ರಸ್ತೆಗಳಲ್ಲಿ ಓಡಾಡುವಾಗ ನೀವು ಲಾರಿಗಳ ಹಿಂದೆ 'ಹಾರ್ನ್ ಓಕೆ ಪ್ಲೀಸ್' ಎಂದು ಬರೆದಿರುವುದನ್ನು ಗಮನಿಸಿರಬಹುದು. ಈ ಪದಗಳ ಹಿಂದಿನ ಅರ್ಥ ಹಾಗೂ ಬರೆಯಲು ಕಾರಣ ಏನು ಎಂಬುದು ಗೊತ್ತಾ?
ನೀವು ರಸ್ತೆಗಳಲ್ಲಿ ವಾಹನಗಳಲ್ಲಿ ಓಡಾಟ ನಡೆಸಿದ್ದರೆ, ಹಲವು ವಾಹನಗಳ ಹಿಂದೆ, ದೊಡ್ಡ ದೊಡ್ಡ ಟ್ರಕ್ ಹಾಗೂ ಲಾರಿಗಳ ಹಿಂದೆ ವಿವಿಧ ರೀತಿಯ ಶ್ಲೋಗನ್‌ಗಳು, ಬರಹಗಳು, ಕವಿತೆ, ಕೋಟ್‌ಗಳನ್ನು ಬರೆದಿರುವುದನ್ನು ನೀವು ನೋಡಿರುತ್ತೀರಿ. ಈ ವಾಹನಗಳ ಹಿಂದಿನ ಬರಹಗಳು ನಮ್ಮನ್ನು ಯೋಚನೆಗೆ ದೂಡುತ್ತವೆ. ಅದು ಏನಿರಬಹುದು ಎಂದು ಯೋಚನೆ ಮಾಡುವಂತೆ ಮಾಡುತ್ತದೆ. ಅನೇಕ ಬಾರಿ ಈ ಬರಹಗಳು ಅನೇಕರಿಗೆ ಇನ್ಯಾವುದು ಮಹತ್ ಕಾರ್ಯಕ್ಕೆ ಮುನ್ನುಡಿ ಬರೆಯುವಂತೆ ಮಾಡುತ್ತದೆ. ವಿವಿಧ ಸಾಧನೆ ಮಾಡುವುದಕ್ಕೆ ಸ್ಪೂರ್ತಿಯಾಗುತ್ತದೆ. ಆದರೆ ಕೆಲವು ಬರಹಗಳು ನಮಗೆ ಅರ್ಥವೇ ಆಗುವುದಿಲ್ಲ, ಆದರೆ ಅವು ಆಳವಾದ ಅರ್ಥವನ್ನು ಹೊಂದಿರುತ್ತವೆ. ಜನ ಸಾಮಾನ್ಯರು ಅದನ್ನು ಓದುತ್ತಾರೆಯೇ ಹೊರತು ಅದರ ಅರ್ಥವೇನು ಎಂಬುದು ಅನೇಕರಿಗೆ ಗೊತ್ತಿಲ್ಲ. ಆ ರೀತಿಯ ಅರ್ಥವಾಗದ ಪದವೊಂದನ್ನು ನೀವು ಲಾರಿ ಹಿಂದೆ ನೋಡಿರುತ್ತೀರಿ. ಅದೇ 'ಹಾರ್ನ್ ಓಕೆ, ಪ್ಲೀಸ್'
ಲಾರಿ ಹಿಂದೆ ಇದನ್ನು ಬರೆಯಲು ಕಾರಣವೇನು?
ವಾಹನಗಳ ಹಿಂದೆ ಹೀಗೆ ಬರೆದಿರುವುದಕ್ಕೆ ಕೆಲ ಕಾರಣಗಳಿರಬಹುದು ಎಂದು ಕೆಲವರು ಊಹೆ ಮಾಡುತ್ತಾರೆ. ಅದೇನದು? ಈ ಮೂರು ಪದಗಳಲ್ಲಿ ಮಧ್ಯದಲ್ಲಿ ಬರೆದಿರುವ 'ಓಕೆ ಎಂಬುದನ್ನು ಬರೆದಿರುವುದಕ್ಕೆ ಕಾರಣ ಹುಡುಕುತ್ತಾ ಹೋದರೆ ಅದು 2ನೇ ಮಹಾಯುದ್ಧದ ಬಳಿಗೆ ನಮ್ಮನ್ನು ಕೊಂಡೊಯ್ಯುತ್ತದೆ. ಆ ಸಮಯದಲ್ಲಿ ಜಾಗತಿಕವಾಗಿ ಡಿಸೇಲ್‌ನ ಕೊರತೆ ತೀವ್ರವಾಗಿತ್ತು.
ಲಾರಿಯ ರಸ್ತೆ ನುಂಗಿತ್ತಾ? ನೋಡವ್ವಾ ಸೆಕೆಂಡಿನಲ್ಲಿ ಮಾಯವಾದ ಪುಣೆ ಕಾರ್ಪೋರೇಶನ್ ಟ್ರಕ್!
ಆ ಸಮಯದಲ್ಲಿ ಟ್ರಕ್ ಕಂಟೈನರ್‌ಗಳು ಹೆಚ್ಚಾಗಿ ಸೀಮೆಎಣ್ಣೆಯನ್ನು ಸಾಗಣೆ ಮಾಡುತ್ತಿದ್ದವು. ಇವುಗಳ ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ತೈಲವಾಗಿರುವುದರಿಂದ ಎಲ್ಲಾದರೂ ಅಪಘಾತವಾಗಬಾರದೆಂಬ ಕಾರಣಕ್ಕೆ ವಾಹನಗಳ ಮಧ್ಯೆ ಅಂತರ ಕಾಯ್ದುಕೊಳ್ಳುವುದಕ್ಕಾಗಿ 'ಒನ್ ಕೆರೋಸಿನ್' ಎಂದು ಬರೆಯುತ್ತಿದ್ದರು. ಇದೇ ಕಾಲ ಕ್ರಮೇಣ ಓಕೆ ಎಂಬುದಾಗಿ ಬದಲಾಯ್ತು ಎಂದು ಹೇಳುತ್ತಾರೆ ಕೆಲವರು. ಆದರೆ ಪ್ಲೀಸ್ ಹಾಗೂ ಹಾರ್ನ್‌ಗೆ ದಯವಿಟ್ಟು ಹಾರ್ನ್ ಮಾಡಿ ಎಂಬ ಅರ್ಥ ನೀಡುತ್ತದೆಯೇ ಹೊರತು ಬೇರೆ ವಿಶೇಷವಾದ ಅರ್ಥಗಳಿಲ್ಲ.
ಈ 'ಹಾರ್ನ್ ಓಕೆ ಪ್ಲೀಸ್' ಪದವನ್ನು ನಂತರ ಟಾಟಾ ಸಂಸ್ಥೆ ತನ್ನ ಮಾರ್ಕೆಟಿಂಗ್ ತಂತ್ರಕ್ಕೆ ಬಳಸಿತ್ತು. ಸ್ಟೀಲ್, ಟ್ರಕ್, ಹೊಟೇಲ್ ಹಾಗೂ ಉಪ್ಪು ಉದ್ಯಮದಲ್ಲಿ ತನ್ನದೇ ಆದ ಹೆಸರು ಮಾಡಿದ್ದ ಟಾಟಾ ಸಂಸ್ಥೆಯೂ ನಂತರದಲ್ಲಿ ಓಕೆ ಹೆಸರಿನ ಸೋಪೊಂದನ್ನು ಮಾರುಕಟ್ಟೆಗೆ ತಂದಿತ್ತು. ಅದನ್ನು ಪ್ರಮೋಟ್ ಮಾಡುವ ವೇಳೆ ಇದೇ ಸ್ಲೋಗನ್‌ನ್ನು ಬಳಸಿತ್ತು ಟಾಟಾ ಸಂಸ್ಥೆ.
ಈ ಬಗ್ಗೆ ಟ್ರಕ್ ಡ್ರೈವರ್‌ಗಳು ಹೇಳೋದೇನು?
'ಹಾರ್ನ್ ಓಕೆ ಪ್ಲೀಸ್' ಈ ಪದವೂ ವಾಹನವನ್ನು ಹಿಂದಿಕ್ಕುವ ಮೊದಲು ಹಾರ್ನ್ ಮಾಡುವ ಮೂಲಕ ಸಂಕೇತವನ್ನು ಸೂಚಿಸುವುದಕ್ಕೆ ಬಳಸುವ ಪದಗಳಾಗಿವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಟ್ರಕ್ ಚಾಲಕರು ತಮ್ಮ ಹಿಂದೆ ಇರುವ ವಾಹನಗಳು ಮುಂದೆ ಹೋಗಲು ಬಯಸಿದರೆ ಹಾರ್ನ್ ಮಾಡಿ ಎಂದು ಹೇಳುತ್ತಾರೆ. ಈ ಹಿಂದೆ ಹಲವು ಟ್ರಕ್‌ಗಳಿಗೆ ಸೈಡ್ ಮಿರರ್ ಇಲ್ಲದ ಕಾರಣ ಚಾಲಕರಿಗೆ ಹಿಂದೆ ಬರುವ ವಾಹನಗಳು ಕಾಣುತ್ತಿರಲಿಲ್ಲ. ಹೀಗಾಗಿ ಟ್ರಕ್‌ನ ಹಿಂಭಾಗದಲ್ಲಿ ಬರೆಯಲಾದ ಈ ನುಡಿಗಟ್ಟು ಸಮೀಪಿಸುತ್ತಿರುವ ವಾಹನಗಳ ಬಗ್ಗೆ ಮುಂದಿರುವ ವಾಹನದ ಚಾಲಕನಿಗೆ ತಿಳಿಸಲು ಸಹಾಯ ಮಾಡುತ್ತಿತ್ತು ಹಾಗೂ ಅವರಿಗೆ ದಾರಿ ಮಾಡಿಕೊಡಲು ಅವಕಾಶ ಮಾಡಿಕೊಡುತಿತ್ತು.
ಕುಕ್ಕಿಂಗ್ ವೀಡಿಯೋಗಳಿಂದಲೇ ತಿಂಗಳಿಗೆ 10 ಲಕ್ಷ ಸಂಪಾದಿಸ್ತಾರಂತೆ ಈ ಟ್ರಕ್ ಡ್ರೈವರ್
ಲಾರಿ ಹಿಂದೆ ಬರೆದಿರುವ ಹಾರ್ನ್ ಓಕೆ ಪ್ಲೀಸ್ ಪದದ ಅರ್ಥ ಗೊತ್ತಾ?
ಬಹುತೇಕ ಲಾರಿ ಟ್ರಕ್‌ಗಳ ಹಿಂದೆ ಈ 'ಹಾರ್ನ್ ಓಕೆ ಪ್ಲೀಸ್' ಎಂಬ ಮೂರು ಪದಗಳನ್ನು ಬರೆದೇ ಬರೆದಿರುತ್ತಾರೆ. ಈ ಪದಗಳು ದಿನವೂ ಸಾವಿರಾರು ಜನರನ್ನು ಆಕರ್ಷಿಸಿರುತ್ತದೆ. ಈ ಮೂರು ಪದಗಳು ಎಷ್ಟು ಫೇಮಸ್ ಆಗಿದೆ ಎಂದರೆ ಈ ಮೂರು ಪದಗಳನ್ನಾಧರಿಸಿ ಕೆಲ ವರ್ಷಗಳ ಹಿಂದೆ ಇದೇ ಹೆಸರಿನಲ್ಲಿ ಬಾಲಿವುಡ್ ಸಿನಿಮಾವೂ ತೆರೆಗೆ ಬಂದಿತ್ತು. ಇವು ತುಂಬಾ ಪ್ರಸಿದ್ಧವಾದ ಪದಗಳೇ ಆಗಿದ್ದರು ಅಧಿಕೃತವಾಗಿ ಹೇಳುವುದೇನೆಂದರೆ ಈ ಪದಕ್ಕೆ ಯಾವುದೇ ಇಂತಹದ್ದೇ ಆದ ಅಧಿಕೃತವಾದ ಅರ್ಥವಿಲ್ಲ ಎಂಬುದು. ಆದರೆ ಬಹುತೇಕ ಲಾರಿಗಳ ಹಿಂದೆ ಇದು ಬರೆದಿರುತ್ತದೆ.