ್ಪಟ್ಟಿದೆ. ಹೌದು, ಇಲ್ಲಿನ ಬೀಬಿ ಕಾ ಮಕ್ಬರವನ್ನು ಔರಂಗಜೇಬನ ಪುತ್ರ ಆಜಂ ಖಾನ್ ತನ್ನ ತಾಯಿ ದಿಲ್ರಸ್ ಬಾನು ಬೇಗಂಳ ನೆನಪಿಗಾಗಿ ಕಟ್ಟಿಸಿದ್ದಾನೆ. ಇತಿಹಾಸದ ದಾಖಲೆಗಳ ಪ್ರಕಾರ, ದಿಲ್ರಸ್ ಬಾನು ಬೇಗಂ ಜೌರಂಗಜೇಬನ ಮೊದಲ ಪತ್ನಿ ಹಾಗೂ ಮಹಾರಾಣಿ. ತಾಜ್‌ಮಹಲ್‌ನ ಮುಖ್ಯ ಆರ್ಕಿಟೆಕ್ಟ್ ಉಸ್ತಾದ್ ಅಹ್ಮದ್ ಲಹೌರಿಯ ಪುತ್ರ ಅಟಾ ಉಲ್ಲಾ ಬೀಬಿ ಕಾ ಮುಕ್ಬಾರದ ವಾಸ್ತುಶಾಸ್ತ್ರಜ್ಞ. ಈ ಸ್ಮಾರಕವನ್ನು ತಾಜ್ ಆಫ್ ದ ಡೆಕ್ಕನ್ ಎನ್ನಲಾಗುತ್ತದೆ. 

ತಾಜ್‌ಮಹಲ್, ಬೆಂಗಳೂರು
ಸ್ವಲ್ಪ ಆಶ್ಚರ್ಯವಾಯಿತಲ್ಲಾ... ಆದರೆ, ಬೆಂಗಳೂರಿನಲ್ಲೊಂದು ತಾಜ್ ಮಹಲ್ ಇರುವುದು ಸುಳ್ಳಲ್ಲ. ಇಲ್ಲಿನ ಬನ್ನೇರ್‌ಘಟ್ಟ ರಸ್ತೆಯಲ್ಲಿ ಮಲೇಶಿಯಾದ ಆರ್ಟಿಸ್ಟ್ ಸೇಖರ್ ಹುಟ್ಟುಹಾಕಿದ ಸ್ಮಾರಕವೊಂದಿದೆ. 2015ರಲ್ಲಿ ಇದರ ನಿರ್ಮಾಣವಾಗಿದ್ದು, ಇದು 40 ಅಡಿ ಎತ್ತರ, 70 x 70 ಅಡಿ ಅಗಲವಿದೆ. ಇದು ಬಹುತೇಕ ಒರಿಜಿನಲ್ ತಾಜ್‌ಮಹಲ್‌ನಂತೆಯೇ ಇದೆ. 

ಹಳೆ ಪ್ರೀತಿ ಮರೆತು ಹೊಸ ಬದುಕಿನತ್ತ...

ತಾಜ್‌ಮಹಲ್, ಚೀನಾ
ಚೀನಾ ಎಂದರೆ ರಿಮೇಕ್. ಅದು ಎಲ್ಲವನ್ನೂ ನಕಲು ಮಾಡುತ್ತದೆ. ಅಂದ ಮೇಲೆ ವಿಶ್ವಪ್ರಸಿದ್ಧ ತಾಜ್‌ಮಹಲನ್ನು ಬಿಡುತ್ತದೆಯೇ ? ಶೆಂಜನ್‌ನ ಥೀಮ್ ಪಾರ್ಕ್‌ ವಿಂಡೋ ಆಫ್ ದ ವರ್ಲ್ಡ್‌ನಲ್ಲಿ ಜಗತ್ತಿನ ಜನಪ್ರಿಯ ಸ್ಮಾರಕಗಳ ನಕಲುಗಳಿವೆ. ಅದರಲ್ಲಿ ತಾಜ್‌ಮಹಲ್ ಕೂಡಾ ಇದೆ.

ತಾಜ್ ಅರೇಬಿಯಾ, ದುಬೈ
ಆಗ್ರಾದಲ್ಲಿರುವ ಒರಿಜಿನಲ್ ತಾಜ್‌ಮಹಲ್‌ಗಿಂತ ನಾಲ್ಕು ಪಟ್ಟು ದೊಡ್ಡದಾದ ತದ್ರೂಪಿ ತಾಜ್ ಅರೇಬಿಯಾ. ಇದು ದುಬೈನ ಜನಪ್ರಿಯ ಮೊಘಲ್ ಗಾರ್ಡ‌ನ್ಸ್‌ನಲ್ಲಿ ನಿರ್ಮಾಣವಾಗಿರುವ 20 ಅಂತಸ್ತಿನ ಹೋಟೆಲ್ ಆಗಿದ್ದು, 350 ಕೋಣೆಗಳನ್ನು ಹೊಂದಿದೆ. 

ರಾಯಲ್ ಪೆವಿಲಿಯನ್, ಬ್ರಿಟನ್
ಹೌದು, ಬ್ರಿಟನ್‌ನಲ್ಲಿ ಕೂಡಾ ಆಂಗ್ಲ ವರ್ಶನ್‌ನ ತಾಜ್‌ಮಹಲ್ ಇದೆ. ಬ್ರಿಟನ್ ಪೆವಿಲಿಯನ್ ಹೆಸರಿನಲ್ಲಿ ಖ್ಯಾತವಾಗಿರುವ ಇದೇ ಮೂಲ ಸ್ಮಾರಕ ಎಂದು ಮೂರನೇ ಒಂದು ಭಾಗದಷ್ಟು ಬ್ರಿಟನ್ ಪ್ರಜೆಗಳು ನಂಬಿದ್ದಾರೆ. ವೇಲ್ಸ್ ರಾಜಕುಮಾರ ಜಾರ್ಜ್‌ನ ತೀರಬದಿಯ ವಿಶ್ರಾಂತಿ ಕಟ್ಟಡವಾಗಿ ಇದನ್ನು ಕಟ್ಟಲಾಗಿದೆ. 

click me!