Travel Destinations: ಸೆಲೆಬ್ರಿಟಿಗಳ ಇಷ್ಟದ ಪ್ರವಾಸಿ ತಾಣಕ್ಕೆ ನೀವೂ ಭೇಟಿ ನೀಡಿ

By Suvarna News  |  First Published Nov 22, 2022, 7:10 PM IST

ಪ್ರವಾಸಕ್ಕೆ ಹೋಗ್ಬೇಕು, ಆದ್ರೆ ಎಲ್ಲಿಗೆ ಹೋಗ್ಬೇಕು ಎಂಬ ಗೊಂದಲ ಅನೇಕ ಬಾರಿ ನಮ್ಮನ್ನು ಕಾಡುತ್ತದೆ. ಭಾರತದಲ್ಲಿ ಸುಂದರ ಸ್ಥಳಗಳು ಸಾಕಷ್ಟಿವೆ. ಡಿಸೆಂಬರ್ ರಜೆಯಲ್ಲಿ ಟ್ರಿಪ್ ಪ್ಲಾನ್ ಮಾಡ್ತಿದ್ದರೆ ಈ ಸ್ಥಳಗಳನ್ನು ನೋಡ್ಕೊಂಡು ಬನ್ನಿ.
 


ಈ ವರ್ಷದ ಕೊನೆ ತಿಂಗಳು ಹತ್ತಿರ ಬರ್ತಿದೆ. ವರ್ಷಾಂತ್ಯದಲ್ಲಿ ರಜೆ ಸಿಗೋದ್ರಿಂದ ಜನರು ಈಗಿನಿಂದ್ಲೇ ಪ್ರವಾದ ಪ್ಲಾನ್ ಶುರು ಮಾಡಿರ್ತಾರೆ. ಎಲ್ಲರೂ ವಿದೇಶಿ ಪ್ರವಾಸ ಕೈಗೊಳ್ಳೋಕೆ ಸಾಧ್ಯವಿಲ್ಲ. ಭಾರತದಲ್ಲಿಯೇ ಸಾಕಷ್ಟು ಪ್ರವಾಸಿ ತಾಣವಿದೆ. ಮೊದಲು ಭಾರತ ಸುತ್ತೋಣ ಅನ್ನೋರು, ಸೆಲೆಬ್ರಿಟಿಗಳ ಆಯ್ಕೆಯ ಪ್ರವಾಸಿ ತಾಣಕ್ಕೆ ಆದ್ಯತೆ ನೀಡಬಹುದು. ಬಾಲಿವುಡ್ ಸೇರಿದಂತೆ ಎಲ್ಲ ಸೆಲೆಬ್ರಿಟಿಗಳ ನೆಚ್ಚಿನ ಪ್ರವಾಸಿ ತಾಣಗಳು ಭಾರತದಲ್ಲಿಯೇ ಸಾಕಷ್ಟಿದೆ. 2022ರಲ್ಲಿ ಸೆಲೆಬ್ರಿಟಿಗಳು ಹೆಚ್ಚು ಭೇಟಿ ನೀಡಿದ ಕೆಲ ಪ್ರವಾಸಿ ತಾಣಗಳಿವೆ. ನೆಮ್ಮದಿಯಿಂದ ರಜೆ ಕಳೆಯಬೇಕು, ಪ್ರವಾಸಿ ತಾಣ ಕಣ್ಮನ ಸೆಳೆಯುವಂತಿರಬೇಕು ಎನ್ನುವವರು ಈ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದು.

ಭಾರತೀಯ ಸೆಲೆಬ್ರಿಟಿಗಳು (celebrities) ಹೆಚ್ಚು ಭೇಟಿ ನೀಡಿದ ಪ್ರವಾಸಿ ತಾಣಗಳು :

Tap to resize

Latest Videos

ಅಲಿಬಾಗ್ (Alibag) : ವಾಣಿಜ್ಯ ನಗರಿ ಮುಂಬೈನಿಂದ ಸ್ವಲ್ಪ ದೂರದಲ್ಲಿರುವ ಅಲಿಬಾಗ್ ಕೂಡ ಪ್ರವಾಸಕ್ಕೆ ಬೆಸ್ಟ್ ಪ್ಲೇಸ್. ಅಲಿಬಾಗ್ ತನ್ನ ಸುಂದರ ಬೀಚ್‌ನಿಂದ ಪ್ರಸಿದ್ಧವಾಗಿದೆ. ಕಡಲತೀರದಲ್ಲಿ ಕುಳಿತು ರಜೆಯನ್ನು ಎಂಜಾಯ್ ಮಾಡ್ಬಹುದು. ಕೆಲಸದ ಒತ್ತಡದಲ್ಲಿದ್ದವರಿಗೆ ಈ ಸ್ಥಳ ನೆಮ್ಮದಿ ನೀಡುತ್ತದೆ.

ಮನಾಲಿ (Manali) : ಹಿಮಾಚಲದಲ್ಲಿರುವ ಮನಾಲಿ ಗಿರಿಧಾಮಗಳಿಗೆ ಪ್ರಸಿದ್ಧಿ ಪಡೆದಿದೆ. 2022 ರಲ್ಲಿ ಹೆಚ್ಚು ಸೆಲೆಬ್ರಿಟಿಗಳು ಭೇಟಿ ಕೊಟ್ಟ ಸ್ಥಳ ಮನಾಲಿ.  

ಉದಯಪುರ (Udaipur) : ಸರೋವರಗಳ ನಗರ ಎಂದೇ ಪ್ರಸಿದ್ಧಿಯಾಗಿರುವ ನಗರ ಉದಯಪುರ. 2022 ರಲ್ಲಿ ಸೆಲೆಬ್ರಿಟಿಗಳು ಹೆಚ್ಚು ಭೇಟಿ ನೀಡಿದ ಸ್ಥಳಗಳಲ್ಲಿ ಉದಯಪುರ ಕೂಡ ಒಂದು. ಪಿಚೋಲಾ ಸರೋವರ, ಫತೇಸಾಗರ್ ಸರೋವರ ಮತ್ತು ಜೈಸಮಂದ್ ಸರೋವರಗಳಿಗೆ ಪ್ರಸಿದ್ಧವಾಗಿದೆ. ಉದಯಪುರದಲ್ಲಿರುವ ಸಿಟಿ ಪ್ಯಾಲೇಸ್, ಸಜ್ಜನ್ ಗಡ್ ಅರಮನೆ, ವಿಂಟೇಜ್ ಕಾರ್ ಮ್ಯೂಸಿಯಂ ಪ್ರವಾಸಿಗರನ್ನು ಆಕರ್ಷಿಸುತ್ತದೆ. 

ಇದನ್ನೂ ಓದಿ: ವಿಮಾನದ ದುಬಾರಿ ವೆಚ್ಚದ ತಲೆಬಿಸಿ ಬಿಡಿ, ನೀವು ಈ ದೇಶಗಳಿಗೆ ಕಾರಲ್ಲೇ ಹೋಗಬಹುದು

ಬಿಕಾನೇರ್ (Bikaner) : 2022 ರಲ್ಲಿ ಸೆಲೆಬ್ರಿಟಿಗಳಿಂದ ತುಂಬಿದ್ದ ಜಾಗವೆಂದ್ರೆ ಬಿಕಾನೇರ್. ರಾಜಸ್ಥಾನದ ಈ ಬಿಕಾನೇರ್ ಬಾಲಿವುಡ್ ಕಲಾವಿದರು ರಿದಂತೆ ಎಲ್ಲ ಸೆಲೆಬ್ರಿಟಿಗಳ ಮೆಚ್ಚಿನ ಜಾಗ. ರಾಜಸ್ಥಾನದ ಬಿಕಾನೆರ್ ಜುನಾಗಢ್ ಕೋಟೆ, ಗಜ್ನೇರ್ ಅರಮನೆ, ಲಾಲ್ಗಢ ಅರಮನೆ ಮತ್ತು ಗಜ್ನೇರ್ ವನ್ಯಜೀವಿ ಅಭಯಾರಣ್ಯದಂತಹ ಸ್ಥಳಗಳಿಗೆ ಪ್ರಸಿದ್ಧವಾಗಿದೆ. ಬಿಕಾನೆರ್ ತನ್ನ ರಾಯಲ್ ಆತಿಥ್ಯಕ್ಕಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಬಹುಶಃ ಅದಕ್ಕಾಗಿಯೇ ಬಿಕಾನೆರ್ ಸೆಲೆಬ್ರಿಟಿಗಳ ಮೊದಲ ಆಯ್ಕೆಯಾಗಿದೆ. ಈ ಬಾರಿ ರಜೆಗೆ ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡಿದ್ದರೆ ನೀವು ಬಿಕಾನೆರ್ ಟ್ರೈ ಮಾಡಬಹುದು.

ರಣಥಂಬೋರ್ (Ranthambore) : ರಾಜಸ್ಥಾನದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ರಾಜಸ್ಥಾನದ ಮತ್ತೊಂದು ಸ್ಥಳ ಸೆಲೆಬ್ರಿಟಿಗಳಿಗೆ ತುಂಬಾ ಇಷ್ಟವಾಗಿದೆ. ಅದು ಉತ್ತರದಲ್ಲಿ ಬನಾಸ್ ನದಿ ಮತ್ತು ದಕ್ಷಿಣದಲ್ಲಿ ಚಂಬಲ್ ನದಿಯಿಂದ ಸುತ್ತುವರಿದಿರುವ ಸ್ಥಳ ರಣಥಂಬೋರ್. ಪ್ರಪಂಚದಾದ್ಯಂತ ರಾಯಲ್ ಬೆಂಗಾಲ್ ಟೈಗರ್ಸ್‌ಗೆ ಹೆಸರುವಾಸಿಯಾಗಿರುವ ಸ್ಥಳ ಇದು . ಜಂಗಲ್ ಸಫಾರಿಗಾಗಿ ಇದು ಬೆಸ್ಟ್ ಪ್ಲೇಸ್. ಇದೇ ಕಾರಣಕ್ಕೆ ಸೆಲೆಬ್ರಿಟಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರ್ತಾರೆ. ರಣಥಂಬೋರ್ ರಾಷ್ಟ್ರೀಯ ಉದ್ಯಾನವನ, ರಣಥಂಬೋರ್ ಕೋಟೆ, ಜೋಗಿ ಮಹಲ್ ಹೆಚ್ಚು ಪ್ರಸಿದ್ಧಿ ಪಡೆದಿರುವ ಸ್ಥಳವಾಗಿದೆ. ಇದಲ್ಲದೆ ರಣಥಂಬೋರ್‌ನಿಂದ ಸುಮಾರು 20 ಕಿಮೀ ದೂರದಲ್ಲಿರುವ ಸುರ್ವಾಲ್ ಸರೋವರ ಕೂಡ ಪ್ರವಾಸಿಗರನ್ನು ಸೆಳೆಯುತ್ತದೆ. 

ಗೋವಾ : ಡಿಸೆಂಬರ್ ಕೊನೆಯಲ್ಲಿ ಗೋವಾ ಕಿಕ್ಕಿರಿದು ತುಂಬಿರುತ್ತದೆ. ಹೊಸ ವರ್ಷಾಚರಣೆಗೆ ಗೋವಾ ಹೆಚ್ಚು ಪ್ರಸಿದ್ಧಿ ಪಡೆದಿದೆ. ರಜೆಯಲ್ಲಿ ಸಖತ್ ಎಂಜಾಯ್ ಮಾಡ್ಬೇಕು ಎನ್ನುವವರು ಗೋವಾಕ್ಕೆ ಭೇಟಿ ನೀಡಬಹುದು. 2022ರಲ್ಲಿ ಅತಿ ಹೆಚ್ಚು ಸೆಲೆಬ್ರಿಟಿಗಳು ಭೇಟಿ ನೀಡಿದ ಸ್ಥಳ ಗೋವಾ. ಇಲ್ಲಿನ ಬೀಚ್, ಚರ್ಚ್, ಪಾರ್ಟಿಗಳು ಯುವಜನತೆಯನ್ನು ಆಕರ್ಷಿಸುತ್ತದೆ. ಗೋವಾದಲ್ಲಿ ಪ್ರಶಾಂತವಾದ ಬೀಚ್ ಗಳಿದ್ದು, ಶಾಂತಿ ಬಯಸುವವರು ಅಲ್ಲಿಗೆ ಭೇಟಿ ನೀಡಬಹುದು.

click me!