ಅವರನ್ನು ನೋಡಿದೊಡನೆ ಬಡಿದುಕೊಳ್ಳುವ ಹೃದಯ, ಕೆಂಪಾಗುವ ಕೆನ್ನೆ, ಬೆವರುವ ಕೈಗಳು, ಉತ್ಸಾಹದ ಚಿಲುಮೆಯಾಗುವ ಮನಸ್ಸು, ಮಾತನಾಡಲು ಶುರು ಮಾಡುವ ಕಣ್ಣುಗಳು- ಪ್ರೀತಿಯಲ್ಲಿ ಬಿದ್ದಾಗಿನ ಈ ಅನನ್ಯ ಅನುಭವ ಕೇವಲ 'ಅವರೊಬ್ಬರು' ಕಂಡಾಗ ಮಾತ್ರ ಆಗುವಂಥದ್ದು. ಅದೇಕೆ ಬೇರೆಯವರನ್ನು ನೋಡಿದಾಗ ಹೀಗಾಗುವುದಿಲ್ಲ? ಒಬ್ಬೊಬ್ಬರಿಗೆ ಒಬ್ಬರು ಮಾತ್ರ ವಿಶೇಷವೆನಿಸುವಂತೆ ಮಾಡುವ ಈ ಫೀಲಿಂಗ್‌ನ ವಿಶೇಷತೆ ಏನು? ಇದರ ಬಗ್ಗೆ ವಿಜ್ಞಾನ ಏನೆನ್ನುತ್ತದೆ ಎಂದೆಲ್ಲ ಎಂದಾದರೂ ಯೋಚಿಸಿದ್ದೀರಾ?

ಪ್ರೀತಿ ಎಂಬುದು ಜೀವಿಯ ವಿಕಸನವಾಗಲು ಪ್ರಕೃತಿ ಹೆಣೆದ ಸಂಚು. ನಮ್ಮ ದೇಹದಲ್ಲಿ ವಿವಿಧ ಕೆಮಿಕಲ್ ರಿಯಾಕ್ಷನ್ ಆಗಿ ಹೊರಹೊಮ್ಮುವ ಸಾಮಾನ್ಯ ಪ್ರತಿಕ್ರಿಯೆ ಅದು. 

ಪ್ರೀತಿ ಡ್ರಗ್ಸ್‌ನಂತೆ ಮತ್ತು
ಜನಪ್ರಿಯ ಸೈನ್ಸ್ ಜರ್ನಲ್ ವಿವರಿಸುವಂತೆ, ಪ್ರೀತಿ ಕೂಡಾ ಇತರೆಲ್ಲ ಅಡಿಕ್ಷನ್‌ನಂತೆ. ಇಲ್ಲಿ ತನಗೆ ಸಿಗುವ ರಿವಾರ್ಡ್ಸ್, ಮತ್ತಿನಂಥ ಅಮಲಿಗಾಗಿ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಗೆ ಅಟ್ಯಾಚ್ ಆಗುತ್ತಾನೆ. ಈ ಅಡಿಕ್ಷನ್‌ನಿಂದಾಗಿ ದೇಹದಲ್ಲಿ ಹಲವಾರು ಕೆಮಿಕಲ್ ರಿಯಾಕ್ಷನ್ ಆಗುತ್ತದೆ. ಇದರಿಂದ ವ್ಯಕ್ತಿಯು ಕ್ಲೌಡ್‌ 9ನಲ್ಲಿ ತೇಲುವಂಥ ಅನುಭವ ಪಡೆಯುತ್ತಾನೆ. 

ಮನೆಯಲ್ಲಿ ಮುನಿಸಿಕೊಂಡಿರುವ ಪತಿ, ಪತ್ನಿಯರೇ ಇಲ್ಲಿ ಕೇಳಿ

ನ್ಯೂ ಜರ್ಸಿಯ ರಟ್ಗರ್ಸ್ ಯೂನಿವರ್ಸಿಟಿ ನಡೆಸಿದ ಅಧ್ಯಯನದಂತೆ ಪ್ರೀತಿಯಲ್ಲಿ ಬೀಳುವುದನ್ನು 3 ಹಂತಗಳಾಗಿ ವಿಂಗಡಿಸಬಹುದು. ಕಾಮ, ಆಕರ್ಷಣೆ ಹಾಗೂ ಅಟ್ಯಾಚ್‌ಮೆಂಟ್. ಪ್ರತಿ ಹಂತ ಕೂಡಾ ಬೇರೆ ಬೇರೆ ಕೆಮಿಕಲ್‌ಗಳು ದೇಹದಲ್ಲಿ ಬಿಡುಗಡೆಯಾಗುವುದರ ಪ್ರತಿಫಲ. 

ಕಾಮ
ಸೆಕ್ಸ್ ಹಾರ್ಮೋನ್ಸ್ ಟೆಸ್ಟೆಸ್ಟೊರೋನ್ ಹಾಗೂ ಈಸ್ಟ್ರೋಜನ್ ದೇಹದಲ್ಲಿ ಬಿಡುಗಡೆಯಾದಾಗ ಕಾಮದ ಬಯಕೆ ಉಂಟಾಗುತ್ತದೆ. ಪುರುಷರು ಹಾಗೂ ಮಹಿಳೆಯರಿಬ್ಬರಲ್ಲೂ ಕಾಮದ ಭಾವನೆ ಉಂಟು ಮಾಡುವಲ್ಲಿ ಈ ಹಾರ್ಮೋನ್‌ಗಳದೇ ಕೈಚಳಕ. 

ಆಕರ್ಷಣೆ
ಈ ಹಂತದಲ್ಲೇ ವ್ಯಕ್ತಿ ಪ್ರೀತಿಗೆ ಬೀಳುವುದು. ಇದೇ ಹಂತದಲ್ಲಿ ಮತ್ತೊಬ್ಬರನ್ನು ಆಕರ್ಷಿಸುವ ಅಗತ್ಯ ಕೂಡಾ ಉತ್ಸಾಹಕ್ಕೆ ಕಾರಣವಾಗುವುದು. ನಿದ್ದೆ, ಹಸಿವು ಕಡಿಮೆಯಾಗುವುದು ಕೂಡಾ ಈ ಹಂತದಲ್ಲಿ ಸರ್ವೇಸಾಮಾನ್ಯ. ಇದರ ಬದಲು ತಮ್ಮ ಹೊಸ ಪ್ರೀತಿಯ ಕುರಿತು ಯೋಚಿಸಲು ಸಮಯ ಬಳಸುವುದು ಅವರಿಗೆ ಖುಷಿ ಎನಿಸುತ್ತದೆ. ಈ ಹಂತದಲ್ಲಿ 3 ಉಪಹಂತಗಳಿವೆ- ಅವೆಲ್ಲವೂ ವ್ಯಕ್ತಿಯ ನಡವಳಿಕೆಯಲ್ಲಿ ಬದಲಾವಣೆ ತರುತ್ತವೆ. ಇದಕ್ಕೆ ಕಾರಣವಾಗುವುದು ಡೋಪಮಿನ್, ಆಡ್ರಿನಲಿನ್ ಹಾಗೂ ಸೆರಟೋನಿನ್ ಹಾರ್ಮೋನ್‌ಗಳ ಬಿಡುಗಡೆ. 

ಹೊಸ ಜೋಡಿಯ ಮೆದುಳುಗಳನ್ನು ಫಂಕ್ಷನಲ್ ಮ್ಯಾಗ್ನೆಟಿಕ್ ರಿಸೆನೆನ್ಸ್ ಇಮೇಜಿಂಗ್ ಬಳಸಿ ಅಧ್ಯಯನದಲ್ಲಿ ಗಮನಿಸಲಾಗಿದೆ. ಅದರಂತೆ ನವಜೋಡಿಯಲ್ಲಿ ಡೋಪಮಿನ್ ಹಾರ್ಮೋನ್ ಹೆಚ್ಚಾಗಿ ಬಿಡುಗಡೆಯಾಗುವುದು ಕಂಡುಬಂದಿದೆ. ಈ ಹಾರ್ಮೋನ್ ದೇಹದಲ್ಲಿ ಸಂತೋಷ ಫೀಲ್ ಆಗುವಂತೆ ಮಾಡುತ್ತದೆ. ಸಾಮಾನ್ಯವಾಗಿ ಕೋಕೇನ್ ಅಥವಾ ನಿಕೋಟಿನ್ ಸೇವಿಸಿದಾಗಲೂ ಡೋಪಮಿನ್ ಬಿಡುಗಡೆಯಾಗುತ್ತದೆ. 

ಡೇಟ್‌ಗೆ ಹೊರಟಾಗ ಹೃದಯ ಜೋರಾಗಿ ಬಡಿದುಕೊಳ್ಳುತ್ತೆ, ಕೈಗಳು ಬೆವರುತ್ತವೆ, ಆದರೂ ಅದೊಂತರಾ ಸಂತೋಷ ಉಕ್ಕಿ ಉಕ್ಕಿ ಬಂದಂತಾಗುತ್ತಲ್ಲ, ಅದಕ್ಕೆಲ್ಲ ಆಡ್ರಿನಲಿನ್ ಹಾರ್ಮೋನ್ ಕಾರಣ. ಇನ್ನು ಖುಷಿಯಾಗಿರಲು ಹಾಗೂ ನೆಮ್ಮದಿಯ ಭಾವ ಉಕ್ಕಿಸುವುದು ಸೆರಟೋನಿನ್. ಈ ಹಾರ್ಮೋನ್ ಯುವಕ ಯುವತಿಯರಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿರುತ್ತದೆ. ಆದರೆ, ಇದೇ ಅವರನ್ನು ಹಗಲುಗನಸು ಕಾಣುವಂತೆ ಮಾಡುವುದು ಎನ್ನುತ್ತದೆ ಅಧ್ಯಯನ. ಸಾಮಾನ್ಯವಾಗಿ ಪ್ರೀತಿಯಲ್ಲಿ ಬಿದ್ದವರು ದಿನದ ಶೇ.65ರಷ್ಟು ಬಾಗವನ್ನು ತಮ್ಮ ಪಾರ್ಟ್ನರ್ ಬಗ್ಗೆ ಹಗಲುಗನಸು ಕಾಣುವುದರಲ್ಲಿ ಕಳೆಯುತ್ತಾರಂತೆ.  

ಲಾಕ್‌ಡೌನ್‌ನಿಂದಾಗಿ ದೂರದಲ್ಲಿರುವ ಸಂಗಾತಿಯನ್ನು ಖುಷಿಯಾಗಿಡಲು ಇಲ್ಲಿವ ...

ಅಟ್ಯಾಚ್‌ಮೆಂಟ್
ಇದು ಕೊನೆಯ ಹಂತವಾಗಿದ್ದು, ಇಲ್ಲಿಯೇ ಜೋಡಿಯ ನಡುವಿನ ಸಂಬಂಧ ಹೆಚ್ಚು ಗಟ್ಟಿಯಾಗುವುದು. ಇದೇ ಹಂತದಲ್ಲಿ ಜೋಡಿಗೆ ತಮ್ಮ ಮಕ್ಕಳ ಕುರಿತ ಯೋಚನೆಗಳು ಬರುವುದು. ಈ ಹಂತದಲ್ಲಿ ಆಕ್ಸಿಟೋಸಿನ್ ಹಾಗೂ ವ್ಯಾಸೋಪ್ರೆಸಿನ್ ಹಾರ್ಮೋನ್‌ಗಳು ಬಿಡುಗಡೆಯಾಗುತ್ತವೆ. 
ಆಕ್ಸಿಟೋಸಿನ್ ಹಾರ್ಮೋನ್ ಜೋಡಿಯ ನಡುವಿನ ಬಾಂಡ್ ಗಟ್ಟಿಗೊಳಿಸುತ್ತದೆ. ಇದು ಸೆಕ್ಸ್ ಸಂದರ್ಭದಲ್ಲಿ ರಿಲೀಸ್ ಆಗುತ್ತದೆ. ಜೋಡಿಯು ಹೆಚ್ಚು ಹೆಚ್ಚು ಲೈಂಗಿಕ ಕ್ರಿಯೆಯಲ್ಲಿ ತೊಡಗಿದಷ್ಟೂ ಈ ಬಾಂಡ್ ಹೆಚ್ಚು ಗಟ್ಟಿಗೊಳ್ಳುತ್ತದೆ. ಇದೇ ಹಾರ್ಮೋನ್ ತಾಯಿ ಹಾಗೂ ಮಗುವಿನ ನಡುವಿನ ಸ್ಟ್ರಾಂಗ್ ಬಂಧಕ್ಕೂ ಕಾರಣವಾಗುವುದು. ಇದೇ ಹಾರ್ಮೋನ್ ಫಲವಾಗಿ ಸಂಗಾತಿಯ ಮುಖ ನೋಡಿಯೇ ಅವರ ಮೈಂಡ್ ಓದುವಷ್ಟು ಪಂಟರಾಗಲು ಸಾಧ್ಯವಾಗುತ್ತದೆ. 
ವ್ಯಾಸೋಪ್ರೆಸಿನ್ ಕೂಡಾ ಪ್ರಮುಖ ಕೆಮಿಕಲ್ ಆಗಿದ್ದು, ಪಾರ್ಟ್ನರ್ ಹೀಗೆಯೇ ಇರಬೇಕೆಂದು ನಿಶ್ಚಯಿಸಲು ಸಹಾಯ ಮಾಡುತ್ತದೆ. 

ದೂರದಲ್ಲಿರೋ ಸಂಗಾತಿಯಲ್ಲಿ ಖುಷಿ ಪಡಿಸಲು ಇಲ್ಲಿವೆ ಟಿಪ್ಸ್